ರತನ್ ಟಾಟಾ 10000 ಕೋಟಿ ವಿಲ್‌ನಲ್ಲಿ ರಾಜನ್ ಶಾ ಹೆಸರು; ಮಹತ್ವದ ಜವಾಬ್ದಾರಿ ಪಡೆದ ಈ ವ್ಯಕ್ತಿ ಯಾರು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರತನ್ ಟಾಟಾ 10000 ಕೋಟಿ ವಿಲ್‌ನಲ್ಲಿ ರಾಜನ್ ಶಾ ಹೆಸರು; ಮಹತ್ವದ ಜವಾಬ್ದಾರಿ ಪಡೆದ ಈ ವ್ಯಕ್ತಿ ಯಾರು?

ರತನ್ ಟಾಟಾ 10000 ಕೋಟಿ ವಿಲ್‌ನಲ್ಲಿ ರಾಜನ್ ಶಾ ಹೆಸರು; ಮಹತ್ವದ ಜವಾಬ್ದಾರಿ ಪಡೆದ ಈ ವ್ಯಕ್ತಿ ಯಾರು?

Ratan Tata Will: ರತನ್‌ ಟಾಟಾ ಅವರು, ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ವಿಲ್‌ನಲ್ಲಿ ಸಂಬಂಧಿಕರ ಹೆಸರು ಮಾತ್ರ ಹಾಕಿಸಿಲ್ಲ. ಉಯಿಲಿನಲ್ಲಿ ತಮ್ಮ ನಿಷ್ಟಾವಂತ ಸಿಬ್ಬಂದಿ ಹೆಸರೂ ಇದೆ. ಬಾಂಬೆ ಹೈಕೋರ್ಟ್‌ನಲ್ಲಿ ವಿಲ್‌ ವಿಚಾರಣೆಗೆ ಒಳಗಾಗಲು ಸಿದ್ಧವಾಗಿದೆ. ಈ ಪ್ರಕ್ರಿಯೆ‌ ಅಂತಿಮವಾಗಲು ತಿಂಗಳುಗಳು ಹಿಡಿಯಬಹುದು.

ರತನ್ ಟಾಟಾ 10000 ಕೋಟಿ ವಿಲ್‌ನಲ್ಲಿ ರಾಜನ್ ಶಾ ಹೆಸರು; ಮಹತ್ವದ ಜವಾಬ್ದಾರಿ ಪಡೆದ ಈ ವ್ಯಕ್ತಿ
ರತನ್ ಟಾಟಾ 10000 ಕೋಟಿ ವಿಲ್‌ನಲ್ಲಿ ರಾಜನ್ ಶಾ ಹೆಸರು; ಮಹತ್ವದ ಜವಾಬ್ದಾರಿ ಪಡೆದ ಈ ವ್ಯಕ್ತಿ

ಇತ್ತೀಚೆಗೆ ನಿಧನರಾದ ರತನ್ ಟಾಟಾ ಅವರ ವೈಯಕ್ತಿಕ ಸಂಪತ್ತಿನ ಮೌಲ್ಯ ಬರೋಬ್ಬರಿ 10,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಆಸ್ತಿ-ಪಾಸ್ತಿ ಯಾರಿಗೆ ಸೇರುತ್ತದೆ? ಅದಕ್ಕೆ ಮುಂದಿನ ವಾರಸ್ದಾರ ಯಾರು, ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಮೂಡುತ್ತದೆ. ಅವರ ನಿಧನದ ಬಳಿಕ ಆಸ್ತಿಯ ಒಂದು ಭಾಗವನ್ನು ಅವರ ಸಹೋದರ ಜಿಮ್ಮಿ ಟಾಟಾ, ಸಹೋದರಿಯರಾದ ಶಿರೀನ್ ಮತ್ತು ಡೀನ್ನಾ ಜೆಜೀಭೋಯ್ ಮತ್ತು ಇತರರಿಗೆ ಹಂಚಲಾಗಿದ. ಜಗತ್ತಿನಲ್ಲೇ ಪ್ರಖ್ಯಾತಿ ಪಡೆದಿರುವ ಟಾಟಾ ಗ್ರೂಪ್‌ನ ಫೌಂಡೇಶನ್, ದಿ ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (ಆರ್‌ಟಿಇಎಫ್)ಗೆ ರತನ್‌ ಸಂಪತ್ತಿನ ಬಹುಪಾಲು ಸಲ್ಲುತ್ತದೆ. ಟಾಟಾ ಸನ್ಸ್‌ನ ಹಾಲಿ ಅಧ್ಯಕ್ಷರಾದ ಎನ್ ಚಂದ್ರಶೇಖರನ್ ಅವರ ನಾಯಕತ್ವದಲ್ಲಿ ಪ್ರತಿಷ್ಠಾನವು ವಿವಿಧ ದತ್ತಿ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.

