ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ; ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ, ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌, ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ; ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ, ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌, ವಿಡಿಯೋ

ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ; ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ, ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌, ವಿಡಿಯೋ

ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳ ಭಾಷಾ ಸಮರದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ. ಈ ಭಾಷಾ ಸಮರದ ರಾಜಕೀಯಕ್ಕೆ ಒಂದು ಟ್ವಿಸ್ಟ್ ಕೊಡುವಂತೆ ಕ್ಯಾಡ್ಬರಿ ಡೈರಿ ಮಿಲ್ಕ್‌ನ ಹೊಸ ಜಾಹೀರಾತು ವಿಡಿಯೋ ಸಂಚಲನ ಮೂಡಿಸಿದೆ.

ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ ಎಂಬ ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ ಮೂಡಿಸಿದೆ. ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌ ನೀಡಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ ಎಂಬ ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ ಮೂಡಿಸಿದೆ. ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌ ನೀಡಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. (Cadbury Dairy Milk )

ಕ್ಯಾಡ್ಬರಿ ಡೇರಿ ಮಿಲ್ಕ್ ಇಂಡಿಯಾ ಕಂಪನಿ ಹೊಸ ಜಾಹೀರಾತು ಅಭಿಯಾನ ಶುರುಮಾಡಿದ್ದು, ಪ್ರಚಲಿತ ವಿದ್ಯಮಾನಕ್ಕೆ ಹೊಂದುವಂತೆ ಇರುವ ಕಾರಣ ಸಾಮಾಜಿಕವಾಗಿ ಸಂಚಲನ ಮೂಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಜಾಹೀರಾತು ವಿಚಾರ ಚರ್ಚೆಗೆ ಒಳಗಾಗಿದೆ. ಸಾಮಾನ್ಯವಾಗಿ ಜಾಹೀರಾತು ಚರ್ಚೆಗೆ ಒಳಗಾಗುವುದು ಪ್ರಚಲಿತ ವಿಷಯಗಳಿಗೆ ಸ್ಪಂದಿಸಿದಾಗ. ಅಂತಹ ಸ್ಪಂದನೆ ಈ ಜಾಹೀರಾತಿನ ವಿಷಯದಲ್ಲಿದೆ. ಏನದು ಅಂತೀರಾ, ಉತ್ತರ ಭಾರತ- ದಕ್ಷಿಣ ಭಾರತ ಭಾಷಾ ಸಮರ. ಜನರ ಸಮಸ್ಯೆಗೆ ಸರಳ ಪರಿಹಾರವನ್ನೂ ಒದಗಿಸಿರುವ ಜಾಹೀರಾತು ಕ್ಯಾಡ್ಬರಿ ತಿಂದು ಬಾಯಿ ಸಿಹಿ ಮಾಡುವುದನ್ನು ಕೊನೆಯಲ್ಲಿ ತೋರಿಸಿದೆ.

ಭಾಷಾ ಸಮರದ ರಾಜಕೀಯಕ್ಕೊಂದು ಟ್ವಿಸ್ಟ್‌; ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ಸಂಚಲನ

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿ ಭಾಷೆ ಹೇರುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಹೋರಾಟ ಶುರುಮಾಡಿದೆ. ಈ ರಾಜಕೀಯ ಭಾ‍ಷಾ ಸಮರ ಕಾವು ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ತ್ರಿ ಭಾಷಾ ಸೂತ್ರ (ಹಿಂದಿ, ಇಂಗ್ಲಿಷ್, ತಮಿಳು) ಅನುಷ್ಠಾನಗೊಳಿಸಿ ಎಂದರೆ, ತಮಿಳುನಾಡು ನಮಗೆ ದ್ವಿ ಬಾಷಾ ಸೂತ್ರ (ತಮಿಳು, ಇಂಗ್ಲಿಷ್‌) ಸಾಕು ಎಂದು ಪ್ರತಿಪಾದಿಸುತ್ತಿದೆ. ಈ ಭಾಷಾ ಸಮರ ಮುಂದುವರಿದಿರುವಾಗಲೇ ಕ್ಯಾಡ್ಬರಿ ಡೈರಿ ಮಿಲ್ಕ್ ಜಾಹೀರಾತು ಭಾಷಾ ಸಮರಕ್ಕೆ ಸ್ಪಂದಿಸುವಂತೆ ಗಮನಸೆಳೆದಿದೆ.

ಈ ರಾಜಕೀಯ ಜಿದ್ದಾಜಿದ್ದಿನ ಭಾಷಾ ಸಮರ ಬದಿಗಿಟ್ಟು ಜನ ಸಾಮಾನ್ಯರ ನಡುವಿನ ಸಂವಹವನ್ನು ವಿಡಿಯೋ ಹೈಲೈಟ್ ಮಾಡಿದೆ. ಜನರ ಭಾವನೆಗಳು, ಭಾಷೆಯ ಬಳಕೆ, ಹಾವ ಭಾವಗಳನ್ನು ಕ್ಯಾಡ್ಬರಿ ಡೈರಿ ಮಿಲ್ಕ್ ಜಾಹೀರಾತು ವಿಡಿಯೋ ಬಹಳ ಅಚ್ಚುಕಟ್ಟಾಗಿ ಸೆರೆಹಿಡಿದಿದೆ.

