Stallion IPO: ಸ್ಟಾಲಿಯನ್ ಇಂಡಿಯಾ ಐಪಿಒಗೆ ಬಿಡ್ ಮಾಡಬಹುದೇ? 1 ಲಾಟ್‌ಗೆ 14,850 ರೂಪಾಯಿ, ಜಿಎಂಪಿ ಸಕಾರಾತ್ಮಕ
Stallion India Fluorochemicals Limited IPO: : ಸ್ಟಾಲಿಯನ್ ಇಂಡಿಯಾ ಐಪಿಒ ಈಗಾಗಲೇ ಬಿಡ್‌ಗೆ ತೆರೆದಿದೆ. ಈ ಐಪಿಒಗೆ ಬಿಡ್ ಮಾಡಬಹುದೇ? ಜಿಎಂಪಿ ಎಷ್ಟಿದೆ? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಸಾರ್ವಜನಿಕ ಷೇರು ವಿತರಣೆಯ ಹೆಚ್ಚಿನ ವಿವರ ಇಲ್ಲಿದೆ.

Stallion India IPO: ಸ್ಟಾಲಿಯನ್ ಇಂಡಿಯಾ ಐಪಿಒಗೆ ಜನವರಿ 16ರಂದು ಬಿಡ್ ಸಲ್ಲಿಕೆ ಆರಂಭವಾಗಿದೆ. ಜನವರಿ 20ರವರೆಗೆ ಬಿಡ್ ಓಪನ್ ಆಗಿರಲಿದೆ. ಇದೇ ಸಮಯದಲ್ಲಿ ಈ ಐಪಿಒಗೆ ಅರ್ಜಿ ಸಲ್ಲಿಸಬಹುದೇ? ಎಂದು ಸಾಕಷ್ಟು ಜನರು ಯೋಚಿಸುತ್ತಿರಬಹುದು. ಈ ಐಪಿಒದ ಸದ್ಯದ ಜಿಎಂಪಿ ಮತ್ತು ಇತರೆ ವಿವರವನ್ನು ತಿಳಿದುಕೊಳ್ಳೋಣ. 199.45 ಕೋಟಿ ರೂಪಾಯಿಯ ಬುಕ್ ಬಿಲ್ಟ್ ಇಶ್ಯು ಇದಾಗಿದೆ. ಇದರಲ್ಲಿ 1.79 ಕೋಟಿ ಷೇರುಗಳ ಹೊಸ ಇಶ್ಯು ( 160.73 ಕೋಟಿ ರೂಪಾಯಿ) ಮತ್ತು 0.43 ಕೋಟಿ ಷೇರುಗಳ ಆಫರ್ ಫಾರ್ ಸೇಲ್ (38.72 ಕೋಟಿ ರೂಪಾಯಿ) ಒಳಗೊಂಡಿದೆ.
ಸ್ಟಾಲಿಯನ್ ಇಂಡಿಯಾ ಐಪಿಒ ಬಿಡ್ಡಿಂಗ್ ಜನವರಿ 16, 2025 ರಂದು ಆರಂಭವಾಗಿದೆ. ಆಸಕ್ತರಿಗೆ ಜನವರಿ 20, 2025ರವರೆಗೆ ಬಿಡ್ ಸಲ್ಲಿಸಲು ಅವಕಾಶವಿದೆ. ಸ್ಟಾಲಿಯನ್ ಇಂಡಿಯಾ ಐಪಿಒ ಹಂಚಿಕೆಯನ್ನು ಜನವರಿ 21, 2025 ರಂದು ಮಂಗಳವಾರ ಅಂತಿಮಗೊಳಿಸುವ ನಿರೀಕ್ಷೆಯಿದೆ. ಸ್ಟಾಲಿಯನ್ ಇಂಡಿಯಾ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾಗುತ್ತದೆ. ಜನವರಿ 23, 2025ರಂದು ಷೇರುಪೇಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ.
ಸ್ಟಾಲಿಯನ್ ಇಂಡಿಯಾ ಪ್ರತಿ ಷೇರಿನ ಐಪಿಒ ದರ 85 ರೂಪಾಯಿಯಿಂದ 90 ರೂಪಾಯಿ ನಿಗದಿಪಡಿಸಲಾಗಿದೆ. ಕನಿಷ್ಠ 165 ಷೇರುಗಳ ಒಂದು ಲಾಟ್‌ಗೆ ಬಿಡ್ ಮಾಡಲು 14,850 ರೂಪಾಯಿ ಬೇಕಿರುತ್ತದೆ. 2,310 ಚೇರುಗಳ 14 ಲಾಟ್‌ಗಳಿಗೆ (ಎಸ್‌ಎನ್‌ಐಐ) 2,07,900 ರೂಪಾಯಿ ಮತ್ತು 11,220 ಷೇರುಗಳ 68 ಲಾಟ್‌ಗಳಿಗೆ (ಬಿಎನ್‌ಐಐ) 10,09,800 ರೂಪಾಯಿ ಬೇಕಿರುತ್ತದೆ.
