ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?

ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?

HMPV Outbreak: ಚೀನಾದಲ್ಲಿ ಕೋವಿಡ್ ಮಾದರಿ ಹೊಸ ವೈರಾಣು ಸೋಂಕು ಹರಡತೊಡಗಿದೆ. 14 ವರ್ಷದೊಳಗಿನವರಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ. ಎಚ್‌ಎಂಪಿವಿ ಎಂಬ ಈ ಹೊಸ ವೈರಾಣು ಭಾರತದಲ್ಲೂ ಹರಡಬಹುದಾ ಎಂಬ ಕಳವಳ ವ್ಯಕ್ತವಾಗಿದೆ. ಹೀಗಾಗಿ, ಆರೋಗ್ಯ ಪರಿಣತರು ಹೇಳುವುದೇನು ಎಂಬ ವಿವರ ಇಲ್ಲಿದೆ.

ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ ಶುರುವಾಗಿದೆ. ಭಾರತದಲ್ಲೂ ಎಚ್‌ಎಂಪಿವಿ ಹರಡಬಹುದಾ 
ಎಂಬ ಕಳವಳದ ಆರೋಗ್ಯ ಪರಿಣತರು ಹೇಳುವುದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ ಶುರುವಾಗಿದೆ. ಭಾರತದಲ್ಲೂ ಎಚ್‌ಎಂಪಿವಿ ಹರಡಬಹುದಾ ಎಂಬ ಕಳವಳದ ಆರೋಗ್ಯ ಪರಿಣತರು ಹೇಳುವುದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

HMPV Outbreak: ಚೀನಾದಿಂದ ಜಗತ್ತಿನಾದ್ಯಂತ ಹರಡಿದ ಕೋವಿಡ್ 19 ಸಂಕಷ್ಟದ ಪರಿಣಾಮ ಇನ್ನೂ ಮರೆಯಾಗಿಲ್ಲ. ಆಗಲೇ ಚೀನಾದಲ್ಲಿ ಮತ್ತೊಂದು ವೈರಾಣು ಕಾಟ ಶುರುವಾಗಿದೆ. ಹೊಸ ವರ್ಷ 2025 ಶುರುವಾಗುತ್ತಿದ್ದಂತೆ ಹೊಸ ನಿಗೂಢ ವೈರಸ್‌ ಆತಂಕ ಉಂಟಾಗಿದೆ. ಈ ವೈರಾಣುವನ್ನು ಎಚ್‌ಎಂಪಿವಿ ಎಂದು ಸಂಕ್ಷಿಪ್ತವಾಗಿ ಗುರುತಿಸಲಾಗಿದೆ. ಎಚ್ಎಂಪಿವಿ ಎಂದರೆ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್. ಇದು ಚೀನಾದಲ್ಲಿ ಬೇಗ ಹರಡತೊಡಗಿದ್ದು, ಉತ್ತರ ಪ್ರಾಂತ್ಯದಲ್ಲಿ 14 ವರ್ಷದೊಳಗಿನ ಮಕ್ಕಳಲ್ಲಿ ಈ ವೈರಾಣು ಕಾಟ ಕಾಣಿಸಿಕೊಂಡಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಈ ಕಳವಳದ ನಡುವೆ, ಕೋವಿಡ್‌ 19 ಮಾದರಿಯಲ್ಲೇ ಹೊಸ ಎಚ್‌ಎಂಪಿವಿ ಭಾರತಕ್ಕೂ ಹರಡಲಿದೆಯೇ ಎಂಬ ಆತಂಕ ಶುರುವಾಗಿದೆ. ಈ ಬಗ್ಗೆ ಆರೋಗ್ಯ ಪರಿಣತರು ಹೇಳುವುದೇನು ನೋಡೋಣ.

ಚೀನಾದಲ್ಲಿ ಹರಡುತ್ತಿದೆ ಎಚ್ಎಂಪಿವಿ ಸೋಂಕು; ಭಾರತದಲ್ಲಿ ಕಳವಳ, ಆತಂಕ ಬೇಕಾ, ಪರಿಣತರು ಹೇಳುವುದಿಷ್ಟು

ಎಚ್‌ಎಂಪಿವಿಯ ರೋಗಲಕ್ಷಣಗಳು ಕೋವಿಡ್ 19 ರೋಗಲಕ್ಷಣಕ್ಕೆ ಹೋಲುತ್ತವೆ. ನಿಕಟ ಪರಿಶೀಲನೆಯ ಮತ್ತು ಹೆಚ್ಚಿನ ನಿಗಾದ ಅವಶ್ಯಕತೆ ಇದೆ. ಆದರೆ ಭಯಪಡುವ ಅಗತ್ಯ ಇಲ್ಲ ಎಂದು ದೆಹಲಿ ಮೆಡಿಕಲ್ ಕೌನ್ಸಿಲ್‌ ಅಧ್ಯಕ್ಷ ಡಾ ಅರುಣ್ ಗುಪ್ತಾ ತಿಳಿಸಿದ್ದಾಗಿ ಲೈವ್ ಮಿಂಟ್ ವರದಿ ಮಾಡಿದೆ.

