ಸಿಬಿಎಸ್ಇ ಫಲಿತಾಂಶ 2025 ಬರುವುದಕ್ಕೂ ಮೊದಲೇ ನಿಯಮ ಬದಲು; ಉತ್ತರ ಪತ್ರಿಕೆ ಮೊದಲು ಕೊಡ್ತಾರಂತೆ, ನೋಡ್ಕೊಂಡು ಮುಂದೇನು ಅಂತ ಡಿಸೈಡ್ ಮಾಡಿ
ಸಿಬಿಎಸ್ಇ ನಿಯಮ ಬದಲು: ಸಿಬಿಎಸ್ಇ ಫಲಿತಾಂಶ 2025 ಇನ್ನೂ ಪ್ರಕಟವಾಗಿಲ್ಲ. ಆದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫಲಿತಾಂಶ ನಂತರದ ಪ್ರಕ್ರಿಯೆ ಸರಳಗೊಳಿಸಲು ಮಂಡಳಿ, ಮೊದಲು ಉತ್ತರ ಪತ್ರಿಕೆ ನೀಡುವ ನಿರ್ಧಾರ ತೆಗೆದುಕೊಂಡು ನಿಯಮ ಪರಿಷ್ಕರಿಸಿದೆ.

ಸಿಬಿಎಸ್ಇ ನಿಯಮ ಬದಲು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡಿ ಎಜುಕೇಶನ್ (ಸಿಬಿಎಸ್ಇ) ಈ ಸಲದ ಅಂದರೆ 2025ರ ಸಿಬಿಎಸ್ಇ ಫಲಿತಾಂಶ ಪ್ರಕಟಿಸುವ ಮೊದಲೇ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶ ನಂತರದ ಪ್ರಕ್ರಿಯೆಯನ್ನು ಸುಧಾರಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ಅದು ಪರಿಚಯಸಿದ್ದು, ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳನ್ನು ಮೊದಲು ನೀಡಲಾಗುತ್ತಿದ್ದು, ಅದನ್ನು ನೋಡಿಕೊಂಡು ವೆರಿಫಿಕೇಶನ್ ಮಾಡಬೇಕಾ ಅಥವಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕಾ ಎಂಬದನ್ನು ವಿದ್ಯಾರ್ಥಿಗಳು ನಿರ್ಣಯಿಸಬಹುದು ಎಂದು ಮಂಡಳಿ ಹೇಳಿದೆ.
ಸಿಬಿಎಸ್ಇ ಫಲಿತಾಂಶ 2025 ಬರುವುದಕ್ಕೂ ಮೊದಲೇ ನಿಯಮ ಬದಲು
ಪ್ರಸ್ತುತ ಸಿಬಿಎಸ್ಇ ನಿಯಮ ಪ್ರಕಾರ, ವಿದ್ಯಾರ್ಥಿಗಳು ಮೊದಲು ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಅದಾದ ನಂತರ ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕಾಗಿತ್ತು. ಈಗ ನಿಯಮ ಬದಲಾದ ಕಾರಣ, ಮೊದಲೇ ಉತ್ತರ ಪತ್ರಿಕೆಗಳ ಫೋಟೋಕಾಪಿಯನ್ನು ಪಡೆಯಬಹುದು.
ಹೊಸ ನಿಯಮ ಪ್ರಕಾರ
1) ಮೌಲ್ಯಮಾಪನವಾಗಿರುವ ಉತ್ತರ ಪತ್ರಿಕೆಗಳ ಫೋಟೋಕಾಪಿ ಪಡೆಯುವುದು
2) ಅಂಕಗಳ ಪರಿಶೀಲನೆ ಅಥವಾ ಮರು ಮೌಲ್ಯಮಾಪನ ಅಥವಾ ಎರಡೂ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.
ನಿಯಮ ಪರಿಷ್ಕರಿಸಿರುವ ಕಾರಣ, ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಅವರು ಮಾಡಿರುವ ತಪ್ಪುಗಳೇನು, ಅಥವಾ ಇನ್ನಷ್ಟು ಅಂಕ ಗಳಿಸುವುದಕ್ಕೆ ಉತ್ತರ ಪತ್ರಿಕೆಯಲ್ಲಿ ಅವಕಾಶ ಇದೆಯೇ ಎಂಬುದನ್ನು ಅರಿತುಕೊಳ್ಳಲು ಇದು ಸಹಕಾರಿ. ಅದೇ ರೀತಿ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅನುಕೂಲವಾಗಲಿದೆ ಎಂದು ಸಿಬಿಎಸ್ಇ ಇದಕ್ಕೆ ಸಂಬಂಧಿಸಿದ ಅಧಿಸೂಚನೆಯಲ್ಲಿ ವಿವರಿಸಿದೆ.
