Utkarsh IPO: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಇಂದಿನಿಂದ ಆರಂಭಿಕ ಷೇರು ವಿತರಣೆ, ಐಪಿಒ ಖರೀದಿದಾರರು ತಿಳಿದಿರಬೇಕಾದ 10 ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Utkarsh Ipo: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಇಂದಿನಿಂದ ಆರಂಭಿಕ ಷೇರು ವಿತರಣೆ, ಐಪಿಒ ಖರೀದಿದಾರರು ತಿಳಿದಿರಬೇಕಾದ 10 ಅಂಶ

Utkarsh IPO: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಇಂದಿನಿಂದ ಆರಂಭಿಕ ಷೇರು ವಿತರಣೆ, ಐಪಿಒ ಖರೀದಿದಾರರು ತಿಳಿದಿರಬೇಕಾದ 10 ಅಂಶ

Utkarsh Small Finance Bank IPO: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಐಪಿಒ ಅಂದರೆ ಆರಂಭಿಕ ಷೇರು ವಿತರಣೆ ಇಂದು ಆರಂಭವಾಗಲಿದೆ. ಜುಲೈ 12 ಬುಧವಾರದಿಂದ ಜುಲೈ 14 ಶುಕ್ರವಾರದವರೆಗೆ ಐಪಿಒ ಪ್ರಕ್ರಿಯೆ ನಡೆಯಲಿದೆ.

Utkarsh IPO: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಇಂದಿನಿಂದ ಆರಂಭಿಕ ಷೇರು ವಿತರಣೆ
Utkarsh IPO: ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಇಂದಿನಿಂದ ಆರಂಭಿಕ ಷೇರು ವಿತರಣೆ (iStock)

ಬೆಂಗಳೂರು: ಭಾರತದಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (Utkarsh Small Finance Bank IPO) ದೇಶದ ಪ್ರಮುಖ ಸಣ್ಣ ಹಣಕಾಸು ಸಂಸ್ಥೆಯಾಗಿದೆ. ಉತ್ಕರ್ಷ್‌ ಕೋರ್‌ಇನ್ವಸ್ಟ್‌ ಇದರ ಮಾತೃಸಂಸ್ಥೆ. ಇದು 2010ರ ಹಣಕಾಸು ವರ್ಷದಿಂದ ತನ್ನ ವ್ಯವಹಾರ ಆರಂಭಿಸಿತ್ತು. ಪ್ರಮುಖ ಬ್ಯಾಂಕ್‌ಗಳು ಕಡಿಮೆ ಸೇವೆ ನೀಡುತ್ತಿದ್ದ ಅಥವಾ ಸೇವೆ ನೀಡದೆ ಇದ್ದ ಪ್ರದೇಶಗಳಲ್ಲಿ ಸಣ್ಣ ಸಾಲ ನೀಡುತ್ತ ಪ್ರವರ್ಧನಮಾನಕ್ಕೆ ಬಂತು. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇದರ ಸೇವೆ ಹೆಚ್ಚು ಜನಪ್ರಿಯತೆ ಪಡೆಯಿತು. ಉತ್ಕರ್ಷ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಈಗಾಗಲೇ ಅಂದರೆ ಜುಲೈ 2021ರಲ್ಲಿಯೇ ಡ್ರಾಫ್ಟ್‌ ರೆಡ್‌ ಹೆರಿಂಗ್‌ ಪ್ರಾಸ್ಪೆಕ್ಟ್ಸ್‌ (ಡಿಆರ್‌ಎಚ್‌ಪಿ) ಸಲ್ಲಿಸಿತ್ತು. 1,350 ಕೋಟಿ ಸಂಗ್ರಹಿಸುವ ಉದ್ದೇಶ ಹೊಂದಿತ್ತು. ಆಫರ್‌ ಫಾರ್‌ ಸೇಲ್‌ 750 ಕೋಟಿ ರೂಪಾಯಿ ಮತ್ತು ತನ್ನ ಮಾಲೀಕ ಸಂಸ್ಥೆ ಉತ್ಕರ್ಷ್‌ ಕೋರ್‌ಇನ್ವೆಸ್ಟ್‌ನಿಂದ 600 ಕೋಟಿ ರೂಪಾಯಿ ಬಂದಿತ್ತು. ಆದರೆ, ಕಂಪನಿಯು ಐಪಿಒಗಾಗಿ ತನ್ನ ಕರಡು ಪತ್ರವನ್ನು ತಿದ್ದುಪಡಿ ಮಾಡಿ 2022ರ ಆಗಸ್ಟ್‌ನಲ್ಲಿ ಸೆಬಿಗೆ ಸಲ್ಲಿಸಿತ್ತು. ಅಂದರೆ, ತನ್ನ ಐಪಿಒ ಗಾತ್ರವನ್ನು ಶೇಕಡ 63ರಷ್ಟು ಅಂದರೆ 500 ರೂಪಾಯಿಗೆ ತಗ್ಗಿಸಿತ್ತು. ಆರಂಭಿಕವಾಗಿ, ಈ ಬ್ಯಾಂಕ್‌ ಐಪಿಒ ಮೂಲಕ 1350 ಕೋಟಿ ರೂ. ಸಂಗ್ರಹಿಸಲು ನಿರ್ಧರಿಸಿತ್ತು.

