Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಡಿಸೆಂಬರ್‌ 18 ಕೊನೆದಿನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಡಿಸೆಂಬರ್‌ 18 ಕೊನೆದಿನ

Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಡಿಸೆಂಬರ್‌ 18 ಕೊನೆದಿನ

Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿಯಲ್ಲಿರುವ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (unsplash)

ಕೊಚ್ಚಿ: ಭಾರತ ಸರಕಾರದ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯದಡಿ ಬರುವ ತೆಂಗು ಅಭಿವೃದ್ಧಿ ಮಂಡಳಿ(Coconut Development Board )ಯು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ: ಒಟ್ಟು 77 ಫೀಲ್ಡ್‌ ಆಫೀಸರ್‌, ಡೆವಲಪ್‌ಮೆಂಟ್‌ ಆಫೀಸರ್‌, ಮಾಸ್‌ ಮೀಡಿಯಾ ಆಫಿಸರ್‌, ಡೈರೆಕ್ಟರ್‌, ಅಸಿಸ್ಟೆಂಟ್‌ ಡೈರೆಕ್ಟರ್‌ ಸೇರಿದಂತೆ ವಿವಿಧ ಹುದ್ದೆಗಳಿವೆ. ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 5, ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)-1, ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-1, ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-1, ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-1, ಸ್ಟ್ಯಾಟಿಸ್ಟಿಕಲ್ ಆಫೀಸರ್- 1, ಡೆವಲಪ್​ಮೆಂಟ್ ಆಫೀಸರ್- 10, ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)-2, ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)-1, ಮಾರ್ಕೆಟ್ ಪ್ರೊಮೋಷನ್ ಆಫೀಸರ್- 1, ಮಾಸ್​ ಮೀಡಿಯಾ ಆಫೀಸರ್- 1, ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 2 ಹುದ್ದೆಗಳಿವೆ.

ಸಬ್​ ಎಡಿಟರ್- 2, ಕೆಮಿಸ್ಟ್​-1, ಸ್ಟೆನೋಗ್ರಾಫರ್ ಗ್ರೇಡ್ II- 3, ಆಡಿಟರ್-1, ಪ್ರೋಗ್ರಾಮರ್-1, ಫುಡ್​ ಟೆಕ್ನಾಲಜಿಸ್ಟ್​-1, ಮೈಕ್ರೋಬಯಾಲಜಿಸ್ಟ್​-1, ಕಂಟೆಂಟ್ ರೈಟರ್ & ಜರ್ನಲಿಸ್ಟ್​-1, ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1, ಟೆಕ್ನಿಕಲ್ ಅಸಿಸ್ಟೆಂಟ್-5, ಫೀಲ್ಡ್​ ಆಫೀಸರ್-9, ಜೂನಿಯರ್ ಸ್ಟೆನೋಗ್ರಾಫರ್-7, ಹಿಂದಿ ಟೈಪಿಸ್ಟ್​-1, ಲೋವರ್ ಡಿವಿಶನ್ ಕ್ಲರ್ಕ್-14 ಮತ್ತು ಲ್ಯಾಬ್ ಅಸಿಸ್ಟೆಂಟ್-2 ಹುದ್ದೆಗಳಿವೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಡಿಸೆಂಬರ್ 18, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ವಿವಿಧ ಹುದ್ದೆಗಳಿಗೆ ತಕ್ಕಂತೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 19,900-2,08,700 ರೂ. ವೇತನ ಪಡೆಯಬಹುದು.

ವಿದ್ಯಾರ್ಹತೆ ಏನಿರಬೇಕು?

ಬಹುತೇಕ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಬಯಸಲಾಗಿದೆ. ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- ಸ್ನಾತಕೋತ್ತರ ಪದವಿ, ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ, ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-ಸ್ನಾತಕೋತ್ತರ ಪದವಿ, ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್), ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ, ಸ್ಟ್ಯಾಟಿಸ್ಟಿಕಲ್ ಆಫೀಸರ್- ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಬಯಸಲಾಗಿದೆ.

ಡೆವಲಪ್​ಮೆಂಟ್ ಆಫೀಸರ್- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ, ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)- ಫುಡ್​ ಪ್ರೊಸೆಸಿಂಗ್/ ಫುಡ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ, ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ, ಅಗ್ರಿಕಲ್ಚರಲ್ ಎಂಜಿನಿಯರಿಂಗ್/ಫುಡ್ ಪ್ರೊಸೆಸಿಂಗ್ ಎಂಜಿನಿಯರಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ, ಮಾರ್ಕೆಟ್ ಪ್ರೊಮೋಷನ್ ಆಫೀಸರ್- ಸ್ನಾತಕೋತ್ತರ ಪದವಿ, ಎಂಬಿಎ, ಮಾಸ್​ ಮೀಡಿಯಾ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- ಸ್ನಾತಕೋತ್ತರ ಪದವಿ, ಸಬ್​ ಎಡಿಟರ್- ಸೈನ್ಸ್​/ಅಗ್ರಿಕಲ್ಚರ್/ಹಾರ್ಟಿಕಲ್ಚರ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಮಿಸ್ಟ್​- ಸ್ನಾತಕೋತ್ತರ ಪದವಿ, ಸ್ಟೆನೋಗ್ರಾಫರ್ ಗ್ರೇಡ್ II- ಪದವಿ, ಆಡಿಟರ್-ಸಿಎ, ಕಾಸ್ಟ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ, ಪ್ರೋಗ್ರಾಮರ್- ಕಂಪ್ಯೂಟರ್ ಎಂಜಿನಿಯರಿಂಗ್​/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್/ ಐಟಿ/ ಸೈನ್ಸ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಫುಡ್​ ಟೆಕ್ನಾಲಜಿಸ್ಟ್​- ಫುಡ್​ ಟೆಕ್ನಾಲಜಿ/ ಫುಡ್ & ನ್ಯೂಟ್ರಿಶನ್​ನಲ್ಲಿ ಪದವಿ, ಫುಡ್​ ಪ್ರೊಸೆಸಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ ಮೈಕ್ರೋಬಯಾಲಜಿಸ್ಟ್​-ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದಿರಬೇಕು.

ಕಂಟೆಂಟ್ ರೈಟರ್ & ಜರ್ನಲಿಸ್ಟ್​- ಪದವಿ, ಸ್ನಾತಕೋತ್ತರ ಪದವಿ, ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ & ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಪದವಿ​, ಟೆಕ್ನಿಕಲ್ ಅಸಿಸ್ಟೆಂಟ್- ಪದವಿ, ಸ್ನಾತಕೋತ್ತರ ಪದವಿ, ಫೀಲ್ಡ್​ ಆಫೀಸರ್- ಪಿಯುಸಿ, ಜೂನಿಯರ್ ಸ್ಟೆನೋಗ್ರಾಫರ್-ಪದವಿ, ಹಿಂದಿ ಟೈಪಿಸ್ಟ್​-ಪಿಯುಸಿ, ಲೋವರ್ ಡಿವಿಶನ್ ಕ್ಲರ್ಕ್-ಪಿಯುಸಿ ಮತ್ತು ಲ್ಯಾಬ್ ಅಸಿಸ್ಟೆಂಟ್-ಪಿಯುಸಿ ವಿದ್ಯಾರ್ಹತೆ ಬಯಸಲಾಗಿದೆ.

ವಯೋಮಿತಿ ಎಷ್ಟು?

ವಿವಿಧ ಹುದ್ದೆಗಳಿಗೆ ತಕ್ಕಂತೆ 27 ವರ್ಷದಿಂದ 40 ವರ್ಷದವರೆಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಅರ್ಹ ಕೆಟಗರಿಗಳಿಗೆ ಸಡಿಲಿಕೆ ನೀಡಲಾಗುತ್ತದೆ. ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗುತ್ತದೆ. ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 40 ವರ್ಷ , ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- 40 ವರ್ಷ, ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)- 35 ವರ್ಷ, ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-35 ವರ್ಷ, ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಸ್ಟ್ಯಾಟಿಸ್ಟಿಕಲ್ ಆಫೀಸರ್, ಡೆವಲಪ್​ಮೆಂಟ್ ಆಫೀಸರ್, ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ), ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್), ಮಾರ್ಕೆಟ್ ಪ್ರೊಮೋಷನ್ ಆಫೀಸರ್, ಮಾಸ್​ ಮೀಡಿಯಾ ಆಫೀಸರ್, ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್, ಸಬ್​ ಎಡಿಟರ್, ಕೆಮಿಸ್ಟ್​, ಸ್ಟೆನೋಗ್ರಾಫರ್ ಗ್ರೇಡ್ II, ಆಡಿಟರ್, ಪ್ರೋಗ್ರಾಮರ್, ಫುಡ್​ ಟೆಕ್ನಾಲಜಿಸ್ಟ್​, ಮೈಕ್ರೋಬಯಾಲಜಿಸ್ಟ್​, ಕಂಟೆಂಟ್ ರೈಟರ್ & ಜರ್ನಲಿಸ್ಟ್​, ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇನ್ನುಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳಾಗಿವೆ.

ಅರ್ಜಿ ಶುಲ್ಕ ಎಷ್ಟು?

300 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಬಿಐ ಕಲೆಕ್ಟ್‌ ಮೂಲಕ ಶುಲ್ಕ ಪಾವತಿಸಬೇಕು. ಎಸ್​​ಸಿ/ಎಸ್​ಟಿ/PWD/ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಿಲ್ಲ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ಪಿಡಿಎಫ್‌ ಅಧಿಸೂಚನೆಯನ್ನು ಪರಿಶೀಲಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.