ಕನ್ನಡ ಸುದ್ದಿ  /  Nation And-world  /  Crpf Recruitment 2023: Apply For 9,212 Constable Posts From March 27

CRPF Recruitment 2023: ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ನಲ್ಲಿ ಟೆಕ್ನಿಕಲ್‌ ಮತ್ತು ಟ್ರೇಡ್ಸ್‌ಮೆನ್‌ ವಿಭಾಗದಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು crpf.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

CRPF recruitment 2023: ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕ
CRPF recruitment 2023: ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕ

ಬೆಂಗಳೂರು: ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ನಲ್ಲಿ ಟೆಕ್ನಿಕಲ್‌ ಮತ್ತು ಟ್ರೇಡ್ಸ್‌ಮೆನ್‌ ವಿಭಾಗದಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳಿದ್ದು, ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಾಳೆಯಿಂದ ಅಂದರೆ ಮಾರ್ಚ್‌ 27ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್‌ 24 ಕೊನೆಯ ದಿನಾಂಕವಾಗಿದೆ. ಸಿಆರ್‌ಪಿಎಫ್‌ ಕಾನ್ಸ್‌ಟೇಬಲ್‌ ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ, ದೈಹಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 27/03/2023
  • ಆನ್‌ಲೈನ್ ಅರ್ಜಿಗಳ ಸ್ವೀಕೃತಿ ಮತ್ತು ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 25/04/2023
  • ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಪ್ರವೇಶ ಕಾರ್ಡ್ ಬಿಡುಗಡೆ: 20/06/2023 ರಿಂದ 25/06/2023
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ (ತಾತ್ಕಾಲಿಕ): 01/07/2023 ರಿಂದ 13/07/2023

ಸಿಆರ್‌ಪಿಎಫ್‌ ಕಾನ್ಸ್‌ಟೇಬಲ್‌ ಖಾಲಿ ಹುದ್ದೆಗಳ ವಿವರ

  • ಪುರುಷ: 9,105 ಹುದ್ದೆಗಳು
  • ಮಹಿಳೆ: 107 ಹುದ್ದೆಗಳು
  • ಚಾಲಕ: 2372
  • ಮೋಟಾರ್ ಮೆಕ್ಯಾನಿಕ್: 544
  • ಚಮ್ಮಾರ: 151
  • ಬಡಗಿ: 139
  • ಟೈಲರ್: 242
  • ಬ್ರಾಸ್ ಬ್ಯಾಂಡ್: 172
  • ಪೈಪ್ ಬ್ಯಾಂಡ್: 51
  • ಬಗ್ಲರ್: 1340
  • ಗಾರ್ಡನರ್: 92
  • ವರ್ಣಚಿತ್ರಕಾರ: 56
  • ಅಡುಗೆ ಕೆಲಸಗಾರ: 2475
  • ಕ್ಷೌರಿಕ: 303
  • ಹೇರ್‌ ಡ್ರೆಸ್ಸರ್‌: 1
  • ವಾಷರ್‌ಮನ್‌: 406
  • ಸಫಾಯಿ ಕರ್ಮಚಾರಿ: 824
  • ಪ್ಲಂಬರ್: 1
  • ಮೇಸನ್: 6
  • ಎಲೆಕ್ಟ್ರಿಷಿಯನ್: 4

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಬಿಟ್ಟು ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ. crpf.gov.in ವೆಬ್‌ಸೈಟ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ವೇತನಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆವೆಲ್‌-3 ವೇತನ ಶ್ರೇಣಿ ಇರುತ್ತದೆ. ಅಂದರೆ, 21,700 - 69,100 ರೂ. ವೇತನ ಶ್ರೇಣಿ ಇರುತ್ತದೆ.

ಆಯ್ಕೆ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಆಧರಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯು ಜುಲೈ 1 ಮತ್ತು ಜುಲೈ 13, 2023ರ ನಡುವೆ ನಡೆಯಲಿದೆ. ಜೂನ್‌ 20ಕ್ಕೆ ಈ ಪರೀಕ್ಷೆಗೆ ಸಂಬಂಧಪಟ್ಟ ಅಡ್ಮಿಟ್‌ ಕಾರ್ಡ್‌ ಬಿಡುಗಡೆಯಾಗಲಿದೆ. ಜೂನ್‌ 25ರ ಮೊದಲು ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆಯ್ಕೆ ಪ್ರಕ್ರಿಯೆ ಈ ಮುಂದಿನ ಹಂತಗಳಲ್ಲಿ ನಡೆಯುತ್ತದೆ.

  1. ಆನ್‌ಲೈನ್‌ ಸಿಬಿಟಿ (ಕಂಪ್ಯೂಟರ್‌ ಆಧರಿತ ಪರೀಕ್ಷೆ)
  2. ಪಿಎಸ್‌ಟಿ (ಫಿಸಿಕಲ್‌ ಸ್ಟಾಂಡರ್ಡ್‌ ಟೆಸ್ಟ್‌)
  3. ಪಿಇಟಿ (ಫಿಸಿಕಲ್‌ ಎಫಿಷಿಯನ್ಸಿ ಟೆಸ್ಟ್‌)
  4. ಟ್ರೇಡ್‌ ಟೆಸ್ಟ್‌
  5. ಮೆಡಿಕಲ್‌ ಎಗ್ಸಾಮಿನೇಷನ್‌
  6. ಫೈನಲ್‌ ಮೆರಿಟ್‌ ಲಿಸ್ಟ್‌

ಅರ್ಜಿ ಶುಲ್ಕ

ಆನ್‌ಲೈನ್‌ ಮೂಲಕ 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಮಾಜಿ ಸೈನಿಕರೂ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.