ಉತ್ಕರ್ಷ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಐಪಿಒ ಕುರಿತು ಈ ಹತ್ತು ವಿಚಾರಗಳನ್ನು ತಿಳಿದುಕೊಳ್ಳಿ

  1. ಉತ್ಕರ್ಷ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಐಪಿಒ ದಿನಾಂಕ: ಜುಲೈ 12 ಬುಧವಾರದಿಂದ ಜುಲೈ 14 ಶುಕ್ರವಾರದವರೆಗೆ.
  2. ಆಂಕರ್‌ ಹೂಡಿಕೆದಾರರು: ಆಂಕರ್‌ ಇನ್ವೆಸ್ಟರ್‌ ಹರಾಜು ಪ್ರಕ್ರಿಯು ಜುಲೈ 11ರಂದು ನಡೆಯಲಿದೆ.
  3. ಪ್ರೈಸ್‌ ಬಾಂಡ್‌: ಈ ಆರಂಭಿಕ ಸಾರ್ವಜನಿಕ ಷೇರು ವಿತರಣೆಯ ದರವು ಪ್ರತಿಷೇರಿಗೆ ಸುಮಾರು 23 ರೂಪಾಯಿಯಿಂದ 25 ರೂಪಾಯಿವರೆಗೆ ಇರಲಿದೆ.
  4. ಷೇರು ವಿವರ ಮತ್ತು ಗಾತ್ರ: ಉತ್ಕರ್ಷ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಇದು ನೋ ಆಫರ್‌ ಫಾರ್‌ ಸೇಲ್‌ (ಒಪಿಎಸ್‌) ಆಯ್ಕೆ ಮೂಲಕ ಹೊಸದಾಗಿ ಈಕ್ವಿಟಿ ಷೇರುಗಳನ್ನು ವಿತರಣೆ ಮಾಡುತ್ತಿದೆ. ಪ್ರತಿ ಷೇರಿನ ಮುಖ ಬೆಲೆ 10 ರೂಪಾಯಿ.
  5. ಲಾಟ್‌ ಗಾತ್ರ: ಲಾಟ್‌ಗೆ ಕನಿಷ್ಠ ಬಿಡ್‌ 600 ಈಕ್ವಿಟಿ ಷೇರುಗಳಾಗಿವೆ. ಬಳಿಕ ಇದನ್ನು ಗುಣಾಕಾರ ಶ್ರೇಣಿಯಲ್ಲಿ ಹೆಚ್ಚಿಸಬಹುದು.
  6. ಹಂಚಿಕೆ ಮತ್ತು ವಿತರಣೆ: ಷೇರು ಹಂಚಿಕೆಯನ್ನು ಜುಲೈ 19ರಂದು ಅಂತಿಮಗೊಳಿಸಲಾಗುತ್ತದೆ. ಕಂಪನಿಯು ಜುಲೈ 20ರಂದು ಮರುಪಾವತಿ ಅಥವಾ ರಿಫಂಡ್‌ ಆರಂಭಿಸಲಿದೆ. ಷೇರುಗಳು ಷೇರು ಹೂಡಿಕೆದಾರರ ಡಿಮ್ಯಾಟ್‌ ಖಾತೆಗೆ ಜುಲೈ 21 ಶುಕ್ರವಾರ ಬೀಳಲಿದೆ. ಜುಲೈ24ರಂದು ಉತ್ಕರ್ಷ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಲಿಸ್ಟ್‌ ಆಗುವ ನಿರೀಕ್ಷೆಯಿದೆ.
