ಕನ್ನಡ ಸುದ್ದಿ  /  Nation And-world  /  Covid Infection Through Womb Caused Brain Damage In Two Infants: Study

Covid infection: ಗರ್ಭಾಶಯದ ಮೂಲಕ ತಗುಲಿದ ಕೋವಿಡ್‌ ಸೋಂಕು, ನವಜಾತ ಶಿಶುಗಳ ಮಿದುಳಿಗೆ ಹಾನಿ

Covid infection Study: ಮೃತಪಟ್ಟ ಮಗುವಿನ ಮೆದುಳಿನ ಶವಪರೀಕ್ಷೆ ನಡೆಸಿದ ಬಳಿಕ ಕೊರೊನಾ ವೈರಸ್‌ನ ಕುರುಹುಗಳು ಸಹ ಪತ್ತೆಯಾಗಿವೆ. "ವೈರಸ್‌ ಇರುವಿಕೆಯಿಂದ ಮಿದುಳಿಗೆ ಹಾನಿಯಾಗಿದೆ" ಎಂದು ಡಾ. ಬೆನ್ನಿ ಹೇಳಿದ್ದಾರೆ.

Covid infection: ಗರ್ಭಾಶಯದ ಮೂಲಕ ತಗುಲಿದ ಕೋವಿಡ್‌ ಸೋಂಕು, ನವಜಾತ ಶಿಶುಗಳ ಮಿದುಳಿಗೆ ಹಾನಿ
Covid infection: ಗರ್ಭಾಶಯದ ಮೂಲಕ ತಗುಲಿದ ಕೋವಿಡ್‌ ಸೋಂಕು, ನವಜಾತ ಶಿಶುಗಳ ಮಿದುಳಿಗೆ ಹಾನಿ (Getty Images)

“ಪ್ಲಾಸೆಂಟಾ (ಜರಾಯು)ಕ್ಕೂ ಕೋವಿಡ್ -19 ವೈರಸ್‌ ಪ್ರವೇಶಿಸಬಹುದು ಮತ್ತು ಭ್ರೂಣಗಳಿಗೆ ಸೋಂಕು ತಗುಲಿಸಬಹುದು. ಇದರಿಂದ ನವಜಾತ ಶಿಶುಗಳಿಗೆ ಮಿದುಳಿನ ಹಾನಿ ಉಂಟುಮಾಡಬಹುದು” ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ವಿಷಯವನ್ನು ಮಿಯಾಮಿ ವಿಶ್ವವಿದ್ಯಾಲಯದ ಅಧ್ಯಯನವು ಎರಡು ಪ್ರಕರಣಗಳ ಮೂಲಕ ದೃಢಪಡಿಸಿದೆ. 2020ರಲ್ಲಿ ಡೆಲ್ಟಾ ಕೋವಿಡ್‌ 19 ಪಾಸಿಟೀವ್‌ ವರದಿಯಾಗಿದ್ದ ಗರ್ಭಿಣಿಯರಿಗೆ ಜನಿಸಿದ ಶಿಶುಗಳ ಅಧ್ಯಯನ ಮಾಡಲಾಗಿದೆ.

ಈ ಎರಡು ಶಿಶುಗಳಲ್ಲಿ ಒಂದು ಮಗು ತನ್ನ 13 ತಿಂಗಳಲ್ಲಿ ಮೃತಪಟ್ಟಿದೆ. ಇನ್ನೊಂದು ಮಗುವನ್ನು ಆಸ್ಪತ್ರೆಯ ಆರೈಕೆ ಘಟಕದಲ್ಲಿ ಇರಿಸಲಾಗಿದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. ಈ ಶಿಶುಗಳು ಕೊರೊನಾ ವೈರಸ್‌ ವಿರುದ್ಧ ತಮ್ಮ ರಕ್ತದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ/ ಪ್ರತಿಕಾಯ ಬೆಳೆಸಿಕೊಂಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ, ಮಿದುಳಿಗೆ ಹಾನಿಯಾಗಿರುವುದರಿಂದ ಒಂದು ಮಗು ಮೃತಪಟ್ಟಿದೆ.

