ಬೀದಿ ನಾಯಿಗಳ ದಾಳಿಗೆ ಖ್ಯಾತ ಟೀ ಕಂಪನಿ ಮಾಲೀಕ ಪರಾಗ್ ದೇಸಾಯಿ ಸಾವು; 49ನೇ ವಯಸ್ಸಿಗೆ ಉದ್ಯಮಿ ದುರ್ಮರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೀದಿ ನಾಯಿಗಳ ದಾಳಿಗೆ ಖ್ಯಾತ ಟೀ ಕಂಪನಿ ಮಾಲೀಕ ಪರಾಗ್ ದೇಸಾಯಿ ಸಾವು; 49ನೇ ವಯಸ್ಸಿಗೆ ಉದ್ಯಮಿ ದುರ್ಮರಣ

ಬೀದಿ ನಾಯಿಗಳ ದಾಳಿಗೆ ಖ್ಯಾತ ಟೀ ಕಂಪನಿ ಮಾಲೀಕ ಪರಾಗ್ ದೇಸಾಯಿ ಸಾವು; 49ನೇ ವಯಸ್ಸಿಗೆ ಉದ್ಯಮಿ ದುರ್ಮರಣ

Wagh Bakri owner Parag Desai: ಪರಾಗ್ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದರು. ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ
ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ

ಅಹಮದಾಬಾದ್​: ವಾಘ್ ಬಕ್ರಿ ಟೀ ಬ್ರಾಂಡ್ ಅನ್ನು ಹೊಂದಿರುವ ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ ಅವರು ತಮ್ಮ 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆದರೆ ಅವರ ಸಾವಿಗೆ ಕಾರಣ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಏಕೆಂದರೆ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ.

ಘಟನೆ ಹಿನ್ನೆಲೆ

ಅಕ್ಟೋಬರ್ 15 ರಂದು ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದರು. ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು. ಅವರ ಮನೆಯ ಭದ್ರತಾ ಸಿಬ್ಬಂದಿ ನೋಡಿ ಕುಟುಂಬಸ್ಥರಿಗೆವ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ದಿನದ ನಂತರ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಅಹಮದಾಬಾದ್‌ನ ಬೇರೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 7 ದಿನಗಳ ಕಾಲ ಅವರು ವೆಂಟಿಲೇಟರ್‌ನಲ್ಲಿದ್ದರು. ಆದರೆ ಅಕ್ಟೋಬರ್ 22 ರಂದು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನೆರವೇರಿದೆ.

ವಾಘ್ ಬಕ್ರಿ ಟೀ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಪರಾಗ್ ದೇಸಾಯಿ ಅವರು ತಮ್ಮ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಪರಾಗ್ ದೇಸಾಯಿ ಅವರ ತಂದೆ ರಸೇಶ್ ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

30 ವರ್ಷಗಳಿಂದ ಉದ್ಯಮರಂಗದಲ್ಲಿದ್ದ ಪರಾಗ್ ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್​​ ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ರಫ್ತು ವಿಭಾಗಗಳನ್ನು ನಿರ್ವಹಿಸಿದ್ದರು. ಕಂಪನಿಯು ವಾರ್ಷಿಕ 1,500 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.