ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು- ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು- ಇಲ್ಲಿದೆ ವಿವರ

ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು- ಇಲ್ಲಿದೆ ವಿವರ

ಸಿಬಿಎಸ್‌ಇ ಫಲಿತಾಂಶ 2025: ಸಿಬಿಎಸ್‌ಇಯ 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. 10ನೇ ತರಗತಿಯಲ್ಲಿ ಚಾಲ್ತಿಯಲ್ಲಿರುವ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು ಎಂಬಿತ್ಯಾದ ವಿವರ ಇಲ್ಲಿದೆ.

ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು ಎಂಬ ವಿವರ, (ಸಾಂಕೇತಿಕ ಚಿತ್ರ)
ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು ಎಂಬ ವಿವರ, (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಶೇಕಡ 93.66 ಉತ್ತೀರ್ಣ ಪ್ರಮಾಣ ಇದ್ದು, ವಿದ್ಯಾರ್ಥಿಗಳ ಸಾಧನೆಯು ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಅವರೇಜ್‌ (ಸಿಜಿಪಿಎ) ಪ್ರಕಾರ ದಾಖಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅಥವಾ ಇನ್ಯಾವುದೇ ಕಚೇರಿ ದಾಖಲೆಗಳಿಗಾಗಿ ತಮ್ಮ ಗ್ರೇಡ್‌ ಅಥವಾ ಸಿಜಿಪಿಎಯನ್ನು ಪರ್ಸಂಟೇಜ್‌ಗೆ ಪರಿವರ್ತಿಸಬೇಕು. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಗ್ರೇಡಿಂಗ್‌ ವ್ಯವಸ್ಥೆಯಿಂದ ಶೇಕಡಾಕ್ಕೆ ಬದಲಾಯಿಸುವುದು ಹೇಗೆ ಎಂದು ಚಿಂತಿತರಾಗಿದ್ದೀರಾ? ಅದನ್ನು ತಿಳಿಯೋಣ.

ಸಿಬಿಎಸ್‌ಇ 10ನೇ ತರಗತಿಯ ಗ್ರೇಡಿಂಗ್ ವ್ಯವಸ್ಥೆ ಅಥವಾ ಸಿಜಿಪಿಎ ಎಂದರೇನು?

10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಳೆಯುವುದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಅಳವಡಿಸಿಕೊಂಡಿರುವ ಗ್ರೇಡಿಂಗ್ ವ್ಯವಸ್ಥೆಯೇ ಸಿಜಿಪಿಎ ಅಥವಾ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಅವರೇಜ್. ಅಂಕಗಳನ್ನು ಹಾಗೆಯೇ ದಾಖಲಿಸುವ ಬದಲು ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಿದೆ.

ಸಿಜಿಪಿಎ ಎಂಬುದು 5 ಮುಖ್ಯ ವಿಷಯಗಳು ಅಂದರೆ ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಸರಾಸರಿ ಗ್ರೇಡ್ ಪಾಯಿಂಟ್ಸ್‌ ಆಗಿದೆ. ಇದರಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ಸ್ ಅಥವಾ ದೈಹಿಕ ಶಿಕ್ಷಣ ಹೆಚ್ಚುವರಿ ವಿಷಯಗಳಾಗಿದ್ದು, ಅವುಗಳನ್ನು ಗ್ರೇಡಿಂಗ್‌ ವ್ಯವಸ್ಥೆಗೆ ಸೇರಿಸಿಲ್ಲ.

ಸಿಬಿಎಸ್‌ಇನಲ್ಲಿ ಸಿಜಿಪಿಎ ಪ್ರಯೋಜನವೇನು?

ಸಿಜಿಪಿಎ ಅಥವಾ ಗ್ರೇಡಿಂಗ್ ವ್ಯವಸ್ಥೆಯು ಪ್ರತಿಯೊಂದು ವಿಷಯದ ಪೂರ್ತಿ ಅಂಕ ಒದಗಿಸುವ ಬದಲ, ಸಂಚಿತ ಅಂಕವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಒಟ್ಟಾರೆ ಸಾಧನೆಯನ್ನು ಸುಧಾರಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಸಮತೋಲನದ ಕಲಿಕೆಗೂ ಅವಕಾಶ ನೀಡುವ ಈ ವ್ಯವಸ್ಥೆಯು, ವಿದ್ಯಾರ್ಥಿಗಳ ಗಮನವನ್ನು ಅಂಕಗಳಿಂದ ಕೌಶಲ ವೃದ್ಧಿ ಕಡೆಗೆ ಬದಲಾಯಿಸುತ್ತದೆ. ಸಿಜಿಪಿಎ ವ್ಯವಸ್ಥೆಯು ಸೃಜನಶೀಲ, ಸಂವಹನ ಮತ್ತು ನಿರ್ಣಾಯಕ ಚಿಂತನೆಗಳನ್ನು ಉತ್ತೇಜಿಸುತ್ತದೆ. ಜಾಗತಿಕ ಕಲಿಕಾ ವ್ಯವಸ್ಥೆಗೂ ಇದು ಹೊಂದಿಕೊಳ್ಳುವ ಕಾರಣ ಸಿಬಿಎಸ್‌ಇ ಇದನ್ನು ಜಾರಿಗೊಳಿಸಿದೆ.

