Zomato name change: ಜೊಮಾಟೊ ಇನ್ನು ಎಟರ್‌ನಲ್‌, ಮರುನಾಮಕರಣ ಮಾಡಿಕೊಂಡು ಹೊಸ ಲೋಗೋ ಅನಾವರಣಗೊಳಿಸಿದ ಕಂಪನಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Zomato Name Change: ಜೊಮಾಟೊ ಇನ್ನು ಎಟರ್‌ನಲ್‌, ಮರುನಾಮಕರಣ ಮಾಡಿಕೊಂಡು ಹೊಸ ಲೋಗೋ ಅನಾವರಣಗೊಳಿಸಿದ ಕಂಪನಿ

Zomato name change: ಜೊಮಾಟೊ ಇನ್ನು ಎಟರ್‌ನಲ್‌, ಮರುನಾಮಕರಣ ಮಾಡಿಕೊಂಡು ಹೊಸ ಲೋಗೋ ಅನಾವರಣಗೊಳಿಸಿದ ಕಂಪನಿ

Zomato name change: ಆಹಾರ ಮತ್ತು ಕಿರಾಣಿ ವಿತರಣಾ ಕಂಪನಿ ಜೊಮಾಟೊ ತನ್ನ ಹೆಸರು ಬದಲಾಯಿಸುತ್ತಿರುವುದಾಗಿ ಪ್ರಕಟಿಸಿದೆ. ಇನ್ನು ಎಟರ್‌ನಲ್‌ ಎಂದು ಕಂಪನಿ ಗುರುತಿಸಿಕೊಳ್ಳಲಿದ್ದು, ಹೊಸ ಲೋಗೋವನ್ನೂ ಅನಾವರಣಗೊಳಿಸಿದೆ.

ಜೊಮಾಟೊ ಲಿಮಿಟೆಡ್ ಇನ್ನು ಎಟರ್‌ನಲ್‌ ಲಿಮಿಟೆಡ್‌. ಮರುನಾಮಕರಣದ ಜತೆಗೆ ಲಾಂಛನ ಅನಾವರಣಗೊಳಿಸಿದ ಬಳಿಕ ಕಂಪನಿ ಸಿಇಒ ದೀಪೀಂದರ್ ಗೋಯೆಲ್ ಷೇರುದಾರರಿಗೆ ಪತ್ರಬರೆದಿದ್ದಾರೆ. (ಕಡತ ಚಿತ್ರ)
ಜೊಮಾಟೊ ಲಿಮಿಟೆಡ್ ಇನ್ನು ಎಟರ್‌ನಲ್‌ ಲಿಮಿಟೆಡ್‌. ಮರುನಾಮಕರಣದ ಜತೆಗೆ ಲಾಂಛನ ಅನಾವರಣಗೊಳಿಸಿದ ಬಳಿಕ ಕಂಪನಿ ಸಿಇಒ ದೀಪೀಂದರ್ ಗೋಯೆಲ್ ಷೇರುದಾರರಿಗೆ ಪತ್ರಬರೆದಿದ್ದಾರೆ. (ಕಡತ ಚಿತ್ರ) (HT News)

Zomato name change: ಆಹಾರ ಮತ್ತು ಕಿರಾಣಿ ವಿತರಣಾ ಪ್ಲಾಟ್‌ಫಾರ್ಮ್ ಜೊಮಾಟೊ ಹೆಸರು ಬದಲಾಯಿಸಿಕೊಂಡಿದ್ದು, ಇನ್ನು ಎಟರ್‌ನಲ್‌ ಆಗಿ ಗುರುತಿಸಿಕೊಳ್ಳಲಿದೆ. ಜೊಮಾಟೋ ಕಂಪನಿ ಗುರುವಾರ (ಫೆ 6) ಈ ವಿಚಾರ ಬಹಿರಂಗ ಪಡಿಸಿದ್ದು, ಜೊಮಾಟೋ ಲಿಮಿಟೆಡ್ ಬದಲು ಎಟರ್‌ನಲ್ ಲಿಮಿಟೆಡ್ ಆಗಿ ಕಂಪನಿ ಕಾರ್ಯಾಚರಿಸಲಿದೆ. ಹೊಸ ಲಾಂಛನ (ಲೋಗೋ)ವನ್ನು ಕೂಡ ಕಂಪನಿ ಅನಾವರಣಗೊಳಿಸಿದೆ. ದೀಪೀಂದರ್ ಗೋಯೆಲ್ ಆರಂಭಿಸಿದ ಜೊಮಾಟೊ ಕಂಪನಿಯ ಆಂತರಿಕ ವ್ಯವಹಾರಗಳಲ್ಲಿ ಎಟರ್ನಲ್ ಹೆಸರನ್ನು ಎರಡು ವರ್ಷಗಳಿಂದ ಬಳಸಲಾಗುತ್ತಿದೆ ಎಂದು ಕಂಪನಿ ವಿವರಿಸಿದೆ.

