Gold Price Today: ಬಂಗಾರದ ದರ ಏರಿಕೆ ಮುಂದುವರಿಕೆ, ಬೆಳ್ಳಿ ದರ ಇಳಿಕೆ, ಕರ್ನಾಟಕದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ ಇಲ್ಲಿದೆ
Gold and Silver Rate Today: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ ಏರಿಕೆ ಕಂಡಿದೆ. ಬಂಗಾರದ ಬೆಲೆಗೆ ವಿರುದ್ಧವಾಗಿ ಬೆಳ್ಳಿ ದರ ತುಸು ಇಳಿಕೆ ಕಂಡಿದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚಿನ್ನಾಭರಣಗಳ ದರ ಏರಿಕೆ ಕಾಣುತ್ತಿದೆ. ಈ ಹಿಂದಿನ ತಟಸ್ಥ, ಇಳಿಕೆ ಟ್ರೆಂಡ್‌ಗೆ ವಿರುದ್ಧವಾಗಿ ಚಿನ್ನದ ದರವು ಏರಿಕೆ ಕಾಣುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಆರ್ಥಿಕತೆ ಬದಲಾವಣೆಗಳು, ಹೂಡಿಕೆದಾರರ ಭಾವನೆಗಳ ಬದಲಾವಣೆ ಇತ್ಯಾದಿಗಳು ದೇಶದಲ್ಲಿ ಚಿನ್ನಾಭರಣ ದರದ ಏರಿಕೆ ಮತ್ತು ಇಳಿಕೆ ಮೇಲೆ ಪರಿಣಾಮ ಬೀರುತ್ತಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಈ ಮುಂದಿನಂತೆ ಇದೆ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,530 ರೂ ಇದೆ. ನಿನ್ನೆಯ 5,520 ರೂ ದರಕ್ಕೆ ಹೋಲಿಸಿದರೆ 10 ರೂಪಾಯಿಯಷ್ಟು ದರ ಹೆಚ್ಚಾಗಿದೆ. ಇಂದು 8 ಗ್ರಾಂ ಚಿನ್ನದ ಬೆಲೆ 44,240 ರೂಪಾಯಿ ಇದೆ. ನಿನ್ನೆ 44,160 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 80ರೂ. ಏರಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 55,300 ರೂ. ಇದೆ. ನಿನ್ನೆಯ 55,200 ರೂ. ಗೆ ಹೋಲಿಸಿದರೆ 100 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,53,000 ರೂ. ನೀಡಬೇಕು. ನಿನ್ನೆಯ 5,52,000 ರೂ.ಗೆ ಹೋಲಿಸಿದರೆ 10v00 ರೂಪಾಯಿ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6,032 ರೂ. ಇದೆ. ನಿನ್ನೆಯ 6,022 ರೂ.ಗೆ ಹೋಲಿಸಿದರೆ 10 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,256 ರೂ. ನೀಡಬೇಕಾಗುತ್ತದೆ. ನಿನ್ನೆ 48,176 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,320 ರೂ. ಇದೆ. ನಿನ್ನೆಯ 60,220 ರೂ. ಗೆ ಹೋಲಿಸಿದರೆ 100 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,03,200 ರೂ. ನೀಡಬೇಕು. ಮಂಗಳವಾರದ 6,02,200 ರೂ.ಗೆ ಹೋಲಿಸಿದರೆ ಬುಧವಾರ 1000 ರೂ. ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 55,300 ರೂ. ಇದೆ. ಮಂಗಳೂರು 55,300 ರೂ., ಮೈಸೂರಿನಲ್ಲಿ 55,300 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,600 ರೂ., ಮುಂಬೈನಲ್ಲಿ 55,300 ರೂ., ದೆಹಲಿಯಲ್ಲಿ 55,450 ರೂ., ಕೋಲ್ಕತಾದಲ್ಲಿ 55,300 ರೂ., ಹೈದರಾಬಾದ್ 55,300 ರೂ., ಕೇರಳ 55,300 ರೂ., ಪುಣೆ 55,300 ರೂ., ಅಹಮದಾಬಾದ್ 55,350 ರೂ., ಜೈಪುರ 55,450 ರೂ., ಲಖನೌ 55,450 ರೂ., ಕೊಯಮುತ್ತೂರು 55,600 ರೂ., ಮಧುರೈ 55,600 ರೂ. ಹಾಗೂ ವಿಜಯವಾಡ 55,300 ರೂ., ಇದೆ.
ಅಪರಂಜಿ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 60,320 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,650 ರೂ., ಮುಂಬೈನಲ್ಲಿ 60,320 ರೂ., ದೆಹಲಿಯಲ್ಲಿ 60,470 ರೂ., ಕೋಲ್ಕತಾದಲ್ಲಿ 60,320 ರೂ., ಹೈದರಾಬಾದ್ 60,320 ರೂ., ಕೇರಳ 60,320 ರೂ., ಪುಣೆ 60,320 ರೂ., ಅಹಮದಾಬಾದ್ 60,370 ರೂ., ಜೈಪುರ 60,470 ರೂ., ಲಖನೌ 60,470 ರೂ., ಕೊಯಮುತ್ತೂರು 60,650 ರೂ., ಮದುರೈ 60,650, ವಿಜಯವಾಡ 60,320 ರೂ. ಇದೆ.
ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಮಂಗಳವಾರ ಬೆಳ್ಳಿ ದರ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 75.50 ರೂ., 8 ಗ್ರಾಂ ಬೆಳ್ಳಿಗೆ 604 ರೂ., 10 ಗ್ರಾಂ ಬೆಳ್ಳಿ ದರ 755 ರೂ., 100 ಗ್ರಾಂ ಬೆಳ್ಳಿಗೆ 7,550 ಮತ್ತು 1 ಕೆ.ಜಿ. ಬೆಳ್ಳಿ ದರ 75,500 ರೂಪಾಯಿ ಇದೆ.