
Delhi Election Result Highlight: ದೆಹಲಿ ಚುನಾವಣಾ ಫಲಿತಾಂಶ; 27 ವರ್ಷಗಳ ನಂತರ ಬಿಜೆಪಿಗೆ ಭರ್ಜರಿ ಗೆಲುವು, ಸರ್ಕಾರ ರಚನೆಗೆ ಸಿದ್ಧತೆ
Delhi Election Result in Kannda: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, 27 ವರ್ಷಗಳ ನಂತರ ಬಿಜೆಪಿ ಭರ್ಜರಿ ಗೆಲುವು ಪಡೆದಿದೆ. ಸರ್ಕಾರ ರಚನೆಗೆ ಸಿದ್ಧತೆ ಆರಂಭವಾಗಿದೆ.
Sat, 08 Feb 202507:24 AM IST
ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ ಸೋಲು
Delhi Election Result Live: ದೆಹಲಿ ವಿಧಾನಸಭೆ ಚುನಾವಣೆ ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎಎಪಿಯ ಮತ್ತೊಬ್ಬ ನಾಯಕ, ಮಾಜಿ ಡಿಸಿಎಂ ಅನೀಶ್ ಸಿಸೋಡಿಯಾ ಕೂಡ ಪರಾಭವಗೊಂಡಿದ್ದಾರೆ ಎಂದು ವರದಿಯಾಗಿದೆ.
Sat, 08 Feb 202507:06 AM IST
Delhi Election Result Live: ಬಿಜೆಪಿಯಲ್ಲಿ ಸಂಭ್ರಮಾಚರಣೆ
ದೆಹಲಿ ಚುನಾವಣಾ ಫಲಿತಾಂಶ: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ದೆಹಲಿಯ ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ್ ಅವರು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ್ದಾರೆ.
Sat, 08 Feb 202505:59 AM IST
7ನೇ ಸುತ್ತಿನಲ್ಲೂ ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ
ದೆಹಲಿ ಚುನಾವಣಾ ಫಲಿತಾಂಶ: ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕರಾದ ಅರವಿಂದ್ ಕೇಂಜ್ರಿವಾಲ್ 7ನೇ ಸುತ್ತಿನಲ್ಲೂ 238 ಮತಗಳ ಅಂತರದ ಹಿನ್ನಡೆ ಅನುಭವಿಸಿದ್ದಾರೆ. ಒಟ್ಟು 13 ಸುತ್ತಿನ ಮತ ಎಣಿಕೆ ನಡೆಯಲಿದೆ.

Sat, 08 Feb 202504:47 AM IST
ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿ 42ರಲ್ಲಿ, ಎಎಪಿ 27ರಲ್ಲಿ ಮುನ್ನಡೆ
ಚುನಾವಣಾ ಆಯೋಗದ ವೆಬ್ ಸೈಟ್ ಟ್ರೆಂಡ್ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣಾ ಮತ ಎಣಿಕೆಯಲ್ಲಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

Sat, 08 Feb 202504:41 AM IST
ದೆಹಲಿ ಗದ್ದುಗೆ ಹಿಡಿಯುವ ಕಾತರದಲ್ಲಿದೆ ಬಿಜೆಪಿ
ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಮತ ಎಣಿಕೆ ಪ್ರಗತಿಯಲ್ಲಿದೆ. ಬೆಳಿಗ್ಗೆ 10.10ರ ಮಾಹಿತಿ ಪ್ರಕಾರ, ದೆಹಲಿ ಗದ್ದುಗೆಯನ್ನು ಬಿಜೆಪಿ ಕಾಯ್ದಿರಿಸಿಕೊಂಡಂತೆ ಕಾಣುತ್ತಿದೆ. ಬಿಜೆಪಿ 41ರಲ್ಲಿ ಎಎಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

Sat, 08 Feb 202504:23 AM IST
ದೆಹಲಿ ಚುನಾವಣಾ ಫಲಿತಾಂಶ; ಬಿಜೆಪಿ 37ರಲ್ಲಿ, ಎಎಪಿ 20ರಲ್ಲಿ ಮುನ್ನಡೆ
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಬೆಳಿಗ್ಗೆ 9.50ರ ಹೊತ್ತಿಗೆ ಬಿಜೆಪಿ37ರಲ್ಲಿ, ಆಡಳಿತಾರೂಢ ಎಎಪಿ 20ರಲ್ಲಿ ಮುನ್ನಡೆ ಸಾಧಿಸಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Sat, 08 Feb 202504:24 AM IST
ಅರವಿಂದ್ ಕೇಜ್ರಿವಾಲ್ ಬಗ್ಗೆ ತಿಳಿದುಕೊಂಡಿರಬೇಕಾದ 12 ಅಂಶಗಳು
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಎಎಪಿಗೆ ಹಿನ್ನಡೆ ಗೋಚರಿಸಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರ ಹಿಡಿದ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ತಿಳಿದುಕೊಂಡಿರಬೇಕಾದ 12 ಅಂಶಗಳ ವಿವರ ಈ ವೆಬ್‌ಸ್ಟೋರಿಯಲ್ಲಿದೆ.
