ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವೊಡಾಫೋನ್ ಐಡಿಯಾ ಪ್ಲಾನ್‌ಗಳ ದರ ಏರಿಕೆ; ಶೇಕಡ 10 ರಿಂದ 20ರಷ್ಟು ದರ ಹೆಚ್ಚಳ, ಪ್ರೀಪೇಯ್ಡ್‌, ಪೋಸ್ಟ್‌ ಪೇಯ್ಡ್ ಹೊಸ ದರ ವಿವರ ಇಲ್ಲಿದೆ

ವೊಡಾಫೋನ್ ಐಡಿಯಾ ಪ್ಲಾನ್‌ಗಳ ದರ ಏರಿಕೆ; ಶೇಕಡ 10 ರಿಂದ 20ರಷ್ಟು ದರ ಹೆಚ್ಚಳ, ಪ್ರೀಪೇಯ್ಡ್‌, ಪೋಸ್ಟ್‌ ಪೇಯ್ಡ್ ಹೊಸ ದರ ವಿವರ ಇಲ್ಲಿದೆ

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ಗಳು ತಮ್ಮ ಮೊಬೈಲ್ ಪ್ಲಾನ್‌ಗಳ ದರ ಪರಿಷ್ಕರಣೆ ಘೋ‍ಷಿಸಿದ ಬೆನ್ನಿಗೆ ವೊಡಾಫೋನ್ ಐಡಿಯಾ ಪ್ಲಾನ್‌ಗಳ ದರ ಏರಿಕೆಯಾಗಿದೆ. ಶೇಕಡ 10 ರಿಂದ 20ರಷ್ಟು ದರ ಹೆಚ್ಚಳವಾಗಿದ್ದು, ಪ್ರೀಪೇಯ್ಡ್‌, ಪೋಸ್ಟ್‌ ಪೇಯ್ಡ್ ಹೊಸ ದರ ವಿವರ ಇಲ್ಲಿದೆ.

ವೊಡಾಫೋನ್ ಐಡಿಯಾ ಪ್ಲಾನ್‌ಗಳ ದರ ಏರಿಕೆ; ಶೇಕಡ 10 ರಿಂದ 20ರಷ್ಟು ದರ ಹೆಚ್ಚಳ, ಪ್ರೀಪೇಯ್ಡ್‌, ಪೋಸ್ಟ್‌ ಪೇಯ್ಡ್ ಹೊಸ ದರ ವಿವರ
ವೊಡಾಫೋನ್ ಐಡಿಯಾ ಪ್ಲಾನ್‌ಗಳ ದರ ಏರಿಕೆ; ಶೇಕಡ 10 ರಿಂದ 20ರಷ್ಟು ದರ ಹೆಚ್ಚಳ, ಪ್ರೀಪೇಯ್ಡ್‌, ಪೋಸ್ಟ್‌ ಪೇಯ್ಡ್ ಹೊಸ ದರ ವಿವರ

ನವದೆಹಲಿ: ವೊಡಾಫೋನ್ ಐಡಿಯಾ (Vodafone Idea (Vi)) ಶುಕ್ರವಾರ, ಜೂನ್ 28 ರಂದು ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಪ್ಲಾನ್‌ಗಳ ದರವನ್ನು 10-20 ಪ್ರತಿಶತದಷ್ಟು ಹೆಚ್ಚಿಸಿದೆ. ಟೆಲಿಕಾಂ ಸೇವೆಗಳ ಮಾರುಕಟ್ಟೆಯ ಮುಂಚೂಣಿ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ಗಳು ತಮ್ಮ ಮೊಬೈಲ್ ಪ್ಲಾನ್‌ಗಳ ದರ ಪರಿಷ್ಕರಣೆ ಘೋ‍ಷಿಸಿದ ಬೆನ್ನಿಗೆ ವೊಡಾಫೋನ್ ಐಡಿಯಾ ಕೂಡ ಈ ಕ್ರಮ ತೆಗೆದುಕೊಂಡಿದೆ.

ರಿಲಯನ್ಸ್ ಜಿಯೋ ರೀಚಾರ್ಜ್ ಯೋಜನೆಗಳ ಮೇಲಿನ ಶುಲ್ಕಗಳನ್ನು ಹೆಚ್ಚಿಸಿದ ಮಾರನೇ ದಿನ ಭಾರ್ತಿ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ತನ್ನ ಪ್ಲಾನ್‌ಗಳ ದರಗಳನ್ನು ಪರಿಷ್ಕರಿಸಿತು.

