China-Taiwan Conflict: 24 ಗಂಟೆಗಳಲ್ಲಿ 39 ಯುದ್ಧ ವಿಮಾನಗಳು, 3 ಯುದ್ಧ ನೌಕೆಗಳನ್ನು ತೈವಾನ್ ಕಡೆಗೆ ತಿರುಗಿಸಿದ ಚೀನಾ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China-taiwan Conflict: 24 ಗಂಟೆಗಳಲ್ಲಿ 39 ಯುದ್ಧ ವಿಮಾನಗಳು, 3 ಯುದ್ಧ ನೌಕೆಗಳನ್ನು ತೈವಾನ್ ಕಡೆಗೆ ತಿರುಗಿಸಿದ ಚೀನಾ!

China-Taiwan Conflict: 24 ಗಂಟೆಗಳಲ್ಲಿ 39 ಯುದ್ಧ ವಿಮಾನಗಳು, 3 ಯುದ್ಧ ನೌಕೆಗಳನ್ನು ತೈವಾನ್ ಕಡೆಗೆ ತಿರುಗಿಸಿದ ಚೀನಾ!

ಚೀನಾದ ಸೇನೆಯು ಕೇವಲ 24 ಗಂಟೆಗಳ ಅವಧಿಯಲ್ಲಿ, 39 ಯುದ್ಧ ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ತೈವಾನ್‌ನತ್ತ ರವಾನಿಸಿದೆ. ಈ ಕುರಿತು ಮಾಹಿತಿ ನೀಡಿರುವ ತೈವಾನ್‌ ರಕ್ಷಣಾ ಸಚಿವಾಲಯ, ಚೀನಾದ ಈ ನಡೆ ತೈವಾನ್ ಜಲಸಂಧಿಯಲ್ಲಿ ಮತ್ತೆ ಎಚ್ಚರಿಕೆಯ ಕರೆಗಂಟೆಯನ್ನು ಮೊಳಗಿಸಿದೆ ಎಂದು ಹೇಳಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (REUTERS)

ತೈಪೆ: ಭಾರತದೊಂದಿಗೆ ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ ಬಳಿಯ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಕಿರಿಕ್‌ ಮಾಡಿಕೊಂಡ ಚೀನಾ, ಇದೀಗ ಮತ್ತೆ ತನ್ನ ಗಮನವನ್ನು ತೈವಾನ್‌ ಕಡೆಗೆ ತಿರುಗಿಸಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಗೆ ಕಿರುಕುಳ ನೀಡುವ ತನ್ನ ವಿಫಲ ಯತ್ನವನ್ನು ಮುಚ್ಚಿಕೊಳ್ಳಲು, ಚೀನಾ ಇದೀಗ ತೈವಾನ್‌ಗೆ ಕಿರುಕುಳ ನೀಡುವ ಮೂಲಕ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರ ನಡೆಸಿದೆ.

ಇದಕ್ಕೆ ಪುಷ್ಠಿ ಎಂಬಂತೆ ಚೀನಾದ ಸೇನೆಯು ಕೇವಲ 24 ಗಂಟೆಗಳ ಅವಧಿಯಲ್ಲಿ, 39 ಯುದ್ಧ ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ತೈವಾನ್‌ನತ್ತ ರವಾನಿಸಿದೆ.

ಈ ಕುರಿತು ಮಾಹಿತಿ ನೀಡಿರುವ ತೈವಾನ್‌ ರಕ್ಷಣಾ ಸಚಿವಾಲಯ, ಚೀನಾದ ಈ ನಡೆ ತೈವಾನ್ ಜಲಸಂಧಿಯಲ್ಲಿ ಮತ್ತೆ ಎಚ್ಚರಿಕೆಯ ಕರೆಗಂಟೆಯನ್ನು ಮೊಳಗಿಸಿದೆ ಎಂದು ಹೇಳಿದೆ.

ಸ್ವಯಂ ಆಡಳಿತಕ್ಕೆ ಒಳಪಟ್ಟಿರುವ ತೈವಾನ್‌ ತನಗೆ ಸೇರಿದ್ದು ಎಂದು ಹೇಳಿಕೊಳ್ಳುವ ಚೀನಾ, ತೈವಾನ್‌ಗೆ ಮಿಲಿಟರಿ ಕಿರುಕುಳ ನೀಡುವುದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿಸಿದೆ. ಇದೀಗ ಕೇವಲ 24 ಗಂಟೆಗಳ ಅವಧಿಯಲ್ಲಿ, ಚೀನಾವು ತನ್ನ 39 ಯುದ್ಧ ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ತೈವಾನ್‌ನತ್ತ ರವಾನಿಸಿದೆ.

ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಪ್ರಕಾರ, ಬುಧವಾರ ಮತ್ತು ಗುರುವಾರದ ಬೆಳಗಿನ ಜಾವ 30 ಚೀನಿ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯ ಮಧ್ಯಭಾಗವನ್ನು ದಾಟಿದವು. ಅಲ್ಲದೇ ಮೂರೂ ಯುದ್ಧನೌಕೆಗಳೂ ಕೂಡ ತೈವಾನ್‌ ಜಲಸಂಧಿಯ ಸಮೀಪ ಕಾಣಿಸಿಕೊಂಡಿವೆ.

ತೈವಾನ್ ಒದಗಿಸಿದ ಹಾರಾಟದ ಮಾದರಿಗಳ ರೇಖಾಚಿತ್ರದ ಪ್ರಕಾರ, ಚೀನಿ ಯುದ್ಧ ವಿಮಾನಗಳು ದ್ವೀಪದ ನೈಋತ್ಯಕ್ಕೆ ಹಾರಿವೆ. ಬಳಿಕ ಆಗ್ನೇಯ ಭಾಗಕ್ಕೆ ತಿರುಗಿ ಮರಳಿ ತಮ್ಮ ಮೂಲ ನೆಲೆಯನ್ನು ತಲುಪಿವೆ. ಇದು ತೈವಾನ್‌ಗೆ ಕಿರುಕುಳ ನೀಡಲೆಂದೇ ಚೀನಾ ಮಾಡಿದ ಮಿಲಿಟರಿ ಕವಾಯತು ಎಂದು ವಿಶ್ಲೇಷಿಸಲಾಗಿದೆ.

ಈ ಯುದ್ಧ ವಿಮಾನಗಳ ಪೈಕಿ, 21 ಜೆ-16 ಫೈಟರ್ ಜೆಟ್‌ಗಳು, 4 ಎಚ್-6 ಬಾಂಬರ್‌ಗಳು ಮತ್ತು ಎರಡು ಆರಂಭಿಕ ಎಚ್ಚರಿಕೆ ನೀಡುವ ವಿಮಾನಗಳು ಸೇರಿವೆ ಎಂದು ತೈವಾನ್‌ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ತೈವಾನ್ ತನ್ನ ಭೂ-ಆಧಾರಿತ ಕ್ಷಿಪಣಿ ವ್ಯವಸ್ಥೆಗಳ ಮೂಲಕ ಮತ್ತು ತನ್ನದೇ ಆದ ನೌಕಾಪಡೆಯ ಹಡಗುಗಳ ಮೂಲಕ, ಚೀನಾದ ಮಿಲಿಟರಿ ಚಲನವಲನಗಳ ಮೇಲೆ ನಿಗಾ ಇರಿಸಿದೆ.

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ, ಚೀನಾದ ಮಿಲಿಟರಿ ಕಳೆದ ಆಗಸ್ಟ್‌ನಲ್ಲಿ ತೈವಾನ್‌ ಗಡಿ ಸಮೀಪ ದೊಡ್ಡ ಮಿಲಿಟರಿ ವ್ಯಾಯಾಮಗಳನ್ನು ನಡೆಸಿತ್ತು.

ವಿದೇಶಿ ರಾಷ್ಟ್ರದ ಪ್ರತಿನಿಧಿಗಳು ತನ್ನ ಅನುಮತಿ ಇಲ್ಲದೇ ತೈವಾನ್ ದ್ವೀಪಕ್ಕೆ ಭೇಟಿ ನೀಡುವುದು, ತೈವಾನ್ ವಾಸ್ತವಿಕ ಮಾನ್ಯತೆ ಮತ್ತು ತನ್ನ ಸಾರ್ವಭೌಮತ್ವದ‌ ಹಕ್ಕಿಗೆ ಸವಾಲು ಎಂದು ಚೀನಾ ಪರಿಗಣಿಸುತ್ತದೆ.

ಇಂದಿನ ಪ್ರಮುಖ ಸುದ್ದಿ

Omicron BF.7 Cases in India: ಭಾರತದಲ್ಲಿ ಘಾತಕ ವೈರಾಣುವಿನ ನಾಲ್ಕು ಪ್ರಕರಣ ಪತ್ತೆ: ಕಠಿಣ ನಿರ್ಬಂಧಗಳು ಬೀಳಲಿವೆಯಾ ಮತ್ತೆ?

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚೀನಾದಲ್ಲಿ ಭಾರೀ ಕೋವಿಡ್ ಉಲ್ಬಣಕ್ಕೆ ಚಾಲನೆ ನೀಡುತ್ತಿರುವ, ಓಮಿಕ್ರಾನ್ BF.7 ಉಪ-ವೇರಿಯಂಟ್‌ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಗುಜರಾತ್ ಮತ್ತು ಒಡಿಶಾದಲ್ಲಿಈ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಈ ರೋಗಿಗಳು ಸೂಕ್ತ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.