CBSE 2025: 10 ಮತ್ತು 12ನೇ ತರಗತಿಯ ಫಲಿತಾಂಶ, ಅಂಕಗಳನ್ನು ಪರಿಶೀಲಿಸಲು ಇಲ್ಲಿವೆ ವೆಬ್‌ಸೈಟ್‌ಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse 2025: 10 ಮತ್ತು 12ನೇ ತರಗತಿಯ ಫಲಿತಾಂಶ, ಅಂಕಗಳನ್ನು ಪರಿಶೀಲಿಸಲು ಇಲ್ಲಿವೆ ವೆಬ್‌ಸೈಟ್‌ಗಳು

CBSE 2025: 10 ಮತ್ತು 12ನೇ ತರಗತಿಯ ಫಲಿತಾಂಶ, ಅಂಕಗಳನ್ನು ಪರಿಶೀಲಿಸಲು ಇಲ್ಲಿವೆ ವೆಬ್‌ಸೈಟ್‌ಗಳು

ಸಿಬಿಎಸ್ಇ 2025ರ ಫಲಿತಾಂಶದ ದಿನಾಂಕವನ್ನು ಇನ್ನೂ ಮಂಡಳಿ ಬಿಡುಗಡೆ ಮಾಡಿಲ್ಲ. ರಿಸಲ್ಟ್ ಘೋಷಣೆಯಾದ ಕೂಡಲೇ ನೀವು ಇಲ್ಲಿ ಹೇಳಿರುವ ವೆಬ್‌ಸೈಟ್ ಮೂಲಕ ನಿಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ಅವುಗಳ ವಿವರ ಇಲ್ಲಿದೆ ನೋಡಿ.

ರಿಸಲ್ಟ್ ಘೋಷಣೆಯಾದ ಕೂಡಲೇ ನೀವು ಇಲ್ಲಿ ಹೇಳಿರುವ ವೆಬ್‌ಸೈಟ್ ಮೂಲಕ ನಿಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
ರಿಸಲ್ಟ್ ಘೋಷಣೆಯಾದ ಕೂಡಲೇ ನೀವು ಇಲ್ಲಿ ಹೇಳಿರುವ ವೆಬ್‌ಸೈಟ್ ಮೂಲಕ ನಿಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದು. (Hindustan Times)

ನವದೆಹಲಿ: ಪ್ರಸಕ್ತ ಸಾಲಿನ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳಿಗೆ ಹಾಜರಾದ 10 ಮತ್ತು 12 ನೇ ತರಗತಿಯ ಫಲಿತಾಂಶ ದಿನಾಂಕ ಇನ್ನು ಕೂಡ ಘೋಷಣೆಯಾಗಿಲ್ಲ. ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಸಾಮಾನ್ಯವಾಗಿ ಮೇ ಎರಡು ಅಥವಾ ಮೂರನೇ ವಾರದಲ್ಲಿ ಸಿಬಿಎಸ್‌ಇ ಪ್ರತಿವರ್ಷ ಫಲಿತಾಂಶ ಘೋಷಣೆ ಮಾಡುತ್ತದೆ. ಹೀಗಾಗಿ ಫಲಿತಾಂಶದ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಸಹಜ ಆತಂಕ ಮತ್ತು ಕುತೂಹಲ ಇದ್ದೇ ಇರುತ್ತದೆ.

ಸಿಬಿಎಸ್‌ಇ ಫಲಿತಾಂಶಗಳನ್ನು ಪರಿಶೀಲಿಸಲು ವೆಬ್‌ಸೈಟ್‌ಗಳ ಪಟ್ಟಿ ಇಲ್ಲಿದೆ

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಬಿಡುಗಡೆಯಾದ ನಂತರ ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು.

cbse.gov.in

results.cbse.nic.in.

ಅದರ ಜತೆಗೆ ಫಲಿತಾಂಶಗಳನ್ನು results.digilocker.gov.in ನಲ್ಲಿ ಡಿಜಿಲಾಕರ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು umang.gov.in ನಲ್ಲಿ ಉಮಾಂಗ್ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು.

ಜತೆಗೆ ಈ ಸೈಟ್‌ಗಳಲ್ಲೂ ಫಲಿತಾಂಶ ಲಭ್ಯವಿದೆ.

cbseresults.nic.in

cbse.nic.in

results.digilocker.gov.in

results.gov.in.

ಫಲಿತಾಂಶಗಳನ್ನು ಪರಿಶೀಲಿಸಲು, ವಿದ್ಯಾರ್ಥಿಗಳು ಈ ಕೆಳಗಿನ ವಿವರಗಳನ್ನು ನಮೂದಿಸಬೇಕು-

ರೋಲ್ ನಂಬರ್

ಹುಟ್ಟಿದ ದಿನ

ಪ್ರವೇಶ ಪತ್ರ ವಿವರಗಳು

ಈ ವರ್ಷ ಸುಮಾರು 44 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. 10 ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 15 ರಂದು ಪ್ರಾರಂಭವಾಗಿ ಮಾರ್ಚ್ 18, 2025 ರಂದು ಕೊನೆಗೊಂಡರೆ, 12 ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 15 ರಂದು ಪ್ರಾರಂಭವಾಗಿ ಏಪ್ರಿಲ್ 4, 2025 ರಂದು ಕೊನೆಗೊಂಡಿದೆ.

ಸಿಬಿಎಸ್ಇ ಫಲಿತಾಂಶ 2025: 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

cbse.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹೋಮ್‌ ಪೇಜ್‌ನಲ್ಲಿ ವಿದ್ಯಾರ್ಥಿಗಳು ಸಿಬಿಎಸ್ಇ 10 ಅಥವಾ 12 ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ

ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ಪರದೆಯ ಮೇಲೆ ಪ್ರದರ್ಶಿಸಲಾದ ನಿಮ್ಮ ಸಿಬಿಎಸ್ಇ 10 ಅಥವಾ 12 ನೇ ತರಗತಿ ಸ್ಕೋರ್ ಕಾರ್ಡ್ ಅನ್ನು ವೀಕ್ಷಿಸಿ.

ಡೌನ್ ಲೋಡ್ ಮಾಡಿ ಮತ್ತು ಅದರ ಪ್ರಿಂಟ್ ಔಟ್ ಅನ್ನು ಇರಿಸಿಕೊಳ್ಳಿ.

ಫಲಿತಾಂಶ ಕುರಿತು ಅಧಿಕೃತ ಮತ್ತು ಹೆಚ್ಚಿನ ಮಾಹಿತಿಗಾಗಿ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಮಾತ್ರ ಭೇಟಿ ನೀಡುವಂತೆ ಮಂಡಳಿ ಸೂಚಿಸಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.