ಕನ್ನಡ ಸುದ್ದಿ  /  Nation And-world  /  Congress Leader Rahul Gandhi Slams Pm Narendra Modi Joke On Suicide Labelling It Insensitive Youth Suicide Rst

Rahul Gandhi: ಆತ್ಮಹತ್ಯೆ ಕುರಿತ ಮೋದಿ ಅಪಹಾಸ್ಯ ಅಸೂಕ್ಷ್ಮ ಮನಸ್ಥಿತಿಯನ್ನು ಬಿಂಬಿಸುತ್ತದೆ; ರಾಹುಲ್‌ ಗಾಂಧಿ

Rahul Gandhi Slams PM Narendra Modi: ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮಹತ್ಯೆಯ ಬಗ್ಗೆ ತಮಾಷೆಯಾಗಿ ಮಾತನಾಡಿರುವುದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಅವರದ್ದು ʼಅಸೂಕ್ಷ್ಮ ಮನಸ್ಸುʼ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ದೂಷಿಸಿದ್ದಾರೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (HT_PRINT)

ನವದೆಹಲಿ: ʼಆತ್ಮಹತ್ಯೆಯ ಕುರಿತ ಮೋದಿ ಅಪಹಾಸ್ಯ ಮಾಡಿರುವುದು ನಿಜಕ್ಕೂ ಅಮಾನವೀಯʼ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೂಷಿಸಿದ್ದಾರೆ. ಅಲ್ಲದೆ ಮೋದಿ ಅವರದ್ದು ʼಅಸೂಕ್ಷ್ಮ ಮನಸ್ಸುʼ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ ರಾಗಾ.

ʼದೇಶದ ಪ್ರಧಾನಿ ಆತ್ಮಹತ್ಯೆಯ ಮೇಲೆ ಹಾಸ್ಯಚಟಾಕಿ ಹಾರಿಸುತ್ತಾರೆ. ಒಬ್ಬ ವ್ಯಕ್ತಿ ಆತ್ಮಹತ್ಯೆಯ ಬಗ್ಗೆ ಇಷ್ಟೊಂದು ಅಸೂಕ್ಷ್ಮವಾಗಿ ಇರಲು ಹೇಗೆ ಸಾಧ್ಯ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2021ರಲ್ಲಿ 1.64ಲಕ್ಷಕ್ಕೂ ಹೆಚ್ಚು ಭಾರತೀಯ ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ದೇಶದಲ್ಲಿ 450 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮೋದಿ ಅವರಿಗೆ ತಮಾಷೆಯಾಗಿ ಕಾಣಿಸುವುದು ಹೇಗೆ?ʼ ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಕಾನ್ಕ್ಲೇವ್‌ ಮಿಡಿಯಾ ನೆಟ್‌ವರ್ಕ್‌ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಮೋದಿ ಪ್ರಾಧ್ಯಾಪಕರೊಬ್ಬರ ಮಗಳ ಡೆತ್‌ನೋಟ್‌ ವಿಚಾರದಲ್ಲಿ ಹಾಸ್ಯಚಟಾಕಿ ಹಾರಿಸಿದ್ದರು. ʼತಮ್ಮ ಮಗಳ ಡೆತ್‌ನೋಟ್‌ ಓದುವ ಪ್ರಾಧ್ಯಾಪಕರು ಎಷ್ಟೋ ಪ್ರಯತ್ನಗಳ ನಂತರವೂ ಇದರಲ್ಲಿ ಕಾಗುಣಿತ ತಪ್ಪನ್ನು ಉಳಿದಿದೆ ಎಂದು ಹೇಳಿದ್ದರುʼ ಎಂಬ ಘಟನೆಯನ್ನು ನೆನಪಿಸಿಕೊಂಡರು ನಕ್ಕಿದ್ದರು ಮೋದಿ.