ವೊಡೋಫೋನ್‌ ಐಡಿಯಾದ ಆರಂಭಿಕ ಪ್ಲಾನ್‌ಗಳಲ್ಲಿ 28 ದಿನಗಳ ಮೊಬೈಲ್ ಸೇವೆಯನ್ನು ಒಳಗೊಂಡಿದ್ದು, ಅದರ ದರವನ್ನು ಹಿಂದಿನ 179 ರೂಪಾಯಿಗಿಂತ ಸರಿಸುಮಾರು 11 ಪ್ರತಿಶತ ಏರಿಸಿ 199 ರೂಪಾಯಿಗೆ ನಿಗದಿ ಮಾಡಿದೆ. ಇದಲ್ಲದೆ, ವೊಡಾಫೋನ್ ಇಂಡಿಯಾ ತನ್ನ ಜನಪ್ರಿಯ 84-ದಿನಗಳ ಅವಧಿಯ ಪ್ಲಾನ್‌ ದರವನ್ನು ಈಗ ಇರುವ 719 ರೂಪಾಯಿಯಿಂದ 859 ರೂಪಾಯಿಗೆ ಏರಿಸಿದೆ. ಇದು ದಿನಕ್ಕೆ 1.5 GB ಡೇಟಾವನ್ನು ನೀಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಇದಲ್ಲದೆ, ಕಂಪನಿಯು ತನ್ನ ವಾರ್ಷಿಕ ಅನ್‌ಲಿಮಿಟೆಡ್‌ ಪ್ಲಾನ್‌ನ ಬೆಲೆಯನ್ನು ಪ್ರಸ್ತುತ ಇರುವ 2,899 ರೂಪಾಯಿಯಿಂದ 3,499 ರೂಪಾಯಿಗೆ ಅಂದರೆ ಸುಮಾರು 21 ಪ್ರತಿಶತದಷ್ಟು ಹೆಚ್ಚಿಸಿದೆ. ಆದಾಗ್ಯೂ, ವೋಡಾಫೋನ್‌ ಇಂಡಿಯಾ ತನ್ನ 365-ದಿನಗಳ ಮಾನ್ಯತೆಯ ಯೋಜನೆಯ ಬೆಲೆಯನ್ನು ಯಾವುದೇ ಬದಲಾವಣೆಗಳಿಲ್ಲದೆ 1,799 ರೂಪಾಯಿಗೆ 24 GB ಡೇಟಾ ಮಿತಿಯಲ್ಲಿ ಹಾಗೆಯೇ ಉಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ 4ಜಿ ಸೇವೆಯ ಗುಣಮಟ್ಟ ಹೆಚ್ಚಿಸಲು ಮತ್ತು 5ಜಿ ಸೇವೆ ಒದಗಿಸಲು ಸಿದ್ಧತೆ ನಡೆಸಿರುವುದಾಗಿಯೂ ಘೋ‍ಷಿಸಿದೆ.

ವೊಡಾಫೋನ್ ಐಡಿಯಾ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್‌ ಹೊಸ ಪ್ರೀಪೇಯ್ಡ್ ಪ್ಲಾನ್‌ ದರ

199 ರೂಪಾಯಿ ಪ್ಲಾನ್‌ - 2ಜಿಬಿ ಡೇಟಾ, ಅನಿಯಮಿತ ಕರೆ, 300 ಎಸ್‌ಎಂಎಸ್‌ - 28 ದಿನಗಳ ಅವಧಿ

509 ರೂಪಾಯಿ ಪ್ಲಾನ್‌ - 6ಜಿಬಿ ಡೇಟಾ, ಅನಿಯಮಿತ ಕರೆ, 300 ಎಸ್‌ಎಂಏಸ್‌ 84 ದಿನಗಳ ಅವಧಿ

1799 ರೂಪಾಯಿ ಪ್ಲಾನ್ 24 ಜಿಬಿ ಡೇಟಾ, ಅನಿಯಮಿತ ಕರೆ, 300 ಎಸ್ಎಂಎಸ್, 365 ದಿನಗಳ ಅವಧಿ

ದೈನಂದಿನ ಡೇಟಾ ಒದಗಿಸುವ ಹೊಸ ಪ್ರೀಪೇಯ್ಡ್‌ ಪ್ಲಾನ್‌ ದರ

299 ರೂಪಾಯಿ ಪ್ಲಾನ್‌ - ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌- 28 ದಿನಗಳ ಅವಧಿ

