Jio 2025 recharge plan: ರಿಲಯೆನ್ಸ್‌ ಜಿಯೋ ಹೊಸ ವರ್ಷದ ಕೊಡುಗೆ, 2025 ರೂ ರೀಚಾರ್ಜ್‌ ಮಾಡಿದ್ರೆ ಲಾಭವೋ ಲಾಭ - ಜಿಯೋ ಆಫರ್‌ಗಳ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jio 2025 Recharge Plan: ರಿಲಯೆನ್ಸ್‌ ಜಿಯೋ ಹೊಸ ವರ್ಷದ ಕೊಡುಗೆ, 2025 ರೂ ರೀಚಾರ್ಜ್‌ ಮಾಡಿದ್ರೆ ಲಾಭವೋ ಲಾಭ - ಜಿಯೋ ಆಫರ್‌ಗಳ ವಿವರ

Jio 2025 recharge plan: ರಿಲಯೆನ್ಸ್‌ ಜಿಯೋ ಹೊಸ ವರ್ಷದ ಕೊಡುಗೆ, 2025 ರೂ ರೀಚಾರ್ಜ್‌ ಮಾಡಿದ್ರೆ ಲಾಭವೋ ಲಾಭ - ಜಿಯೋ ಆಫರ್‌ಗಳ ವಿವರ

Jio 2025 recharge plan: ಹೊಸ ವರ್ಷದ ಹೊಸ್ತಿಲಲ್ಲಿ ವಿವಿಧ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗಳು ಬೊಂಬಾಟ್‌ ರೀಚಾರ್ಜ್‌ ಕೊಡುಗೆಗಳನ್ನು ಪರಿಚಯಿಸುತ್ತಿವೆ. ರಿಲಯೆನ್ಸ್‌ ಜಿಯೋ ಕೂಡ ತನ್ನ ಗಾಹಕರಿಗೆ 2025 ರೂಪಾಯಿ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದೆ. ಈ ಆಫರ್‌ ಕುರಿತ ವಿವರ ಇಲ್ಲಿದೆ.

Jio 2025 recharge plan: ರಿಲಯೆನ್ಸ್‌ ಜಿಯೋ ಹೊಸ ವರ್ಷದ ಕೊಡುಗೆ, 2025 ರೂ ರೀಚಾರ್ಜ್‌ ಆಫರ್‌
Jio 2025 recharge plan: ರಿಲಯೆನ್ಸ್‌ ಜಿಯೋ ಹೊಸ ವರ್ಷದ ಕೊಡುಗೆ, 2025 ರೂ ರೀಚಾರ್ಜ್‌ ಆಫರ್‌