ಸ್ಟಾಲಿಯನ್ ಇಂಡಿಯಾ ಐಪಿಒ ಪ್ರಮುಖ ದಿನಾಂಕಗಳು
ಐಪಿಒ ಬಿಡ್ ಆರಂಭ: ಜನವರಿ 16, 2025 ( ಗುರುವಾರ)
ಐಪಿಒ ಬಿಡ್ ಮುಕ್ತಾಯ: ಜನವರಿ 20, 2025 (ಸೋಮವಾರ)
ಹಂಚಿಕೆ: ಜನವರಿ 21, 2025
ಡಿಮ್ಯಾಟ್‌ಗೆ ಷೇರುಗಳ ಕ್ರೆಡಿಟ್(ನಿರೀಕ್ಷಿತ): ಜನವರಿ 22, 2025
ಷೇರುಪೇಟೆಯಲ್ಲಿ ಲಿಸ್ಟ್ (ನಿರೀಕ್ಷಿತ): ಜನವರಿ 23, 2025
ಬಿಡ್ ಮಾಡಬಹುದಾದ ಲಾಟ್‌ಗಳು
ಅರ್ಜಿ ಲಾಟ್‌ಗಳು ಷೇರುಗಳ ಮೊತ್ತ
ರಿಟೇಲ್ ಕನಿಷ್ಠ 1 ಲಾಟ್: 165 ಷೇರುಗಳು, 14,850 ರೂಪಾಯಿ
ರಿಟೇಲ್ ಗರಿಷ್ಠ 13 ಲಾಟ್: 2145 ಷೇರುಗಳು, 1,93,050 ರೂಪಾಯಿ
ಎಸ್-ಎಚ್‌ಎನ್‌ಐ (ಕನಿಷ್ಠ) 14 ಲಾಟ್: 2,310 ಷೇರುಗಳು, 2,07,900 ರೂಪಾಯಿ
ಎಸ್-ಎಚ್‌ಎನ್‌ಐ (ಗರಿಷ್ಠ) 67 ಲಾಟ್: 1,055 ಷೇರುಗಳು, 9,94,950 ರೂಪಾಯಿ
ಬಿ-ಎಚ್‌ಎನ್‌ಐ (ಕನಿಷ್ಠ) 68 ಲಾಟ್‌ಗಳು: 11,220 ಷೇರುಗಳು, 10,09,800 ರೂಪಾಯಿ
ಜಿಎಂಪಿ ಎಷ್ಟಿದೆ?
ಸ್ಟಾಲಿಯನ್ ಇಂಡಿಯಾ ಐಪಿಒ ಜಿಎಂಪಿ ಈ ಮುಂದಿನಂತೆ ಇದೆ.
- 18-01-2025: 40 ರೂಪಾಯಿ ಜಿಎಂಪಿ
- 17-01-2025: 38 ರೂಪಾಯಿ ಜಿಎಂಪಿ
- 16-01-2025: 38 ರೂಪಾಯಿ ಜಿಎಂಪಿ
- 15-01-2025: 48 ರೂಪಾಯಿ ಜಿಎಂಪಿ
- 14-01-2025: 21 ರೂಪಾಯಿ ಜಿಎಂಪಿ
ಜಿಎಂಪಿ ಎಷ್ಟಿದೆಯೋ ಅಷ್ಟು ಹೆಚ್ಚು ದರಕ್ಕೆ ಐಪಿಒ ಲಿಸ್ಟ್ ಆಗಬಹುದು ಎನ್ನುವುದು ನಂಬಿಕೆ. ಇದು ನಿಜವಾಗಿರಬೇಕೆಂದಿಲ್ಲ. ಇದಕ್ಕೆ ಯಾವುದೇ ಆಧಾರಗಳು ಇಲ್ಲ. ಆದರೆ, ಜಿಎಂಪಿ ಉತ್ತಮವಾಗಿದ್ದರೆ ಐಪಿಒ ಸಕಾರಾತ್ಮಕ ದರದಲ್ಲಿ ಲಿಸ್ಟ್ ಆಗಬಹುದೆಂಬ ಭಾವನೆ ಎಲ್ಲರಲ್ಲಿಯೂ ಇದೆ. ಇದು ಸಾಕಷ್ಟು ಬಾರಿ ನಿಜವಾಗಿದೆ.
ಸ್ಟಾಲಿನ್ ಇಂಡಿಯಾ ಐಪಿಒಗೆ ಬಿಡ್ ಮಾಡಬಹುದೇ?
