ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ; ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ; ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ; ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ ಮಾಡಲಾಗಿದೆ. ಎಕ್ಸ್‌ನಲ್ಲಿ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ಹಂಚಿಕೊಂಡಿದ್ದಾರೆ.

ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ
ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14 ರಂದು ರಜೆ ಘೋಷಣೆ

ಸಮಾನತೆ ಮತ್ತು ಸಂವಿಧಾನಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಗೌರವಿಸಲು ಸರ್ಕಾರ ಏಪ್ರಿಲ್ 14 ರಂದು ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. "ಸಂವಿಧಾನದ ಶಿಲ್ಪಿ, ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಅಂಬೇಡ್ಕರ್ ಅವರಿಗೆ ಗೌರವ ರೂಪವಾಗಿ ರಜೆ ನೀಡಲಾಗುತ್ತಿದೆ. ಈ ಕುರಿತು ಅಧಿಕೃತ ಮಾಹಿತಿ ಕೂಡ ಲಭ್ಯವಾಗಿದೆ. ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ರಜಾದಿನವನ್ನು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೂ ನೀಡಲಾಗುತ್ತದೆ:

ಕೈಗಾರಿಕಾ ಸಂಸ್ಥೆಗಳು: ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲಾ ಕೈಗಾರಿಕಾ ಸಂಸ್ಥೆಗಳು ಏಪ್ರಿಲ್ 14 ರಂದು ಮುಚ್ಚಲ್ಪಡುತ್ತವೆ.

ಸ್ವಾಯತ್ತ ಸಂಸ್ಥೆಗಳು: ಸ್ವಾಯತ್ತ ಸಂಸ್ಥೆಗಳು, ಕಚೇರಿಗಳು ಮತ್ತು ಅಧೀನ ಕಚೇರಿಗಳು ಸಹ ಏಪ್ರಿಲ್ 14 ರಂದು ರಜಾ ಹೊಂದಿರುತ್ತವೆ.

ಕೇಂದ್ರ ಸರ್ಕಾರದ ಕಲ್ಯಾಣ ಸಮಿತಿಗಳು: ಕೇಂದ್ರ ಸರ್ಕಾರದ ಕಲ್ಯಾಣ ಸಮಿತಿಗಳು ಮತ್ತು ಸಿಬ್ಬಂದಿ ವಿಭಾಗ (ಜೆಸಿಎಂ) ಏಪ್ರಿಲ್ 14 ರಂದು ಮುಚ್ಚಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಸಹ ಮಾಹಿತಿ ನೀಡಲಾಗಿದೆ, ಮತ್ತು ರಾಜ್ಯವಾರು ಸುತ್ತೋಲೆಗಳು ಬಾಕಿ ಉಳಿದಿರುವಾಗ ಬ್ಯಾಂಕುಗಳು ಏಪ್ರಿಲ್ 14 ರಂದು ಮುಚ್ಚಬಹುದು.

ಸಂವಿಧಾನ ಶಿಲ್ಪಿ ಹಾಗೂ ಸಮಾಜದಲ್ಲಿ ಸಮಾನತೆಯ ಹೊಸ ಯುಗಕ್ಕೆ ನಾಂದಿ ಹಾಡಿದ ಗೌರವಾನ್ವಿತ ಡಾ.ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದಂದು ರಜೆ ಇರುತ್ತದೆ. ಬಾಬಾ ಸಾಹೇಬರ ಸಮರ್ಪಿತ ಅನುಯಾಯಿಗಳಾದ ಮಾನ್ಯ ಪ್ರಧಾನಮಂತ್ರಿ ಶ್ರೀ. @ನರೇಂದ್ರ ಮೋದಿ ಈ ನಿರ್ಧಾರ ಕೈಗೊಳ್ಳುವ ಮೂಲಕ ರಾಷ್ಟ್ರದ ಭಾವನೆಗಳಿಗೆ ಗೌರವ ನೀಡಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Suma Gaonkar

eMail
Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.