"ಎಚ್‌ಎಂಪಿವಿ ರೋಗಲಕ್ಷಣಗಳು ಹೆಚ್ಚಾಗಿ ಕೋವಿಡ್‌ 19ನಂತೆಯೇ ಇರುತ್ತವೆ. ಇಲ್ಲಿಯವರೆಗೆ ಚೀನಾದಲ್ಲಿ ಮಾತ್ರ ಈ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈವರೆಗೆ ಇದು ಎಚ್ಚರಿಕೆ ಘಂಟೆ ಅಲ್ಲ, ಆದರೆ ಹೆಚ್ಚಿನ ನಿಗಾದ ಅಗತ್ಯವಿದೆ. ಕೋವಿಡ್ 19 ಮತ್ತು ಎಚ್‌ಎಂಪಿವಿ ನಡುವೆ ಯಾವುದೇ ವ್ಯತ್ಯಾಸದ ಲಕ್ಷಣಗಳಿಲ್ಲ. ವೈರಲ್ ಅಧ್ಯಯನದ ಮೂಲಕ ಮಾತ್ರ ಇದನ್ನು ಪ್ರತ್ಯೇಕಿಸಬಹುದು, ಇದಕ್ಕಾಗಿ ನಿರ್ದಿಷ್ಟ ಪ್ರಯೋಗಾಲಯಗಳು ಲಭ್ಯವಿದೆ: ಎಂದು ಡಾ ಅರುಣ್ ಗುಪ್ತಾ ಹೇಳಿದ್ದಾಗಿ ವರದಿ ವಿವರಿಸಿದೆ.

ಎಚ್‌ಎಂಪಿವಿಯ ರೋಗಲಕ್ಷಣಗಳು ಎಂದರೆ, ಸೌಮ್ಯವಾದ ಜ್ವರ, ಸೋರುವ ಮೂಗು ಮತ್ತು ಕೆಮ್ಮು ಮುಂತಾದ ಸಾಮಾನ್ಯ ಶೀತ ಅಥವಾ ಜ್ವರದ ಗುಣಲಕ್ಷಣಗಳೇ ಆಗಿವೆ.

ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಿಕೊಳ್ಳಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಅಗತ್ಯ. ಯಾರನ್ನೂ ಮುಟ್ಟಿ ಮಾತನಾಡಿಸಬಾರದು. ಕೋವಿಡ್ 19 ಸೋಂಕು ಸಂದರ್ಭದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಸನ್ನಿವೇಶದಲ್ಲೂ ಅನುಸರಿಸಬಹುದು. ಈ ರೀತಿ ಮಾಡುವುದರಿಂದ ವೈರಾಣು ಸೋಂಕು ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಇತರೆ ಹಲವು ಡಾಕ್ಟರ್‌ಗಳು ಹೇಳಿಕೊಂಡಿದ್ದಾರೆ.

ಎಚ್‌ಎಂಪಿವಿ ಸೋಂಕು ಪ್ರಕರಣ ಇದೇ ಮೊದಲ ಬಾರಿ ವರದಿಯಾಗಿರುವುದಲ್ಲ. 2011-12ರ ಅವಧಿಯಲ್ಲಿ ಇದು ಅಮೆರಿಕ, ಕೆನಡಾ ಮತ್ತು ಯುರೋಪ್‌ ಪ್ರಾಂತ್ಯಗಳಲ್ಲಿ ವರದಿಯಾಗಿದ್ದವು.

ಎಚ್‌ಎಂಪಿವಿ ಹರಡುವುದು ಹೇಗೆ?

ಮೆಟಾಪ್ನ್ಯೂಮೋವೈರಸ್ ಕೂಡ ಫೋಮೈಟ್ ಮೂಲಕ ಹರಡುತ್ತದೆ. ಫೋಮೈಟ್‌ ಅಂದರೆ ಅದು ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅಥವಾ ಸೋಂಕಿತರ ಮೇಲ್ಮೈಯಿಂದ ಅನ್ಯ ವ್ಯಕ್ತಿಗೆ ಹರಡುತ್ತದೆ. ಇದು ಸೋಂಕಿತ ವ್ಯಕ್ತಿಯೊಂದಿಗೆ ಹಸ್ತಲಾಘವ ಮಾಡುವಂತಹ ನಿಕಟ ಸಂಪರ್ಕದಿಂದ, ಸೋಂಕಿತ ವ್ಯಕ್ತಿಯ ಕೆಮ್ಮುವಿಕೆ ಮತ್ತು ಸೀನುವಿಕೆಯಿಂದ ಹರಡಬಹುದು. ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಮತ್ತು ನಂತರ ಮುಖವನ್ನು (ಬಾಯಿ, ಮೂಗು, ಅಥವಾ ಕಣ್ಣುಗಳು) ಸ್ಪರ್ಶಿಸುವುದು, ಎಚ್‌ಎಂಪಿವಿ ಹರಡುವಿಕೆಗೆ ಕಾರಣವಾಗಬಹುದು.

ವರದಿಗಳ ಪ್ರಕಾರ, ಚೀನಾ ಸರ್ಕಾರವು ಐದು ವರ್ಷಗಳ ಹಿಂದೆ ಕೋವಿಡ್‌ 19 ಸೋಂಕು ಏಕಾಕಿಯಾಗಿ ಹರಡಿದಾಗ ಉಂಟಾದ ಸನ್ನಿವೇಶ ಮತ್ತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಈಗಾಗಲೇ ನ್ಯುಮೋನಿಯಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಅಧಿಕೃತವಾಗಿ ಎಚ್‌ಎಂಪಿವಿ ಸಂಬಂಧಿಸಿದಂತೆ ಯಾವುದೇ ಆರೋಗ್ಯ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.