ಸಿಬಿಎಸ್ಇ ಮರು ಮೌಲ್ಯಮಾಪನ, ಅಂಕ ಪರಿಶೀಲನೆ ಕುರಿತು ಹೇಳಿರುವುದಿಷ್ಟು
“ಮೊದಲ ಹಂತದಲ್ಲಿ ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕದ ಫೋಟೋಕಾಪಿ ಪಡೆಯಬೇಕು. ಉತ್ತರ ಪತ್ರಿಕೆ ಫೋಟೋ ಕಾಪಿಯಲ್ಲಿ ತಪ್ಪಿ ಹೋದ ಅಂಕ ಅಥವಾ ಮೌಲ್ಯಮಾಪನವಾಗದೇ ಉಳಿದ ಪ್ರಶ್ನೆ ಗುರುತು ಹಾಕಿದ ಬಳಿಕ ಮುಂದಿನ ಹಂತ ನಿರ್ಧರಿಸಬಹುದು. ಅದಾದ ನಂತರ ಅಭ್ಯರ್ಥಿಯು ಅಂಕಗಳ ಪರಿಶೀಲನೆ ಮಾಡಬೇಕೆ ಎಂದು ನಿರ್ಧರಿಸಬಹುದು. ಅಂಕಗಳು ಎಷ್ಟು ತಪ್ಪಿ ಹೋಗಿದ್ದರೆ ಅಂತಹ ಸಂದರ್ಭದಲ್ಲಿ ಅಂಕ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ, ಯಾವುದೇ ಪ್ರಶ್ನೆಗಳ ಮೌಲ್ಯ ಮಾಪನ ಆಗಿಲ್ಲದೇ ಇದ್ದರೆ ಅಥವಾ ಪ್ರಶ್ನೆಗಳ ಮೌಲ್ಯಮಾಪನ ಸರಿಯಾಗಿ ನಡೆಯದೇ ಇದ್ದರೆ ಆಗ, ನಿರ್ದಿಷ್ಟ ಪ್ರಶ್ನೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಿಬಿಎಸ್ಇ ತಿಳಿಸಿದೆ.
ಮೌಲ್ಯಮಾಪನ ಮಾಡಿದ ಉತ್ತರ ಶೀಟ್ಗಳ ಫೋಟೊಕಾಪಿಗಳನ್ನು ಪಡೆಯುವ ವಿವರವಾದ ಪ್ರಕ್ರಿಯೆಯನ್ನು 10 ನೇ ತರಗತಿ, 12 ಫಲಿತಾಂಶಗಳ ಘೋಷಣೆಯ ನಂತರ ಗುರುತುಗಳ ಪರಿಶೀಲನೆ ಮತ್ತು ಮರು ಮೌಲ್ಯಮಾಪನವನ್ನು ಹಂಚಿಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.
ಸಿಬಿಎಸ್ಇ ಇನ್ನೂ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಿಸುವ ದಿನಾಂಕ ಘೋಷಿಸಿಲ್ಲ. ಎರಡೂ ಫಲಿತಾಂಶ ಒಂದೇ ದಿನ ಪ್ರಕಟವಾಗುವ ಸಾಧ್ಯತೆ ಇದೆ. ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಹಾಗೂ ಅಂಕಗಳನ್ನು cbseresults.nic.in, results.cbse.nic.in, cbse.nic.in, digilocker.gov.in and results.gov.in ತಾಣಗಳಲ್ಲಿ ಗಮನಿಸಬಹುದು. ಉದೂ ಅಲ್ಲದೆ, ಉಮಂಗ್ ಆಪ್ ಅಥವಾ ಎಸ್ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು ಎಂದು ಸಿಬಿಎಸ್ಇ ತಿಳಿಸಿದೆ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಫೆಬ್ರವರಿ 15 ರಿಂದ ಮಾರ್ಚ್ 1ರ ತನಕ, ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಫೆಬ್ರವರಿ 15 ರಿಂದ ಏಪ್ರಿಲ್ 4ರ ತನಕ ನಡೆಯಿತು.