CBSE Results 2025: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ, ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse Results 2025: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ, ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ

CBSE Results 2025: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ, ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ

CBSE Class 10th, 12th Result 2025 Date: ಸಿಬಿಎಸ್‌ಇಯ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮುಕ್ತಾಯವಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಿಂದಿನ ವರ್ಷಗಳ ಫಲಿತಾಂಶ ದಿನಾಂಕಗಳನ್ನು ಆಧರಿಸಿ ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ ಇಲ್ಲಿದೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ (ಸಾಂಕೇತಿಕ ಚಿತ್ರ)
ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ (ಸಾಂಕೇತಿಕ ಚಿತ್ರ)

CBSE Class 10th, 12th Result 2025 Date: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ (ಸಿಬಿಎಸ್ಇ) ತನ್ನ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದಾಗ್ಯೂ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶದ (CBSE Results 2025) ದಿನಾಂಕ ಮತ್ತು ಸಮಯಗಳನ್ನು ಸಿಬಿಎಸ್‌ಇ ಇನ್ನೂ ಘೋಷಿಸಿಲ್ಲ.

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ 2025; ಸಂಭಾವ್ಯ ದಿನಾಂಕ ಮತ್ತು ಸಮಯ

ಹಿಂದಿನ ಎರಡು ವರ್ಷಗಳಲ್ಲಿ ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟವಾದ ದಿನಾಂಕ ಗಮನಿಸುವುದಾದರೆ, ಈ ಬಾರಿ ಕೂಡ ಈ ವಾರದಲ್ಲೇ ಫಲಿತಾಂಶ ಪ್ರಕಟವಾಗುವ ಸಾದ್ಯತೆ ಇದೆ. ಈ ಅಂಶಗಳೇನೇ ಇದ್ದರೂ ಈ ತಿಂಗಳ ಅಂದರೆ ಮೇ ಕೊನೆಯ ವಾರದ ಮೊದಲು ಸಿಬಿಎಸ್‌ಇ 2025ರ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ, ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯ ಫಲಿತಾಂಶದ ದಿನಾಂಕ ಮತ್ತು ಸಮಯ ಇನ್ನೂ ಘೋಷಣೆಯಾಗಿಲ್ಲ. ಒಂದೊಮ್ಮೆ ದಿನಾಂಕ ಮತ್ತು ಸಮಯ ಘೋಷಣೆಯಾದರೆ, ಆಗ ವಿದ್ಯಾರ್ಥಿಗಳು ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್‌ cbse.gov.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಹಿಂದಿನ ವರ್ಷಗಳ ಫಲಿತಾಂಶ ದಿನಾಂಕಗಳನ್ನು ಗಮನಿಸುವುದಾರೆ, 2024ರಲ್ಲಿ ಮೇ 13 ರಂದು, 2023ರಲ್ಲಿ ಮೇ 12 ರಂದು, 2022ರಲ್ಲಿ ಜುಲೈ 22 ರಂದು ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದವು.

ಸಿಬಿಎಸ್‌ಇ ಬೋರ್ಡ್ ಫಲಿತಾಂಶ 2025, ಪರಿಶೀಲಿಸುವುದು ಎಲ್ಲಿ

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ಅದನ್ನು ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್‌ cbse.gov.in ಮತ್ತು results.cbse.nic.in ತಾಣಗಳಲ್ಲಿ ವೀಕ್ಷಿಸಬಹುದು. ಫಲಿತಾಂಶ ನೋಡುವುದಕ್ಕೆ ಅನುಸರಿಸಬೇಕಾದ ಹಂತಗಳಿವು

1) ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ results.cbse.nic.in ಗೆ ಭೇಟಿ ನೀಡಿ

