ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ, ಶೇಕಡ 88.39 ವಿದ್ಯಾರ್ಥಿಗಳು ಪಾಸ್, ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ, ಶೇಕಡ 88.39 ವಿದ್ಯಾರ್ಥಿಗಳು ಪಾಸ್, ವಿವರ ಹೀಗಿದೆ

ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ, ಶೇಕಡ 88.39 ವಿದ್ಯಾರ್ಥಿಗಳು ಪಾಸ್, ವಿವರ ಹೀಗಿದೆ

ಸಿಬಿಎಸ್‌ಇ ಫಲಿತಾಂಶ 2025: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 12ನೇ ತರಗತಿ ರಿಸಲ್ಟ್ ಪ್ರಕಟ ಮಾಡಿದೆ. ಶೇಕಡ 88.39 ವಿದ್ಯಾರ್ಥಿಗಳು ಪಾಸ್ ಆಗಿರುವುದಾಗಿ ಅದು ತಿಳಿಸಿದೆ. ವಿವರ ಹೀಗಿದೆ.

ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ (ಸಾಂಕೇತಿಕ ಚಿತ್ರ)
ಸಿಬಿಎಸ್‌ಇ ಫಲಿತಾಂಶ 2025; 12ನೇ ತರಗತಿ ರಿಸಲ್ಟ್ ಪ್ರಕಟ (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ 2025; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 12ನೇ ತರಗತಿ ಫಲಿತಾಂಶವನ್ನು ಇಂದು (ಮೇ 13) ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇಕಡ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಿಬಿಎಸ್‌ಇ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತೀರ್ಣ ಪ್ರಮಾಣ ಕೊಂಚ ಹೆಚ್ಚಳವಾಗಿದೆ. ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶದಲ್ಲಿ ಬಾಲಕರಿಗಿಂತ ಶೇಕಡ 5 ಹೆಚ್ಚು ಬಾಲಕಿಯರು ಉತ್ತೀರ್ಣರಾಗಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

12ನೇ ತರಗತಿ ರಿಸಲ್ಟ್ ಪ್ರಕಟ, ಶೇಕಡ 88.39 ವಿದ್ಯಾರ್ಥಿಗಳು ಪಾಸ್

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. ಕಳೆದ ವರ್ಷ ಶೇಕಡ 87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 0.41ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದರು ಎಂದು ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.

ಪರೀಕ್ಷೆ ಬರೆದ ಬಾಲಕಿಯರ ಪೈಕಿ ಶೇಕಡ 91.64 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕರ ಪೈಕಿ ಶೇಕಡ 85.70 ಬಾಲಕರಷ್ಟೆ ಪಾಸ್ ಆಗಿದ್ದಾರೆ. ಟ್ರಾನ್ಸ್‌ಜೆಂಡರ್‌ಗಳ ಶೇಕಡ 100ರಷ್ಟು ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಶೇಕಡ 50 ಪಾಸಿಂಗ್ ಪರ್ಸೆಂಟೇಜ್ ಇತ್ತು.

ಪರೀಕ್ಷೆ ಬರೆದ 16,92,794 ವಿದ್ಯಾರ್ಥಿಗಳ ಪೈಕಿ 1,11,544 ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 24,867 ವಿದ್ಯಾರ್ಥಿಗಳು ಶೇಕಡ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದ್ದಾಗಿ ಪಿಟಿಐ ವರದಿ ಹೇಳಿದೆ.

ಉಮಂಗ್ ಆ್ಯಪ್‌‌ನಲ್ಲಿ 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ

ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) 12ನೇ ತರಗತಿ ಫಲಿತಾಂಶವನ್ನು ಉಮಂಗ್ ಆ್ಯಪ್‌‌ನಲ್ಲಿ ನೋಡುವುದು ಹೇಗೆ? ಇಲ್ಲಿದೆ ಆ ವಿವರ.

ಇದಕ್ಕಾಗಿ ಮೊದಲು ನಿಮ್ಮ ಮೊಬೈಲ್‌ನಲ್ಲಿ ಪ್ಲೇಸ್ಟೋರ್ ಅಥವಾ ಆ್ಯಪ್‌‌ ಸ್ಟೋರ್‌ಗೆ ಹೋಗಿ ಅಲ್ಲಿ ಉಮಂಗ್ ಆ್ಯಪ್‌‌ ಅನ್ನು ಡೌನ್‌ಲೋಡ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಉಮಂಗ್ ಆ್ಯಪ್‌‌ನಲ್ಲಿ ನಮೂದಿಸಿ ಲಾಗಿನ್ ಆಗಬೇಕು.

