10 ಮತ್ತು 12ನೇ ತರಗತಿ ನಂತರ ಮುಂದೇನು; ಯಾವ ವಿಷಯದಲ್ಲಿ ಓದಿದರೆ ಯಾವೆಲ್ಲ ಉದ್ಯೋಗಾವಕಾಶ, ಡೌನ್‌ಲೋಡ್ ಮಾಡಿಕೊಳ್ಳಿ ಈ ಕೆರಿಯರ್ ಗೈಡ್ ಪಿಡಿಎಫ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  10 ಮತ್ತು 12ನೇ ತರಗತಿ ನಂತರ ಮುಂದೇನು; ಯಾವ ವಿಷಯದಲ್ಲಿ ಓದಿದರೆ ಯಾವೆಲ್ಲ ಉದ್ಯೋಗಾವಕಾಶ, ಡೌನ್‌ಲೋಡ್ ಮಾಡಿಕೊಳ್ಳಿ ಈ ಕೆರಿಯರ್ ಗೈಡ್ ಪಿಡಿಎಫ್

10 ಮತ್ತು 12ನೇ ತರಗತಿ ನಂತರ ಮುಂದೇನು; ಯಾವ ವಿಷಯದಲ್ಲಿ ಓದಿದರೆ ಯಾವೆಲ್ಲ ಉದ್ಯೋಗಾವಕಾಶ, ಡೌನ್‌ಲೋಡ್ ಮಾಡಿಕೊಳ್ಳಿ ಈ ಕೆರಿಯರ್ ಗೈಡ್ ಪಿಡಿಎಫ್

ಕೆರಿಯರ್ ಗೈಡ್: ವಿದ್ಯಾರ್ಥಿ ಜೀವನದಲ್ಲಿ ಇದು ನಿರ್ಣಾಯಕ ಕಾಲಘಟ್ಟ. 10ನೇ ಮತ್ತು 12ನೇ ತರಗತಿ ನಂತರ ಮುಂದೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುವ ಹೊತ್ತು. ವಿದ್ಯಾರ್ಥಿಗಳಿಗಷ್ಟೇ ಅಲ್ಲ ಅವರ ಪಾಲಕರಿಗೂ ನೆರವಾಗಬಲ್ಲ 2025ರ ಕೆರಿಯರ್ ಗೈಡ್ ಅನ್ನು ಸಿಬಿಎಸ್‌ಇ ಬಿಡುಗಡೆ ಮಾಡಿದೆ. ಈಗಲೇ ಕೆರಿಯರ್ ಗೈಡ್ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ.

10 ಮತ್ತು 12ನೇ ತರಗತಿ ನಂತರ ಮುಂದೇನು; ಸಿಬಿಎಸ್‌ಇ ಇದಕ್ಕೆ ಸಂಬಂಧಿಸಿದಂತೆ ಕೆರಿಯರ್ ಗೈಡ್ ಬಿಡುಗಡೆ ಮಾಡಿದೆ.
10 ಮತ್ತು 12ನೇ ತರಗತಿ ನಂತರ ಮುಂದೇನು; ಸಿಬಿಎಸ್‌ಇ ಇದಕ್ಕೆ ಸಂಬಂಧಿಸಿದಂತೆ ಕೆರಿಯರ್ ಗೈಡ್ ಬಿಡುಗಡೆ ಮಾಡಿದೆ.

