ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ

ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ

ಸಿಬಿಎಸ್‌ಇ ಫಲಿತಾಂಶ; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ನ 12ನೇ ತರಗತಿ ಫಲಿತಾಂಶ ಇಂದು (ಮೇ 13) ಪ್ರಕಟವಾಗಿದೆ. ಶೇಕಡ 88.39 ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳು, ಪಾಲಕರ ಅನುಕೂಲಕ್ಕಾಗಿ ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ ಎಂಬ ವಿವರ ಇಲ್ಲಿದೆ.

ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವ ವಿವರ. (ಸಾಂಕೇತಿಕ ಚಿತ್ರ)
ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವ ವಿವರ. (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ 2025; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ನ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸಿಬಿಎಸ್‌ಇ ಫಲಿತಾಂಶ ಗ್ರೇಡಿಂಗ್ ವ್ಯವಸ್ಥೆಯಲ್ಲಿದ್ದು, ವಿಶೇಷವಾಗಿ 10ನೇ ತರಗತಿಯ ಫಲಿತಾಂಶವು ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಅವರೇಜ್ (ಸಿಜಿಪಿಎ) ರೂಪದಲ್ಲಿ ಕಾಣುತ್ತೇವೆ. ಆದರೆ, ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವು ವಿಷಯವಾರು ಅಂಕಗಳೊಂದಿಗೆ ಕಾಣಬಹುದು. ಕೆಲವು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪ್ರವೇಶಕ್ಕಾಗಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ಅಥವಾ ಇನ್ಯಾವುದೇ ಕಚೇರಿ ಅಗತ್ಯಗಳಿಗಾಗಿ ವಿಷಯವಾರು ಅಂಕಗಳ ಒಟ್ಟು ಪರ್ಸಂಟೇಜ್ ಅಥವಾ ಶೇಕಡಾವಾರು ಪ್ರಮಾಣವನ್ನು ಅಂದಾಜಿಸಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ.

ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ನ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಶೇಕಡ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್‌ಇ 12ನೇ ತರಗತಿಯಲ್ಲಿ ವಿಷಯವಾರು ಅಂಕಗಳನ್ನು ನೇರವಾಗಿ ನೀಡಲಾಗುತ್ತದೆ. ಹೀಗಾಗಿ ಒಟ್ಟು ಅಂಕಗಳನ್ನು ಲೆಕ್ಕ ಹಾಕಿ ಶೇಕಡಾವಾರು ಪ್ರಮಾಣ ಲೆಕ್ಕ ಹಾಕುವ ಕೆಲಸವನ್ನು ವಿದ್ಯಾರ್ಥಿಗಳೇ ಮಾಡಬೇಕಷ್ಟೆ. ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದಕ್ಕೆ ಎರಡೇ ಎರಡು ಸರಳ ಹಂತಗಳಿರುವುದು.

ಮೊದಲ ಹಂತ - ಎಲ್ಲ ಮುಖ್ಯ ವಿಷಯಗಳ ಅಂಕಗಳನ್ನು ಕೂಡಿಸುವುದು (ಸಾಮಾನ್ಯವಾಗಿ 5 ಮುಖ್ಯ ವಿಷಯಗಳು)

ಎರಡನೇ ಹಂತ - ಒಟ್ಟು ಅಂಕಗಳನ್ನು ಒಟ್ಟು ವಿಷಯಗಳ ಸಂಖ್ಯೆಯಿಂದ ಭಾಗಿಸಬೇಕು.

ಇಲ್ಲೊಂದು ಉದಾಹರಣೆಯನ್ನು ಗಮನಿಸೋಣ

ಶೇಕಡವಾರು ಲೆಕ್ಕ ಹಾಕಲು ಉದಾಹರಣೆ

ವಿಷಯಅಂಕ (100ರಲ್ಲಿ)
ಇಂಗ್ಲಿಷ್92
ಭೌತಶಾಸ್ತ್ರ88
ರಸಾಯನ ಶಾಸ್ತ್ರ85
ಗಣಿತ90
ಕಂಪ್ಯೂಟರ್ ಸೈನ್ಸ್95
ಒಟ್ಟು ಅಂಕ450

ಮೇಲಿನ ಅಂಕಪಟ್ಟಿಯಲ್ಲಿರುವ ಒಟ್ಟು ವಿಷಯಗಳ ಸಂಖ್ಯೆ 5 ಮತ್ತು ಒಟ್ಟು ಅಂಕ - 450. ಶೇಕಡಾವಾರು ಪ್ರಮಾಣ ಗುರುತಿಸುವುದಕ್ಕೆ 450/5= 90. ಇದರಲ್ಲಿ ಉತ್ತರವಾಗಿ ಸಿಕ್ಕ 90 ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ.

ಸಿಬಿಎಸ್‌ಇ ಫಲಿತಾಂಶ; 12ನೇ ತರಗತಿಯಲ್ಲಿ ಶೇಕಡ 88.39 ವಿದ್ಯಾರ್ಥಿಗಳು ಉತ್ತೀರ್ಣ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕೆ (ಶೇಕಡ 87.98 ವಿದ್ಯಾರ್ಥಿಗಳು ಉತ್ತೀರ್ಣ) ಹೋಲಿಸಿದರೆ ಉತ್ತೀರ್ಣ ಪ್ರಮಾಣ ಈ ವರ್ಷ ಶೇಕಡ 0.41ರಷ್ಟು ಹೆಚ್ಚು ಎಂದು ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.

ಪರೀಕ್ಷೆ ಬರೆದ ಬಾಲಕಿಯರ ಪೈಕಿ ಶೇಕಡ 91.64 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕರ ಪೈಕಿ ಶೇಕಡ 85.70 ಬಾಲಕರಷ್ಟೆ ಪಾಸ್ ಆಗಿದ್ದಾರೆ. ಟ್ರಾನ್ಸ್‌ಜೆಂಡರ್‌ಗಳ ಶೇಕಡ 100ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆ ಬರೆದ 16,92,794 ವಿದ್ಯಾರ್ಥಿಗಳ ಪೈಕಿ 1,11,544 ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 24,867 ವಿದ್ಯಾರ್ಥಿಗಳು ಶೇಕಡ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಸಿಬಿಎಸ್‌ಇಯ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾಗಿ ಪಿಟಿಐ ವರದಿ ಹೇಳಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.