ಸರ್ಕಾರಿ ರಜಾದಿನಗಳು 2025; ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ, ಯಾವಾಗೆಲ್ಲ ರಜೆ ಇದೆ, ಇಲ್ಲಿದೆ ಪೂರ್ಣ ವಿವರ
ಕೇಂದ್ರ ಸರ್ಕಾರ 2025ನೇ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಡ್ಡಾಯ ರಜಾದಿನಗಳು ಮತ್ತು ಐಚ್ಛಿಕ ರಜಾದಿನಗಳ ವಿವರ ಇದೆ. ಮುಂಚಿತವಾಗಿ ರಜಾದಿನಗಳ ಕಾರ್ಯಕ್ರಮಗಳನ್ನು ಯೋಜಿಸುವವರಿಗೆ ಇದು ಅನುಕೂಲಕರವಾಗಿದ್ದು ಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಕೇಂದ್ರ ಸರ್ಕಾರ ಈಗಾಗಲೇ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ, ಎರಡು ವಿಧದ ರಜಾದಿನಗಳ ವಿವರ ಅಧಿಸೂಚನೆಯಲ್ಲಿದೆ. ಮೊದಲನೇಯದು ಕಡ್ಡಾಯ ಅಥವಾ ಗಜೆಟೆಡ್ ರಜೆಯಾದರೆ, ಇನ್ನೊಂದು ನಿರ್ಬಂಧಿತ ರಜೆ. ಈ ರಜೆಗಳ ಪಟ್ಟಿಯಲ್ಲಿ ಧಾರ್ಮಿಕ ಹಬ್ಬ, ರಾಷ್ಟ್ರೀಯ ಹಬ್ಬಗಳ ದಿನಗಳೂ ಸೇರಿಕೊಂಡಿವೆ. ದೆಹಲಿ/ನವದೆಹಲಿಯ ಹೊರಗೆ ಇರುವ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳು 12 ಐಚ್ಛಿಕ ರಜಾದಿನಗಳಲ್ಲಿ ಮೂರು ರಜಾದಿನಗಳನ್ನು ಆಯ್ಕೆ ಮಾಡುವುದರ ಜೊತೆಗೆ ಕಡ್ಡಾಯ ರಜಾದಿನಗಳನ್ನು ಹೊಂದಿರಲಿವೆ.
ಗಜೆಟ್ ರಜಾದಿನಗಳು 2025
1. ಗಣರಾಜ್ಯೋತ್ಸವ, 2. ಸ್ವಾತಂತ್ರ್ಯ ದಿನ, 3. ಗಾಂಧಿ ಜಯಂತಿ, 4. ಬುದ್ಧ ಪೂರ್ಣಿಮೆ, 5. ಕ್ರಿಸ್‌ಮಸ್, 6. ದಸರಾ (ವಿಜಯ ದಶಮಿ) 7. ದೀಪಾವಳಿ (ದೀಪಾವಳಿ) 8. ಶುಭ ಶುಕ್ರವಾರ 9. ಗುರುನಾನಕರ ಜನ್ಮದಿನ 10. ಇದುಲ್ ಫಿತ್ರ್ 11. ಇದುಲ್ ಜುಹಾ 12. ಮಹಾವೀರ ಜಯಂತಿ 13. ಮೊಹಮ್ಮದ್ 14. ಪ್ರವಾದಿ ಮೊಹಮ್ಮದ್ ಅವರ (ಐಡಿ-ಇ-ಮಿಲಾದ್)
2025ರ ಗಜೆಟೆಡ್ ರಜಾದಿನಗಳು
ದಿನಾಂಕ (ವಾರ) | ರಜೆ |
---|---|
ಜನವರಿ 26 (ಭಾನುವಾರ) | ಗಣರಾಜ್ಯೋತ್ಸವ |
ಫೆಬ್ರವರು 26 (ಬುಧವಾರ) | ಮಹಾ ಶಿವರಾತ್ರಿ |
ಮಾರ್ಚ್ 14 (ಶುಕ್ರವಾರ) | ಹೋಳಿ |
ಮಾರ್ಚ್ 31 (ಸೋಮವಾರ) | ಈದ್-ಉಲ್-ಫಿತರ್ |
ಏಪ್ರಿಲ್ 10 (ಗುರುವಾರ) | ಮಹಾವೀರ ಜಯಂತಿ |
ಏಪ್ರಿಲ್ 18 (ಶುಕ್ರವಾರ) | ಗುಡ್‌ಫ್ರೈಡೇ |
ಮೇ 12 (ಸೋಮವಾರ) | ಬುದ್ಧ ಪೂರ್ಣಿಮ |
ಜೂನ್ 7 (ಶನಿವಾರ) | ಬಕ್ರೀದ್ |
ಜುಲೈ 6 (ಭಾನುವಾರ) | ಮೊಹರಂ |
ಆಗಸ್ಟ್ 15 (ಶುಕ್ರವಾರ) | ಸ್ವಾತಂತ್ರ್ಯ ದಿನ |
ಆಗಸ್ಟ್ 16 (ಶನಿವಾರ) | ಕೃಷ್ಣ ಜನ್ಮಾಷ್ಠಮಿ |
ಸೆಪ್ಟೆಂಬರ್ 5 (ಶುಕ್ರವಾರ) | ಮಿಲಾದ್ ಉನ್ ನಬಿ |
