ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಇಲ್ಲ; ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ, 5 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಇಲ್ಲ; ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ, 5 ಅಂಶಗಳು

ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಇಲ್ಲ; ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ, 5 ಅಂಶಗಳು

ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಮಾಡಲಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ವೇತನದಾರರಿಗೆ ನಿರಾಸೆ ಉಂಟಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ ಎಂಬ 5 ಅಂಶಗಳ ವಿವರಣೆ ಇಲ್ಲಿದೆ.

ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಇಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಈ ವಿಚಾರ ಘೋಷಿಸಿದ್ದಾರೆ.  ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ ಎಂಬುದು ಸದ್ಯ ಗಮನಸೆಳೆಯುತ್ತಿರುವ ವಿಚಾರ.
ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ಬದಲಾವಣೆ ಇಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಈ ವಿಚಾರ ಘೋಷಿಸಿದ್ದಾರೆ. ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆ ಮೇಲೇನು ಪರಿಣಾಮ ಎಂಬುದು ಸದ್ಯ ಗಮನಸೆಳೆಯುತ್ತಿರುವ ವಿಚಾರ.

ಕೇಂದ್ರ ಬಜೆಟ್ ಎಂದ ಕೂಡಲೇ ವೇತನದಾರರ ಗಮನ ಪೂರ್ತಿ ಆದಾಯ ತೆರಿಗೆ ಕುರಿತ ಘೋ‍ಷಣೆ ಮೇಲೆ ಕೇಂದ್ರೀಕೃತವಾಗಿರುತ್ತದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್‌ ವೇತನದಾರರಿಗೆ ನಿರಾಸೆಯನ್ನು ಉಂಟುಮಾಡಿದೆ.

ಕಳೆದ ವರ್ಷ ಮಂಡಿಸಿದ ಪೂರ್ಣ ಬಜೆಟ್‌ನಲ್ಲಿ ಘೋಷಿಸಿದ ಆದಾಯ ತೆರಿಗೆ ಸ್ಲ್ಯಾಬ್‌ಗಳು, ಹಳೆಯ ಮತ್ತು ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ. ಅದೇ ವ್ಯವಸ್ಥೆಯನ್ನು ಮುಂದುವರಿಸಿರುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಜನಸಾಮಾನ್ಯರು, ವೇತನದಾರರು ಆದಾಯ ತೆರಿಗೆ ವಿನಾಯಿತಿ ಬಯಸಿದ್ದರು. ವಿಶೇಷವಾಗಿ, ಆದಾಯ ತೆರಿಗೆ ಸ್ಲ್ಯಾಬ್‌ಗಳ ಮಿತಿಯಲ್ಲಿ ಹೆಚ್ಚಳ ಮತ್ತು ಸೆಕ್ಷನ್‌ 80ಸಿ, 80 ಡಿ ಮುಂತಾದವುಗಳ ಮಿತಿಯಲ್ಲಿ ಹೆಚ್ಚಳವನ್ನು ಬಯಸಿದ್ದರು.

ಒಂದು ದಶಕದಿಂದ ನವೀಕರಿಸದ ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆ ಕಡಿತಗಳಿಗೆ ಪ್ರಸ್ತುತ 1.5 ಲಕ್ಷ ರೂಪಾಯಿ ಮಿತಿ ಇದೆ. ಇದನ್ನು ಹೆಚ್ಚಿಸಿ ಹೆಚ್ಚಿನ ತೆರಿಗೆ ಉಳಿತಾಯ ಮತ್ತು ಹೆಚ್ಚಿನ ಹೂಡಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಮಧ್ಯಮ ವರ್ಗ ಬಯಸಿತ್ತು. ಸೆಕ್ಷನ್ 80 ಸಿಗೆ 2003ರಲ್ಲಿ 1 ಲಕ್ಷ ರೂಪಾಯಿ ಮಿತಿ ಹೇರಲಾಗಿತ್ತು. ನಂತರ 2014ರಲ್ಲಿ ಇದನ್ನು 1.5 ಲಕ್ಷ ರೂಪಾಯಿಗೆ ಏರಿಸಲಾಗಿತ್ತು. ನಂತರ ಪರಿಷ್ಕರಣೆ ಆಗಿಲ್ಲ. ಆದರೆ ಈ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಈ ಬಾರಿ ಪರಿಗಣಿಸಿಲ್ಲ. ಇದು ಮಧ್ಯಂತರ ಬಜೆಟ್ ಆದ ಕಾರಣ, ವೋಟ್ ಆನ್ ಅಕೌಂಟ್‌ಗೆ ಸೀಮಿತವಾಗಿ ಸಂಕ್ಷಿಪ್ತ ಬಜೆಟ್ ಮಂಡಿಸಿದೆ.

ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು

1) 3 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ (ಸೆಕ್ಷನ್ 87ಎ ಅಡಿಯಲ್ಲಿ ತೆರಿಗೆ ರಿಯಾಯಿತಿ ಲಭ್ಯವಿದೆ)

2) 6-9 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.10ರಷ್ಟು ತೆರಿಗೆ ವಿಧಿಸಲಾಗುತ್ತಿದೆ (7 ಲಕ್ಷ ರೂ.ವರೆಗಿನ ಆದಾಯಕ್ಕೆ ಸೆಕ್ಷನ್ 87ಎ ಅಡಿಯಲ್ಲಿ ತೆರಿಗೆ ರಿಯಾಯಿತಿ ಲಭ್ಯವಿದೆ)

3) 9-12 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.15ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

4) 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ.

5) ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ದರಗಳು ಎಲ್ಲ ವರ್ಗದ ವ್ಯಕ್ತಿಗಳಿಗೆ, ಅಂದರೆ ವ್ಯಕ್ತಿಗಳು, ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಒಂದೇ ಆಗಿರುತ್ತವೆ.'

ಹಳೆಯ ಆದಾಯ ತೆರಿಗೆ ಸ್ಲ್ಯಾಬ್‌ಗಳು

1) 2.5 ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

2) 2.5 ರಿಂದ 5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಶೇಕಡ 5 ರಷ್ಟು ತೆರಿಗೆ ವಿಧಿಸಲಾಗುತ್ತದೆ.

3) 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ವೈಯಕ್ತಿಕ ಆದಾಯಕ್ಕೆ ಹಳೆಯ ಆಡಳಿತದಲ್ಲಿ ಶೇಕಡಾ 20 ರಷ್ಟು ತೆರಿಗೆ ವಿಧಿಸಲಾಗುತ್ತದೆ

4) 10 ಲಕ್ಷ ರೂ.ಗಿಂತ ಹೆಚ್ಚಿನ ವೈಯಕ್ತಿಕ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.

5) ಹಳೆಯ ತೆರಿಗೆ ವ್ಯವಸ್ಥೆಯಲ್ಲಿ, ಆದಾಯ ತೆರಿಗೆ ವಿನಾಯಿತಿ ಮಿತಿ 60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರಿಗೆ 3 ಲಕ್ಷ ರೂ.ವರೆಗೆ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ಸೂಪರ್ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿ ತನಕ ವಿನಾಯಿತಿ ಇದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.