Budget 2025: ಕೇಂದ್ರ ಬಜೆಟ್ ದಿನವೇ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ, ನಗರವಾರು ಎಲ್‌ಪಿಜಿ ದರ ವಿವರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2025 ಮಂಡನೆ ಮಾಡುವ ದಿನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ 7 ರೂಪಾಯಿಯಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 6 ರೂಪಾಯಿ ಇಳಕೆಯಾಗಿದೆ. ಫೆಬ್ರವರಿ 1ರಿಂದ ಹೊಸ ದರ ಜಾರಿಗೆ ಬರಲಿದೆ. ಇದರಿಂದ ಹೋಟೆಲ್ ಸೇರಿದಂತೆ ಆತಿಥ್ಯ ವಲಯಕ್ಕೆ ಹೆಚ್ಚು ಪ್ರಯೋಜನವಾಗಲಿದೆ.

ಕೇಂದ್ರ ಬಜೆಟ್ 2024ರಂದು ಎಲ್‌ಪಿಜಿ ಗ್ಯಾಸ್ ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಮಾಸಿಕ ದರ ಪರಿಷ್ಕರಣೆ ಪದ್ಧತಿಯಡಿಯಲ್ಲಿ ಫೆಬ್ರವರಿ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 7 ರೂ.ಗಳಷ್ಟು ಕಡಿತಗೊಳಿಸಿವೆ. ಕೇಂದ್ರ ಬಜೆಟ್ 2025 ಮಂಡನೆ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿತ ಮಾಡಲಾಗಿದೆ.
ಹೊಸ ದರವು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಸಿಲಿಂಡರ್‌ಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ದೆಹಲಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 7 ರೂ.ಗಳಿಂದ 1,797 ರೂ.ಗಳಿಗೆ ಇಳಿಸಲಾಗಿದೆ. ಬೆಲೆ ಕಡಿತವು ತಮ್ಮ ದೈನಂದಿನ ಕಾರ್ಯಾಚರಣೆಗಳಿಗಾಗಿ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿರುವ ವ್ಯವಹಾರಗಳಿಗೆ ಪರಿಹಾರವನ್ನು ನೀಡುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇಂದು 1,874 ರೂಪಾಯ ಇದೆ. ನಿನ್ನೆಗೆ ಹೋಲಿಸಿದರೆ 6 ರೂಪಾಯಿ ಇಳಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ 47.5 ಕೆಜಿ ಸಿಲಿಂಡರ್ ದರ 15 ರೂಪಾಯಿಯಷ್ಟು ಕಡಿಮೆಯಾಗಿದೆ. ಮೆಟ್ರೋ ನಗರಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ ಎಂಬ ವಿವರ ಮುಂದೆ ನೀಡಲಾಗಿದೆ.
ಫೆಬ್ರವರಿ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ (ಇಂಡಿಯನ್ ಆಯಿಲ್) | ದರ |
---|---|
ನವದೆಹಲಿ | 1797 |
ಕೋಲ್ಕೊತ್ತಾ | 1907 |
ಮುಂಬೈ | 1749 |
ಚೆನ್ನೈ | 1959 |
ಬೆಂಗಳೂರು | 1874 |
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ
ಜಾಗತಿಕ ಕಚ್ಚಾ ತೈಲ ದರಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ಪ್ರತಿತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಲಾಗುತ್ತದೆ. ಇದರ ಭಾಗವಾಗಿ ಫೆಬ್ರವರಿ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಲಾಗಿದೆ.
ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಲಾಗಿದೆಯೇ?
ಜನರು ತಮ್ಮ ಮನೆಗಳಲ್ಲಿ ಬಳಸುವ ದೇಶೀಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಹೊಸ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳು ಇಂದು ಫೆಬ್ರವರಿ 1ರಿಂದ ಜಾರಿಗೆ ಬರುತ್ತವೆ. ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸುಮಾರು 19 ಕೆಜಿ ಇರುತ್ತದೆ. ದೇಶೀಯ ಎಲ್‌ಪಿಜಿ ಸಿಲಿಂಡರ್ ಸುಮಾರು 14.2 ಕೆಜಿ ತೂಗುತ್ತದೆ.
ಡಿಸೆಂಬರ್ 2024ರಲ್ಲಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರಗಳನ್ನು 62 ರೂಪಾಯಿಯಷ್ಟು ಹೆಚ್ಚಿಸಿವೆ. ಇಂಧನ ಬೆಲೆಗಳಲ್ಲಿ ಭಾರಿ ಏರಿಕೆಯ ಪರಿಣಾಮವು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಇತ್ಯಾದಿ ವ್ಯವಹಾರಗಳ ಮೇಲೆ ಪರಿಣಾಮ ಬೀರಿವೆ. ಆಹಾರ ದರಗಳನ್ನು ಹೆಚ್ಚಿಸುವ ಒತ್ತಡಕ್ಕೆ ಹೋಟೆಲ್‌ಗಳ ಸಿಲುಕಿದ್ದವು. ಸದ್ಯ 7/6 ರೂಪಾಯಿಯಷ್ಟು ಇಳಿಕೆಯಾಗಿರುವುದರಿಂದ ಆತಿಥ್ಯ ವಲಯಕ್ಕೆ ತುಸು ನಿರಾಳವಾಗಿರಬಹುದು..
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಕಡಿತದ ಪರಿಣಾಮ
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಕಡಿಮೆಯಾದರೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚು ಪ್ರಯೋಜನ ತರುತ್ತದೆ. ಅವುಗಳ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕರು ಎಲ್‌ಪಿಜಿ ಸಿಲಿಂಡರ್ ದರಗಳು ಕಡಿಮೆಯಾದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳನ್ನು ಅವಲಂಬಿಸಿ ಎಲ್‌ಪಿಜಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಕೇಂದ್ರ ಬಜೆಟ್ 2025
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025ರ ಘೋಷಣೆಗಳನ್ನು ಮಾಡಲಿದ್ದಾರೆ. ನಿರ್ಮಲಾ ಸೀತಾರಾಮನ್ ಇಂದು ತಮ್ಮ ಸತತ ಎಂಟನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. 2025ರ ಬಜೆಟ್ ತೆರಿಗೆ ಪಾವತಿದಾರರಿಗೆ ಉಪಯುಕ್ತವಾಗುವ ಘೋಷಣೆಗಳನ್ನು ಹೊಂದಿರುವ ನಿರೀಕ್ಷೆಯಿದೆ.

ವಿಭಾಗ