White T-shirt Movement: ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  White T-shirt Movement: ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು?

White T-shirt Movement: ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು?

ಬಿಳಿ ಟಿ ಶರ್ಟ್ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಯುವಕರಿಗೆ ಮನವಿ ಮಾಡಿದ್ದಾರೆ. ಹಾಗಿದ್ದರೆ ಈ ವೈಟ್‌ ಟಿ ಶರ್ಟ್‌ ಚಳವಳಿ ಎಂದರೇನು ಎಂಬುದರ ಕುರಿತು ನೋಡೋಣ.

ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು? (PTI/File Photo)
ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು? (PTI/File Photo)

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ದೇಶದಲ್ಲಿ ಆಯ್ದ ಕೆಲವು ಬಂಡವಾಳಶಾಹಿಗಳನ್ನು ಮಾತ್ರ ಶ್ರೀಮಂತಗೊಳಿಸುವಲ್ಲಿ ನಿರತವಾಗಿದೆ. ಹೀಗಾಗಿ ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಹಿಂದೆ ಭಾರತ್‌ ಜೋಡೋ ಯಾತ್ರೆ ಮೂಲಕ ಗಮನ ಸೆಳೆದಿದ್ದ ಕಾಂಗ್ರೆಸ್‌ ನಾಯಕ, ಜನವರಿ 19ರ ಭಾನುವಾರ ಹೊಸ ಚಳವಳಿಯೊಂದಕ್ಕೆ ಚಾಲನೆ ನೀಡಿದ್ದಾರೆ. ಅದುವೇ 'ಬಿಳಿ ಟಿ-ಶರ್ಟ್ ಚಳವಳಿ'.

ಸರ್ಕಾರವು ಬಡವರತ್ತ ತಲೆಯೂ ಹಾಕುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹೀಗಾಗಿ ವೈಟ್‌ ಟಿ-ಶರ್ಟ್‌ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಮ್ಮ 'ಕಾರ್ಮಿಕ ವರ್ಗದ ಸಹೋದ್ಯೋಗಿಗಳು' ಮತ್ತು ಯುವಕರಲ್ಲಿ ಕಾಂಗ್ರೆಸ್‌ ನಾಯಕ ಮನವಿ ಮಾಡಿದ್ದಾರೆ.

ಚಳವಳಿಯಲ್ಲಿ ಭಾಗವಹಿಸಲು ಬಯಸುವವರು 9999812024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು ಅಥವಾ ಕಾಂಗ್ರೆಸ್‌ ಕೊಟ್ಟಿರುವ ಲಿಂಕ್‌ ಮೂಲಕ ಸೇರಿಕೊಳ್ಳಬಹುದು ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.

ಏನಿದು ಬಿಳಿ ಟೀ ಶರ್ಟ್ ಚಳವಳಿ?

ಕೈ ನಾಯಕ ಆರಂಭಿಸಿರುವ ಅಭಿಯಾನದ ವೆಬ್‌ಸೈಟ್ ಪ್ರಕಾರ, ಬಿಳಿ ಟಿ-ಶರ್ಟ್ 'ಕೇವಲ ಒಂದು ಬಟ್ಟೆಯ ತುಂಡು ಅಲ್ಲ'; ಇದು ಅಭಿಯಾನದ ಐದು ಮಾರ್ಗದರ್ಶಿ ತತ್ವಗಳನ್ನು ಸಂಕೇತವಾಗಿದೆ. ಅದುವೇ ಸಹಾನುಭೂತಿ, ಏಕತೆ, ಅಹಿಂಸೆ, ಸಮಾನತೆ ಮತ್ತು ಪ್ರಗತಿ. ಈ ಮೌಲ್ಯಗಳು 'ಸಾಮರಸ್ಯ ಮತ್ತು ವೈವಿಧ್ಯತೆಯ ಮೇಲೆ ನಿರ್ಮಿಸಲಾದ ಭಾರತದ 8000 ವರ್ಷಗಳಷ್ಟು ಹಳೆಯ ನಾಗರಿಕತೆಯ ಸ್ಫೂರ್ತಿಯನ್ನು ಪ್ರತಿಧ್ವನಿಸುತ್ತವೆ' ಎಂದು ವೆಬ್‌ಸೈಟ್ ಹೇಳಿದೆ.

ಇದಲ್ಲದೆ ಆದಾಯ, ಜಾತಿ ಮತ್ತು ಧರ್ಮದಲ್ಲಿ ಬೇರೂರಿರುವ ಅಸಮಾನತೆಯನ್ನು ನಿವಾರಿಸಲು ಯಾವುದೇ ಸಿದ್ಧಾಂತವನ್ನು ಮೀರಿದ ಕ್ರಮಗಳ ಅಗತ್ಯವಿದೆ ಎಂದು ಹೇಳಿದೆ.

ಬಿಳಿ ಟಿ-ಶರ್ಟ್ ಚಳವಳಿಯು ನ್ಯಾಯಯುತ ಮತ್ತು ಏಕೀಕೃತ ಭಾರತಕ್ಕಾಗಿ ನೀಡುತ್ತಿರುವ ಕರೆಯಾಗಿದೆ. ರಾಹುಲ್‌ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮತ್ತು ಅದರ ಮುಂದುವರಿದ ಭಾಗವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸ್ಫೂರ್ತಿಯನ್ನು ಗೌರವಿಸುತ್ತದೆ.

ಬಿಳಿ ಟಿ-ಶರ್ಟ್ ಎರಡು ಯಾತ್ರೆಗಳ ಗುರಿಗಳನ್ನು ಪ್ರತಿಧ್ವನಿಸುತ್ತದೆ. ಅದುವೇ ವಿಭಜನೆಗಳನ್ನು ನಿವಾರಿಸುವುದು ಮತ್ತು ಭಾರತವನ್ನು ಒಗ್ಗಟ್ಟು ಹಾಗೂ ಸಮಾನತೆಯ ರಾಷ್ಟ್ರವನ್ನಾಗಿ ಮಾಡುವುದು. ಬಿಳಿ ಟಿ ಶರ್ಟ್ ಪಾರದರ್ಶಕತೆ, ದೃಢತೆ ಮತ್ತು ಸರಳತೆಯ ಸಂಕೇತವಾಗಿದೆ ಎಂದು 2024ರ ಜೂನ್‌ನಲ್ಲಿ ತಮ್ಮ 54ನೇ ಹುಟ್ಟುಹಬ್ಬದ ಸಮಯದಲ್ಲಿ‌ ರಾಹುಲ್ ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.