Jio 2025 recharge plan: 2025ರ ಹೊಸ ವರ್ಷಕ್ಕೆ ಕಾಲಿಡುವ ಸಮಯದಲ್ಲಿ ವಿವಿಧ ಮೊಬೈಲ್‌ ನೆಟ್‌ವರ್ಕ್‌ ಸೇವಾ ಕಂಪನಿಗಳು ಬೊಂಬಾಟ್‌ ಆಫರ್‌ಗಳನ್ನು ಪರಿಚಯಿಸುತ್ತಿವೆ. ರಿಲಯೆನ್ಸ್‌ ಜಿಯೋ ಪರಿಚಯಿಸಿದ 2025 ರೂಪಾಯಿ ಪ್ರಿಪೇಯ್ಡ್‌ ರೀಚಾರ್ಜ್‌ ಆಫರ್‌ ಅಂತೂ ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿದೆ. ಪ್ರತಿತಿಂಗಳು ಇಂತಿಷ್ಟು ರೂಪಾಯಿ ರೀಚಾರ್ಜ್‌ ಮಾಡುವುದಕ್ಕಿಂತ ದೀರ್ಘಕಾಲದ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಜನರು ಬಯಸುತ್ತಾರೆ. ಕೆಲವರು ಒಂದು ವರ್ಷದ ಪ್ಲ್ಯಾನ್‌ಗಳನ್ನು ಹಾಕಿಕೊಳ್ಳುತ್ತಾರೆ. ಇನ್ನು ಕೆಲವರು ಅರ್ಧ ವರ್ಷದ ಯೋಜನೆಗಳನ್ನು ಹಾಕಿಕೊಳ್ಳಲು ಬಯಸುತ್ತಾರೆ. ಒಂದು ಬಾರಿ ಪಾವತಿಸುವ ಮೊತ್ತ ದೊಡ್ಡದಾಗಿದ್ದರೂ ಪ್ರತಿತಿಂಗಳು ಮಾಡುವ ರಿಚಾರ್ಜ್‌ಗೆ ಹೋಲಿಸಿದರೆ ಇಂತಹ ಪ್ಲ್ಯಾನ್‌ಗಳು ಮೊಬೈಲ್‌ ಬಳಕೆದಾರರಿಗೆ ಸಾಕಷ್ಟು ಲಾಭ ತಂದುಕೊಡುತ್ತವೆ. ಮುಕೇಶ್‌ ಅಂಬಾನಿ ನೇತೃತ್ವದ ರಿಲಯೆನ್ಸ್‌ ಜಿಯೋ ಕಂಪನಿ ಪರಿಚಯಿಸಿದ ಹೊಸ ವರ್ಷದ ರೀಚಾರ್ಜ್‌ ಆಫರ್‌ಗಳನ್ನು ತಿಳಿದುಕೊಳ್ಳೋಣ ಬನ್ನಿ.

ರಿಲಯೆನ್ಸ್‌ ಜಿಯೋ 2025 ರೂ ರೀಚಾರ್ಜ್‌ ಆಫರ್‌

ರಿಲಯೆನ್ಸ್‌ ಜಿಯೋ ಕಂಪನಿಯು ಹೊಸ ವರ್ಷದ ವೆಲ್‌ಕಂ ಆಫರ್‌ ಪರಿಚಯಿಸಿದೆ. 2025 ರೂ ಪ್ಲ್ಯಾನ್‌ ಸೀಮಿತ ಅವಧಿಗೆ ಲಭ್ಯವಿರಲಿದೆ. ಈ ಆಫರ್‌ನಲ್ಲಿ ಅನಿಯಮಿತ ಕರೆ, 2.5 ಜಿಬಿ ಇಂಟರ್‌ನೆಟ್‌ ಮಾತ್ರವಲ್ಲದೆ ಇನ್ನಷ್ಟು ಹೆಚ್ಚುವರಿ ಪ್ರಯೋಜನಗಳು ಇರಲಿವೆ. 2150 ರೂಪಾಯಿಯ ಹೆಚ್ಚುವರಿ ಪ್ರಯೋಜನಗಳು ಈ ಆಫರ್‌ನಲ್ಲಿ ದೊರಕಲಿವೆ. ಅನ್‌ಲಿಮಿಟೆಡ್‌ ವಾಯ್ಸ್‌, 5ಜಿಬಿ ಡೇಟಾ ಮಾತ್ರವಲ್ಲದೆ ಈ ರೀಚಾರ್ಜ್‌ ಆಫರ್‌ನಲ್ಲಿ ಏನೇನಿದೆ ಎಂದು ತಿಳಿಯೋಣ.

