ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ

ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ

ಸಿಬಿಎಸ್‌ಇ ಫಲಿತಾಂಶ 2025; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ್ನ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶವನ್ನು ಶೀಘ್ರವೇ ಪ್ರಕಟಿಸಲಿದೆ. ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡಬಹುದು. (ಸಾಂಕೇತಿಕ ಚಿತ್ರ)
ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡಬಹುದು. (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ 2025; ಪ್ರಸಕ್ತ ವರ್ಷದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ್ನ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶವನ್ನು ಶೀಘ್ರವೇ ಅಂದರೆ ಇದೇ ವಾರ ಪ್ರಕಟಿಸುವ ಸಾಧ್ಯತೆ ಇದೆ. 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶಗಳನ್ನು ಒಟ್ಟಿಗೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಿಬಿಎಸ್‌ಇ ಫಲಿತಾಂಶ 2025 ಪ್ರಕಟವಾದ ಕೂಡಲೇ ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ, ಡಿಜಿಲಾಕರ್‌ ಪೋರ್ಟಲ್, ಉಮಂಗ್ ಆ್ಯಪ್‌‌ನಲ್ಲಿ ಕೂಡ ಲಭ್ಯವಾಗಲಿದೆ. ಇದಲ್ಲದೆ, ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅವರ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆ 2025ರ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಮತ್ತು ಐವಿಆರ್‌ಎಸ್‌ ಕರೆಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಸಿಬಿಎಸ್‌ಇ ಫಲಿತಾಂಶ 2025 ಪ್ರಕಟವಾಗುವ ವೆಬ್‌ಸೈಟ್‌ಗಳು

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ್ನ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶ ಮೂರು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಲಿದೆ. ಅವುಗಳಿ ಹೀಗಿವೆ-

(1) cbse.nic.in (2) cbseresults.gov.in (3) digilocker.gov.in

ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ

ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ತನ್ನ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶವನ್ನು ಉಮಂಗ್ ಆ್ಯಪ್‌‌ನಲ್ಲಿ ನೋಡುವುದು ಹೇಗೆ? ಇಲ್ಲಿದೆ ಆ ವಿವರ.

ಇದಕ್ಕಾಗಿ ಮೊದಲು ನಿಮ್ಮ ಮೊಬೈಲ್‌ನಲ್ಲಿ ಪ್ಲೇಸ್ಟೋರ್ ಅಥವಾ ಆ್ಯಪ್‌‌ ಸ್ಟೋರ್‌ಗೆ ಹೋಗಿ ಅಲ್ಲಿ ಉಮಂಗ್ ಆ್ಯಪ್‌‌ ಅನ್ನು ಡೌನ್‌ಲೋಡ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಉಮಂಗ್ ಆ್ಯಪ್‌‌ನಲ್ಲಿ ನಮೂದಿಸಿ ಲಾಗಿನ್ ಆಗಬೇಕು.

1) ಉಮಂಗ್ ಆ್ಯಪ್‌‌ ಓಪನ್ ಮಾಡಿಕೊಳ್ಳಿ

2) ಉಮಂಗ್ ಆ್ಯಪ್‌‌ನಲ್ಲಿ ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್ 2025 ಎಂಬುದನ್ನು ಸೆಲೆಕ್ಟ್ ಮಾಡಬೇಕು

3) ಅಗತ್ಯ ಲಾಗಿನ್ ಕ್ರೆಡೆನ್ಶಿಯಲ್‌ಗಳನ್ನು ನಮೂದಿಸಬೇಕು. ಅಂದರೆ ರೋಲ್ ನಂಬರ್ ಮತ್ತು ಜನ್ಮದಿನಾಂಕವನ್ನು ನಮೂದಿಸಬೇಕು.

4) ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ಪರೀಕ್ಷೆಯ ಅಂಕಪಟ್ಟಿ ಲಭ್ಯವಿರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ

5) ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ಪರೀಕ್ಷೆಯ ಅಂಕಪಟ್ಟಿಯ ಪಿಡಿಎಫ್‌ ಕಾಪಿಯನ್ನು ಒಂದೆಡೆ ಸೇವ್ ಮಾಡಿಟ್ಟುಕೊಳ್ಳಿ. ಅದೇ ರೀತಿ ಪ್ರಿಂಟ್ ಮಾಡಿ ಭವಿಷ್ಯದ ಅಗತ್ಯಕ್ಕಾಗಿ ತೆಗೆದಿಡಿ.

ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ

ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದಕ್ಕೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ನೋಡುವುದು ಹೇಗೆ ಎಂಬುದರ ವಿವರ ಇಲ್ಲಿದೆ. ಇದಕ್ಕಾಗಿ ಶಾಲಾ ಕೋಡ್ ಮತ್ತು ರೋಲ್ ನಂಬರ್‌ ವಿವರ ಬೇಕು. ಇದು ಗೊತ್ತಿಲ್ಲದೇ ಇದ್ದರೆ ತಮ್ಮ ಅಡ್ಮಿಟ್ ಕಾರ್ಡ್ ನೋಡಿ ಗುರುತಿಸಿಕೊಳ್ಳಿ. ನಂತರ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು

ಅಧಿಕೃತ ವೆಬ್‌ಸೈಟ್‌ಗಳಾದ cbse.gov.in ಅಥವಾ cbseresults.nic.in ಭೇಟಿ ನೀಡಿ.

ಅದರಲ್ಲಿ ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್ 2025 ಲಿಂಕ್ ಹುಡುಕಿ, ಅದನ್ನು ಕ್ಲಿಕ್ ಮಾಡಿ.

ನಿಮ್ಮ ಸಿಬಿಎಸ್‌ಇ ಬೋರ್ಡ್ ಎಕ್ಸಾಂ ರೋಲ್ ನಂಬರ್, ಸ್ಕೂಲ್ ಕೋಡ್ ಮತ್ತು ಜನ್ಮದಿನಾಂಕ ನಮೂದಿಸಿ. ಇಷ್ಟಾದ ಬಳಿಕ ನಿಮ್ಮ ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್ ಪರದೆ ಮೇಲೆ ಕಾಣಿಸುತ್ತದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.