ಕೆರಿಯರ್ ಗೈಡ್: ಭಾರತದ ಉದ್ದಗಲಕ್ಕೂ ಈಗ 10ನೇ ಮತ್ತು 12ನೇ ತರಗತಿ ಪ್ರಕಟವಾಗುತ್ತಿರುವ ಹೊತ್ತು. ವಿದ್ಯಾರ್ಥಿ ಜೀವನದ ಮಟ್ಟಿಗೆ ಇದು ನಿರ್ಣಾಯಕ ಕಾಲಘಟ್ಟವಾಗಿದ್ದು, 10ನೇ ಮತ್ತು 12ನೇ ತರಗತಿ ನಂತರ ಮುಂದೇನು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಕೆಲವರು ಈಗಾಗಲೇ ತಾವೇನಾಗಬೇಕು ಎಂದು ನಿರ್ಧರಿಸಿರುತ್ತಾರೆ. ಇನ್ನೂ ಹಲವರಿಗೆ ಗೊಂದಲ. ಪಿಯುಸಿ ಅಥವಾ 11 ಮತ್ತು 12ನೇ ತರಗತಿಯಲ್ಲಿ ಯಾವ ವಿಷಯ ಓದಿದರೆ ಮುಂದೆ ಯಾವೆಲ್ಲ ರೀತಿ ಉದ್ಯೋಗಾವಕಾಶ ಸಿಗಬಹುದು ಎಂಬ ಆತಂಕ. ಮಾತೆತ್ತಿದರೆ ಎಂಬಿಬಿಎಸ್, ಬಿಎಎಂಎಸ್‌, ಎಂಜಿನಿಯರಿಂಗ್ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಹೇಳುವುದನ್ನು ಕೇಳುತ್ತಿರುತ್ತೇವೆ. ಹಾಗಾದರೆ, ಉದ್ಯೋಗಾವಕಾಶ ಅಂದರೆ ಇಷ್ಟೇನಾ, ಈ ಮೂರು ಕ್ಷೇತ್ರ ಬಿಟ್ಟರೆ ಬೇರೆ ಉದ್ಯೋಗವೇ ಇಲ್ಲವೇ? ಎಂಬ ಕಳವಳವೂ ಅನೇಕರಲ್ಲಿದೆ. ಅಂತಹ ಕಳವಳ ಬೇಕಾಗಿಲ್ಲ. ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಇದಕ್ಕಾಗಿಯೇ ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025 (Parents Handbook Careers 2025) ಅನ್ನು ಬಿಡುಗಡೆ ಮಾಡಿದೆ.

ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025; ಇದರಲ್ಲಿ ಏನೇನಿದೆ

ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಬಿಡುಗಡೆ ಮಾಡಿರುವ “ಪೇರೆಂಟ್ಸ್ ಹ್ಯಾಂಡ್‌ಬುಕ್ ಕೆರಿಯರ್ಸ್ 2025” ಎಂಬ ಕೆರಿಯರ್ ಗೈಡ್‌ 22 ಉನ್ನತ ಶಿಕ್ಷಣ ವಿಭಾಗಗಳು ಹಾಗೂ ರ‍್ಯಾಂಕಿಂಗ್ ಸಹಿತ ಕಾಲೇಜುಗಳ ಪಟ್ಟಿ, ಅಡ್ಮಿಷನ್ ಪ್ರಕ್ರಿಯೆ, ವೆಬ್‌ಸೈಟ್ ವಿಳಾಸ ಸೇರಿ ಬಹುತೇಕ ಮಾಹಿತಿಗಳನ್ನು ಒಳಗೊಂಡಿದೆ. ಅಂದ ಹಾಗೆ ಇವಿಷ್ಟೂ ನ್ಯೂ ಎಜುಕೇಶನ್ ಪಾಲಿಸಿ (ಎನ್‌ಇಪಿ 2020) ಆಧರಿಸಿದ ಇತ್ತೀಚಿನ ಮಾಹಿತಿಯೂ ಇದರಲ್ಲಿದೆ.