ಜಿಯೋ ಸಿಮ್‌ ಬಳಕೆದಾರರು 2025 ರೂಪಾಯಿಯ ಪ್ಲ್ಯಾನ್‌ ರೀಚಾರ್ಜ್‌ ಮಾಡಿಕೊಂಡರೆ 2.5 ಜಿಬಿ ದೈನಂದಿನ ಡೇಟಾ ದೊರಕಲಿದೆ. ಈ ಮೂಲಕ 5ಜಿ ಡೇಟಾವನ್ನು ಎಂಜಾಯ್‌ ಮಾಡಬಹುದು. ಇದರೊಂದಿಗೆ ಅನಿಯಮಿತ ವಾಯ್ಸ್‌ ಕರೆಗಳು ಮತ್ತು ಪ್ರತಿದಿನಕ್ಕೆ 100 ಎಸ್‌ಎಂಎಸ್‌ ಕೊಡುಗೆಯೂ ಇದೆ. ಅಂದಹಾಗೆ, 2025 ರೂಪಾಯಿ ರಿಚಾರ್ಜ್‌ ಮಾಡಿದ್ರೆ ಎಷ್ಟು ದಿನ ವ್ಯಾಲಿಡಿಟಿ ಇರುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. 2025 ರೂಪಾಯಿ ಪ್ಲ್ಯಾನ್‌ಗೆ ಬರೋಬ್ಬರಿ 200 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. ಅಂದರೆ, ಆರು ತಿಂಗಳಿಗಿಂತಲೂ ಹೆಚ್ಚು ಕಾಲ (ಏಳು ತಿಂಗಳಿಗಿಂತ ಕೆಲವು ದಿನ ಕಡಿಮೆ) ನಿಶ್ಚಿಂತೆಯಿಂದ ಇದ್ದು, ಈ ಆಫರ್‌ನ ಪ್ರಯೋಜನಗಳನ್ನು ಆನಂದಿಸಬಹುದು. ನಿಮ್ಮ ಪ್ರದೇಶದಲ್ಲಿ ಜಿಯೋ ವೆಲ್‌ಕಂ ಆಫರ್‌ ಇದ್ರೆ ಅನಿಯಮಿತ 5ಜಿ ಸೇವೆಯೂ ದೊರಕಲಿದೆ.

2025 ರೂ ರೀಚಾರ್ಜ್‌ ಆಫರ್‌ನಲ್ಲಿ ದೊರಕುವ ಹೆಚ್ಚುವರಿ ಪ್ರಯೋಜನಗಳು

2025 ರೂ ರೀಚಾರ್ಜ್‌ ಆಫರ್‌ನಲ್ಲಿ ಇನ್ನಷ್ಟು ಹೆಚ್ಚುವರಿ ಡೀಲ್‌ಗಳೂ ಇವೆ. ಅಂದರೆ, ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿರುವ ಜಿಯೋ ಗ್ರಾಹಕರಿಗೆ 2150 ರೂಪಾಯಿ ಮೌಲ್ಯದ ವ್ಯಾಲ್ಯೂ ಬ್ಯಾಕ್‌ ಕೂಪನ್‌ಗಳೂ ದೊರಕುತ್ತವೆ. ಅವುಗಳಲ್ಲಿ ಒಳಗೊಂಡಿರುವ ಕೊಡುಗೆಗಳ ವಿವರ ಮುಂದಿನಂತೆ ಇದೆ.

500 ರೂಪಾಯಿ ಕಡಿತ: ಅಜಿಯೋ (ajio)ದಲ್ಲಿ 2999 ರೂಪಾಯಿ ಮೌಲ್ಯದ ಖರೀದಿಗೆ 500 ರೂಪಾಯಿ ದರ ಕಡಿತ ದೊರಕಲಿದೆ.

1500 ರೂವರೆಗೆ ದರ ಕಡಿತ: ಈಸಿಮೈಟ್ರಿಪ್‌.ಕಾಂನಲ್ಲಿ ವಿಮಾನ ಟಿಕೆಟ್‌ಗಳನ್ನು ಖರೀದಿಸಿದರೆ 1500 ರೂಪಾಯಿವರೆಗೆ ದರ ಕಡಿತವಿರಲಿದೆ. ನಿಮ್ಮ ಪ್ರವಾಸ, ಪ್ರಯಾಣದ ವೆಚ್ಚ ಇದರಿಂದ ಕಡಿಮೆಯಾಗಲಿದೆ.