Sat, 08 Feb 202503:59 AM IST
24 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭೆ ಚುನಾವಣಾ ಮತ ಎಣಿಕೆಯಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

Sat, 08 Feb 202503:51 AM IST
ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ
ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸತತ ಹಿನ್ನಡೆ ಅನುಭವಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮುನ್ನಡೆಯಲ್ಲಿದ್ದಾರೆ.
Sat, 08 Feb 202503:47 AM IST
7 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
ಚುನಾವಣಾ ಆಯೋಗದ ಪ್ರಕಾರ, 7 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. ಎಎಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Sat, 08 Feb 202503:35 AM IST
ಮುನ್ನಡೆಯಲ್ಲಿ ಮ್ಯಾಜಿಕ್ ಸಂಖ್ಯೆ ದಾಟಿದ ಬಿಜೆಪಿ
70 ಕ್ಷೇತ್ರಗಳ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಬರೋಬ್ಬರಿಗೆ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಆರಂಭಿಕ ಫಲಿತಾಂಶದ ಚಿತ್ರಣವಾಗಿದೆ. ದೆಹಲಿಯಲ್ಲಿ ಸ್ಪಷ್ಟ ಬಹುಮತಕ್ಕೆ 36 ಮ್ಯಾಜಿಕ್ ಸಂಖ್ಯೆಯಾಗಿದೆ.
Sat, 08 Feb 202503:30 AM IST
2 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಚುನಾವಣಾ ಆಯೋಗದ ವೆಬ್ ಸೈಟ್ ಪ್ರಕಾರ, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಆರಂಭಿ ಮುನ್ನಡೆ ಪಡೆದಿದೆ.

Sat, 08 Feb 202503:14 AM IST
ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸತತ ಹಿನ್ನಡೆಯಾಗಿದೆ.
Sat, 08 Feb 202503:09 AM IST
ಬಿಜೆಪಿ 26, ಎಎಪಿ 17ಕ್ಷೇತ್ರಗಳಲ್ಲಿ ಮುನ್ನಡೆ
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆಡಳಿತ ಪಕ್ಷ ಎಎಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ.
Sat, 08 Feb 202502:57 AM IST
ಮುನ್ನಡೆ ಅಂತರ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆಯುವ ಸ್ಥಾನಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಪ್ರಸ್ತುತ 22 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಎಎಪಿ 10, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿವೆ.
Sat, 08 Feb 202502:56 AM IST
18 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
ದೆಹಲಿ ವಿಧಾನಸಭೆ ಚುನಾವಣೆಯ ಆರಂಭದ ಮತ ಎಣಿಕೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ 8 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ ಎಂದು ವರದಿಯಾಗಿದೆ.
Sat, 08 Feb 202502:49 AM IST
ಬಿಜೆಪಿ 15, ಎಎಪಿ 4 ಕ್ಷೇತ್ರಗಳಲ್ಲಿ ಮುನ್ನಡೆ
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ, 15 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದರೆ, ಎಎಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಮೊದಲ ಸುತ್ತಿನ ಮತ ಎಣಿಕೆ ಪ್ರಗತಿಯಲ್ಲಿದೆ.
