FASTag; ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ, ಟೋಲ್‌ಗಳಲ್ಲಿ ಹೆಚ್ಚುಹೊತ್ತು ಕಾಯಬೇಕಾಗಿಲ್ಲ, ಶುಲ್ಕ ಸಂಗ್ರಹ ಸಲೀಸು ಎಂದಿದೆ ಬ್ಯಾಂಕ್‌-businesss news sbi unveils upgraded fastag for faster highway travel and enhanced toll collection banking news uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fastag; ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ, ಟೋಲ್‌ಗಳಲ್ಲಿ ಹೆಚ್ಚುಹೊತ್ತು ಕಾಯಬೇಕಾಗಿಲ್ಲ, ಶುಲ್ಕ ಸಂಗ್ರಹ ಸಲೀಸು ಎಂದಿದೆ ಬ್ಯಾಂಕ್‌

FASTag; ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ, ಟೋಲ್‌ಗಳಲ್ಲಿ ಹೆಚ್ಚುಹೊತ್ತು ಕಾಯಬೇಕಾಗಿಲ್ಲ, ಶುಲ್ಕ ಸಂಗ್ರಹ ಸಲೀಸು ಎಂದಿದೆ ಬ್ಯಾಂಕ್‌

State Bank of India FasTag; ಲಕ್ಷಾಂತರ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮತ್ತು ಟೋಲ್ ಸಂಗ್ರಹದ ವೇಗವನ್ನು ಸುಧಾರಿಸುವ ನಿಟ್ಟಿನಲ್ಲಿ, ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ, ಟೋಲ್‌ಗಳಲ್ಲಿ ಹೆಚ್ಚುಹೊತ್ತು ಕಾಯಬೇಕಾಗಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ (ಸಾಂಕೇತಿಕ ಚಿತ್ರ)
ಸುಧಾರಿತ ಫಾಸ್ಟ್ಯಾಗ್‌ ಪರಿಚಯಿಸಿದ ಎಸ್‌ಬಿಐ (ಸಾಂಕೇತಿಕ ಚಿತ್ರ) (HT News)

ನವದೆಹಲಿ/ಬೆಂಗಳೂರು: ಫಾಸ್ಟ್ಯಾಗ್‌ ಅಳವಡಿಸಿದರೂ ಅನೇಕ ಟೋಲ್‌ಗಳಲ್ಲಿ ಶುಲ್ಕ ಸಂಗ್ರಹ ವೇಗಪಡೆದುಕೊಂಡಿರುವುದು ಸಾಕಾಗಿಲ್ಲ. ಹೀಗಾಗಿ ವಾಹನ ದಟ್ಟಣೆ ಕಡಿಮೆಯಾಗಿಲ್ಲ. ಇದನ್ನು ಮನಗಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಣ್ಣ ವಾಹನಗಳ ಫಾಸ್ಟ್ಯಾಗ್ ವಿನ್ಯಾಸವನ್ನು ಸುಧಾರಿಸಿದ್ದು, ಇದು ಬಹುಪಾಲು ವಾಹನ ಚಾಲಕರ ಸಂಚಾರವನ್ನು ಸುಗಮಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಇದು ನಿರ್ದಿಷ್ಟವಾಗಿ 4ನೇ ವಾಹನ ವರ್ಗಕ್ಕೆ ಅನುಕೂಲ ಮಾಡಿಕೊಡಲಿದೆ. ವಿಶೇಷವಾಗಿ ಕಾರು, ಜೀಪ್ ಮತ್ತು ವ್ಯಾನ್ ಚಾಲಕರಿಗೆ ಪ್ರಯೋಜನವಾಗಲಿದೆ. ಸುಧಾರಿತ ಫಾಸ್ಟ್ಯಾಗ್ ವಿನ್ಯಾಸವು ವಾಹನ ಗುರುತಿಸುವಿಕೆ ಮತ್ತು ಟೋಲ್ ಸಂಗ್ರಹದ ದಕ್ಷತೆಯನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಎಸ್‌ಬಿಐ ಪ್ರಕಟಣೆ ಉಲ್ಲೇಖಿಸಿದೆ.

