ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ; ರಿಸಲ್ಟ್‌ ನೋಡಲು ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ; ರಿಸಲ್ಟ್‌ ನೋಡಲು ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ; ರಿಸಲ್ಟ್‌ ನೋಡಲು ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ರಿಸಲ್ಟ್‌ ನೋಡಲು ವಿದ್ಯಾರ್ಥಿಗಳು ಬಳಸಬಹುದಾದ ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ.

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ; ರಿಸಲ್ಟ್‌ ನೋಡಲು ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ; ರಿಸಲ್ಟ್‌ ನೋಡಲು ಅಧಿಕೃತ ವೆಬ್‌ಸೈಟ್‌ಗಳ ವಿವರ ಇಲ್ಲಿದೆ

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ಹಾಗೂ ಅಂಕಪಟ್ಟಿಗಳನ್ನು ನೋಡಲು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಪರಿಗಣಿಸಬೇಕು ಎಂದು ಸಿಬಿಎಸ್‌ಇ ಕೋರಿದೆ. ಈ ವರ್ಷ 10 ಮತ್ತು 12 ನೇ ತರಗತಿ ಸೇರಿ ಒಟ್ಟು 42 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಾಗಾಗಿ ಈಗ ರಿಸಲ್ಟ್‌ ನೋಡಲು ಸಾಕಷ್ಟು ದಟ್ಟಣೆ ಇರುತ್ತದೆ, ಇದರಿಂದ ಸರ್ವರ್‌ ಬ್ಯುಸಿ ಬರುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಕಾನೂನುಬದ್ಧ ವೆಬ್‌ಸೈಟ್‌ಗಳು ಮತ್ತು ಅನಧಿಕೃತ ಪೋರ್ಟಲ್‌ಗಳ ನಡುವೆ ಗೊಂದಲಕ್ಕೆ ಕಾರಣವಾಗುತ್ತದೆ. ಇದರಿಂದ ನೀವು ಫಲಿತಾಂಶ ನೋಡುವುದು ತಡವಾಗಬಹುದು. ಹಾಗಾಗಿ ಈ ಅಧಿಕೃತ ವೆಬ್‌ಸೈಟ್‌ಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು.

2025 ರ ಸಿಬಿಎಸ್‌ಇ ಫಲಿತಾಂಶ ನೋಡಲು ಸುಲಭವಾಗಲಿ ಎನ್ನುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಸಹಯೋಗದೊಂದಿಗೆ ಸಿಬಿಎಸ್‌ಇ ಕೆಲವು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾತ್ರ ಫಲಿತಾಂಶ ನೀಡುತ್ತಿದೆ. ಆದರೂ ಅನಧೀಕೃತ ವೆಬ್‌ಸೈಟ್‌ಗಳು ದಾರಿ ತಪ್ಪಿಸುವ ಸಾಧ್ಯತೆ ಇದೆ. ವಿಶ್ವಾಸಾರ್ಹ ಪೋರ್ಟಲ್‌ಗಳು ಮತ್ತು ಅನಧಿಕೃತ ಪೋರ್ಟಲ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಬಹಳ ಮುಖ್ಯ.

ಸಿಬಿಎಸ್‌ಇ ರಿಸಲ್ಟ್‌ ನೋಡಲು ಇರುವ ಅಧಿಕೃತ ವೆಬ್‌ಸೈಟ್‌ಗಳಿವು

ಈ ಕೆಳಗಿನ ವೆಬ್‌ಸೈಟ್‌ಗಳು ವೆಬ್‌ಸೈಟ್‌ಗಳು ಮತ್ತು ಡಿಜಿಟಲ್‌ ವೇದಿಕೆಗಳಲ್ಲಿ ಅಧಿಕೃತವಾಗಿ ರಿಸಲ್ಟ್‌ ನೋಡಬಹುದು ಎಂದು ಸಿಬಿಎಸ್‌ಇ ತಿಳಿಸಿದೆ.

  • ಸಿಬಿಎಸ್‌ಇಯ ಪ್ರಮುಖ ವೆಬ್‌ಸೈಟ್‌: cbse.gov.in
  • ಸಿಬಿಎಸ್‌ಇ ರಿಸಲ್ಟ್‌ ಪೋರ್ಟಲ್‌: results.cbse.nic.in
  • ಡಿಜಿಲಾಕರ್‌ ಪೋರ್ಟಲ್:‌ results.digilocker.gov.in
  • ಯುಮಂಗ್‌ ಆಪ್‌: UMANG mobile application
  • ಐವಿಆರ್‌ಎಸ್‌: 24300699 ಈ ನಂಬರ್‌ಗೆ ನಿಮ್ಮ ಎಸ್‌ಟಿಡಿ ಕೋಡ್‌ ಬಳಸಿ ಕರೆ ಮಾಡಿ.

