ಕನ್ನಡ ಸುದ್ದಿ  /  Nation And-world  /  Chinese Woman Becomes Graveyard Keeper For A Perfect Work-life Balance

Chinese Woman Graveyard Job: ಡಿಗ್ರಿ ಮುಗಿದ ತಕ್ಷಣ ಸ್ಮಶಾನ ಕಾಯೋ ಕೆಲಸ ಆಯ್ಕೆ ಮಾಡಿಕೊಂಡ ಚೀನಿ ಯುವತಿ, ಇದು ಬೆಸ್ಟ್‌ ಜಾಬ್‌ ಎಂದಳು ಟಾನ್

ಈಕೆಗೆ ಬೆಳಗ್ಗೆ 8:30 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಇರುತ್ತದೆ. ಪ್ರತಿದಿನ ಎರಡು ಗಂಟೆ ಲಂಚ್‌ ಬ್ರೇಕ್‌ ಕೂಡ ಇರುತ್ತದೆ.

Chinese Woman Graveyard Job: ಡಿಗ್ರಿ ಮುಗಿದ ತಕ್ಷಣ ಸ್ಮಶಾನ ಕಾಯೋ ಕೆಲಸ ಆಯ್ಕೆ ಮಾಡಿಕೊಂಡ ಚೀನಿ ಯುವತಿ, ಇದು ಬೆಸ್ಟ್‌ ಜಾಬ್‌ ಎಂದಳು ಟಾನ್
Chinese Woman Graveyard Job: ಡಿಗ್ರಿ ಮುಗಿದ ತಕ್ಷಣ ಸ್ಮಶಾನ ಕಾಯೋ ಕೆಲಸ ಆಯ್ಕೆ ಮಾಡಿಕೊಂಡ ಚೀನಿ ಯುವತಿ, ಇದು ಬೆಸ್ಟ್‌ ಜಾಬ್‌ ಎಂದಳು ಟಾನ್ (theworkersrights)

ನವದೆಹಲಿ: ನಮ್ಮಲ್ಲಿ ಬಹುತೇಕರು ಏನು ಕೆಲಸ ಮಾಡಲು ತಿಳಿದಿಲ್ಲ ಎಂದಾದರೆ "ಸ್ಮಶಾನ ಕಾಯಲು ಹೋಗುʼʼ ಎನ್ನುವುದು ವಾಡಿಕೆ. ಅಂದರೆ, ಆ ಉದ್ಯೋಗಕ್ಕೆ ಇಂತಹ ವಿದ್ಯಾರ್ಹತೆ ಬೇಕಿಲ್ಲ, ಏನೂ ಗೊತ್ತಿಲ್ಲದವರೂ ಸ್ಮಶಾನ ಕಾಯಬಹುದು ಎನ್ನುವುದು ನಂಬಿಕೆ. ಆದರೆ, ಚೀನಾದ ಯುವತಿಯೊಬ್ಬಳು ಸ್ಮಶಾನ ಕಾಯುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾಳೆ.

ಅಂದಹಾಗೆ, ಈಕೆ ಅನಕ್ಷರಸ್ಥೆ ಅಲ್ಲ. ಪದವಿ ಮುಗಿಸಿದ ಇವಳಿಗೆ ಇತರೆ ಉದ್ಯೋಗಕ್ಕಿಂತ ಸ್ಮಶಾನ ಕಾಯೋದೆ ವಾಸಿ ಎನಿಸಿದೆ. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಈಗ ಉದ್ಯೋಗ ಮತ್ತು ಜೀವನದ ನಡುವೆ ಸಮತೋಲನ ದೊರಕುವುದು ಕಷ್ಟ. ಆದರೆ, ಚೀನಾದ ಟಾನ್‌ ಎಂಬ ಯುವತಿ ಆಯ್ಕೆ ಮಾಡಿಕೊಂಡ ಉದ್ಯೋಗ ಸ್ಮಶಾನ ಕಾಯುವುದು. ಆ ಉದ್ಯೋಗ ನೆಮ್ಮದಿಯಿಂದ ಕೂಡಿದ್ದು, ವರ್ಕ್‌ ಲೈಫ್‌ ಬ್ಯಾಲೆನ್ಸ್‌ಗೆ ಪೂರಕವಾಗಿದೆ ಎನ್ನುತ್ತಾಳೆ.