349 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 28 ದಿನಗಳ ಅವಧಿ

379 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 1 ತಿಂಗಳು ಅವಧಿ

579 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 56 ದಿನಗಳ ಅವಧಿ

649 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 56 ದಿನಗಳ ಅವಧಿ

859 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 84 ದಿನಗಳ ಅವಧಿ

979 ರೂಪಾಯಿ ಪ್ಲಾನ್ - ದಿನಕ್ಕೆ 2 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 84 ದಿನಗಳ ಅವಧಿ

3499 ರೂಪಾಯಿ ಪ್ಲಾನ್ - ದಿನಕ್ಕೆ 1.5 ಜಿಬಿ ಡೇಟಾ, ತಡರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ಉಳಿದರೆ ಮುಂದಕ್ಕೆ, ಡೇಟಾ ಡಿಲೈಟ್‌, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ - 365 ದಿನಗಳ ಅವಧಿ

ಡೇಟಾ ಆಡ್‌ ಆನ್‌ ಇರುವ ಹೊಸ ಪ್ರೀಪೇಯ್ಡ್‌ ಪ್ಲಾನ್‌ ದರ

22 ರೂಪಾಯಿಗೆ 1 ಜಿಬಿ ಡೇಟಾ - ಅವಧಿ 1 ದಿನ

48 ರೂಪಾಯಿಗೆ 6 ಜಿಬಿ ಡೇಟಾ - ಅವಧಿ 3 ದಿನ

ಹೊಸ ಪೋಸ್ಟ್ ಪೇಯ್ಡ್ ಪ್ಲಾನ್‌ಗಳು (ಪೋಸ್ಟ್‌ಪೇಯ್ಡ್‌ ವಿಐ ಮ್ಯಾಕ್ಸ್ ಪ್ಲಾನ್ಸ್)

451 ರೂಪಾಯಿ ಪ್ಲಾನ್ - ವೈಯಕ್ತಿಕ ಪ್ಲಾನ್ 90 ಜಿಬಿ ಡೇಟಾ, ಉಳಿಕೆ ಡೇಟಾ ಮುಂದಿನ ತಿಂಗಳಿಗೆ ಗರಿಷ್ಠ 200 ಜಿಬಿ ತನಕ, ಅನಿಯಮಿತ ಕರೆ, ಅನಿಯಮಿತ ರಾತ್ರಿ ಡೇಟಾ, 3000 ಎಸ್‌ಎಂಎಸ್‌, 8 ಪ್ರಯೋಜನಗಳ ಪೈಕಿ ಯಾವುದಾದರೂ ಎರಡು ಕಾಂಪ್ಲಿಮೆಂಟರಿ ಪ್ರಯೋಜನಗಳು (ಅಮೆಜಾನ್ ಪ್ರೈಮ್‌, ಸ್ವಿಗ್ಗಿ ಒನ್‌, ಈಜಿಡಿನರ್‌ 6 ತಿಂಗಳ ಸಬ್‌ಸ್ಕ್ರಿಪ್ಶನ್‌, ಡಿಸ್ನಿ+ಹಾಟ್‌ಸ್ಟಾರ್‌, ಸೋನಿಯುವಿ, ಸನ್ ಎನ್‌ಎಕ್ಸ್‌ಟಿ, ಈಸ್‌ಮೈಟ್ರಿಪ್‌ ಡಿಸ್ಕೌಂಟ್ ಕೂಪನ್ಸ್ ಮತ್ತು 12 ತಿಂಗಳ ಅವಧಿಯ ನೋರ್ಟನ್‌ ಮೊಬೈಲ್ ಸೆಕ್ಯುರಿಟಿ)