ಹಿಂದಿ ಥೋಡಾ ಥೋಡಾ, ಇಂಗ್ಲಿಷ್ ಥೋಡಾ ಥೋಡಾ

ಜಾಹೀರಾತು ವೈರಲ್‌ ವಿಡಿಯೋ ಶುರುವಾಗುತ್ತಿದ್ದಂತೆ ಮಹಿಳೆಯರ ಗುಂಪು ಮಾತನಾಡುತ್ತಿರುವುದು ಕಾಣಿಸುತ್ತದೆ. ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ಆಗ ಇಬ್ಬರು ಮಹಿಳೆಯರು ಅಲ್ಲಿ ಪ್ರವೇಶಿಸುತ್ತಾರೆ. ಚೆನ್ನೈನಿಂದ ಬಂದಿದ್ದಾರೆ, ನಮ್ಮ ಹೊಸ ನೇಬರ್‌ ಎಂದು ಹೊಸ ಮಹಿಳೆಯನ್ನು ಗುಂಪಿಗೆ ಪರಿಚಯಿಸುತ್ತಾರೆ ಮತ್ತೊಬ್ಬ ಮಹಿಳೆ. ಚೆನ್ನೈ ಮಹಿಳೆ ಕೈ ಮುಗಿದು ನಮಸ್ಕಾರ ಹೇಳುತ್ತಾರೆ. ಎಲ್ಲರೂ ಹಿಂದಿಯಲ್ಲೇ ಮಾತುಕತೆ ನಡೆಸುತ್ತಿರುತ್ತಾರೆ. ಹಿಂದಿ ಭಾಷೆ ಬಾರದ ಚೆನ್ನೈ ಮಹಿಳೆ ವಿಚಲಿತರಾಗಿ ನೋಡುತ್ತ, ಸಾರಿ, ಮೈ ಹಿಂದಿ ಥೋಡಾ ಥೋಡಾ ಎಂದು ಹೇಳುತ್ತಾರೆ. ಅಗ ಆಕೆಯನ್ನು ಪರಿಚಯಿಸಿದ ಮಹಿಳೆ, ಈಕೆಗೆ ಹಿಂದಿ ಬರೋಲ್ಲ ಎಂದು ಜೋರಾಗಿ ಹೇಳುತ್ತಾರೆ. ಪಕ್ಕದಲ್ಲೇ ಇದ್ದ ಇನ್ನೊಬ್ಬ ಮಹಿಳೆ, ಏಯ್‌. ಅದೆಲ್ಲ ಏನೂ ಸಮಸ್ಯೆ ಅಲ್ಲ.. ಎಂದು ಮಾತು ಮುಂದುವರಿಸುತ್ತಾರೆ. ಮೂರನೇ ಮಹಿಳೆಯ ಬಳಿ ಪತಿಯ ಬಗ್ಗೆ ವಿಚಾರಿಸುತ್ತಾರೆ. ಆಕೆ ಆ ಸನ್ನಿವೇಶವನ್ನು ಹೇಳಲು ಶುರುಮಾಡುವ ಹೊತ್ತಿಗೆ ಆಕೆಯ ಗಮನ ಚೆನ್ನೈ ಮಹಿಳೆ ಮೇಲೆ ಹೋಗುತ್ತದೆ. ಕೂಡಲೇ ಹಿಂದಿ ಬಿಟ್ಟು, ಚೆನ್ನೈ ಮಹಿಳೆಗೂ ಮಾತುಕತೆ ಅರ್ಥ ಆಗಲಿ ಎಂಬ ಕಾರಣಕ್ಕೆ, ಬಟ್ಲರ್ ಇಂಗ್ಲಿಷ್‌ನಲ್ಲಿ ಮಾತು ಶುರುಮಾಡುತ್ತಾರೆ. ಕೇಳುತ್ತ ಕೇಳುತ್ತ ಚೆನ್ನೈ ಮಹಿಳೆಯೂ ಅವರ ಮಾತುಕತೆಯಲ್ಲಿ ಭಾಗಿಯಾಗುತ್ತಾರೆ. ಮಾತು ಮುಗಿದ ಕೂಡಲೇ ಆ ಮಹಿಳೆ ತನ್ನ ಎದುರು ಕುಳಿತಿದ್ದ ಚೆನ್ನೈ ಮಹಿಳೆಗೆ, ಸಾರಿ ಮೈ ಇಂಗ್ಲಿಷ್ ಥೋಡಾ ಥೋಡಾ ಎಂದು ಹೇಳುತ್ತ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಕೊಡ್ತಾರೆ. ಹಾಗೆ ಬಿಗಿಯಾದ ಸನ್ನಿವೇಶವೊಂದು ಹಗುರವಾಗುವುದನ್ನು ಜಾಹೀರಾತು ದಾಖಲಿಸಿದೆ.

ಕ್ಯಾಡ್ಬರಿ ಡೇರಿ ಮಿಲ್ಕ್ ಜಾಹೀರಾತು ವಿಡಿಯೋ ಇಲ್ಲಿದೆ ನೋಡಿ

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.