Ola Job Cut: ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಜಾಬ್‌ ಕಟ್‌, 500 ಉದ್ಯೋಗಿಗಳ ತಲೆ ಮೇಲೆ ತೂಗುಗತ್ತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola Job Cut: ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಜಾಬ್‌ ಕಟ್‌, 500 ಉದ್ಯೋಗಿಗಳ ತಲೆ ಮೇಲೆ ತೂಗುಗತ್ತಿ

Ola Job Cut: ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಜಾಬ್‌ ಕಟ್‌, 500 ಉದ್ಯೋಗಿಗಳ ತಲೆ ಮೇಲೆ ತೂಗುಗತ್ತಿ

ಓಲಾ ಎಲೆಕ್ಟ್ರಿಕ್‌ ಕಂಪನಿಯು ಸಂಸ್ಥೆಯೊಳಗೆ ಪುನರ್‌ರಚನೆ ಚಟುವಟಿಕೆ ಆರಂಭಿಸುತ್ತಿದೆ, ಇದರಿಂದ ಸುಮಾರು 500 ಉದ್ಯೋಗಿಗಳ ಮೇಲೆ ಪರಿಣಾಮವಾಗುವ ನಿರೀಕ್ಷೆಯಿದೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ.

Ola Job Cut: ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಜಾಬ್‌ ಕಟ್‌, 500 ಉದ್ಯೋಗಿಗಳ ಮೇಲೆ ಪರಿಣಾಮ
Ola Job Cut: ಓಲಾ ಎಲೆಕ್ಟ್ರಿಕ್‌ ಕಂಪನಿಯಿಂದ ಜಾಬ್‌ ಕಟ್‌, 500 ಉದ್ಯೋಗಿಗಳ ಮೇಲೆ ಪರಿಣಾಮ (REUTERS)

ಬೆಂಗಳೂರು: ಓಲಾ ಎಲೆಕ್ಟ್ರಿಕ್‌ ಕಂಪನಿಯು ಸಂಸ್ಥೆಯೊಳಗೆ ಪುನರ್‌ರಚನೆ ಚಟುವಟಿಕೆ ಆರಂಭಿಸುತ್ತಿದೆ, ಇದರಿಂದ ಸುಮಾರು 500 ಉದ್ಯೋಗಿಗಳ ಮೇಲೆ ಪರಿಣಾಮವಾಗುವ ನಿರೀಕ್ಷೆಯಿದೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ. ಓಲಾ ಎಲೆಕ್ಟ್ರಿಕ್‌ ಜಾಬ್‌ ಕಟ್‌ ಕುರಿತು ಸಂಸ್ಥೆಯೊಳಗಿನ ಮೂಲಗಳಿಂದ ಮಾಹಿತಿ ಪಡೆಯಲಾಗಿದ್ದು, ಸಾಕಷ್ಟು ಉದ್ಯೋಗಿಗಳ ಜಾಬ್‌ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

ಕಂಪನಿಯು ಲಾಭ ಸುಧಾರಿಸುವ ಸಲುವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಸಂಸ್ಥೆಯೊಳಗಿನ ಮೂಲಗಳು ತಿಳಿಸಿವೆ. ಕಂಪನಿಯು ಆರಂಭಿಕ ಷೇರು ವಿತರಣೆ ಮೂಲಕ ಷೇರುಪೇಟೆಗೆ ಪ್ರವೇಶ ಪಡೆಯುವ ಮೊದಲು ಎರಡು ಬಾರಿ ಜಾಬ್‌ ಕಟ್‌ ಮಾಡಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಪುನರ್‌ರಚನೆ ಚಟುವಟಿಕೆ ನಡೆಸಿತ್ತು. ಇದೇ ಸಮಯದಲ್ಲಿ ಹೊಸ ನೇಮಕವನ್ನೂ ಘೋಷಿಸಲಾಗಿತ್ತು.

2022ರ ಜುಲೈ ತಿಂಗಳಿನಲ್ಲಿ ಸುಮಾರು 1 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದರು. ಈ ಸಮಯದಲ್ಲಿ ಬಳಕೆ ಮಾಡಿದ ಕಾರುಗಳು, ಕ್ಲೌಡ್‌ ಕಿಚನ್‌, ದಿನಸಿ ವಿತರಣೆ ವ್ಯವಹಾರ ಮುಚ್ಚಿತ್ತು. ಈ ಚಟುವಟಿಕೆಯಲ್ಲಿ ಸಾವಿರ ಜನರು ಉದ್ಯೋಗ ಕಳೆದುಕೊಂಡರು. ಇದೇ ಸಮಯದಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ ವಹಿವಾಟಿಗಾಗಿ ಸುಮಾರು 800 ಉದ್ಯೋಗಿಗಳನ್ನು ನೇಮಕ ಮಾಡುವ ಯೋಜನೆ ಪ್ರಕಟಿಸಿತ್ತು.

ಓಲಾ ಎಲೆಕ್ಟ್ರಿಕ್‌ನ ಸಹೋದರಿ ಸಂಸ್ಥೆ ಓಲಾ ಕನ್ಸೂಮರ್‌ ಕೂಡ ಸುಮಾರು ಏಳು ತಿಂಗಳ ಹಿಂದೆ ಸಂಸ್ಥೆ ಪುನರ್‌ರಚನೆ ಚಟುವಟಿಕೆ ಆರಂಭಿಸಿತ್ತು. ಇದು ಸಂಸ್ಥೆಯ ಶೇಕಡ 10ರಷ್ಟು ಉದ್ಯೋಗಿಗಳ ಉದ್ಯೋಗದ ಮೇಲೆ ಪರಿಣಾಮ ಬೀರಿತ್ತು. ಇದೇ ಸಮಯದಲ್ಲಿ ಓಲಾ ಕ್ಯಾಬ್ಸ್‌ನ ಸಿಇಒ ಹೇಮಂತ್‌ ಬಕ್ಷಿ ಕೂಡ ಉದ್ಯೋಗ ಬಿಟ್ಟಿದ್ದರು ಎಂದು ಮನಿ ಕಂಟ್ರೋಲ್‌ ವರದಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಓಲಾ ಎಲೆಕ್ಟ್ರಿಕ್‌ನ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗಿದೆ. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 38.5ರಷ್ಟು ಏರಿಕೆಯಾಗಿದೆ. ಕಂಪನಿಯ ಆದಾಯ 1,240 ಕೋಟಿ ರೂಗೆ ತಲುಪಿದೆ. ಕಂಪನಿಯ ಸ್ಕೂಟರ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ, ಗ್ರಾಹಕರಿಗೆ ನೀಡುವ ಸರ್ವೀಸ್‌ ವಿಚಾರಗಳ ಕುರಿತು ದೂರುಗಳ ಹೆಚ್ಚುತ್ತಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.