ಮೃತಪಟ್ಟ ಮಗುವಿನ ಮೆದುಳಿನ ಶವಪರೀಕ್ಷೆ ನಡೆಸಿದ ಬಳಿಕ ಕೊರೊನಾ ವೈರಸ್‌ನ ಕುರುಹುಗಳು ಸಹ ಪತ್ತೆಯಾಗಿವೆ. "ವೈರಸ್‌ ಇರುವಿಕೆಯಿಂದ ಮಿದುಳಿಗೆ ಹಾನಿಯಾಗಿದೆ" ಎಂದು ಡಾ. ಬೆನ್ನಿ ಹೇಳಿದ್ದಾರೆ.

ಕೊರೊನಾ ವೈರಸ್‌ ಪಾಟಿಟೀವ್‌ ಟೆಸ್ಟ್‌ ಮಾಡಿಸಿದ ಹೊರತಾಗಿಯೂ ತಾಯಂದಿರಲ್ಲಿ ಒಬ್ಬರು ಕೋವಿಡ್‌ 19ನ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿದ್ದರು. ಅವರು ತನ್ನ ಹೊಟ್ಟೆಯಲ್ಲಿ ಮಗುವನ್ನು ಪೂರ್ಣಾವಧಿಗೆ ಹೊತ್ತಿದ್ದರು. ಆದರೆ, ಇನ್ನೊಬ್ಬರು ತಾಯಿ ಮಾತ್ರ ಡೆಲ್ಟಾ ವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಕಾರಣಕ್ಕಾಗಿ ವೈದ್ಯರು ನಿಗದಿತ ಅವಧಿಗಿಂತ ಎಂಟು ವಾರಗಳ ಮುಂಚೆಯೇ ಹೆರಿಗೆ ಮಾಡಿಸಲು ಸೂಚಿಸಿದ್ದರು ಎಂದು ಅಧ್ಯಯನ ತಿಳಿಸಿದೆ.

ನವಜಾತ ಶಿಶುಗಳ ಮಿದುಳಿಗೆ ಹಾನಿ ಉಂಟು ಮಾಡುವಂತಹ ಸಾಧ್ಯತೆಯೂ ಡೆಲ್ಟಾ ರೂಪಾಂತರಿ ವೈರಸ್‌ನಿಂದ ಮಾತ್ರವೇ ಅಥವಾ ಇತರೆ ಓಮ್ರಿಕಾನ್‌ ರೂಪಾಂತರಿ ವೈರಸ್‌ಗಳಿಂದಲೂ ಇದೇ ಹಾನಿ ಉಂಟಾಗುವುದೇ ಎಂದು ಅಧ್ಯಯನ ಸ್ಪಷ್ಟಪಡಿಸಿಲ್ಲ.

"ಇಂತಹ ಪ್ರಕರಣಗಳು ಅಪರೂಪವಾಗಿದ್ದರೂ, ಗರ್ಭಾವಸ್ಥೆಯಲ್ಲಿ ಸೋಂಕಿಗೆ ಒಳಗಾದ ಮಹಿಳೆಯರು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯ ವಿಳಂಬವನ್ನು ಪರೀಕ್ಷಿಸಲು ತಮ್ಮ ಮಕ್ಕಳ ವೈದ್ಯರಿಗೆ ತಿಳಿಸಬೇಕು" ಎಂದು ವಿಶ್ವವಿದ್ಯಾನಿಲಯದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಶಹನಾಜ್ ದುವಾರಾ ಸಲಹೆ ನೀಡಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್‌ ವೈರಸ್‌ ಸೋಂಕು ಉಂಟಾದಾಗ ಜರಾಯು ಮೂಲಕ ಹೊಟ್ಟೆಯಲ್ಲಿರುವ ಮಗುವಿಗೂ ಕೊರೊನಾ ಸೋಂಕು ಉಂಟಾಗುವ ಸಾಧ್ಯತೆಯ ಕುರಿತು ಹಲವು ವೈದ್ಯರು ಈ ಹಿಂದೆ ಹೇಳಿದ್ದಾರೆ. ಆದರೆ, ಅದಕ್ಕೆ ಯಾವುದೇ ನೇರ ಪುರಾವೆಯನ್ನು ಇಲ್ಲಿಯವರೆಗೆ ದೊರಕಿರಲಿಲ್ಲ.

IPL_Entry_Point