ಫಾಸ್ಟ್ಯಾಗ್ ಬಳಕೆದಾರರಿಗೆ ಹೇಗೆ ಅನುಕೂಲ

ಫಾಸ್ಟ್ಯಾಗ್‌ನ ಸುಧಾರಿತ ವಿನ್ಯಾಸವು ಬಳಕೆದಾರರಿಗೆ ಹಲವು ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತದೆ.

1) ಸುಧಾರಿತ ವಾಹನ ಗುರುತಿಸುವಿಕೆ ವ್ಯವಸ್ಥೆ ಈ ಹೊಸ ಫಾಸ್ಟ್ಯಾಗ್‌ನಲ್ಲಿದ್ದು, ಟೋಲ್ ಪ್ಲಾಜಾ ಆಪರೇಟರ್‌ಗಳಿಗೆ ನಿಖರವಾಗಿ ವಾಹನಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ.

2) ಟೋಲ್ ಸಂಗ್ರಹದ ಲೋಪ ಸರಿಪಡಿಸುವಿಕೆಯಲ್ಲಿ ಹೊಸ ಫಾಸ್ಟ್ಯಾಗ್ ಕೆಲಸ ಮಾಡಲಿದೆ. ಟೋಲ್ ಆಪರೇಟರ್‌ಗಳು ತಪ್ಪು ಟೋಲ್ ಸಂಗ್ರಹಿಸುವುದನ್ನು ತಪ್ಪಿಸಲು ನೆರವಾಗಲಿದೆ. ಆ ಮೂಲಕ ಸರ್ಕಾರದ ಮತ್ತು ಟೋಲ್ ಗುತ್ತಿಗೆದಾರರ ಆದಾಯ ಹೆಚ್ಚಿಸಲಲಿದೆ.

3) ಟೋಲ್ ಸಂಗ್ರಹಕ್ಕೆ ವೇಗ ಸಿಗಲಿದೆ. ಏಕಸೂತ್ರಕ್ಕೆ ಸೇರಿಸಿದ ವ್ಯವಸ್ಥೆಯ ಕಾರಣಕ್ಕೆ ಟೋಲ್ ಸಂಗ್ರಹಕ್ಕೆ ವೇಗ ಸಿಗಲಿದ್ದು, ಪ್ರಯಾಣಿಕರಿಗೂ ಕಾಯುವಿಕೆ ಸಮಯ ಕಡಿಮೆಯಾಗಲಿದೆ.

ಎಸ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ಇತರೆ ಗ್ರಾಹಕ ಉತ್ಪನ್ನಗಳಿವು

ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಎಸ್‌ಬಿಐ ಶುಕ್ರವಾರ (ಆಗಸ್ಟ್ 30) ದೇಶದ ಮೊದಲ ಎಂಟಿಎಸ್‌ ಕಾರ್ಡ್ ಅನ್ನು ಪ್ರಾರಂಭಿಸಿದೆ. ಇದು ಎಂಟಿಎಸ್‌ ರುಪೇ ಎನ್‌ಸಿಎಂಸಿ ಪ್ರೀಪೇಯ್ಡ್‌ ಕಾರ್ಡ್‌. ಈ ಕಾರ್ಡ್ ಅನ್ನು ಮೆಟ್ರೋ ರೈಲು, ಬಸ್‌, ಬೋಟ್‌, ಟೋಲ್, ಪಾರ್ಕ್‌ ಸೇರಿ ಎಲ್ಲ ಕಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಳಸಬಹುದಾಗಿದೆ. ಎಲ್ಲ ಪಾವತಿಗೂ ಒಂದೇ ಕಾರ್ಡ್ ಬಳಸಿದರೆ ಸಾಕಾಗುತ್ತದೆ ಎಂದು ಬ್ಯಾಂಕ್ ಹೇಳಿಕೊಂಡಿದೆ.