  7. ಲೀಡ್‌ ಮ್ಯಾನೇಜರ್‌ ಮತ್ತು ರಿಜಿಸ್ಟ್ರಾರ್‌: ಐಸಿಐಸಿಐ ಸೆಕ್ಯುರಿಟೀಸ್‌ ಲಿಮಿಟೆಡ್‌, ಕೋಟಾಕ್‌ ಮಹೀಂದ್ರ ಕ್ಯಾಪಿಟಲ್‌ ಲಿಮಿಟೆಡ್‌ಗಳು ಲೀಡ್‌ ಮ್ಯಾನೇಜರ್‌ಗಳಾಗಿರಲಿವೆ. ಕೆಫಿನ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ರಿಜಿಸ್ಟಾರ್‌ ಆಗಿರಲಿದೆ.
  8. ಪ್ರವರ್ತಕರು ಹೊಂದಿರುವ ಷೇರುಗಳು: ಬ್ಯಾಂಕ್‌ನ ಒಂದೇ ಒಂದು ಪ್ರವರ್ತಕರಾಗಿರುವ ಉತ್ಕರ್ಷ್‌ ಕೋರ್‌ಇನ್ವೆಸ್ಟ್‌ ಲಿಮಿಟೆಡ್‌ (ಈ ಹಿಂದೆ ಉತ್ಕರ್ಷ್‌ ಮೈಕ್ರೊ ಫೈನಾನ್ಸ್‌ ಲಿಮಿಟೆಡ್‌ ಹೆಸರು ಹೊಂದಿತ್ತು) ಗರಿಷ್ಠ ಷೇರುಗಳನ್ನು ಹೊಂದಲಿದೆ. ಪ್ರವರ್ತಕರು ಮತ್ತು ಇದರ ನಾಮಿನಿಗಳು ರೆಡ್‌ ಹೆರಿಂಗ್‌ ಪ್ರಾಸ್ಪೆಕ್ಟ್ಸ್‌ ದಿನದವರೆಗೆ 759,272,222 ಷೇರುಗಳನ್ನು ಅಥವಾ ಶೇಕಡ 84.75 ಷೇರುಗಳನ್ನು ಹೊಂದಿರಲಿದ್ದಾರೆ.
  9. ಐಪಿಒ ಉದ್ದೇಶ: ಬ್ಯಾಂಕ್‌ನ ಟೈರ್‌ 1 ಬಂಡಾವಳ ಬೇಸ್‌ ಉತ್ತಮಪಡಿಸುವುದು ಮತ್ತು ಭವಿಷ್ಯದ ಬಂಡವಾಳ ಅವಶ್ಯಕತೆಯ ಉದ್ದೇಶಗಳನ್ನು ಪೂರೈಸುವುದು. ಮಾರ್ಚ್‌ 1ರವರೆಗೆ ಈ ಬ್ಯಾಂಕ್‌ನ ಟೈರ್‌ 1 ಕ್ಯಾಪಿಟಲ್‌ ಬೇಸ್‌ 1,844.82 ಕೋಟಿ ರೂಪಾಯಿ ಆಗಿತ್ತು.
  10. ಐಪಿಒ ಮೀಸಲಾತಿ: ಕಂಪನಿಯು ಕ್ಯುಐಬಿಗಾಗಿ ಸಾರ್ವಜನಿಕ ಷೇರಿನಲ್ಲಿ ಶೇಕಡ 75ಕ್ಕಿಂತ ಕಡಿಮೆಯಿಲ್ಲದಂತೆ ಷೇರು ರಿಸರ್ವ್‌ ಮಾಡಿದೆ. ಸಾಂಸ್ಥಿಕರೇತರ ಹೂಡಿಕೆದಾರರಿಗೆ ಶೇಕಡ 15ಕ್ಕಿಂತ ಹೆಚ್ಚು ವಿತರಣೆ ಮಾಡದಿರಲು ಉದ್ದೇಶಿಸಿದೆ. ರಿಟೇಲ್‌ ಹೂಡಿಕೆದಾರರಿಗೆ ಶೇಕಡ 10ಕ್ಕಿಂತ ಹೆಚ್ಚು ವಿತರಣೆ ಮಾಡದೆ ಇರಲು ಬಯಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.