ಜೊಮಾಟೊ ಇನ್ನು ಎಟರ್‌ನಲ್‌- ಕಂಪನಿ ಹೆಸರು ಮರುನಾಮಕರಣ

ಷೇರುದಾರರಿಗೆ ಗುರುವಾರ ಈ ಕುರಿತು ಪತ್ರ ಬರೆದಿರುವ ದೀಪೀಂದರ್ ಗೋಯೆಲ್‌, ಕಂಪನಿಯ ಆಡಳಿತ ಮಂಡಳಿಯು ಮರು ನಾಮಕರಣಕ್ಕೆ ಅನುಮತಿ ನೀಡಿದೆ. ಈ ಬದಲಾವಣೆಯನ್ನು ಬೆಂಬಲಿಸಬೇಕು ಎಂದು ಷೇರುದಾರರಲ್ಲಿ ವಿನಂತಿಸುತ್ತಿರುವುದಾಗಿ ಹೇಳಿದ್ದಾರೆ.

“ಅದನ್ನು ಅನುಮೋದಿಸಿದಾಗ ಮತ್ತು ನಮ್ಮ ಕಾರ್ಪೊರೇಟ್ ವೆಬ್‌ಸೈಟ್ zomato.com ನಿಂದ eternal.com ಗೆ ಪರಿವರ್ತನೆಗೊಳ್ಳುತ್ತದೆ. ನಾವು ನಮ್ಮ ಸ್ಟಾಕ್ ಟಿಕ್ಕರ್ ಅನ್ನು ಜೊಮಾಟೊದಿಂದ ಎಟರ್ನಲ್‌ಗೆ ಬದಲಾಯಿಸುತ್ತೇವೆ. ಎಟರ್ನಲ್ ಕಂಪನಿಯ ಈಗಿರುವಂತೆಯೇ ) ಜೊಮಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಸ್‌ ಮತ್ತು ಹೈಪರ್ಪೂರ್ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿರುತ್ತದೆ”ಎಂದು ದೀಪೀಂದರ್‌ ಗೋಯಲ್ ಪತ್ರದಲ್ಲಿ ತಿಳಿಸಿದ್ದಾರೆ.

ಕಂಪನಿ 2007ರಲ್ಲಿ ಶುರುವಾದ 17 ವರ್ಷಗಳ ಬಳಿಕ ಫುಡೀಬೇ ಜೊಮಾಟೊ ಆದ ಹಾಗೆ ಇದು ಕೂಡ ಎಂದು ದೀಪೀಂದರ್ ಗೋಯೆಲ್ ವಿವರಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ 23ರಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಪಟ್ಟಿಗೆ ಜೊಮಾಟೊ ಸೇರ್ಪಡೆಯಾಗಿದೆ. ಈ ರೀತಿ ಷೇರುಪೇಟೆಗೆ ಸೇರಿದ ಭಾರತದ ಮೊದಲ ನವೋದ್ಯಮ ಎಂಬ ಕೀರ್ತಿಗೂ ಜೊಮಾಟೊ ಭಾಜನವಾಗಿದೆ.

ಜೊಮಾಟೊ ಷೇರುದಾರರಿಗೆ ದೀಪೀಂದರ್ ಗೋಯೆಲ್ ಪತ್ರ

ಜೊಮಾಟೊ ಇನ್ನು ಎಟರ್‌ನಲ್‌, ಮರುನಾಮಕರಣ ಮಾಡಿಕೊಂಡು ಹೊಸ ಲೋಗೋವನ್ನು ಕಂಪನಿ ಅನಾವರಣಗೊಳಿಸಿದ ಬಳಿಕ, ಸಿಇಒ ದೀಪೀಂದರ್ ಗೋಯೆಲ್ ಷೇರುದಾರರಿಗೆ ಬರೆದ ಪತ್ರ.
ಜೊಮಾಟೊ ಇನ್ನು ಎಟರ್‌ನಲ್‌, ಮರುನಾಮಕರಣ ಮಾಡಿಕೊಂಡು ಹೊಸ ಲೋಗೋವನ್ನು ಕಂಪನಿ ಅನಾವರಣಗೊಳಿಸಿದ ಬಳಿಕ, ಸಿಇಒ ದೀಪೀಂದರ್ ಗೋಯೆಲ್ ಷೇರುದಾರರಿಗೆ ಬರೆದ ಪತ್ರ.