150 ರೂಪಾಯಿ ಕಡಿತ: ಸ್ವಿಗ್ಗಿಯಲ್ಲಿ 499 ರೂಪಾಯಿಗಿಂತ ಹೆಚ್ಚು ಮೊತ್ತದ ಆರ್ಡರ್‌ ಮಾಡಿದ್ರೆ 150 ರೂಪಾಯಿ ದರ ಕಡಿತವಾಗಲಿದೆ.

ಈ ಪ್ಲ್ಯಾನ್‌ ರಿಚಾರ್ಜ್‌ ಮಾಡಬಹುದೇ?

ರಿಲಯೆನ್ಸ್‌ ಜಿಯೋ ಸಿಮ್‌ ಹೊಂದಿರುವವರ ಮೊಬೈಲ್‌ನಲ್ಲಿ ಜಿಯೋ ಅಪ್ಲಿಕೇಷನ್‌ ಇದ್ದೇ ಇರುತ್ತದೆ. ಅವುಗಳಲ್ಲಿ ಇರುವ ವಿವಿಧ ಪ್ಲ್ಯಾನ್‌ಗಳನ್ನು ಪರಿಶೀಲಿಸಿ. ಪ್ರತಿತಿಂಗಳು ನೀವು ಎಷ್ಟು ರೂಪಾಯಿ ರೀಚಾರ್ಜ್‌ಗೆ ಖರ್ಚು ಮಾಡುವಿರಿ ಎಂದು ಲೆಕ್ಕಹಾಕಿ. ಈ 2025 ರೂಪಾಯಿಯ ಪ್ಲ್ಯಾನ್‌ ರೀಚಾರ್ಜ್‌ ಮಾಡಿದರೆ ದೊರಕುವ ಪ್ರಯೋಜನಗಳನ್ನು ಪರಿಶೀಲಿಸಿ. ಇದೇ ರೀತಿ, ನಿಮಗೆ ಇಷ್ಟೊಂದು ಇಂಟರ್‌ನೆಟ್‌ ಮತ್ತು ಆಫರ್‌ಗಳ ಅಗತ್ಯವಿದೆಯೇ ತಿಳಿಯಿರಿ. ಪ್ರತಿದಿನ ಕಡಿಮೆ ಇಂಟರ್‌ನೆಟ್‌ ಬಯಸುವವರಾದರೆ ಬೇರೆ ಆಫರ್‌ಗಳು ಇವೆಯೇ ಎಂದು ಪರಿಶೀಲಿಸಿ. ನೀವು ಹೆಚ್ಚು ಡೇಟಾ ಬಳಸುವ ವ್ಯಕ್ತಿಗಳಾಗಿದ್ರೆ ಈ ಆಫರ್‌ ನಿಮಗೆ ಸೂಕ್ತವಾಗುತ್ತದೆ. ಆನ್‌ಲೈನ್‌ ಶಾಪಿಂಗ್‌, ಟ್ರಾವೆಲ್‌, ಫುಡ್‌ ಡೆಲಿವರಿ ಪ್ರಯೋಜನಗಳೂ ಇರುವುದನ್ನು ಗಮನಿಸಿ. ಇವನ್ನೆಲ್ಲ ಪರಿಶೀಲಿಸಿಕೊಂಡು ನಿರ್ಧಾರ ತೆಗೆದುಕೊಳ್ಳಿ.

ಡಿಸ್‌ಕ್ಲೈಮರ್‌/ ಹಕ್ಕು ನಿರಾಕರಣೆ: ಮೊಬೈಲ್‌ ರೀಚಾರ್ಜ್‌ಗಳ ಕುರಿತು ಓದುಗರಿಗೆ ಮಾಹಿತಿ ನೀಡುವ ಉದ್ದೇಶದ ಬರಹವಿದು. ಯಾವುದೇ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿಕೊಳ್ಳುವಂತೆ ಓದುಗರನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಒತ್ತಾಯಿಸುವುದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪ್ಲ್ಯಾನ್‌ಗಳ ಕುರಿತು ರಿಸರ್ಚ್‌ ಮಾಡಿ ಸ್ವಂತ ವಿಚೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿರಿ.

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.