ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Court News: ತಮಿಳುನಾಡಲ್ಲಿ ಇನ್ನು ಆನೆ ಸಾಕುವಂತಿಲ್ಲ; ದೇಗುಲಗಳಲ್ಲಿರುವ ಮತ್ತು ವ್ಯಕ್ತಿಗಳು ಸಾಕುತ್ತಿರುವ ಆನೆಗಳ ತಪಾಸಣೆಗೆ ಕೋರ್ಟ್‌ ಸೂಚನೆ

Court News: ತಮಿಳುನಾಡಲ್ಲಿ ಇನ್ನು ಆನೆ ಸಾಕುವಂತಿಲ್ಲ; ದೇಗುಲಗಳಲ್ಲಿರುವ ಮತ್ತು ವ್ಯಕ್ತಿಗಳು ಸಾಕುತ್ತಿರುವ ಆನೆಗಳ ತಪಾಸಣೆಗೆ ಕೋರ್ಟ್‌ ಸೂಚನೆ

Court News: ಇನ್ನು ಮುಂದೆ ಖಾಸಗಿ ವ್ಯಕ್ತಿಗಳು ಅಥವಾ ಧಾರ್ಮಿಕ ಸಂಸ್ಥೆಗಳು ಆನೆಗಳನ್ನು ಸ್ವಾಧೀನಪಡಿಸಿ ಕೊಳ್ಳಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.

ಆನೆ (ಸಾಂಕೇತಿಕ ಚಿತ್ರ)
ಆನೆ (ಸಾಂಕೇತಿಕ ಚಿತ್ರ) (PTI)

ತಮಿಳುನಾಡಿನಲ್ಲಿ ಇನ್ನು ಮುಂದೆ ಖಾಸಗಿ ವ್ಯಕ್ತಿಗಳು ಅಥವಾ ಧಾರ್ಮಿಕ ಸಂಸ್ಥೆಗಳು ಆನೆಗಳನ್ನು ಸ್ವಾಧೀನಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್‌ಮಧುರೈ ಪೀಠವು ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆಗೆ ಸೂಚಿಸಿದೆ.

ಎಲ್ಲ ಧಾರ್ಮಿಕ ಶ್ರದ್ಧಾಕೇಂದ್ರಗಳು ಮತ್ತು ಇತರ ಖಾಸಗಿ ಒಡೆತನದ ಆನೆಗಳ ತಪಾಸಣೆ ನಡೆಸಬೇಕು ಎಂದು ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.

ಈಗ ಸಾಕಾನೆಗಳಾಗಿರುವ ಎಲ್ಲ ಆನೆಗಳನ್ನು (ದೇವಾಲಯಗಳು ಮತ್ತು ಖಾಸಗಿ ಒಡೆತನದಲ್ಲಿ) ಸರ್ಕಾರಿ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಬೇಕು. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಮಯ ಇದೀಗ ಬಂದಿದೆ. ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆ ಸರ್ಕಾರದ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಮನ್ವಯದೊಂದಿಗೆ ಈ ಕೆಲಸ ಆಗಬೇಕು ಎಂದು ಕೋರ್ಟ್‌ ನಿರ್ದೇಶನ ಸೂಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಅರಣ್ಯ ಇಲಾಖೆಯ ಮಧುರೈ ಶಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧ, 60 ವರ್ಷದ ಲಲಿತಾ ಎಂಬ ಹೆಣ್ಣು ಆನೆಯ ಪೋಷಣೆಯ ವಿಚಾರ ಗಮನಿಸಿದ ನ್ಯಾಯಪೀಠವು, ಆನೆಯನ್ನು ಮಾವುತರಿಂದ ಬೇರ್ಪಡಿಸದಂತೆ ಹಾಗೂ ಆನೆಯನ್ನು ಮಾವುತರಿ ಚಾಕರಿಯಲ್ಲೇ ಇರಿಸಬೇಕು ಎಂದು ಆದೇಶಿದೆ.

ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಇತ್ತೀಚೆಗೆ ಕಾರ್ಯಕರ್ತರೊಂದಿಗೆ ಲಲಿತಾ ಎಂಬ ಆನೆಯ ಪರಿಸ್ಥಿತಿ ವೀಕ್ಷಿಸಲು ತೆರಳಿದ್ದರು. ಅಲ್ಲಿ ಆ ಆನೆಯ ದೇಹದ ಮೇಲೆ ಗಾಯಗಳು ಕಂಡುಬಂದಿದ್ದವು. ಪಶುಸಂಗೋಪನಾ ಇಲಾಖೆಯ ನೆರವಿನೊಂದಿಗೆ ಆನೆಯ ಆರೈಕೆ ಮಾಡುವಂತೆ ವಿರುದುನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅಲ್ಲದೆ, ಲಲಿತಾ ಎಂಬ ಆನೆಗೆ 60 ವರ್ಷ ವಯಸ್ಸಾಗಿರುವುದರಿಂದ ರಕ್ಷಣೆಯ ನಂತರ, ಅದನ್ನು ಆಜೀವ ಆರೈಕೆಗಾಗಿ ಸರ್ಕಾರಿ ಆನೆ ಪುನರ್ವಸತಿ ಶಿಬಿರಕ್ಕೆ ವರ್ಗಾಯಿಸಬೇಕು ಎಂದು ಆದೇಶಿಸಿದ್ದರು.

ಇನ್ನು ಮುಂದೆ ಆನೆಗಳನ್ನು ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗಳು ಖರೀದಿಸಬಾರದು" ಎಂದು ಅವರು ಮೊದಲ ಬೆಂಚ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಅಧಿಕೃತ ಸೂಚನೆ.

ಆನೆಗಳನ್ನು ಇನ್ನು ಮುಂದೆ ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗಳು ಖರೀದಿಸಬಾರದು ಎಂಬ ಮೊದಲ ಪೀಠದ ಆದೇಶಗಳನ್ನು ಅವರು ಅಧಿಕೃತ ಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ಹೇಳಿದೆ.

ಗಮನಿಸಬಹುದಾದ ಸುದ್ದಿಗಳು

ಭಾರತ್‌ ಜೋಡೋ ಯಾತ್ರೆಯ ಲುಕ್‌ನಿಂದ ಹೊರಬಂದ ರಾಹುಲ್‌ ಗಾಂಧಿ!

Rahul Gandhi With a New Look: ಕಳೆದ ವರ್ಷ ಸೆಪ್ಟೆಂಬರ್‌ನಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಗಡ್ಡ ಬೋಳಿಸಿಕೊಂಡಿರಲಿಲ್ಲ. ಅವರ ಉದ್ದನೆಯ ಗಡ್ಡದ ನೋಟವು ಹಲವು ರೀತಿಯ ಟೀಕೆ, ಟ್ರೋಲ್‌ಗಳಿಗೆ ಕಾರಣವಾಗಿತ್ತು. ಈಗ ಅವರು ಆ ಲುಕ್‌ನಿಂದ ಹೊರಬಂದಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಚಾರ್‌ ಧಾಮ್‌ ಯಾತ್ರೆಗೆ ಮುಂಚಿತವಾಗಿ ಸುರಕ್ಷಿತ ಮತ್ತು ಸುಗಮ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಡಿಜಿಸಿಎ ಮಾರ್ಗಸೂಚಿ ಪ್ರಕಟ

Char Dham Yatra: ಲಭ್ಯ ಸುತ್ತೋಲೆಯಲ್ಲಿರುವ ಪ್ರಕಾರ, ಹೆಲಿಕಾಪ್ಟರ್ ಆಪರೇಟರ್‌ಗಳ ಜವಾಬ್ದಾರಿಗಳನ್ನು ಮತ್ತು ಸುರಕ್ಷಿತ ಮತ್ತು ಸುಗಮ ಹೆಲಿಕಾಪ್ಟರ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಆಯಾ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಜಿಲ್ಲಾಡಳಿತಕ್ಕೆ ಕೆಲವು ಮಾರ್ಗದರ್ಶನ ಅಥವಾ ಮಾರ್ಗಸೂಚಿಗಳನ್ನು ನೀಡುತ್ತದೆ ಎಂದು ಎಎನ್‌ಐ ವರದಿ ಹೇಳಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.