ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಶೇ 93.66 ವಿದ್ಯಾರ್ಥಿಗಳು ಉತ್ತೀರ್ಣ; ವಿದ್ಯಾರ್ಥಿನಿಯರದ್ದೇ ಮೇಲುಗೈ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 10ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಶೇ 93.66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಶೇ 93.66 ವಿದ್ಯಾರ್ಥಿಗಳು ಉತ್ತೀರ್ಣ; ವಿದ್ಯಾರ್ಥಿನಿಯರದ್ದೇ ಮೇಲುಗೈ
ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 10ನೇ ತರಗತಿ ಫಲಿತಾಂಶವನ್ನು ಇಂದು (ಮೇ 13) ಪ್ರಕಟಿಸಿದೆ. ಈ ಬಾರಿ ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 93.66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಿಬಿಎಸ್‌ಇ ತಿಳಿಸಿದೆ. ಶೇ ಶೇ. 95 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾದರೆ, ಶೇ. 92.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2025 ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ www.cbse.gov.in, cbseresults.nic.in ನಲ್ಲಿ ಪರಿಶೀಲಿಸಬಹುದು. ಇದರೊಂದಿಗೆ results.digilocker.gov.in ಮತ್ತು umang.gov.in. ನಲ್ಲೂ ಫಲಿತಾಂಶ ವೀಕ್ಷಿಸಬಹುದು.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ನೋಡುವುದು ಹೇಗೆ?
- results.cbse.nic.in ಅಥವಾ cbse.gov.in ಗೆ ಭೇಟಿ ನೀಡಿ.
- 10ನೇ ತರಗತಿಯ ಫಲಿತಾಂಶಗಳಿಗಾಗಿ ಸಂಬಂಧಿತ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ರೋಲ್ ನಂಬರ್, ಶಾಲೆಯ ನಂಬರ್, ಜನ್ಮ ದಿನಾಂಕ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಿ.
- ಫಲಿತಾಂಶವನ್ನು ವೀಕ್ಷಿಸಲು ವಿವರಗಳನ್ನು ಸಲ್ಲಿಸಿ.
- ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ಕೊಡಿ.
- ಪರ್ಯಾಯವಾಗಿ, ಪ್ರಮಾಣಪತ್ರಗಳನ್ನು ಪ್ರವೇಶಿಸಲು ಶಾಲೆಯಿಂದ ಒದಗಿಸಲಾದ 6-ಅಂಕಿಯ ಪಿನ್ ಬಳಸಿ ಡಿಜಿಲಾಕರ್‌ಗೆ ಲಾಗಿನ್ ಮಾಡಿ.
ಪೋರ್ಟಲ್ ಈಗಾಗಲೇ ʼಫಲಿತಾಂಶ ಶೀಘ್ರದಲ್ಲೇ ಲಭ್ಯವಿದೆʼ ಎಂಬ ಸಂದೇಶವನ್ನು ತೋರಿಸುವುದರಿಂದ, ವಿದ್ಯಾರ್ಥಿಗಳು ತಮ್ಮ ಡಿಜಿಲಾಕರ್ ಖಾತೆಗಳನ್ನು ಮುಂಚಿತವಾಗಿ ಹೊಂದಿಸಲು ಸಹ ಬಳಸಬಹುದು.
ವಿಭಾಗ
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.