ಅಕ್ಟೋಬರ್ 2 (ಶುಕ್ರವಾರ) | ಗಾಂಧಿ ಜಯಂತಿ |
ಅಕ್ಟೋಬರ್ 2 (ಶುಕ್ರವಾರ) | ದಸರಾ |
ಅಕ್ಟೋಬರ್ 20 (ಸೋಮವಾರ) | ದೀಪಾವಳಿ |
ನವೆಂಬರ್ 5 (ಬುಧವಾರ) | ಗುರು ನಾನಕ್ ಜಯಂತಿ |
ಡಿಸೆಂಬರ್ 25 (ಗುರುವಾರ) | ಕ್ರಿಸ್‌ಮಸ್ |
ಐಚ್ಛಿಕ ರಜಾದಿನಗಳು 2025
1. ದಸರಾಕ್ಕೆ ಹೆಚ್ಚುವರಿ ದಿನ 2. ಹೋಳಿ 3. ಜನ್ಮಾಷ್ಟಮಿ (ವೈಷ್ಣವಿ) 4. ರಾಮ ನವಮಿ 5. ಮಹಾ ಶಿವರಾತ್ರಿ 6. ಗಣೇಶ ಚತುರ್ಥಿ / ವಿನಾಯಕ ಚತುರ್ಥಿ 7. ಮಕರ ಸಂಕ್ರಾಂತಿ 8. ರಥಯಾತ್ರೆ 9. ಓಣಂ 10 ಪೊಂಗಲ್ 11. ಶ್ರೀ ಪಂಚಮಿ / ಬಸಂತ್ ಪಂಚಮಿ 12. ವಿಷು / ಬೈಶಾಖಿ / ವೈಶಾಖಾದಿ / ಭಾಗ್ ಬಿಹು / ಮಾಶಾದಿ ಉಗಾದಿ / ಚೈತ್ರ ಶುಕ್ಲಾಡಿ / ಚೇಟಿ ಚಂದ್ / ಗುಡಿ ಪದವ / 1 ನೇ ನವರಾತ್ರ ಐನ ರೋಜ್/ಛತ್‌ಪೂಜಾ, ಕರ್ವಾ ಚೌತ್ ಇವೆ. ಪ್ರಾದೇಶಿಕ ಹಬ್ಬಗಳಿಗೂ ಸರ್ಕಾರ ಐಚ್ಛಿಕ ರಜೆ ಘೋಷಿಸಿದೆ.
ಐಚ್ಛಿಕ ರಜಾದಿನಗಳು 2025
ದಿನಾಂಕ / ವಾರ | ರಜೆ |
---|---|
ಜನವರಿ 1 (ಬುಧವಾರ) | ಹೊಸ ವರ್ಷದ ಆಚರಣೆ |
ಜನವರಿ 6 (ಸೋಮವಾರ) | ಗುರು ಗೋಬಿಂದ್ ಸಿಂಗ್ ಜಯಂತಿ |
ಜನವರಿ 14 (ಮಂಗಳವಾರ) | ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹು |
ಫೆಬ್ರವರಿ 2 (ಭಾನುವಾರ) | ಬಸಂತ್ ಪಂಚಮಿ |
ಫೆಬ್ರವರಿ 12 (ಬುಧವಾರ) | ಗುರುರವಿ ದಾಸ್ ಜಯಂತಿ |
ಫೆಬ್ರವರಿ 19 (ಬುಧವಾರ) | ಶಿವಾಜಿ ಜಯಂತಿ |
ಫೆಬ್ರವರಿ 23 (ಭಾನುವಾರ) | ಸ್ವಾಮಿ ದಯಾನಂದ ಸರಸ್ವತಿ ಜಯಂತಿ |
ಮಾರ್ಚ್ 13 (ಗುರುವಾರ) | ಹೋಳಿ ದಹನ ದಿನ |
ಮಾರ್ಚ್ 14 (ಶುಕ್ರವಾರ) | ಡೋಲ್‌ಯಾತ್ರ |
ಏಪ್ರಿಲ್ 16 (ಭಾನುವಾರ) | ರಾಮ ನವಮಿ |
ಆಗಸ್ಟ್ 15 (ಶುಕ್ರವಾರ) | ಜನ್ಮಾಷ್ಠಮಿ |
ಆಗಸ್ಟ್ 27 (ಬುಧವಾರ) | ಗಣೇಶ ಚತುರ್ಥಿ |
ಸೆಪ್ಟೆಂಬರ್ 5 (ಬುಧವಾರ) | ಓಣಂ |
ಸೆಪ್ಟೆಂಬರ್ 29 (ಮಂಗಳವಾರ) | ದಸರಾ |
ಅಕ್ಟೋಬರ್ 1 (ಬುಧವಾರ) | ದಸರಾ ಮಹಾನವಮಿ |
ಅಕ್ಟೋಬರ್ 7 (ಮಂಗಳವಾರ) | ವಾಲ್ಮೀಕಿ ಜಯಂತಿ |
ಅಕ್ಟೋಬರ್ 10 (ಶುಕ್ರವಾರ) | ಕರ್ವಾ ಚೌಥ್ |
ಅಕ್ಟೋಬರ್ 20 (ಸೋಮವಾರ) | ನರಕ ಚತುರ್ದಶಿ |
ಅಕ್ಟೋಬರ್ 22 (ಬುಧವಾರ) | ಗೋವರ್ಧನ ಪೂಜೆ |
ಅಕ್ಟೋಬರ್ 23 (ಗುರುವಾರ) | ಭಾಯಿ ದುಜಾ |
ಅಕ್ಟೋಬರ್ 28 (ಮಂಗಳವಾರ) | ಛತ್ ಪೂಜಾ |
ನವೆಂಬರ್ 24 (ಸೋಮವಾರ) | ಗುರು ತೇಜ್ ಬಹದ್ಧೂರ್ ಜಯಂತಿ |
ಡಿಸೆಂಬರ್ 24 (ಬುಧವಾರ) | ಕ್ರಿಸ್ಮಸ್ ಸಂಜೆ |