ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ
PURE EV - BE Energy Partnership: ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಕ್‌ಗಳ ಬ್ಯಾಟರಿ ಲೈಫ್ ಮತ್ತು ಮರು ಮಾರಾಟ ಮೌಲ್ಯ ಸದ್ಯ ಎಲ್ಲರನ್ನೂ ಕಾಡುತ್ತಿರುವ ಚಿಂತೆ. ಇದನ್ನು ನಿವಾರಿಸುವಂತೆ ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ ಘೋಷಣೆಯಾಗಿದೆ.

PURE EV - BE Energy Partnership: ಭಾರತದ ಎಲೆಕ್ಟ್ರಿಕ್ ಸ್ಕೂಟರ್, ಮೋಟಾರ್‌ಸೈಕಲ್ ಉತ್ಪಾದಕ ಕಂಪನಿ ಪ್ಯೂರ್ ತನ್ನ ವಾಹನಗಳ ಬ್ಯಾಟರಿ ಲೈಫ್ ಹೆಚ್ಚಿಸುವುದಕ್ಕೆ ಚಿಂತನೆ ನಡೆಸಿದೆ. ಹೀಗಾಗಿ, ಫ್ರಾನ್ಸ್‌ನ ಪ್ರಮುಖ ಕ್ಲೈಮ್ಯಾಟ್ ಟೆಕ್ ಕಂಪನಿ ಬಿಇ ಎನರ್ಜಿ ಜತೆಗೆ ಪ್ಯೂರ್ ಇವಿ ವ್ಯೂಹಾತ್ಮಕ ಸಹಭಾಗಿತ್ವ ಹೊಂದಿರುವುದಾಗಿ ಘೋಷಿಸಿದೆ. ಈ ಸಹಭಾಗಿತ್ವವು ಸುಧಾರಿತ ಲಿ-ಅಯಾನ್ ಬ್ಯಾಟರಿ ರಿಕಂಡಿಷನಿಂಗ್ ಟೆಕ್ನಾಲಜಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಅಷ್ಟೇ ಅಲ್ಲ, ಬಿಇ ಎನರ್ಜಿಯು ಈ ಪಾಲುದಾರಿಕೆಯ ಮೂಲಕ ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾರ್ಯಾಚರಣೆ ಶುರುಮಾಡಲಿದೆ ಎಂದು ಪ್ಯೂರ್ ಇವಿ ತಿಳಿಸಿದೆ.
ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳ
ಫ್ರಾನ್ಸ್‌ನ ಬಿಇ ಎನರ್ಜಿ ಕಂಪನಿ ಜತೆಗೆ ಹೈದರಾಬಾದ್ ಮೂಲದ ಪ್ಯೂರ್ ಇವಿ ವ್ಯೂಹಾತ್ಮಕ ಪಾಲುದಾರಿಕೆ ಮಾಡಿಕೊಂಡಿರುವ ಕಾರಣ, ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪೇಟೆಂಟ್ ಹೊಂದಿರುವ ಬ್ಯಾಟ್ರಿಕ್ಸ್‌ಫಾರಡೇಟಿಎಂ (BatricsFaradayTM) ತಂತ್ರಜ್ಞಾನ ಬಳಕೆಯಾಗಲಿದೆ. ಭಾರತದ ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಲಿ-ಅಯಾನ್ ಬ್ಯಾಟರಿಗಳ ರಿಕಂಡಿಷನಿಂಗ್ ಕ್ಷೇತ್ರದಲ್ಲಿ ಮೊದಲಿಗರಾಗಿ ಕೆಲಸ ಮಾಡಲು ಈ ಎರಡೂ ಸಂಸ್ಥೆಗಳು ಮುಂದಾಗಿವೆ.
ಪ್ಯೂರ್ ಇವಿ - ಬಿಇ ಎನರ್ಜಿ ಪಾಲುದಾರಿಕೆಯು ಇವಿ ಮಾಲೀಕರಿಗೆ ದೀರ್ಘಕಾಲದ ವೆಚ್ಚ ಉಳಿತಾಯಕ್ಕೆ ಕಾರಣವಾಗಲಿದೆ. ಬ್ಯಾಟರಿ ರಿಕಂಡಿಷನಿಂಗ್/ಪುನಸ್ಥಾಪನೆಯ ಪ್ರಕ್ರಿಯೆಯು ಹೊಸ ಬ್ಯಾಟರಿಗೆ ತಗಲುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಒಟ್ಟಾರೆ ನಿರ್ವಹಣೆ ವೆಚ್ಚವನ್ನು ಇದು ಕಡಿತಗೊಳಿಸಲಿದೆ. ಬ್ಯಾಟರಿಯ ಜೀವಿತಾವಧಿ ಕುರಿತಾಗಿ ವಾಣಿಜ್ಯ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳಲ್ಲಿ ವಿಶ್ವಾಸತುಂಬುವ ದೃಷ್ಟಿಯಿಂದ ಈ ಪಾಲುದಾರಿಕೆ ಹೆಚ್ಚು ಮಹತ್ವ ಪಡೆದಿದೆ.
ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ
ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ ಸಂಬಂಧಿಸಿ ಮಾತನಾಡಿದ ಪ್ಯೂರ್ ಇವಿಯ ಸಂಸ್ಥಾಪಕ ಮತ್ತು ಎಂಡಿ ಡಾ ನಿಶಾಂತ್ ಡೊಂಗರಿ, “ಬಿಇ ಎನರ್ಜಿಯೊಂದಿಗಿನ ನಮ್ಮ ಸಹಭಾಗಿತ್ವವು ವಿದ್ಯುತ್ ವಾಹನಗಳ ಬಾಳಿಕೆ ಮತ್ತು ಹಣದ ಮೌಲ್ಯದೊಂದಿಗೆ ಸರಿದೂಗಿಸುವ ಪ್ಯೂರ್ ಇವಿಯ ದೂರದೃಷ್ಟಿಯೊಂದಿಗೆ ಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಭಾರತದಲ್ಲಿ ಬಿಇ ಎನರ್ಜಿಯ ಮೊದಲ ಪಾಲುದಾರರಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈ ಪಾಲುದಾರಿಕೆಯು ಹಣಕಾಸು ಸಂಸ್ಥೆ ಮತ್ತು ಅಂತಿಮ ಬಳಕೆದಾರರಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ‘ಮರುಮಾರಾಟ’ ಮೌಲ್ಯದ ವಿಚಾರದಲ್ಲಿ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲಿದೆ. ಇವಿ ಟೂ ವ್ಹೀಲರ್ಸರ್ ಮತ್ತು ಇಎಸ್‌ಎಸ್ ಮಾರುಕಟ್ಟೆಯ ಭವಿಷ್ಯವನ್ನು ರೂಪಿಸುವಲ್ಲಿ ಈ ಪಾಲುದಾರಿಕೆಯು ಮಹತ್ವದ ಪಾತ್ರವಹಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಇ ಎನರ್ಜಿ ಸಂಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷ ಬರ್ಟ್ರಾಂಡ್ ಕಾಸ್ಟೆ ಅವರು ಈ ಪಾಲುದಾರಿಕೆ ಕುರಿತು ಮಾತನಾಡುತ್ತ, “ನಾವು ಪ್ಯೂರ್ ಇವಿ ಜೊತೆ ಸಹಕರಿಸಲು ಮತ್ತು ನಮ್ಮ ಅತ್ಯಾಧುನಿಕ ಬ್ಯಾಟರಿ ಮರುಪಡೆಯುವಿಕೆ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ಈ ಸಹಭಾಗಿತ್ವವು ಇವಿ ವಲಯದಲ್ಲಿ ಸುಸ್ಥಿರತೆಯನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಅದೇ ರೀತಿ, ಬ್ಯಾಟರಿಗಳ ಕಡಿಮೆ ಬಾಳಿಕೆ ಮತ್ತು ದೋಷಯುಕ್ತ ಬ್ಯಾಟರಿಗಳ ರೀಕಂಡಿಷನಿಂಗ್ ಮೂಲಕ ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಕೆಲಸ ಮಾಡುತ್ತದೆ. ಇದು ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ದಾಖಲಿಸುವ ಪ್ರಕ್ರಿಯೆ" ಎಂದು ವಿವರಿಸಿದರು.
ಪ್ಯೂರ್ ಇವಿ ಮತ್ತು ಬಿಇ ಎನರ್ಜಿ ಎರಡೂ ಕಂಪನಿಗಳು ಸುಸ್ಥಿರತೆ ಮತ್ತು ನಾವೀನ್ಯಕ್ಕೆ ಬಲವಾದ ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಎರಡು ಕಂಪನಿಗಳ ಪಾಲುದಾರಿಕೆಯು ಭಾರತದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದೊಂದಿಗೆ ಹೊಂದಿಕೊಳ್ಳುತ್ತಿದೆ. ಪಾಲುದಾರಿಕೆಯ ಯೋಜನೆಯು ಮುಂದಿನ ಹಣಕಾಸು ವರ್ಷ (2025-26) ತೆಲಂಗಾಣದ ಹೈದಾರಾಬಾದ್ ಸಮೀಪ ಶುರುವಾಗಲಿದೆ ಎಂದು ಪ್ಯೂರ್ ಇವಿ ತಿಳಿಸಿದೆ.
