ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

12 ವರ್ಷಗಳ ಹಿಂದೆಯೇ 5 ಹಿಮನದಿಗಳನ್ನು ಕಳೆದುಕೊಂಡಿದ್ದ ವೆನೆಜುವೆಲಾಗೆ ಇದೀಗ ಹಂಬೋಲ್ಡ್ ಕೂಡ ಕೈತಪ್ಪಲಿದೆ. ಹೀಗಾಗಿ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ಎಂಬ ಅಪಕೀರ್ತಿಗೆ ಪಾತ್ರವಾಗುತ್ತಿದೆ.

ಹವಾಮಾನ ಬದಲಾವಣೆಯ ಪರಿಣಾಮವಾಗಿ ವೆನೆಜುವೆಲಾ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡಂತಾಗಿದೆ. ಹೀಗಾಗಿ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶವಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮವಾಗಿ ವೆನೆಜುವೆಲಾ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡಂತಾಗಿದೆ. ಹೀಗಾಗಿ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶವಾಗಿದೆ. (AFP)

ಕ್ಯಾರಕಸ್ (ವೆನೆಜುವೆಲಾ): ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಪ್ರಮುಖ ಸಂಸ್ಥೆಗಳು ಹಾಗೂ ದೇಶಗಳು ಪರಿಸರ ಸಂರಕ್ಷಣೆ ಕುರಿತು ಎಷ್ಟೇ ಜಾಗೃತಿ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಮನುಷ್ಯನ ದುರಾಸೆಯಿಂದ ಪರಿಸರ ಮಾಲಿನ್ಯವಾಗುತ್ತಲೇ (Environment Pollution) ಇದೆ. ಇದು ಹವಾಮಾನ ಬದಲಾವಣೆಗೆ (Climate Changes) ಪ್ರಮುಖ ಕಾರಣವಾಗಿದ್ದು, ಇದು ಪ್ರಪಂಚದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಇದರ ಮುಂದುವರಿದ ಭಾಗವಾಗಿ ವೆನೆಜುವೆಲಾ (Venezuela) ಅಪಾಯ ಮಟ್ಟಕ್ಕೆ ಬಂದು ನಿಂತಿದೆ. 2011 ರಲ್ಲೇ 5 ಹಿಮನದಿಗಳನ್ನು (Glaciers) ಕಳೆದುಕೊಂಡಿದ್ದ ವೆನೆಜುವೆಲಾಗೆ ಇದೀಗ ಉಳಿದಿರುವ ಏಕೈಕ ಹಿಮನದಿಯೂ ಕೊನೆಯ ಹಂತಕ್ಕೆ ಬಂದಿದ್ದು, ಕಣ್ಮುಂದೆಯೇ ಕರಗಿ ಹೋಗುತ್ತಿದೆ. ಹೀಗಾಗಿ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡು ಜಗತ್ತಿನ ಮೊದಲ ದೇಶ ಎಂಬ ಅಪಕೀರ್ತಿಗೆ ವೆನೆಜುವೆಲಾ (Venezuela Glaciers) ಪಾತ್ರವಾಗುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಹವಾಮಾನ ಬದಲಾವಣೆಯ ಪರಿಣಾಮವಾಗಿ ಈ ದೇಶದ ಕೊನೆಯ ಹಿಮನದಿಯೂ ಅಳಿವಿನಂಚಿಗೆ ಬಂದಿದೆ. ಲಾ ಕರೋನಾ ಎಂದು (La Corona Glacier) ಕರೆಯಲಾಗುವ ಹಂಬೋಲ್ಡ್ ಹಿಮನದಿ (Humboldt Glacier) ಉಳಿವಿಗಾಗಿ ಹೋರಾಡುವ ಸ್ಥಿತಿಗೆ ಬಂದಿದೆ. ಹೆಪ್ಪುಗಟ್ಟಿರುವ ಹಿಮಗಡ್ಡೆಗಳು ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿವೆ. ಇದನ್ನು ಐಸ್ ಕ್ಷೇತ್ರ ಅಂತ ಮರು ವ್ಯಾಖ್ಯಾನ ಮಾಡಲಾಗುತ್ತಿದೆ.

ಆಂಡಿಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೂನಿಯೊ ಸೀಸರ್ ಸೆಂಟೆನೊ ಅವರು ಈ ಬಗ್ಗೆ ಮಾತನಾಡಿ, ವೆನೆಜುವೆಲಾದಲ್ಲಿ ಹಿಮನದಿಗಳು ಅಸ್ತಿತ್ವದಲ್ಲಿ ಇಲ್ಲ. ಮೂಲ ಗಾತ್ರದಲ್ಲಿ ಕೇವಲ 0.4 ರಷ್ಟು ಮಾತ್ರ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಣ್ಮರೆಯಾಗುವ ಸ್ಥಿತಿಗೆ ತಲುಪಿರುವ ಲಾ ಕರೋನಾ ಹಿಮನದಿ 4.5 ಚದರ ಕಿಲೋಮೀಟರ್ (1.7 ಚದರ ಮೈಲುಗಳು) ವರೆಗೆ ಹರಡಿತ್ತು. ಆದರೆ ಈಗ 0.02 ಚದರ ಲಿಕೋಮೀಟರ್ (2 ಹೆಕ್ಟೇರ್‌) ಗಿಂತ ಕಡಿಮೆಯಾಗಿದೆ. ಇದು ಒಂದು ಹಿಮನದಿಯ ಕನಿಷ್ಠ ಗಾತ್ರದ ಅವಶ್ಯಕತೆಗಿಂತ ಕಡಿಮೆಯಾಗಿದೆ ಎಂದು ಸೆಂಟೊನೊ ಅವರು ವಿವರಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನಡೆಸಿರುವ ಸಂಶೋಧನೆಯ ಪ್ರಕಾರ, ವೆನೆಜುವೆಲಾದಲ್ಲಿ 1953 ರಿಂದ 2019ರ ವರೆಗೆ ಶೇಕಡಾ 98 ರಷ್ಟು ಹಿಮನದಿಯ ಕುಸಿತವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. 1998ರ ನಂತರ ಐಸ್ ಕರಗುವಿಕೆ ವೇಗವನ್ನು ಪಡೆದುಕೊಂಡಿದೆ. 2016 ರಿಂದ ವರ್ಷಕ್ಕೆ 17 ರಷ್ಟು ಗರಿಷ್ಠ ಮಟ್ಟದಲ್ಲಿ ಕುಸಿತವಾಗಿದೆ. ಪರಿಸರ ಸರಂಕ್ಷಣೆಗೆ ಪ್ರತಿಯೊಬ್ಬರು ಪಣ ತೊಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ತರಬೇಕಿದೆ. ಸಸಿಗಳನ್ನು ನೆಟ್ಟು ತಾಪಮಾವನ್ನು ಕಡಿಮೆ ಮಾಡಲು ಶ್ರಮಿಸಬೇಕಿದೆ.

IPL_Entry_Point

ವಿಭಾಗ