ರತನ್‌ ಟಾಟಾ ಅವರ ವಿಲ್ ಅಥವಾ ಉಯಿಲು, ಸದ್ಯ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಗಾಗಲು ಸಿದ್ಧವಾಗಿದೆ. ಈ ಪ್ರಕ್ರಿಯೆ‌ ಅಂತಿಮವಾಗಲು ಕೆಲವು ತಿಂಗಳುಗಳೇ ಬೇಕಾಗಬಹುದು.

ದೀರ್ಘಕಾಲದ ಅಡುಗೆ ಸಿಬ್ಬಂದಿಗೆ ಮಹತ್ವದ ಜವಾಬ್ದಾರಿ

ರತನ್ ಟಾಟಾ ಒಬ್ಬ ಉದ್ಯಮಿ ಎಂಬುದಕ್ಕಿಂತ ಸರಳ ಜೀವನಕ್ಕೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರಾದವರು. ರತನ್ ಟಾಟಾ ಅವರು ತಮ್ಮ ಅಡುಗೆಗಾಗಿ ಕುಕ್‌ ನೇಮಿಸಿದ್ದರು. ಶಿಸ್ತಿನ ಆಹಾರಕ್ರಮ ಅನುಸರಿಸುತ್ತಿದ್ದ ಟಾಟಾ, ತಮ್ಮ ಆಹಾರದ ಆಯ್ಕೆಗಳಲ್ಲಿ ಖಟ್ಟಾ-ಮೀಠಾ ಮಸೂರ್ ದಾಲ್, ಮಟನ್ ಪುಲಾವ್ ದಾಲ್, ದೋಸೆಗಳು, ಪಾವ್ ಭಾಜಿ ಮತ್ತು ಗ್ರಿಲ್ಲಡ್‌ ಫಿಶ್‌ ಸೇರಿದಂತೆ ಪಾರ್ಸಿ ಭಕ್ಷ್ಯಗಳಿಗೆ ಆದ್ಯತೆ ನೀಡುತ್ತಿದ್ದರು. ತಮಗಾಗಿ ಬಗೆಬಗೆಯ ಆಹಾರ ಮಾಡಿ ಬಡಿಸುತ್ತಿದ್ದವರೇ ರಾಜನ್ ಶಾ.