ಸಿಜಿಪಿಎ ಲೆಕ್ಕಾಚಾರದ ಉದಾಹರಣೆ ಗಮನಿಸೋಣ.

ಸಿಬಿಎಸ್‌ಇನಲ್ಲಿ ಸಿಜಿಪಿಎ ಲೆಕ್ಕ ಹೇಗೆ

ಸಿಬಿಎಸ್‌ಇ 10ನೇ ತರಗತಿಯ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಸಿಜಿಪಿಎ ಲೆಕ್ಕಾಚಾರ ಹೇಗೆ ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಈ ಉದಾಹರಣೆ ಗಮನಿಸೋಣ.

ಸಿಬಿಎಸ್‌ಇ 10ನೇ ತರಗತಿ ಸಿಜಿಪಿಎ ಲೆಕ್ಕ

ವಿಷಯಗ್ರೇಡ್ಗ್ರೇಡ್ ಪಾಯಿಂಟ್
ಇಂಗ್ಲಿಷ್A29.0
ಗಣಿತA110.0
ವಿಜ್ಞಾನA29.0
ಸಮಾಜ ವಿಜ್ಞಾನB1 8.0
ಹಿಂದಿA29.0
ಒಟ್ಟು-45.0

ಇದರಲ್ಲಿ ಸಿಜಿಪಿಎ ಎಂಬುದು ಒಟ್ಟು ಗ್ರೇಡ್ ಪಾಯಿಂಟ್ ಅನ್ನು ಒಟ್ಟು ವಿಷಯ ಸಂಖ್ಯೆಯಿಂದ ಭಾಗಿಸಿದಾಗಿ ಸಿಗುವಂಥದ್ದು. ಇಲ್ಲಿ ಸಿಜಿಪಿಎ ಹೀಗಿದೆ 45.0/5= 9.0

ಇನ್ನು ಸಿಬಿಎಸ್‌ಇ 10ನೇ ತರಗತಿ ಗ್ರೇಡಿಂಗ್ ಸ್ಕೇಲ್ ಲೆಕ್ಕ ಇದು

ಸಿಬಿಎಸ್‌ಇ 10ನೇ ತರಗತಿ ಗ್ರೇಡಿಂಗ್ ಲೆಕ್ಕ

ಗ್ರೇಡ್ಅಂಕಗಳ ಮಟ್ಟಗ್ರೇಡ್ ಪಾಯಿಂಟ್
A191-10010.0
A281-909.0
B171-808.0
B261-707.0
C151-606.0
C241-505.0
D33-404.0
E1/E233 ಅಂಕಕ್ಕಿಂತ ಕೆಳಗೆಫೇಲ್

ಸಿಬಿಎಸ್‌ಇ 10ನೇ ತರಗತಿ ಸಿಜಿಪಿಎಯಿಂದ ಶೇಕಡಾವಾರು ಪರಿವರ್ತನೆ ಹೇಗೆ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಸಿಜಿಪಿಎ ಗ್ರೇಡಿಂಗ್ ಪಾಯಿಂಟ್ ಮೂಲಕ ಗಮನಿಸುತ್ತಿದ್ದರೆ, ಅದನ್ನು ಪರ್ಸಂಟೇಜ್‌ಗೆ ಬದಲಾಯಿಸುವುದು ಹೇಗೆ ಎಂಬ ಚಿಂತೆಯೇ. ಅದಕ್ಕಾಗಿ ಮಾಡಬೇಕಾದ್ದು ಇಷ್ಟೆ-

ಪರ್ಸಂಟೇಜ್‌ (%) = ಸಿಜಿಪಿಎ‍ X 9.5

ಉದಾಹರಣೆಗೆ ನಿಮ್ಮ ಸಿಜಿಪಿಎ 9.0 ಆಗಿದ್ದರೆ, ನಿಮ್ಮ ಪರ್ಸಂಟೇಜ್ 9.0 X 9.5 = 85.5%.

ಈ ಲೆಕ್ಕಾಚಾರದಲ್ಲಿ ಸಿಜಿಪಿಎಯನ್ನು ಪರ್ಸಂಟೇಜ್‌ಗೆ ಬದಲಾಯಿಸುವಾಗ 9.5 ರಿಂದಲೇ ಯಾಕೆ ಗುಣಿಸಬೇಕು? ಎಂಬ ಕುತೂಹಲ ಸಹಜ. ಸಿಬಿಎಸ್‌ಇ ಮೌಲ್ಯಮಾಪನದಲ್ಲಿ ಸರಾಸರಿ ಅಂಕ 95 ಎಂದು ಗುರುತಿಸಿತು. ಅಂಕಗಳನ್ನು 10 ಸ್ತರದಲ್ಲಿ ವಿಂಗಡಿಸಿತು. ಹೀಗಾಗಿ 95/10 ಎಂದು ಲೆಕ್ಕ ಹಾಕಿ ಪರ್ಸಂಟೇಜ್ ಕನ್ವರ್ಟರ್ ಆಗಿ 9.5 ಸರಿಯಾ ಅಂಕಿ ಎಂದು ನಿಗದಿ ಮಾಡಿತು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.