Sat, 08 Feb 202502:47 AM IST
13 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ದೆಹಲಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದ್ದು, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ 13 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
Sat, 08 Feb 202502:41 AM IST
ದೆಹಲಿ ಜನ ಸೇಡು ತೀರಿಸಿಕೊಳ್ಳುತ್ತಾರೆ-ಬಿಜೆಪಿ ಸಂಸದ
ದೆಹಲಿಯ ಜನರು ಆಮ್ ಆದ್ಮಿ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಹೊಸ ಇತಿಹಾಸ ಬರೆಯುವುದಾಗಿ ಇಲ್ಲಿನ ಜನರಿಗೆ ನಾವು ಭರವಸೆ ನೀಡಿದ್ದೇವೆ. ಫಲಿತಾಂಶದ ಬಳಿಕ ಅರವಿಂದ್ ಕೇಜ್ರಿವಾಲ್ ಅವರು ಇವಿಎಂ ಅನ್ನು ದೂರಲಿದ್ದಾರೆ ಎಂದು ಖಂಡೇಲ್ವಾಲ್ ಆರೋಪಿದ್ದಾರೆ.
Sat, 08 Feb 202502:35 AM IST
ಪುಟ್ಟ ‘ಕೇಜ್ರಿವಾಲ್’ ಪ್ರತ್ಯಕ್ಷ
ದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಪುಟ್ಟ ಬಾಲಕನೊರ್ವ ಕೇಜ್ರಿವಾಲ್ ಅವರಂತೆಯೇ ವೇಷ ಧರಿಸಿ ಬಂದಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
Sat, 08 Feb 202502:31 AM IST
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭ
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಒಟ್ಟು 19 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನಲ್ಲಿ ಅಂಚೆ ಮತ ಎಣಿಕೆ ನಡೆಯುತ್ತಿದೆ.
Sat, 08 Feb 202502:28 AM IST
ಈ ಬಾರಿಯ ಹೋರಾಟ ಪಕ್ಷದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ-ಎಎಪಿ ನಾಯಕ
ದೆಹಲಿಯಲ್ಲಿ ಈ ಭಾರಿ ನಡೆದಿರುವ ವಿಧಾನಸಭೆ ಚುನಾವಣೆ ಯಾವುದೇ ಪಕ್ಷದ ವಿರುದ್ಧ ನಡೆದಿದ್ದ ವ್ಯವಸ್ಥೆಯ ವಿರುದ್ಧ ನಡೆದಿದೆ. ಜನರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬ ವಿಶ್ವಾಸವಿದೆ. ಸ್ಪಷ್ಟ ಬಹುಮತದೊಂದಿಗೆ ದೆಹಲಿಯಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಎಎಪಿ ನಾಯಕ ಅನುರಾಗ್ ದಾಂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Sat, 08 Feb 202502:19 AM IST
ಖಾತೆ ತೆರೆಯುತ್ತಾ ಕಾಂಗ್ರೆಸ್
ಸತತ 15 ವರ್ಷಗಳ ಕಾಲ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಕಳೆದೊಂದು ದಶಕದಲ್ಲಿ ಇಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಅದರಲ್ಲೂ 2020 ರ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಕೈ ಪಕ್ಷ ಖಾತೆ ತೆರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Sat, 08 Feb 202502:16 AM IST
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಎಎಪಿ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡು ಬಾರಿ ಗೆದ್ದು ಬೀಗಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವಿನ ನೀರೀಕ್ಷೆಯಲ್ಲಿದೆ. ಎಎಪಿ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಮೊತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
Sat, 08 Feb 202502:03 AM IST
ಮೊದಲ ಸುತ್ತಿನಲ್ಲಿ ಅಂಚೆ ಮತಗಳ ಎಣಿಕೆ
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮೊದಲ ಸುತ್ತಿನಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಆ ನಂತರ ಇವಿಎಂ ಮತ ಎಣಿಕೆ ಆರಂಭವಾಗಲಿದೆ.
Sat, 08 Feb 202501:18 AM IST
27 ವರ್ಷಗಳ ಬಿಜೆಪಿಗೆ ರಾಜಧಾನಿ ಬರ ನೀಗುತ್ತಾ?