ರುಪೇ ಎನ್‌ಸಿಎಂಸಿಯನ್ನು ಇಂಟರ್‌ಆಪರೇಬಲ್ ಬಹು-ಉದ್ದೇಶದ ಕಾರ್ಡ್‌ನಂತೆ ವಿನ್ಯಾಸಗೊಳಿಸಲಾಗಿದೆ,. ಇದು ವಿವಿಧ ಸಾರಿಗೆ ವಿಧಾನಗಳು ಮತ್ತು ನಿರ್ವಾಹಕರ ನಡುವೆ ತಡೆರಹಿತ ಏಕೀಕರಣವನ್ನು ಸುಗಮಗೊಳಿಸುತ್ತದೆ. ಆಫ್‌ಲೈನ್ ವಹಿವಾಟುಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್ ಪ್ರಕಟಿಸಿದ ಮಾರ್ಗಸೂಚಿಗಳ ಪ್ರಕಾರ, ರುಪೇ ಎನ್‌ಸಿಎಂಸಿಯ ವಹಿವಾಟಿಗೆ ಕನಿಷ್ಠ 500 ರೂಪಾಯಿ ಮತ್ತು ಗರಿಷ್ಠ 2000 ರೂಪಾಯಿ ಮಿತಿ ನಿಗದಿ ಮಾಡಿದೆ.

ಎಸ್‌ಬಿಐ ಒನ್‌ವ್ಯೂ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಶುಕ್ರವಾರ ಗ್ರಾಹಕರಿಗೆ ಪರಿಚಯಿಸಿದೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಎನ್‌ಸಿಎಂಸಿ ಪ್ರೀಪೇಯ್ಡ್‌ ಕಾರ್ಡ್‌ಗಳ ನಿರ್ವಹಣೆಗೆ ಸಮಗ್ರ ಪರಿಹಾರ ಒದಗಿಸುವುದಕ್ಕಾಗಿ ಈ ಅಪ್ಲಿಕೇಶನ್ ಅನ್ನು ಬ್ಯಾಂಕ್ ಪರಿಚಯಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ತಮ್ಮ ಕಾರ್ಡ್‌ಗಳನ್ನು ಟಾಪ್-ಅಪ್ ಮಾಡಲು, ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸಲು ಸುಲಭವಾಗುತ್ತದೆ" ಎಂದು ಎಸ್‌ಬಿಐ ವಿವರಿಸಿದೆ.

ಎಸ್‌ಬಿಐ ಅಧ್ಯಕ್ಷ ಚಲ್ಲಾ ಶ್ರೀನಿವಾಸುಲು ಸೆಟ್ಟಿ, "ನೇಷನ್‌ ಫಸ್ಟ್‌ ಎಂಟಿಎಸ್‌ ಕಾರ್ಡ್, ಒನ್‌ ವ್ಯೂ ಮೊಬೈಲ್ ಅಪ್ಲಿಕೇಶನ್ ಮತ್ತು ಮರುವಿನ್ಯಾಸಗೊಳಿಸಲಾದ ಎಸ್‌ಬಿಐ ಫಾಸ್ಟ್ಯಾಗ್‌ ಅನ್ನು ಲೋಕಾರ್ಪಣೆ ಮಾಡಿದ್ದು, ಡಿಜಿಟಲ್ ಪಾವತಿ ಪರಿಹಾರಗಳಲ್ಲಿ ಬ್ಯಾಂಕಿನ ನಾಯಕತ್ವವನ್ನು ಮತ್ತು ಸಾರ್ವಜನಿಕ ಸಾರಿಗೆ ಅನುಭವವನ್ನು ಸುಧಾರಿಸಲು ನಮ್ಮ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ನಾವು ನಮ್ಮ ಗ್ರಾಹಕರಿಗೆ ಅನುಕೂಲತೆ, ಭದ್ರತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.