CISF Constable Jobs: ಸಿಐಎಸ್‌ಎಫ್‌ನ 1124 ಕಾನ್‌ಸ್ಟೆಬಲ್ ಹುದ್ದೆಗೆ ನೇಮಕಾತಿ, ನೋಂದಣಿ ಶುರು, ಅರ್ಜಿ ಸಲ್ಲಿಸಲು ನೇರ ಲಿಂಕ್
CISF Constable Jobs: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ತನ್ನ ಅಧಿಕೃತ ವೆಬ್‌ಸೈಟ್ ಮೂಲಕ 1124 ಕಾನ್‌ಸ್ಟೆಬಲ್/ಡ್ರೈವರ್ ಪೋಸ್ಟ್‌ಗಳಿಗಾಗಿ ನೋಂದಣಿ ಪ್ರಕ್ರಿಯೆ ಶುರುಮಾಡಿದೆ. ಅರ್ಜಿ ಸಲ್ಲಿಸಲು ನೇರ ಲಿಂಕ್ ಮತ್ತು ಇತರೆ ವಿವರ ಇಲ್ಲಿದೆ.

CISF Constable Jobs: ಸಿಐಎಸ್‌ಎಫ್‌ನ 1124 ಕಾನ್‌ಸ್ಟೆಬಲ್/ ಚಾಲಕ ಹುದ್ದೆಗಳ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾನ್‌ಸ್ಟೆಬಲ್/ಡ್ರೈವರ್ ಪೋಸ್ಟ್‌ಗಳಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಾವು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಅಧಿಕೃತ ವೆಬ್‌ಸೈಟ್ cisfrectt.cisf.gov.in ನಲ್ಲಿ ಲಾಗಿನ್ ಆಗಿ ಸಲ್ಲಿಸಬಹುದು.
ಸಿಐಎಸ್‌ಎಫ್‌ನ 1124 ಕಾನ್‌ಸ್ಟೆಬಲ್ ಹುದ್ದೆಗೆ ನೇಮಕಾತಿ, ನೋಂದಣಿ ಶುರು
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ನಲ್ಲಿರುವ 1124 ಕಾನ್‌ಸ್ಟೆಬಲ್/ ಚಾಲಕ ಹುದ್ದೆಗೆ ನೇಮಕಾತಿ ಶುರುವಾಗಿದೆ. ಅರ್ಹ ಅಭ್ಯರ್ಥಿಗಳು 2025 ರ ಮಾರ್ಚ್ 4ರ ಒಳಗೆ ಅರ್ಜಿ ನಮೂನೆ ಭರ್ತಿ ಮಾಡಿ ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಈಗಾಗಲೇ ಈ ಪ್ರಕ್ರಿಯೆ ಶುರುವಾಗಿದೆ. ಈ ನೇಮಕ ಪ್ರಕ್ರಿಯೆಯಲ್ಲಿ ಭೌತಿಕ ದಕ್ಷತೆ ಪರೀಕ್ಷೆ (ಪಿಇಟಿ)/ ಭೌತಿಕ ಪ್ರಮಾಣಿತ ಪರೀಕ್ಷೆ (ಪಿಎಸ್‌ಟಿ)/ ದಸ್ತಾವೇಜನ್ನು/ ವ್ಯಾಪಾರ ಪರೀಕ್ಷೆ/ ಲಿಖಿತ ಪರೀಕ್ಷೆ/ ವೈದ್ಯಕೀಯ ಪರೀಕ್ಷೆ ಕೂಡ ಒಳಗೊಂಡಿದೆ. ಇವನ್ನೆಲ್ಲ ನಿಗದಿಪಡಿಸಲಾಗುತ್ತದೆ ಮತ್ತು ನಡೆಸಲಾಗುತ್ತದೆ ಎಂದು ಸಿಐಎಸ್‌ಎಫ್ ಪ್ರಕಟಣೆ ತಿಳಿಸಿದೆ.