2) “CBSE 10th Result 2025" ಅಥವಾ “CBSE 12th Result 2025" ಮೇಲೆ ಕ್ಲಿಕ್ ಮಾಡಿ

3) ನಿಮ್ಮ ರೋಲ್‌ ನಂಬರ್, ಜನ್ಮ ದಿನಾಂಕ ಮತ್ತು ಸ್ಕ್ರೀನ್‌ ಮೇಲೆ ತೋರಿಸಿದ ಸೆಕ್ಯುರಿಟಿ ಪಿನ್ ನಮೂದಿಸಿ

4) ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ನಿಮ್ಮ ಸಿಬಿಎಸ್‌ಇ ರಿಸಲ್ಟ್ 2025 ಸ್ಕ್ರೀನ್ ಮೇಲೆ ಕಾಣಿಸುತ್ತದೆ.

5) ಸಿಬಿಎಸ್‌ಇ ಫಲಿತಾಂಶ ನೋಡಿ, ಡೌನ್‌ಲೋಡ್ ಮಾಡಿ ಅಥವಾ ಅದನ್ನು ಮುದ್ರಿಸಿ ಭವಿಷ್ಯದ ಅಗತ್ಯಗಳಿಗೆ ಸೇವ್ ಮಾಡಿ ಇಟ್ಟುಕೊಳ್ಳಿ

ಸಿಬಿಎಸ್‌ಇ 2025ರ ಬೋರ್ಡ್‌ ಪರೀಕ್ಷಾ ದಿನಾಂಕಗಳು

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಇಂಗ್ಲಿಷ್ (ಕಮ್ಯೂನಿಕೇಟಿವ್) ನೊಂದಿಗೆ ಫೆಬ್ರವರಿ 15 ರಂದು ಶುರುವಾಗಿದ್ದು, ಮಾರ್ಚ್ 18ಕ್ಕೆ ಮುಕ್ತಾಯವಾಗಿದೆ. ಇದೇ ರೀತಿ 12ನೇ ತರಗತಿ ಪರೀಕ್ಷೆ ಫೆಬವರಿ 15 ರಂದು ಆಂತ್ರಪ್ರಿನ್ಯೂರ್‌ಶಿಪ್ ವಿಷಯದೊಂದಿಗೆ ಶುರುವಾಗಿದ್ದು, ಏಪ್ರಿಲ್‌ 4ಕ್ಕೆ ಕೊನೆಯಾಗಿದೆ. ಎಲ್ಲ ಪರೀಕ್ಷೆಗಳೂ ಪರೀಕ್ಷಾ ದಿನಾಂಕಗಳಂದು ಬೆಳಿಗ್ಗೆ 10.30ರಿಂದ ಅಪರಾಹ್ನ 1.30ರ ತನಕ ನಡೆಯಿತು.

ಸಿಬಿಎಸ್‌ಇ ಫಲಿತಾಂಶ 2024ರ ಹೀಗಿತ್ತು

ಹಿಂದಿನ ವರ್ಷದ ಸಿಬಿಎಸ್‌ಇ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಗಮನಿಸಿದಾಗ, 2024 ರಲ್ಲಿ, ಒಟ್ಟು 21,84,117 ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಅವರ ಪೈಕಿ 21,65,805 ಮಂದಿ ಪರೀಕ್ಷೆ ಬರೆದು 20,16,779 ಉತ್ತೀರ್ಣರಾದರು, 10ನೇ ತರಗತಿ ಫಲಿತಾಂಶ ಶೇ 93.12 ದಾಖಲಾಯಿತು. ಇದೇ ರೀತಿ, 12 ನೇ ತರಗತಿ ಪರೀಕ್ಷೆಗೆ 16,80,256 ವಿದ್ಯಾರ್ಥಿಗಳು ನೋಂದಾಯಿಸಿದ್ದು, 16,60,511 ಪರೀಕ್ಷೆ ಬರೆದರು. 14,50,174 ಉತ್ತೀರ್ಣಾರಾಗಿ ಶೇ 87.33 ರಷ್ಟು ಫಲಿತಾಂಶ ದಾಖಲಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.