ಐಪಿಒಗೆ ಅರ್ಜಿ ಸಲ್ಲಿಸುವ ಮುನ್ನ ಸಾಕಷ್ಟು ರಿಸರ್ಚ್ ಅಗತ್ಯ. ವಿವಿಧ ತಾಣಗಳಲ್ಲಿ ತಜ್ಞರು ನಿರ್ದಿಷ್ಟ ಐಪಿಒಗಳಿಗೆ ಅರ್ಜಿ ಸಲ್ಲಿಸಬಹುದೇ? ಬೇಡವೇ? ಅವಾಯ್ಡ್ ಮಾಡಬೇಕೇ? ಇತ್ಯಾದಿ ಸೂಚನೆ ನೀಡಿರುತ್ತಾರೆ. ಅಂದರೆ, ಅಪ್ಲೈ, ಮೇ ಅಪ್ಲೈ, ಅವಾಯ್ಡ್ ಎಂಬ ಸೂಚನೆ ನೀಡಿರುತ್ತಾರೆ. ಅಪ್ಲೈ ಎಂದಿದ್ದರೆ ಧೈರ್ಯವಾಗಿ ಬಿಡ್ ಸಲ್ಲಿಸಬಹುದು ಎಂದರ್ಥ. ಮೇ ಅಪ್ಲೈ ಅಂದರೆ “ಯೋಚಿಸಿ, ನಿಮಗೆ ಮಾರುಕಟ್ಟೆ ಕುರಿತು ಸಾಕಷ್ಟು ಜ್ಞಾನವಿದ್ದರೆ ಮುಂದಡಿ ಇಡಬಹುದು” ಎಂದರ್ಥ. ಇದೇ ರೀತಿ, ಅವಾಯ್ಡ್ ಎಂದರೆ, “ಕಂಪನಿಯ ವ್ಯವಹಾರ ಹೀಗೆ ಇದೆ, ಹಿಂದಿನ ತ್ರೈಮಾಸಿಕಗಳಲ್ಲಿ ಇಷ್ಟೆಲ್ಲ ನಷ್ಟ ಆಗಿದೆ, ಕಂಪನಿಯ ಆಡಳಿತದ ಕುರಿತು ಇಂತಹ ವಿಷಯಗಳಿವೆ… ಇತ್ಯಾದಿ ಅಂಶಗಳ ಆಧಾರದಲ್ಲಿ “ಅವಾಯ್ಡ್” ಎಂದು ಸೂಚಿಸುತ್ತಾರೆ. ಸ್ಟಾಲಿನ್ ಇಂಡಿಯಾ ಐಪಿಒಗೆ ಚಿತ್ತೋರ್‌ಗರ್‌ನ ಐಪಿಒ ವಿಶ್ಲೇಷಕರು ಅಪ್ಲೈ (ಅರ್ಜಿ ಸಲ್ಲಿಸಬಹುದು) ಎಂದಿದ್ದಾರೆ.
ಸ್ಟಾಲಿಯನ್ ಇಂಡಿಯಾ ಕಂಪನಿ ಬಗ್ಗೆ
ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಸೆಪ್ಟೆಂಬರ್ 2002ರಲ್ಲಿ ಆರಂಭವಾಗಿತ್ತು. ರೆಫ್ರಿಜರೆಂಟ್‌ಗಳು ಮತ್ತು ಕೈಗಾರಿಕಾ ಅನಿಲಗಳ ಬಲ್ಕಿಂಗ್, ಮಿಶ್ರಣ ಮತ್ತು ಸಂಸ್ಕರಣೆ ಮತ್ತು ಗ್ಯಾಸ್ ತುಂಬಿರುವ ಕ್ಯಾನ್‌ಗಳು ಮತ್ತು ಸಣ್ಣ ಸಿಲಿಂಡರ್‌ಗಳು/ಕಂಟೇನರ್‌ಗಳ ಮಾರಾಟದಂತಹ ಚಟುವಟಿಕೆಗಳನ್ನು ಈ ಕಂಪನಿ ಮಾಡುತ್ತದೆ. ಕಂಪನಿಯು ಖಲಾಪುರ್ (ಮಹಾರಾಷ್ಟ್ರ), ಘಿಲೋತ್ (ರಾಜಸ್ಥಾನ), ಮಾನೇಸರ್ (ಹರಿಯಾಣ) ಮತ್ತು ಪನ್ವೇಲ್ (ಮಹಾರಾಷ್ಟ್ರ)ದಲ್ಲಿ ಸ್ಥಾವರಗಳನ್ನು ಹೊಂದಿದೆ.
ಡಿಸ್‌ಕ್ಲೈಮರ್/ ಹಕ್ಕುತ್ಯಾಗ: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