ಒಎಂಆರ್ / ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಮೂಲಗಳೊಂದಿಗೆ ಅಗತ್ಯವಾದ ಅರ್ಹತಾ ಪ್ರಮಾಣಪತ್ರಗಳು/ ದಾಖಲೆಗಳ ಪರಿಶೀಲನೆಯನ್ನು ಪಿಇಟಿ/ ಪಿಎಸ್‌ಟಿ, ದಸ್ತಾವೇಜು ಮತ್ತು ಟ್ರೇಡ್ ಟೆಸ್ಟ್ ಸಮಯದಲ್ಲಿ ಕೈಗೊಳ್ಳಲಾಗುವುದು ಎಂದು ಸಿಐಎಸ್‌ಎಫ್ ತಿಳಿಸಿದೆ.
ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಹುದ್ದೆ ನೇಮಕಾತಿ ಅರ್ಜಿ ಶುಲ್ಕ ಎಷ್ಟು
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ನಲ್ಲಿರುವ 1124 ಕಾನ್‌ಸ್ಟೆಬಲ್/ ಚಾಲಕ ಹುದ್ದೆಗಳಿಗೆ ನೇಮಕಾತಿ ಶುರುವಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ಕೆಟಗರಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂಪಾಯಿ ಪಾವತಿಸಬೇಕು. ಇನ್ನು, ಎಸ್‌ಸಿ/ ಎಸ್‌ಟಿ/ ಇಎಸ್‌ಎಂ ಕೆಟಗರಿಯ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸಿಐಎಸ್‌ಎಫ್ ಪ್ರಕಟಣೆಯಲ್ಲಿ ವಿವರಿಸಿದೆ.
ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ
ಸಿಐಎಸ್ಎಫ್‌ನಲ್ಲಿರುವ 1124 ಕಾನ್‌ಸ್ಟೆಬಲ್/ ಚಾಲಕ ಹುದ್ದೆಗಳಿಗೆ ನೇಮಕಾತಿ ಶುರುವಾಗಿದ್ದು, ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೀಗೆ-
1) ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ನ ಅಧಿಕೃತ ವೆಬ್‌ಸೈಟ್‌ಗೆ cisfrectt.cisf.gov.in ಹೋಗಬೆಕು.
2) ಹೋಮ್ ಪೇಜ್‌ನಲ್ಲಿ ಲಾಗಿನ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆದುಕೊಳ್ಳುತ್ತದೆ.
3) ಅಲ್ಲಿ ನ್ಯೂ ರಿಜಿಸ್ಟ್ರೇಷನ್ ಕ್ಲಿಕ್ ಮಾಡಬೇಕು. ಅದರಲ್ಲಿ ಕೇಳಿದ ವಿವರಗಳನ್ನು ಭರ್ತಿ ಮಾಡಿ, ಸಿಐಎಸ್‌ಎಫ್‌ನ ವೆಬ್‌ಸೈಟ್‌ನಲ್ಲಿ ಒಂದು ಅಕೌಂಟ್ ಕ್ರಿಯೇಟ್ ಮಾಡಬೇಕು. ಆಗ ಲಾಗಿನ್ ಇನ್ ಕ್ರೆಡೆನ್ಶಿಯಲ್ಸ್ ಸಿಗುತ್ತದೆ.
4) ನಂತರ ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿಕೊಂಡು ಲಾಗಿನ್ ಆಗಿ, ಅರ್ಜಿ ನಮೂನೆ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅದರ ವಿವರ ಒದಗಿಸಿ, ಭರ್ತಿ ಮಾಡಿದ ಅರ್ಜಿಯನ್ನು ಮರುಪರಿಶೀಲಿಸಿ ಸಬ್‌ಮಿಟ್ ಕೊಡಿ.
5) ಕನ್‌ಫರ್ಮೇಶನ್ ಪುಟವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಈ ಪ್ರತಿಯನ್ನು ಮುದ್ರಿಸಿ ಭವಿಷ್ಯದ ಅಗತ್ಯಕ್ಕಾಗಿ ಜೋಪಾನವಾಗಿ ಇಟ್ಟುಕೊಳ್ಳಿ
ಸಿಐಎಸ್ಎಫ್‌ನಲ್ಲಿರುವ 1124 ಕಾನ್‌ಸ್ಟೆಬಲ್/ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2025 ಮಾರ್ಚ್ 4 ಕೊನೇ ದಿನ ಎಂಬುದನ್ನು ಮರೆಯಬೇಡಿ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ https://rb.gy/qb0rko ಗಮನಿಸಬಹುದು.
ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ - https://cisfrectt.cisf.gov.in/index.php
