ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ

ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ

ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಶುಭಸುದ್ದಿ ಸಿಕ್ಕಿದೆ. ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕೆಂಬ ನಿಯಮ ಹಿಂತೆಗೆದುಕೊಳ್ಳಲಾಗಿದ್ದು, ಇದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಲಾಗಿದೆ.

ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ (File)
ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ (File)

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನೆಲ್ಲಾ ಉಳಿತಾಯ ಬ್ಯಾಂಕ್ (Savings bank -SB) ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಿದೆ. ಉಳಿತಾಯ ಖಾತೆಗಳ ಜೊತೆಗೆ ವೇತನ ಖಾತೆಗಳು, ಅನಿವಾಸಿ ಭಾರತೀಯ (ಎನ್‌ಆರ್‌ಐ) ಎಸ್‌ಬಿ ಖಾತೆಗಳನ್ನೂ ಸೇರಿದಂತೆ ಎಲ್ಲಾ ರೀತಿಯ ಎಸ್‌ಬಿ ಅಕೌಂಟ್‌ಗಳ ಮೇಲಿನ ಕನಿಷ್ಠ ತಿಂಗಳ ಮೊತ್ತ (ಎಎಂಬಿ) ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.

2025ರ ಜೂನ್ 01ರಿಂದ ಅನ್ವಯಿಸುವಂತೆ ಕೆನರಾ ಬ್ಯಾಂಕ್ ಎಲ್ಲಾ ರೀತಿಯ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ಯಾವುದೇ ರೀತಿಯ ದಂಡ ವಿಧಿಸುವುದಿಲ್ಲ. ಇದರಿಂದಾಗಿ ಕೆನರಾ ಬ್ಯಾಂಕ್‌ನ ಎಸ್‌ಬಿ ಗ್ರಾಹಕರು ಇನ್ನುಮುಂದೆ ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ (ಎಎಂಬಿ) ಕಾಯ್ದುಕೊಳ್ಳದೆ ಇರುವುದಕ್ಕೆ ದಂಡ ಅಥವಾ ಶುಲ್ಕ ಕಟ್ಟುವ ಪ್ರಮೇಯ ಎದುರಾಗುವುದಿಲ್ಲ.

ಈ ಮೊದಲು, ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆಯಲ್ಲಿ ತಿಂಗಳಿಗೆ ಕನಿಷ್ಠ ಮೊತ್ತ ಇಟ್ಟುಕೊಳ್ಳಬೇಕಿತ್ತು. ಒಂದು ವೇಳೆ, ಕನಿಷ್ಠ ಮೊತ್ತ ಇಟ್ಟುಕೊಳ್ಳಲು ವಿಫಲವಾದಲ್ಲಿ ಅದಕ್ಕೆ ನಿರ್ದಿಷ್ಟ ದಂಡ ಶುಲ್ಕ ಕಟ್ಟಬೇಕಾಗುತ್ತಿತ್ತು. ಇದೀಗ ಕೆನರಾ ಬ್ಯಾಂಕ್‌ನ ಹೊಸ ನಿಯಮದಿಂದಾಗಿ, ಬ್ಯಾಂಕ್‌ನ ಎಲ್ಲಾ ಎಸ್‌ಬಿ ಖಾತೆ ಹೊಂದಿರುವವರು ಇನ್ನುಮುಂದೆ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ 'ಎಎಂಬಿ' ಸಂಬಂಧಿಸಿದ ಯಾವುದೇ ದಂಡ ಪಾವತಿಸುವ ಅಗತ್ಯ ಇರುವುದಿಲ್ಲ.

ವೇತನ ವರ್ಗ, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಎನ್‌ಆರ್‌ಐ ಮತ್ತು ಮೊದಲ ಬಾರಿಗೆ ಬ್ಯಾಂಕಿಂಗ್ ಸೇವೆಗಳನ್ನು ಬಳಸುವವರನ್ನೂ ಒಳಗೊಂಡು ಕೆನರಾ ಬ್ಯಾಂಕ್‌ನ ಲಕ್ಷಾಂತರ ಗ್ರಾಹಕರಿಗೆ ಈ ನಿಯಮದಿಂದ ಪ್ರಯೋಜನ ಆಗುವ ನಿರೀಕ್ಷೆ ಇದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.