ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ನಂತರ​ ವ್ಯಾಲೆಟ್​​ ಹಣವನ್ನು ಹಿಂಪಡೆಯಬಹುದೇ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ನಂತರ​ ವ್ಯಾಲೆಟ್​​ ಹಣವನ್ನು ಹಿಂಪಡೆಯಬಹುದೇ? ಇಲ್ಲಿದೆ ಉತ್ತರ

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ನಂತರ​ ವ್ಯಾಲೆಟ್​​ ಹಣವನ್ನು ಹಿಂಪಡೆಯಬಹುದೇ? ಇಲ್ಲಿದೆ ಉತ್ತರ

Paytm Payments Bank Wallet : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಮ್ಮ ವ್ಯಾಲೆಟ್​​ನಲ್ಲಿರುವ ಹಣವನ್ನು ಬಳಸಬಹುದನ್ನು ಮುಂದುವರೆಸಬಹುದೇ? ಹೀಗೆ ಗ್ರಾಹಕರ ಹಲವು ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ.

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ನಂತರ​ ವ್ಯಾಲೆಟ್​​ ಹಣವನ್ನು ಹಿಂಪಡೆಯಬಹುದೇ
ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ನಂತರ​ ವ್ಯಾಲೆಟ್​​ ಹಣವನ್ನು ಹಿಂಪಡೆಯಬಹುದೇ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ವಹಿವಾಟಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ ನಿರ್ಬಂಧದ ಗಡುವನ್ನು ವಿಸ್ತರಿಸಲಾಗಿದೆ. ಫೆಬ್ರುವರಿ 29ರವರೆಗೆ ನೀಡಲಾಗಿದ್ದ ಡೆಡ್​ಲೈನ್ ಅನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ. ಅಂದರೆ 15 ದಿನ ಹೆಚ್ಚುವರಿ ಅವಕಾಶ ನೀಡಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಮ್ಮ ವ್ಯಾಲೆಟ್​​ನಲ್ಲಿರುವ ಹಣವನ್ನು ಬಳಸಬಹುದನ್ನು ಮುಂದುವರೆಸಬಹುದೇ? ಹೀಗೆ ಗ್ರಾಹಕರ ಹಲವು ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ.

ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್‌ನ ವ್ಯಾಲೆಟ್​ನಲ್ಲಿ ಹೊಂದಿರುವ ಹಣವನ್ನು ಮಾರ್ಚ್ 15ರ ನಂತರ ಬಳಸುವುದನ್ನು ಮುಂದುವರಿಸಬಹುದೇ?

ಉತ್ತರ: ಹೌದು, ವ್ಯಾಲೆಟ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್‌ನವರೆಗೆ ನೀವು ಬಳಸಲು, ಹಿಂಪಡೆಯಲು ಅಥವಾ ಇನ್ನೊಂದು ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಮುಂದುವರಿಸಬಹುದು. ವ್ಯಾಪಾರಿ ಪಾವತಿಗಳಿಗೆ ಮಾತ್ರ ಬಳಸಬಹುದು.

ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್‌ ವ್ಯಾಲೆಟ್​ನಲ್ಲಿ ಹೊಂದಿರುವ ಹಣವನ್ನು ವರ್ಗಾಯಿಸಬಹುದೇ? ಅಥವಾ ಈ ವ್ಯಾಲೆಟ್‌ಗೆ ಬೇರೆ ಯಾವುದೇ ವ್ಯಕ್ತಿಯಿಂದ ಹಣವನ್ನು ಸ್ವೀಕರಿಸಬಹುದೇ?

ಉತ್ತರ: ಇಲ್ಲ. ಮಾರ್ಚ್ 15ರ ನಂತರ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ. ವ್ಯಾಲೆಟ್‌ಗೆ ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಕ್ರೆಡಿಟ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ಪ್ರಶ್ನೆ: ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್‌ನ ವ್ಯಾಲೆಟ್‌ನಲ್ಲಿ ಹೊಂದಿರುವ ಕ್ಯಾಶ್​​ಬ್ಯಾಕ್​ ಅನ್ನು ಮಾರ್ಚ್ 15ರ ನಂತರ ಸ್ವೀಕರಿಸಬಹುದೇ?

ಉತ್ತರ: ಹೌದು. ರಿಫಂಡ್ ಮತ್ತು ಕ್ಯಾಶ್​ಬ್ಯಾಕ್​​ಗಳನ್ನು ಕ್ರೆಡಿಟ್ ಮಾಡಲು ಅನುಮತಿಸಲಾಗಿದೆ.

ಪ್ರಶ್ನೆ: ನಾನು ಪೇಟಿಎಂ ಪೇಮೆಂಟ್ ಬ್ಯಾಂಕ್‌ ವ್ಯಾಲೆಟ್​ ಅನ್ನು ಕ್ಲೋಸ್​​ ಮಾಡಬಹುದೇ? ಬ್ಯಾಲೆನ್ಸ್ ಅನ್ನು ತಮ್ಮದೇ ಬ್ಯಾಂಕ್ ಖಾತೆಯ ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದೇ?

ಉತ್ತರ: ಹೌದು. ವ್ಯಾಲೆಂಟ್ ಕ್ಲೋಸ್ ಮಾಡಲು ಪೇಟಿಎಂ ಪೇಮೆಂಟ್ಸ್​ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸಬಹುದು. ಪೂರ್ಣ ಕೆವೈಸಿ ವ್ಯಾಲೆಟ್‌ಗಳ ಸಂದರ್ಭದಲ್ಲಿ ಮತ್ತೊಂದು ಬ್ಯಾಂಕ್‌ನಲ್ಲಿ ನಿರ್ವಹಿಸಲಾದ ಖಾತೆಗೆ ಬ್ಯಾಲೆನ್ಸ್ ಅನ್ನು ವರ್ಗಾಯಿಸಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.