Central Bank Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 266 ಹುದ್ದೆಗೆ ಅರ್ಜಿ ಆಹ್ವಾನ, ಫೆಬ್ರವರಿ 9 ಕಡೆ ದಿನ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫೆಬ್ರವರಿ 9 ಒಳಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ದೇಶದ ಪ್ರಮುಖ ನಗರಗಳಲ್ಲಿನ ತನ್ನ ಕಚೇರಿಗಳಲ್ಲಿರುವ 266 ಮ್ಯಾನೇಜ್ಮೆಂಟ್ ಗ್ರೇಡ್ ಹುದ್ದೆಗೆ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು 2025 ರ ಫೆಬ್ರವರಿ 09 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹುದ್ದೆಗಳಿಗೆ ಮಾರ್ಚ್ ತಿಂಗಳಲ್ಲಿ ಆಯ್ಕೆ ಪರೀಕ್ಷೆಗಳು ನಡೆಯಲಿವೆ. ನಂತರ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರವೇಶ ಪರೀಕ್ಷೆ ಅಂಕ ಹಾಗೂ ಸಂದರ್ಶನದ ಅಂಕ ಆಧರಿಸಿ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಜನವರಿ 21ರ ಮಂಗಳವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.
ಸೆಂಟ್ರಲ್ ಬ್ಯಾಂಕ್ ಇಂಡಿಯಾವು ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ 1 ಹುದ್ದೆಗೆ ಪದವೀಧರ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು 266 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ 123, ತಮಿಳುನಾಡಿನ ಚೆನ್ನೈನಲ್ಲಿ 58, ಈಶಾನ್ಯ ರಾಜ್ಯ ಅಸ್ಸಾಂನ ಗುವಾಹಟಿಯಲ್ಲಿ 43 ಹುದ್ದೆ ಹಾಗೂ ತೆಲಂಗಾಣದ ಹೈದೆರಾಬಾದ್‌ನಲ್ಲಿ 42 ಹುದ್ದೆಗಳಿಗೆ ನೇಮಕಾತಿಗೆ ಅವಕಾಶಗಳಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸ್ ಮಾಡಿರುವವರಿಗೆ ಆದ್ಯತೆ ಸಿಗಲಿದೆ. ಯಾವುದೇ ಹುದ್ದೆಗೆ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಲು ಅವಕಾಶ ಮಾಡಿ ಕೊಡಲಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು ಎನ್ನುವುದು ಕಡ್ಡಾಯ ನಿಯಮಾಗಳು
ಒಬಿಸಿ ವರ್ಗದವರು 35 ವರ್ಷದವರೆಗೆ, ಎಸ್‌ಸಿ, ಎಸ್‌ಟಿ ವರ್ಗದವರು 37 ವರ್ಷದವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.
ದಿನಾಂಕಗಳನ್ನು ಗಮನಿಸಿಕೊಳ್ಳಿ
ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 21-01-2025.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09-02-2025.
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 24-02-2025
ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ: 2025 ರ ಮಾರ್ಚ್.
ಸಂದರ್ಶನ ನಡೆಸುವ ಸಂಭಾವ್ಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟಿರಲಿದೆ
ಜನರಲ್ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ.850.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ರೂ.175.
ಅಪ್ಲಿಕೇಶನ್ ಶುಲ್ಕವನ್ನು ಅನ್‌ಲೈನ್ ಮೂಲಕವೇ, ಅರ್ಜಿಗೆ ನಿಗದಿತ ಕೊನೆ ದಿನಾಂಕದಂದೇ ಪಾವತಿಸಬೇಕು.
ಅರ್ಜಿ ಹೀಗೆ ಸಲ್ಲಿಸಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಈ ಹುದ್ದೆಗಳಿಗೆ ಐಬಿಪಿಎಸ್ ನೇಮಕ ಪ್ರಕ್ರಿಯೆ ನಡೆಸುತ್ತದೆ.
ಆದ್ದರಿಂದ ಐಬಿಪಿಎಸ್ ವೆಬ್‌ಪೋರ್ಟಲ್‌ನಲ್ಲೇ ಅರ್ಜಿ ಸಲ್ಲಿಸಬೇಕು. https://www.ibps.in ಮೂಲಕವೇ ಮಾಹಿತಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ https://www.centralbankofindia.co.in/en/recruitments ಕ್ಲಿಕ್ ಮಾಡಿ.
ಓಪನ್ ಆದ ವೆಬ್ ಪೇಜ್‌ನಲ್ಲಿ 'Click Here To New Registration' ಎಂದಿರುವಲ್ಲಿ ಕ್ಲಿಕ್ ಮಾಡಿ.
ನಂತರ ತೆರೆದ ವೆಬ್‌ಪೇಜ್‌ನಲ್ಲಿ ಮೊದಲು ಬೇಸಿಕ್ ಡೀಟೇಲ್ಸ್ ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
ಮತ್ತೆ ಲಾಗಿನ್ ಆಗುವ ಮೂಲಕ ಸವಿವರ ಮಾಹಿತಿ ನೀಡಿ ಅರ್ಜಿ ಹಾಕಿ ಸಬ್‌ಮಿಟ್ ಕೊಡಿ. ಆನಂತರ ಅರ್ಜಿಯನ್ನು ಮುದ್ರಿಸಿಕೊಟ್ಟುಕೊಳ್ಳಿ.
ಅಲ್ಲದೇ ಬ್ಯಾಂಕ್ ನೇಮಕಾತಿ ವಿಚಾರದಲ್ಲಿ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಅರ್ಜಿ ಸಲ್ಲಿಸಿದವರು ಗಮನಿಸಿಕೊಳ್ಳಿ.
