Manmohan Singh Net Worth: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒಟ್ಟು ಆಸ್ತಿ ಮೌಲ್ಯ ಎಷ್ಟು? ದೊಡ್ಡ ಹುದ್ದೆಯಲ್ಲಿದ್ದರೂ, ಇವರ ಸಂಪತ್ತು ಇಷ್ಟೇ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Manmohan Singh Net Worth: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒಟ್ಟು ಆಸ್ತಿ ಮೌಲ್ಯ ಎಷ್ಟು? ದೊಡ್ಡ ಹುದ್ದೆಯಲ್ಲಿದ್ದರೂ, ಇವರ ಸಂಪತ್ತು ಇಷ್ಟೇ!

Manmohan Singh Net Worth: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒಟ್ಟು ಆಸ್ತಿ ಮೌಲ್ಯ ಎಷ್ಟು? ದೊಡ್ಡ ಹುದ್ದೆಯಲ್ಲಿದ್ದರೂ, ಇವರ ಸಂಪತ್ತು ಇಷ್ಟೇ!

ಪ್ರಧಾನಿ ಹುದ್ದೆ ಅಲಂಕರಿಸುವುದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿಯೂ ಮನಮೋಹನ್‌ ಸಿಂಗ್‌ ಸೇವೆ ಸಲ್ಲಿಸಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. ಇಷ್ಟೆಲ್ಲ ಹುದ್ದೆ ಅಲಂಕರಿಸಿದ್ದ ಡಾ. ಮನಮೋಹನ್ ಸಿಂಗ್ ಅವರ ಬಳಿ ಇದ್ದ ಆಸ್ತಿ ಮೌಲ್ಯ ಎಷ್ಟು?

ಮನಮೋಹನ್ ಸಿಂಗ್ ಒಟ್ಟು ಆಸ್ತಿ ಮೌಲ್ಯ ಎಷ್ಟು?
ಮನಮೋಹನ್ ಸಿಂಗ್ ಒಟ್ಟು ಆಸ್ತಿ ಮೌಲ್ಯ ಎಷ್ಟು?

Manmohan Singh Net Worth: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ (26 ಡಿಸೆಂಬರ್ 2024) ರಾತ್ರಿ 9.51 ರ ಸುಮಾರಿಗೆ ನಿಧನರಾಗಿದ್ದಾರೆ. 92ರ ಇಳಿ ವಯಸ್ಸಿನ ಸಿಂಗ್‌ ಅವರನ್ನು ಅನಾರೋಗ್ಯದ ಕಾರಣ ರಾತ್ರಿ 8 ಗಂಟೆ ಸುಮಾರಿಗೆ ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ವಯಸ್ಸಹಜ ಖಾಯಿಲೆಯಿಂದ ಬಳಲುತ್ತಿದ್ದರಿಂದ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

2004ರಲ್ಲಿ ಯುಪಿಎ ಸರಕಾರದಲ್ಲಿ ಪ್ರಥಮ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಡಾ. ಮನಮನೋಹನ್ ಸಿಂಗ್, 2014ರ ಜೂನ್ ವರೆಗೆ ದೇಶದ ಪ್ರಧಾನಿಯಾಗಿದ್ದರು. ಡಾ. ಸಿಂಗ್ ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಭಾರತೀಯ ರಿಸರ್ವ್ ಬ್ಯಾಂಕ್‌ನ 15ನೇ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. ಇಷ್ಟೆಲ್ಲ ಹುದ್ದೆ ಅಲಂಕರಿಸಿದ್ದ ಡಾ.ಮನಮೋಹನ್ ಸಿಂಗ್ ಅವರ ಬಳಿ ಇದ್ದ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಉತ್ತರ. 

ಮನಮೋಹನ್ ಸಿಂಗ್ ಆಸ್ತಿ ಮೌಲ್ಯ ಎಷ್ಟು?

2018ರಲ್ಲಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಮನಮೋಹನ್ ಸಿಂಗ್ ತಮ್ಮ ಒಟ್ಟು ಆಸ್ತಿ 15 ಕೋಟಿ 77 ಲಕ್ಷ 52 ಸಾವಿರದ 837 ರೂಪಾಯಿ ಎಂದು ಘೋಷಿಸಿದ್ದರು. ಇದಾದ ಬಳಿಕ ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡುವಾಗ ಅಂದರೆ, 2018- 19ರಲ್ಲಿ ಅವರ ಒಟ್ಟು ಗಳಿಕೆ 89 ಲಕ್ಷ 42 ಸಾವಿರ 390 ರೂಪಾಯಿಗೆ ಏರಿಕೆಯಾಗಿತ್ತು. ಮನಮೋಹನ್ ಸಿಂಗ್ ಅವರ ನಿವ್ವಳ ಮೌಲ್ಯಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನು ಅವರು ನೀಡಿದ ಅಫಿಡವಿಟ್ ಆಧಾರದ ಮೇಲೆ ಬರೆಯಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಇದಕ್ಕೂ ಮೊದಲು 2013ರಲ್ಲಿ ಪ್ರಧಾನಿಯಾಗಿದ್ದ ವೇಳೆ ತಮ್ಮ ಆಸ್ತಿಯನ್ನು ಮನಮೋಹನ್‌ ಸಿಂಗ್‌ ಬಹಿರಂಗಪಡಿಸಿದ್ದರು. ಅಂದಿನ ಅಫಿಡವಿಟ್ ಪ್ರಕಾರ, ಒಟ್ಟು ನಿವ್ವಳ ಮೌಲ್ಯ 10.73 ಕೋಟಿ ರೂಪಾಯಿ. ಚಂಡೀಗಢ ಮತ್ತು ದೆಹಲಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದು, ಮಾರುತಿ 800 ಕಾರ್‌ ಇದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದರು. 2012ರಲ್ಲಿ 150.80 ಗ್ರಾಂ ಚಿನ್ನಾಭರಣವಿದೆ ಎಂದೂ ಮಾಹಿತಿ ನೀಡಿದ್ದರು ಸಿಂಗ್‌.

ಮನಮೋಹನ್ ಸಿಂಗ್ ಕುಟುಂಬದಲ್ಲಿ ಯಾರಿದ್ದಾರೆ?

ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26 ರಂದು ಪಂಜಾಬ್‌ನ ಗಾಹ್‌ನಲ್ಲಿ ಜನಿಸಿದರು. ಅವರ ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮೃತ್ ಕೌರ್. ಭಾರತ- ಪಾಕ್‌ ವಿಭಜನೆಯ ಸಮಯದಲ್ಲಿ, ಅವರ ಕುಟುಂಬವು ಭಾರತದ ಅಮೃತಸರಕ್ಕೆ ಸ್ಥಳಾಂತರಗೊಂಡಿತು. 1958ರಲ್ಲಿ ಮನಮೋಹನ್ ಸಿಂಗ್ ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಮನಮೋಹನ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅಮೃತ್ ಸಿಂಗ್, ದಮನ್ ಸಿಂಗ್ ಮತ್ತು ಉಪಿಂದರ್ ಸಿಂಗ್.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.