ಈ ಕೆರಿಯರ್ ಗೈಡ್ ಒಟ್ಟು 72 ಪುಟಗಳದ್ದಾಗಿದ್ದು, ಕೆರಿಯರ್‌ ಕೌನ್ಸೆಲಿಂಗ್ ಕುರಿತು ಪದೇಪದೆ ಕೇಳುವ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರದೊಂದಿಗೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ನೆರವಾಗುತ್ತದೆ. ಮುಂದಿನ ಪುಟಗಳಲ್ಲಿ ಕೃಷಿ ಮತ್ತು ಪೂರಕ ವಿಜ್ಞಾನ, ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್, ಆರ್ಟ್ಸ್, ಹ್ಯುಮಾನಿಟೀಸ್ ಮತ್ತು ಸೋಷಿಯಲ್ ಸೈನ್ಸ್, ಬಿಜಿನೆಸ್ ಮ್ಯಾನೇಜ್‌ಮೆಂಟ್, ಕಾಮರ್ಸ್ ಮತ್ತು ಫೈನಾನ್ಸ್, ಕಂಪ್ಯೂಟರ್ ಅಪ್ಲಿಕೇಶನ್ಸ್ ಮ್ತು ಸೈನ್ಸ್, ಡಿಫೆನ್ಸ್ ಫೋರ್ಸಸ್ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ - ಎನ್‌ಡಿಎ), ಡಿಸೈ್ ಮತ್ತು ಫೈನ್ ಆರ್ಟ್ಸ್, ಎಕನಾಮಿಕ್ಸ್, ಎಂಜಿನಿಯರಿಗ್ ಆಂಡ್ ಟೆಕ್ನಾಲಜಿ, ಹೊಟೇಲ್, ಹಾಸ್ಪಿಟಾಲಿಟಿ, ಟೂರಿಸಂ ಮ್ಯಾನೇಜ್‌ಮೆಂಟ್, ಕಾನೂನು, ಲಿಬರಲ್ ಸ್ಟಡೀಸ್, ಮಾಸ್ ಕಮ್ಯೂನಿಕೇಶನ್, ಮೆಡಿಸಿನ್ ಮತ್ತು ಸರ್ಜರ, ಪ್ಯಾರಾಮೆಡಿಕಲ್ ಮತ್ತು ಪೂರಕ ಆರೋಗ್ಯ ವಿಜ್ಞಾನ, ಪರ್ಫಾಮಿಂಗ್ ಆರ್ಟ್ಸ್, ಪ್ಯೂರ್ ಸೈನ್ಸ್, ರಿಹ್ಯಾಬಿಲಿಟೇಶನ್ ಸೈನ್ಸ್, ಕ್ರೀಡೆ ಮತ್ತು ದೈಹಿಕ ಶಿಕ್ಷಣ, ವೆಟರ್‌ನರಿ ಮತ್ತು ಫಿಶರಿ ಸೈನ್ಸ್, ವೊಕೇಶನಲ್ ಸ್ಟಡೀಸ್ ಸೇರಿ 22 ಉನ್ನತ ಶಿಕ್ಷಣ ವಿಭಾಗಗಳ ವಿವರ ಇದೆ.

ಕೆರಿಯರ್ ಗೈಡ್‌ನಲ್ಲಿ ಬೇರೇನಿದೆ ಮಾಹಿತಿ

ಉನ್ನತ ಶಿಕ್ಷಣ ವಿಭಾಗಗಳು ಹಾಗೂ ಆ ಕೋರ್ಸ್‌ಗಳು ಲಭ್ಯವಿರುವ ಕಾಲೇಜುಗಳ ವಿವರ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳೇನು ಎಂಬುದರ ವಿವರ ಕೆರಿಯರ್‌ ಗೈಡ್‌ನಲ್ಲಿದೆ. ಇದಲ್ಲದೆ, ವಿವಿಧ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದಕ್ಕೆ ಅಗತ್ಯವಾದ ಸಾಮಾನ್ಯ ಪಠ್ಯಕ್ರಮದ ವಿವರಗಳೂ ಇವೆ.

ಇನ್ನು ನ್ಯಾಷನಲ್ ಎಜುಕೇಶನ್ ಪಾಲಿಸಿ (ಎನ್‌ಇಪಿ) 2020 ಅಳವಡಿಕೆ ಕಾರಣ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲಿ ಆಗಿರುವ ಬದಲಾವಣೆ ವಿವರ ಇದೆ. ಮುಂದೆ ಪದೇಪದೇ ಕೇಳುವ ಪ್ರಶ್ನೆಗಳ ವಿವರಗಳೂ ಇವೆ. ಮುಖ್ಯವಾಗಿ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಅನೇಕ ಸಂದೇಹಗಳಿಗೆ ಇದು ಉತ್ತರ ಒದಗಿಸುವ ಪ್ರಯತ್ನ ಮಾಡಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.