ಮಾಧ್ಯಮದ ಮುಖ್ಯಸ್ಥರು ತಮ್ಮ ಹಿಂದಿ ಭಾಷೆ ಕೌಶಲವನ್ನು ಚೆನ್ನಾಗಿ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ ಎಂದು ಹೇಳುವಾಗ ಅವರು ಈ ಹಾಸ್ಯಚಟಾಕಿಯನ್ನು ಸೇರಿಸಿದ್ದರು.

ಆತ್ಮಹತ್ಯೆಯ ಕುರಿತ ಮೋದಿ ಅಪಹಾಸ್ಯ ದುರಂತ; ಪ್ರಿಯಾಂಕ ಗಾಂಧಿ

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಪ್ರಿಯಾಂಕ ಗಾಂಧಿ ʼಆತ್ಮಹತ್ಯೆ ಹಾಗೂ ಖಿನ್ನತೆ ವಿಚಾರವಾಗಿ ಮೋದಿ ಅಪಹಾಸ್ಯ ಮಾಡಿರುವುದು ನಿಜಕ್ಕೂ ದುರಂತʼ ಎಂದು ಟ್ವೀಟ್‌ ಮಾಡಿದ್ದಾರೆ.

ʼಯುವಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಹಾಗೂ ಖಿನ್ನತೆಯ ವಿಚಾರ ನಗುವಂಥದ್ದಲ್ಲ. ಎನ್‌ಸಿಆರ್‌ಬಿ ಡೇಟಾದ‌ 2021ರಲ್ಲಿ ಪ್ರಕಾರ 164033 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 30ವರ್ಷಕ್ಕಿಂದ ಕಡಿಮೆ ಇರುವವರ ಪ್ರಮಾಣವೇ ಹೆಚ್ಚಿದೆ. ಇದು ದುರಂತ ಹೊರತು ಹಾಸ್ಯವಲ್ಲ. ಪ್ರಧಾನಿ ಮೋದಿ ಹಾಗೂ ಈ ಪ್ರಧಾನಿಯ ಈ ತಮಾಷೆಗೆ ನಕ್ಕವರು ನಿಜಕ್ಕೂ ಉತ್ತಮ ಶಿಕ್ಷಣ ಪಡೆಯಬೇಕು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೀಗೆ ಸಂವೇದನಶೀಲತೆ ಕಳೆದುಕೊಂಡು, ಅಸ್ವಸ್ಥ ಮನಸ್ಥಿತಿಯಲ್ಲಿ ಅಪಹಾಸ್ಯ ಮಾಡುವ ಬದಲು ಜಾಗೃತಿ ಮೂಡಿಸಿʼ ಎಂದು ಪ್ರಿಯಾಂಕ ಹರಿಹಾಯ್ದಿದಿದ್ದಾರೆ.

ಇದನ್ನೂ ಓದಿ:

Rahul Gandhi: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ; ರಾಹುಲ್ ಗಾಂಧಿ ಹೊಸ ಭರವಸೆ

“ನಾವು ಈಗಾಗಲೇ ನಾಲ್ಕು ಭರವಸೆಗಳನ್ನು ನೀಡಿದ್ದೇವೆ. ಈಗ ಅದಕ್ಕೆ ಮತ್ತೊಂದು ಭರವಸೆಯನ್ನು ಸೇರಿಸುತ್ತಿದ್ದೇನೆ. ನಮ್ಮ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ” ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly elections) ಕಣ ರಂಗೇರಿದೆ. ಪ್ರಬಲ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಪ್ರಮುಖ ಭರವಸೆಗಳನ್ನು ನೀಡುವ ಮೂಲಕ ಮತಗಳನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ರಾಜ್ಯದಲ್ಲಿ ಪ್ರಚಾರ ಸಭೆಗಳನ್ನು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಯರಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಗುರುವಾರ(ಏಪ್ರಿಲ್‌ 27) ಘೋಷಿಸಿದ್ದಾರೆ.

IPL_Entry_Point