ಈಕೆಗೆ ಬೆಳಗ್ಗೆ 8:30 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಇರುತ್ತದೆ. ಪ್ರತಿದಿನ ಎರಡು ಗಂಟೆ ಲಂಚ್‌ ಬ್ರೇಕ್‌ ಕೂಡ ಇರುತ್ತದೆ. ಕೆಲಸ ಮಾಡುವ ಸ್ಥಳವೂ ಪ್ರಶಾಂತವಾಗಿದೆ. ಯಾವುದೇ ಆಫೀಸ್‌ ರಾಜಕೀಯ ಇಲ್ಲ. ಸೀನಿಯರ್‌ಗಳ ಕಿರಿಕಿರಿ ಇಲ್ಲ. ಮ್ಯಾನೇಜರ್‌ಗಳ ಒತ್ತಡವಿಲ್ಲ. ಟಾರ್ಗೆಟ್‌ ಇಲ್ಲ. ಹೀಗಾಗಿ, ಇದು ನನ್ನ ತೃಪ್ತಿದಾಯಕ ಉದ್ಯೋಗ ಎಂದು ಆಕೆ ಹೇಳುತ್ತಾಳೆ.

"ಇದು ಸರಳ ಮತ್ತು ಆಸಕ್ತಿದಾಯಕ ಕೆಲಸ. ಇಲ್ಲಿ ನಾಯಿ ಬೆಕ್ಕುಗಳು ಇವೆ. ಇಂಟರ್‌ನೆಟ್‌ ಕೂಡ ಇದೆ. ನಾನು ಇಲ್ಲಿರುವುದರಿಂದ ನನ್ನನ್ನು ಸ್ಮಶಾನ ಕಾಯುವವಳು ಎನ್ನಲಾಗುತ್ತದೆ. ಆದರೆ, ನನ್ನ ಇತರೆ ಉದ್ಯೋಗಕ್ಕಿಂತ ಹೆಚ್ಚು ಖುಷಿ ಕೊಟ್ಟ ಜಾಬ್‌ ಇದುʼʼ ಎಂದು ಟಾಂಗ್‌ ಹೇಳಿದ್ದಾಳೆ.

ಈಕೆ ಕೇವಲ ಸ್ಮಶಾನ ಕಾಯುವ ಕೆಲಸ ಮಾತ್ರ ಮಾಡುತ್ತಿಲ್ಲ. ಇವಳು ಸೋಷಿಯಲ್‌ ಮೀಡಿಯಾದಲ್ಲಿಯೂ ಫೇಮಸ್‌, ಸೋಷಿಯಲ್‌ ಮೀಡಿಯಾಗಳಲ್ಲಿ ಶಾರ್ಟ್‌ ವಿಡಿಯೋಗಳನ್ನು ಹಾಕುತ್ತಿರುತ್ತಾಳೆ. ಹೀಗಾಗಿ, ಈಕೆ ಸೋಷಿಯಲ್‌ ಮೀಡಿಯಾದಲ್ಲಿಯೂ ಫೇಮಸ್‌.

ಹಳೆಯ ಕಾಲದಲ್ಲಿ ಸ್ಮಶಾನ ಕಾಯುವ ಉದ್ಯೋಗವೆಂದರೆ ಭಯ ಹುಟ್ಟಿಸುವಂತದ್ದು. ಆದರೆ, ಈ ಆಧುನಿಕ ಕಾಲದಲ್ಲಿಸ್ಮಶಾನವೂ ಮಾಡರ್ನ್‌ ಆಗಿದೆ. ಹೀಗಾಗಿ, ನಿಶ್ಚಿಂತೆಯಿಂದ ಸ್ಮಶಾನದಲ್ಲಿ ಕೆಲಸ ಮಾಡಬಹುದು ಎಂದು ಆಕೆಯ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

"ಈಕೆಯ ಉದ್ಯೋಗ ನನಗೂ ಇಷ್ಟ. ಇಲ್ಲಿ ಯಾವುದೇ ಆಫೀಸ್‌ ಪಾಲಿಟಿಕ್ಸ್‌ ಇರುವುದಿಲ್ಲ. ಹೆಣಗಳು ಏನೂ ಕಿರಿಕಿರಿ ಮಾಡುವುದಿಲ್ಲʼʼ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಡಿಗ್ರಿ ಮುಗಿಸಿದ ಯುವತಿಯೊಬ್ಬಳು ಸ್ಮಶಾನ ಕಾಯುವ ಉದ್ಯೋಗದಿಂದ ವಿಶ್ವದ್ಯಾಂತ ಫೇಮಸ್‌ ಆಗುತ್ತಿದ್ದಾಳೆ. ಆಕೆಯೂ ತನ್ನ ಕೆಲಸವನ್ನು ಎಂಜಾಯ್‌ ಮಾಡುತ್ತ "ಸ್ಮಶಾನ ಕಾಯೋ ಖುಷಿʼʼ ಹಂಚಿಕೊಳ್ಳುತ್ತಿದ್ದಾಳೆ

IPL_Entry_Point