ದೇಶದಲ್ಲಿ ಸತತ ಮೂರನೇ ಬಾರಿಗೆ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕೇಂದ್ರ ಸ್ಥಾನ ದೆಹಲಿಯಲ್ಲಿ ಕಳೆದ 27 ವರ್ಷಗಳಿಂದ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. 2025ರ ದೆಹಲಿ ವಿಧಾನಸಭೆಯ ಮತದಾನದ ಬಳಿಕ ಸಮೀಕ್ಷೆಗಳು ಬಿಜೆಪಿಗೆ ಈ ಬಾರಿ ಬಹುಮತ ಸಿಗಲಿದೆ ಎಂದು ಹೇಳಿವೆ. ಹೀಗಾಗಿ ಕೇಸರಿ ಪಕ್ಷಕ್ಕೆ 27 ವರ್ಷಗಳ ಬಳಿಕ ರಾಜಧಾನಿ ಬರ ನೀಗುತ್ತಾ ಅನ್ನೋದು ಕುತೂಹಲ ಹೆಚ್ಚಿಸಿದೆ.
Sat, 08 Feb 202501:10 AM IST
2020 ರಲ್ಲಿ ಶೇಕಡಾ 62.59 ರಷ್ಟು ದಾಖಲೆಯ ಮತದಾನ
2020 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಶೇಕಡಾ 62.59 ರಷ್ಟು ಮತದಾನ ನಡೆದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ 56 ರಷ್ಟು ಮತದಾನ ನಡೆದಿತ್ತು. 2025ರ ಫೆಬ್ರವರಿ 5 ರಂದು ನಡೆದಿದ್ದ ಚುನಾವಣೆಯಲ್ಲಿ 60.39 ರಷ್ಟು ಮತದಾನವಾಗಿದೆ.
Sat, 08 Feb 202501:02 AM IST
19 ಕೇಂದ್ರಗಳಲ್ಲಿ ಮತ ಎಣಿಕೆ
ಇಂದು (ಫೆ 8, ಶನಿವಾರ) ಬೆಳಗ್ಗೆ 8 ಗಂಟೆಗೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಇದಾದ ಕೆಲವೇ ಗಂಟೆಗಳಲ್ಲಿ ಫಲಿತಾಂಶದ ಸ್ಪಷ್ಟ ಚಿತ್ರಣವನ್ನು ಚುನಾವಣಾ ಆಯೋಗ ನೀಡಲಿದೆ. 70 ಸ್ಥಾನಗಳ ದೆಹಲಿ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತಕ್ಕೆ 36 ಮ್ಯಾಜಿಕ್ ಸಂಖ್ಯೆಯಾಗಿದೆ.
Sat, 08 Feb 202512:59 AM IST
2020ರಲ್ಲಿ ಎಎಪಿಗೆ ಭರ್ಜರಿ ಗೆಲುವು
2020 ರಲ್ಲಿ ನಡೆದಿದ್ದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 62 ರಲ್ಲಿ ಗೆಲ್ಲುವ ಮೂಲಕ ಎಎಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ಕೇವಲ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ 15 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಗೆ ಒಂದೇ ಒಂದು ಸೀಟು ಕೂಡ ಸಿಕ್ಕಿರಲಿಲ್ಲ.
Sat, 08 Feb 202512:55 AM IST
ಮತ ಎಣಿಕೆ ಕೇಂದ್ರಗಳ ಬಳಿ ಬಿಗಿ ಭದ್ರತೆ
ದೆಹಲಿ ವಿಧಾಸಭೆ ಚುನಾವಣೆಯ ಮತ ಎಣಿಕೆ ಕೇಂದ್ರಗಳ ಬಳಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರದ ಬಳಿಕ ಪ್ಯಾರಾ ಮಿಲಿಟಿರಿಯನ್ನು ನಿಯೋಜಿಸಲಾಗಿದೆ. 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
Sat, 08 Feb 202512:52 AM IST
ಬೆಳಿಗ್ಗೆ 8 ಗಂಟೆಯಿಂದ ದೆಹಲಿ ವಿಧಾನಸಭೆ ಚುನಾವಣಾ ಮತ ಎಣಿಕೆ
ದೆಹಲಿ ವಿಧಾಸಭೆ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಮತ ಎಣಿಕೆಗಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.