ಕನ್ನಡ ಸುದ್ದಿ  /  Nation And-world  /  Congress Leader Rahul Gandhi In And As Tube Light Made In China Bjp New Post Goes Viral Rmy

ರಾಹುಲ್ ಗಾಂಧಿ ಟ್ಯೂಬ್‌ಲೈಟ್; ಮೇಡ್ ಇನ್ ಚೀನಾ ಎಂದು ಬಿಜೆಪಿಯಿಂದ ಹೊಸ ಪೋಸ್ಟರ್ ಬಿಡುಗಡೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫ್ಯೂಸ್ ಟ್ಯೂಬ್‌ಲೈಟ್, ಮೇಡ್ ಇನ್ ಚೀನಾ ಎಂದು ಬಿಜೆಪಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಅವರ ಚಿತ್ರ ಮತ್ತು ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಕ್‌ ಸಿನಿಮಾದ ಪೋಸ್ಟರ್.
ಬಿಜೆಪಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಅವರ ಚಿತ್ರ ಮತ್ತು ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಕ್‌ ಸಿನಿಮಾದ ಪೋಸ್ಟರ್.

ದೆಹಲಿ: ದೇಶದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ (5 States Assembly Elections) ಪೈಕಿ ಇನ್ನೂ ತೆಲಂಗಾಣದಲ್ಲಿ (Telangana) ಮಾತ್ರ ಮತದಾನ ಬಾಕಿ ಇದ್ದು, ನವೆಂಬರ್ 30ಕ್ಕೆ ಇಲ್ಲೂ ವೋಟಿಂಗ್ ನಡೆಯಲಿದೆ. ಬಹುತೇಕ ಮತದಾನ ಮುಗಿದು ಡಿಸೆಂಬರ್ 3ರ ಫಲಿತಾಂಶದ ಹೊಸ್ತಿಲಲ್ಲಿರುವಾಗ ನಾಯಕರ ವಾಕ್ಸಮರ ಮತ್ತು ಪೋಸ್ಟರ್ ಸಮರ ಮುಂದುವರಿಯುತ್ತಲೇ ಇದೆ.

ರಾಹುಲ್ ಗಾಂಧಿ 'ಫ್ಯೂಸ್ ಟ್ಯೂಬ್‌ಲೈಟ್' ಎಂದು ‘ಪನೌತಿ’ ಹೇಳಿಕೆಗೆ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪನೌತಿ (ದುರಾದೃಷ್ಟಕರ) ಎಂದು ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆದಿದ್ದರು. ಇದು ಭಾರತೀಯ ಜನತಾ ಪಾರ್ಟಿ-ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ರಾಜಕೀಯ ಪೋಸ್ಟರ್ ವಾರ್‌ಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಇದರ ಮುಂದುವರಿದ ಭಾಗ ಎಂಬಂತೆ ಬಿಜೆಪಿಯವರು ರಾಹುಲ್ ಗಾಂಧಿ ಅವರನ್ನು 'ಫ್ಯೂಸ್ ಟ್ಯೂಬ್‌ಲೈಟ್' ಎಂದು ಕೇಸರಿ ಪಕ್ಷ ಕರೆದಿದೆ.

ರಾಹುಲ್ ಗಾಂಧಿ ಇನ್ ಅಂಡ ಆಸ್ ಟ್ಯೂಬ್‌ಲೈಟ್ ಎಂದು ಕರೆದಿರುವ ಬಿಜೆಪಿ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ 2017ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಅವರ ಸಿನಿಮಾ ಟ್ಯೂಬ್‌ಲೈಟ್‌ನ ವಿಡಂಬನೆಯ ಪೋಸ್ಟ್ ಆಗಿದ್ದು, ಈ ಚಿತ್ರದ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಲೇಸ್‌ಗಳಿಂದ ಶೂಗಳನ್ನು ಭುಜಕ್ಕೆ ನೇತಾಡಿಕೊಂಡು ಸಲ್ಯೂಟ್ ಮಾಡುತ್ತಿರುವ ಫೋಟೊವಿದೆ. ಈ ಫೋಟೊವನ್ನು ಬಳಿಸಿಕೊಂಡಿರುವ ಬಿಜೆಪಿ, ನಟ ಸಲ್ಮಾನ್ ಖಾನ್ ಮುಖಕ್ಕೆ ರಾಹುಲ್ ಗಾಂಧಿ ಮುಖವನ್ನು ಮಾರ್ಫ್ ಮಾಡಿದೆ.

ಫೋಟೊಗೆ ಶೀರ್ಷಿಕೆಯನ್ನೂ ನೀಡಿದ್ದು, ಕಾಂಗ್ರೆಸ್ ಪ್ರಸ್ತುತ ಪಡಿಸುತ್ತಿದೆ. ರಾಹುಲ್ ಗಾಂಧಿ ಇನ್ ಅಂಡ್ ಆಸ್ 'ಟ್ಯೂಬ್‌ಲೈಟ್' ಎಂದು ಬರೆದಿದೆ. ಫೋಟೊ ಮೇಲ್ಭಾಗದಲ್ಲಿ 'ಮೇಡ್ ಇನ್ ಚೀನಾ' ಅಂತಲೂ ಬರೆದಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಟೊವನ್ನು ಹಂಚಿಕೊಂಡಿದೆ.

ನವೆಂಬರ್ 24ರ ಶುಕ್ರವಾರ ರಾತ್ರಿ 9 ಗಂಟೆ 2 ನಿಮಿಷಕ್ಕೆ ಎಕ್ಸ್‌ನಲ್ಲಿ ಬಿಜೆಪಿ ಈ ಪೋಸ್ಟರ್‌ ಹಂಚಿಕೊಂಡಿದ್ದು, ಈವರೆಗೆ 21 ಲಕ್ಷ ಮಂದಿ ವೀಕ್ಷಿಸಿದ್ದಾರೆ. 6,800 ಮಂದಿ ರಿಟ್ವೀಟ್ ಮಾಡಿದ್ದರೆ, 38 ಮಂದಿ ಲೈಕ್ ಮಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಹಲವು ನೆಟ್ಟಿಗರು ಈ ಪೋಸ್ಟರ್‌ಗೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ. ಇಂದ್ರಾನಿಲ್ ಎಂಬುವವರು ಟ್ಯೂಬ್‌ಲೈಟ್ ಕನಿಷ್ಠ ಬೆಳಕನ್ನಾದರೂ ನೀಡುತ್ತದೆ. ಆದರೆ ಪ್ರಧಾನಿ ಮೋದಿಯವರು ಕತ್ತಲೆಯ ಸಂಕೇತವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ತುಂಬಾ ಕೆಟ್ಟ ಬಿಜೆಪಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಒಂದು ಬಾರಿ ಪನೌತಿ ಆದರೆ ಯಾವಾಗಲೂ ಪನೌತಿಯೇ ಎಂದು ಪ್ರಿಯಂವಡ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಬಿಜೆಪಿವರು ರಾಹುಲ್ ಗಾಂಧಿಯವನ್ನು ಟ್ರೋಲ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಪ್ಪು ಸೇರಿದಂತೆ ಹಲವು ಹೊಸ ಹೆಸರುಗಳೊಂದಿಗೆ ಕಾಲೆಳೆಯುವ ಕೆಲಸ ಮಾಡಿದ್ದಾರೆ.