ಈ ಪೋರ್ಟಲ್‌ಗಳನ್ನು ಸಿಬಿಎಸ್‌ಇಯ ಮೌಲ್ಯಮಾಪನ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ ಮತ್ತು ಡಿಜಿಟಲ್ ಸಹಿ ಮಾಡಿದ ತಾತ್ಕಾಲಿಕ ಅಂಕಪಟ್ಟಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಸಿಬಿಎಸ್‌ಇ ಫಲಿತಾಂಶ ನೋಡುವುದು ಹೇಗೆ?

ಮೊದಲಯು results.cbse.nic.in ಅಥವಾ cbse.gov.in ಗೆ ಭೇಟಿ ನೀಡಿ.

ಹಂತ 1: 10 ಅಥವಾ 12 ನೇ ತರಗತಿಯ ಫಲಿತಾಂಶಗಳಿಗಾಗಿ ಸಂಬಂಧಿತ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 2: ನಿಮ್ಮ ರೋಲ್ ನಂಬರ್‌, ಶಾಲೆಯ ನಂಬರ್‌, ಜನ್ಮ ದಿನಾಂಕ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಿ.

ಹಂತ: ಫಲಿತಾಂಶವನ್ನು ವೀಕ್ಷಿಸಲು ವಿವರಗಳನ್ನು ಸಲ್ಲಿಸಿ.

ಹಂತ: ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್‌ ಕೊಡಿ.

ಹಂತ: ಪರ್ಯಾಯವಾಗಿ, ಪ್ರಮಾಣಪತ್ರಗಳನ್ನು ಪ್ರವೇಶಿಸಲು ಶಾಲೆಯಿಂದ ಒದಗಿಸಲಾದ 6-ಅಂಕಿಯ ಪಿನ್ ಬಳಸಿ ಡಿಜಿಲಾಕರ್‌ಗೆ ಲಾಗಿನ್ ಮಾಡಿ.

ಪೋರ್ಟಲ್ ಈಗಾಗಲೇ "ಫಲಿತಾಂಶ ಶೀಘ್ರದಲ್ಲೇ ಲಭ್ಯವಿದೆ" ಎಂಬ ಸಂದೇಶವನ್ನು ತೋರಿಸುವುದರಿಂದ, ವಿದ್ಯಾರ್ಥಿಗಳು ತಮ್ಮ ಡಿಜಿಲಾಕರ್ ಖಾತೆಗಳನ್ನು ಮುಂಚಿತವಾಗಿ ಹೊಂದಿಸಲು ಸಹ ಬಳಸಬಹುದು.

ಡಿಜಿಟಲ್ ಮೂಲಸೌಕರ್ಯ ಮತ್ತು ಮುಂದಿನ ಹಂತಗಳು

ಡಿಜಿಲಾಕರ್ ಮತ್ತು ಉಮಾಂಗ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬಳಕೆಯು ಗರಿಷ್ಠ ಟ್ರಾಫಿಕ್ ಸಮಯದಲ್ಲಿಯೂ ಸಹ ಕನಿಷ್ಠ ಅಡಚಣೆಗಳ ಮೂಲಕ ಫಲಿತಾಂಶ ವೀಕ್ಷಿಸಿಬಹುದು. ಈ ಪ್ಲಾಟ್‌ಫಾರ್ಮ್‌ಗಳು ಲಕ್ಷಾಂತರ ಬಳಕೆದಾರರನ್ನು ಏಕಕಾಲದಲ್ಲಿ ನಿರ್ವಹಿಸಲು ಅಂತರ್ನಿರ್ಮಿತ ಎನ್‌ಕ್ರಿಪ್ಶನ್ ಮತ್ತು ಲೋಡ್-ಬ್ಯಾಲೆನ್ಸಿಂಗ್ ವ್ಯವಸ್ಥೆಗಳನ್ನು ಹೊಂದಿವೆ. ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಗಳನ್ನು ಆಯಾ ಶಾಲೆಗಳಿಂದ ಸಂಗ್ರಹಿಸಬೇಕು ಎಂದು ಸಿಬಿಎಸ್‌ಸಿ ತಿಳಿಸಿದೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.