"ಈ ವ್ಯವಹಾರದ ಪ್ರಯಾಣವು ನನಗೆ ಮಾತ್ರವಲ್ಲ, ನಮ್ಮ ಉದ್ಯೋಗಿಗಳು, ಸಾಂಸ್ಥಿಕ ಹೂಡಿಕೆದಾರರು ಮತ್ತು ಚಿಲ್ಲರೆ ಷೇರುದಾರರಿಗೆ ಪ್ರಚಂಡ ಸಂಪತ್ತನ್ನು ಸೃಷ್ಟಿಸಿದೆ. ಆದರೆ ನಾನು ಹಣ ಸಂಪಾದಿಸಲು ಜೊಮಾಟೊವನ್ನು ಪ್ರಾರಂಭಿಸಲಿಲ್ಲ. ನನ್ನ ಜೀವನದೊಂದಿಗೆ ಉಪಯುಕ್ತವಾದದ್ದನ್ನು ಮಾಡಲು ಬಯಸಿದ್ದರಿಂದ ಅದನ್ನು ಪ್ರಾರಂಭಿಸಿದೆ. ಒಂದು ವಾರಾಂತ್ಯ, ಕೇವಲ ಸೇವೆಯ ಉತ್ಸಾಹದಲ್ಲಿ ನಾನು ಪಟ್ಟಣ ತುಂಬಾ ಅಡ್ಡಾಡಿ, ಟೇಕ್‌ಅವೇ ಮೆನುಗಳನ್ನು ಸಂಗ್ರಹಿಸಿದೆ. ಅವುಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದೇನೆ. ಇದು ವ್ಯವಹಾರ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನಾನು ಆದಾಯವನ್ನು ಹುಡುಕುತ್ತಿರಲಿಲ್ಲ. ನಾನು ಸರಳವಾಗಿ ಜನರಿಗೆ ನೆರವಾಗಲು ಬಯಸಿದ್ದೆ”ಎಂದು ದೀಪೀಂದರ್‌ ಗೋಯಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಎಟರ್‌ನಲ್ ಹೆಸರು ಆಂತರಿಕವಾಗಿ ಬಳಕೆ

ಜೊಮಾಟೊ ಕಂಪನಿಯು ಬ್ಲಿಂಕಿಟ್‌ ಅನ್ನು ಸ್ವಾಧೀನ ಪಡಿಸಿಕೊಂಡ ಬಳಿಕ, ಜೊಮಾಟೊ ಬದಲು ಎಟರ್‌ನಲ್‌ ಅನ್ನು ಆಂತರಿಕವಾಗಿ ಬಳಸಲಾರಂಭಿಸಿತು. ಇದು ಕಂಪನಿ ಹಾಗೂ ಬ್ರಾಂಡ್‌/ಆಪ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಕ್ಕಾಗಿ ಮಾಡಿದ ಕೆಲಸ ಎಂದು ದೀಪೀಂದರ್ ಗೋಯೆಲ್ ಬರೆದುಕೊಂಡಿದ್ದಾರೆ.

"ನಾವು ಕಂಪನಿಗೆ ಎಟರ್‌ನಲ್ ಎಂದು ಮರುನಾಮಕರಣ ಮಾಡುತ್ತೇವೆ. ಕಂಪನಿಯ ಭವಿಷ್ಯಕ್ಕೆ ಸಂಬಂಧಿಸಿ ಜೊಮಾಟೊ ಇಂದು ಚಾಲಕಶಕ್ತಿಯಾಯಿತು. ಇಂದು ಬ್ಲಿಂಕಿಟ್‌ನೊಂದಿಗೆ ನಾವು ಮುಂದುವರಿದಿದ್ದೇವೆ ಎಂದು ಭಾವಿಸುತ್ತಿರುವುದಾಗಿ ಗೋಯೆಲ್ ಹೇಳಿಕೊಂಡಿದ್ದಾರೆ.

ನಾವು ಜೊಮಾಟೊ ಲಿಮಿಟೆಡ್ ಅಂದರೆ ಕಂಪನಿಯನ್ನು (ಬ್ರಾಂಡ್/ ಆಪ್ ಅಲ್ಲ) ಎಟರ್‌ನಲ್‌ ಲಿಮಿಟೆಡ್ ಎಂದು (Zomato name change) ಬದಲಾಯಿಸುತ್ತಿದ್ದೇವೆ. ಎಟರ್‌ನಲ್ ಎಂಬುದು ಪ್ರಭಾವಿ ಹೆಸರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ನನ್ನ ಅಂತರಂಗದಲ್ಲಿ ನನ್ನನ್ನು ಹೆದರಿಸುತ್ತದೆ. ಇದು ಉನ್ನತಿಗೇರುವುದಕ್ಕೆ ಇರುವ ಗುರಿ. ಏಕೆಂದರೆ ‘ಎಟರ್‌ನಲ್‌’ ಎಂಬುದು ಶಾಶ್ವತ ಅಥವಾ ಅಜೇಯ ಎಂಬುದು ಕಷ್ಟ ಸಾಧ್ಯವಾದರೂ ಭರವಸೆ ಮತ್ತು ವಿರೋಧಾಭಾಸ ಎರಡನ್ನೂ ಹೊಂದಿದೆ ಎಂದು ಡೀಪೈಂಡರ್ ಗೋಯಲ್ ವಿವರಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.