Children’s Day at ICC Qatar: ಕತಾರ್ ಐಸಿಸಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ; ಫೋಟೋ ವರದಿ ಇಲ್ಲಿದೆ
Children’s Day at Qatar ICC: ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಇದರ ಸಚಿತ್ರ ವರದಿ ಇಲ್ಲಿದೆ.
(1 / 7)
ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಪಾಲಕರು.
(2 / 7)
ಭಾರತದ ರಾಯಭಾರ ಕಚೇರಿ (ಕಾನ್ಸುಲರ್ ಮತ್ತು ಕಮ್ಯೂನಿಟಿ ಅಫೇರ್ಸ್)ಯ ಫಸ್ಟ್ ಸೆಕ್ರೆಟರಿ, ಐಸಿಸಿಯ ಸಮನ್ವಯ ಅಧಿಕಾರಿ ಕ್ಸೇವಿಯರ್ ಧನರಾಜ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಕತಾರ್ ಮತ್ತು ಭಾರತದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಮೇಲಿನ ಫೋಟೋದಲ್ಲಿ ನೃತ್ಯ ಮಾಡಿದ ಮಕ್ಕಳ ತಂಡ ಮತ್ತು ಗಣ್ಯರು.
(3 / 7)
ಮಕ್ಕಳ ಮುಗ್ದತೆ, ಸತ್ಯಸಂದತೆ, ಲವಲವಿಕೆ ಎಲ್ಲ ವಯಸ್ಸಿನವರಿಗೂ ಮಾದರಿ. ಸದಾ ಮಕ್ಕಳ ಮನಸ್ಸು ಹೊಂದಿದ್ದರೆ ಬದುಕು ಸುಂದರವಾಗಿರುತ್ತದೆ ಎಂದು ಕ್ಸೇವಿಯರ್ ಧನರಾಜ್ ಹೇಳಿದರು. ಮೇಲಿನ ಫೋಟೋದಲ್ಲಿ ನೃತ್ಯ ಮಾಡಿದ ಮಕ್ಕಳ ತಂಡ ಮತ್ತು ಗಣ್ಯರು.
(4 / 7)
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಸಿಯ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ತಂಡದ ಹುಮ್ಮಸ್ಸು, ಲವಲವಿಕೆಯನ್ನು ಪ್ರಶಂಸಿದರು.
(5 / 7)
ಗೌರವ ಅತಿಥಿಯಾಗಿ ಪಾಲ್ಗೊಂಡ ಲೋಯೋಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಪ್ರಮೋದ್ ಕುಮಾರ್, ಮಕ್ಕಳನ್ನು ಒತ್ತಡದಲ್ಲಿ ಬೆಳೆಸಬಾರದು. ಅವರನ್ನು ಅವರಷ್ಟಕ್ಕೆ ಬಿಟ್ಟು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
(6 / 7)
ಭಾರತೀಯ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಐಸಿಸಿಯ ಚಟುವಟಿಕೆ ಮತ್ತು ಶಿಕ್ಷಣದ ಸಮನ್ವಯಕಾರ್ತಿ ಕಮಲಾ ಠಾಕೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತರ ಗ್ಯಾಲರಿಗಳು