ಫ್ಯಾಮಿಲಿ 701 ರೂಪಾಯಿ ಪ್ಲಾನ್ - ಫ್ಯಾಮಿಲಿ 2 ಲೈನ್‌ ಪ್ಲಾನ್ - 70 ಜಿಬಿ ಡೇಟಾ ಪ್ರೈಮರಿ ಕನೆಕ್ಷನ್‌ಗೆ + 40 ಜಿಬಿ ಡೇಟಾ ಸೆಕಂಡರಿ ಕನೆಕ್ಷನ್‌ಗೆ, ಉಳಿಕೆ ಡೇಟಾ ಮುಂದಿನ ತಿಂಗಳಿಗೆ ಗರಿಷ್ಠ 200 ಜಿಬಿ ತನಕ, ಅನಿಯಮಿತ ಕರೆ, ಅನಿಯಮಿತ ರಾತ್ರಿ ಡೇಟಾ, 3000 ಎಸ್‌ಎಂಎಸ್‌, 8 ಪ್ರಯೋಜನಗಳ ಪೈಕಿ ಯಾವುದಾದರೂ ಎರಡು ಕಾಂಪ್ಲಿಮೆಂಟರಿ ಪ್ರಯೋಜನಗಳು (ಅಮೆಜಾನ್ ಪ್ರೈಮ್‌, ಸ್ವಿಗ್ಗಿ ಒನ್‌, ಈಜಿಡಿನರ್‌ 6 ತಿಂಗಳ ಸಬ್‌ಸ್ಕ್ರಿಪ್ಶನ್‌, ಡಿಸ್ನಿ+ಹಾಟ್‌ಸ್ಟಾರ್‌, ಸೋನಿಯುವಿ, ಸನ್ ಎನ್‌ಎಕ್ಸ್‌ಟಿ, ಈಸ್‌ಮೈಟ್ರಿಪ್‌ ಡಿಸ್ಕೌಂಟ್ ಕೂಪನ್ಸ್ ಮತ್ತು 12 ತಿಂಗಳ ಅವಧಿಯ ನೋರ್ಟನ್‌ ಮೊಬೈಲ್ ಸೆಕ್ಯುರಿಟಿ)

ಫ್ಯಾಮಿಲಿ 1201 ರೂಪಾಯಿ ಪ್ಲಾನ್ - ಫ್ಯಾಮಿಲಿ 4 ಲೈನ್‌ ಪ್ಲಾನ್ - 140 ಜಿಬಿ ಡೇಟಾ ಪ್ರೈಮರಿ ಕನೆಕ್ಷನ್‌ಗೆ + 40 ಜಿಬಿ ಡೇಟಾ ಉಳಿದ ಮೂರು ಪ್ರತಿ ಕನೆಕ್ಷನ್‌ಗೆ, ಉಳಿಕೆ ಡೇಟಾ ಮುಂದಿನ ತಿಂಗಳಿಗೆ ಗರಿಷ್ಠ 200 ಜಿಬಿ ತನಕ, ಅನಿಯಮಿತ ಕರೆ, ಅನಿಯಮಿತ ರಾತ್ರಿ ಡೇಟಾ, 3000 ಎಸ್‌ಎಂಎಸ್‌, 8 ಪ್ರಯೋಜನಗಳ ಪೈಕಿ ಯಾವುದಾದರೂ ಎರಡು ಕಾಂಪ್ಲಿಮೆಂಟರಿ ಪ್ರಯೋಜನಗಳು (ಅಮೆಜಾನ್ ಪ್ರೈಮ್‌, ಸ್ವಿಗ್ಗಿ ಒನ್‌, ಈಜಿಡಿನರ್‌ 6 ತಿಂಗಳ ಸಬ್‌ಸ್ಕ್ರಿಪ್ಶನ್‌, ಡಿಸ್ನಿ+ಹಾಟ್‌ಸ್ಟಾರ್‌, ಸೋನಿಯುವಿ, ಸನ್ ಎನ್‌ಎಕ್ಸ್‌ಟಿ, ಈಸ್‌ಮೈಟ್ರಿಪ್‌ ಡಿಸ್ಕೌಂಟ್ ಕೂಪನ್ಸ್ ಮತ್ತು 12 ತಿಂಗಳ ಅವಧಿಯ ನೋರ್ಟನ್‌ ಮೊಬೈಲ್ ಸೆಕ್ಯುರಿಟಿ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.