1) ಉಮಂಗ್ ಆ್ಯಪ್‌‌ ಓಪನ್ ಮಾಡಿಕೊಳ್ಳಿ

2) ಉಮಂಗ್ ಆ್ಯಪ್‌‌ನಲ್ಲಿ ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್ 2025 ಎಂಬ ಆಯ್ಕೆ ಸೆಲೆಕ್ಟ್ ಮಾಡಬೇಕು

3) ಅಗತ್ಯ ಲಾಗಿನ್ ಕ್ರೆಡೆನ್ಶಿಯಲ್‌ಗಳನ್ನು ನಮೂದಿಸಬೇಕು. ಅಂದರೆ ರೋಲ್ ನಂಬರ್ ಮತ್ತು ಜನ್ಮದಿನಾಂಕವನ್ನು ನಮೂದಿಸಬೇಕು.

4) ಸಿಬಿಎಸ್‌ಇ12ನೇ ತರಗತಿ ಪರೀಕ್ಷೆಯ ಅಂಕಪಟ್ಟಿ ಲಭ್ಯವಿರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ

5) ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಅಂಕಪಟ್ಟಿಯ ಪಿಡಿಎಫ್‌ ಕಾಪಿಯನ್ನು ಒಂದೆಡೆ ಸೇವ್ ಮಾಡಿಟ್ಟುಕೊಳ್ಳಿ. ಅದೇ ರೀತಿ ಅದನ್ನು ಮುದ್ರಿಸಿ ಭವಿಷ್ಯದ ಅಗತ್ಯಕ್ಕೆ ತೆಗೆದಿಟ್ಟುಕೊಳ್ಳಿ

ಸಿಬಿಎಸ್‌ಇ ಫಲಿತಾಂಶ 2025ದ ಅಧಿಕೃತ ವೆಬ್‌ಸೈಟ್‌ಗಳು

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಮೂರು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಲಿದೆ. ಅವುಗಳು ಹೀಗಿವೆ-

(1) cbse.nic.in (2) cbseresults.gov.in (3) digilocker.gov.in

12ನೇ ತರಗತಿ ರಿಸಲ್ಟ್ ನೋಡುವುದಕ್ಕೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ನೋಡುವುಕ್ಕಾಗಿ ಶಾಲಾ ಕೋಡ್ ಮತ್ತು ರೋಲ್ ನಂಬರ್‌ ನಮೂದಿಸಿ. ಗೊತ್ತಿಲ್ಲದೇ ಇದ್ದರೆ ಹಾಲ್‌ಟಿಕೆಟ್ ಅಥವಾ ಅಡ್ಮಿಟ್ ಕಾರ್ಡ್ ನೋಡಿ. ಫಲಿತಾಂಶ ನೋಡಲು ಹೀಗೆ ಮಾಡಿ

ಅಧಿಕೃತ ವೆಬ್‌ಸೈಟ್‌ಗಳಾದ cbse.gov.in ಅಥವಾ cbseresults.nic.in ಭೇಟಿ ನೀಡಿ. ಅದರಲ್ಲಿ ಸಿಬಿಎಸ್‌ಇ12ನೇ ತರಗತಿ ರಿಸಲ್ಟ್ 2025 ಲಿಂಕ್ ಹುಡುಕಿ, ಅದನ್ನು ಕ್ಲಿಕ್ ಮಾಡಿ.

ನಿಮ್ಮ ಸಿಬಿಎಸ್‌ಇ ಬೋರ್ಡ್ ಎಕ್ಸಾಂ ರೋಲ್ ನಂಬರ್, ಸ್ಕೂಲ್ ಕೋಡ್ ಮತ್ತು ಜನ್ಮದಿನಾಂಕ ನಮೂದಿಸಿ. ಇಷ್ಟಾದ ಬಳಿಕ ನಿಮ್ಮ ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್ ಪರದೆ ಮೇಲೆ ಕಾಣಿಸುತ್ತದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.