ರತನ್ ಟಾಟಾ ಅವರು, ತಮ್ಮ ನಿಧನದ ಬಳಿಕ ಟಿಟೊ ಹೆಸರಿನ ತಮ್ಮ ಮುದ್ದಿನ ಸಾಕುನಾಯಿ ಜರ್ಮನ್ ಶೆಫರ್ಡ್ ಆರೈಕೆಗಾಗಿ ವಿಶೇಷ ನಿಬಂಧನೆಗಳನ್ನು ಮಾಡಿದ್ದಾರೆ. ಟಿಟೊಗೆ ಜೀವಮಾನದ ಆರೈಕೆಯ ಜವಾಬ್ದಾರಿಯನ್ನು ತಮ್ಮ ಅಡುಗೆಯವರಿಗೆ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಟಿಟೊವನ್ನು ದತ್ತು ಪಡೆದಿದ್ದ ಟಾಟಾ, ಅದರ ಆರೈಕೆಯ ಜವಾಬ್ದಾರಿಯನ್ನು ಟಾಟಾ ದೀರ್ಘಕಾಲದ ಅಡುಗೆಯವರಾದ ರಾಜನ್ ಶಾ ಅವರಿಗೆ ನೀಡಿದ್ದಾರೆ. ಮುಂದೆ ಜರ್ಮನ್ ಶೆಫರ್ಡ್ ಶ್ವಾನವನ್ನು ಶಾ ನೋಡಿಕೊಳ್ಳಲಿದ್ದಾರೆ.

ರತನ್ ಟಾಟಾ ಅವರು ಬರೆದಿಟ್ಟಿರುವ ಉಯಿಲು (ವಿಲ್) ಈಗ ಗಮನ ಸೆಳೆದಿದೆ. ತಮ್ಮ ಜೀವಿತಾವಧಿಯಲ್ಲಿ ಮನೆಯಲ್ಲಿದ್ದ ನಿಷ್ಠಾವಂತ ಸಿಬ್ಬಂದಿಗೆ ಅವರು ಸಾವಿನ ನಂತರವೂ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಮೂರು ದಶಕಗಳ ಕಾಲ ಬಟ್ಲರ್‌ ಆಗಿ ಸೇವೆ ಸಲ್ಲಿಸಿದ ಸುಬ್ಬಯ್ಯ ಅವರಿಗೆ ಹಣಕಾಸಿನ ಬೆಂಬಲ ಮತ್ತು ಭದ್ರತೆಯನ್ನು ನೀಡಿದ್ದಾರೆ. ತಮ್ಮ ಸಿಬ್ಬಂದಿಯನ್ನು ಕುಟುಂಬದಂತೆ ಪರಿಗಣಿಸುವ ಟಾಟಾ, ತಮ್ಮ ನಿರ್ಗಮನದ ಬಳಿಕವೂ ಅವರಿಗೆ ಜೀವನದಲ್ಲಿ ಭದ್ರತೆ ಕೊಟ್ಟಿದ್ದಾರೆ.

ರತನ್ ಟಾಟಾ ಐಷಾರಾಮಿ ಕಾರುಗಳು ಏನಾಗುತ್ತವೆ?

ಟಾಟಾ ಅವರ 20ರಿಂದ 30 ಐಷಾರಾಮಿ ಕಾರುಗಳನ್ನು, ಸದ್ಯ ಅವರ ಕೊಲಾಬಾ ನಿವಾಸ ಮತ್ತು ತಾಜ್ ವೆಲ್ಲಿಂಗ್‌ಟನ್ ಮ್ಯೂಸ್ ಅಪಾರ್ಟ್‌ಮೆಂಟ್‌ಗಳಲ್ಲಿ ಇರಿಸಲಾಗಿದೆ. ಇದನ್ನು ಪುಣೆಯಲ್ಲಿ ಯೋಜಿಸಲಾದ ವಸ್ತುಸಂಗ್ರಹಾಲಯಕ್ಕಾಗಿ ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳಬಹುದು. ಅಥವಾ ಹರಾಜು ಕೂಡಾ ಮಾಡಬಹುದು. ರತನ್ ಟಾಟಾ ಅವರಿಗೆ ಹಲವಾರು ಪ್ರಶಸ್ತಿ ಹಾಗೂ ಗೌರವಗಳು ಲಭಿಸಿವೆ. ಇದನ್ನು ಟಾಟಾ ಸೆಂಟ್ರಲ್ ಆರ್ಕೈವ್ಸ್‌ಗೆ ನೀಡಲಾಗುತ್ತದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.