Delhi Elections Highlights: ದೆಹಲಿ ವಿಧಾನಸಭಾ ಚುನಾವಣೆ ಎಕ್ಸಿಟ್‌ ಪೋಲ್‌; ಬಿಜೆಪಿ ಗೆಲ್ಲುತ್ತೆ ಎಂದ ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Elections Highlights: ದೆಹಲಿ ವಿಧಾನಸಭಾ ಚುನಾವಣೆ ಎಕ್ಸಿಟ್‌ ಪೋಲ್‌; ಬಿಜೆಪಿ ಗೆಲ್ಲುತ್ತೆ ಎಂದ ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು

Delhi Elections 2025 Live: ದೆಹಲಿ ವಿಧಾನಸಭಾ ಚುನಾವಣೆ, 70 ಕ್ಷೇತ್ರಗಳಲ್ಲೂ ನೀರಸ ಮತದಾನ(Livemint)

Delhi Elections Highlights: ದೆಹಲಿ ವಿಧಾನಸಭಾ ಚುನಾವಣೆ ಎಕ್ಸಿಟ್‌ ಪೋಲ್‌; ಬಿಜೆಪಿ ಗೆಲ್ಲುತ್ತೆ ಎಂದ ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು

01:54 PM ISTFeb 05, 2025 07:24 PM Prasanna Kumar P N
  • twitter
  • Share on Facebook
01:54 PM IST

Delhi Assembly Election 2025 Highlights: ದೆಹಲಿ ಗದ್ದುಗೆಗೆ ಮತದಾನ ಪೂರ್ಣಗೊಂಡಿದೆ. ಎಲ್ಲಾ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 699 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಆಮ್‌ ಆದ್ಮಿ ಪಕ್ಷ ಮತ್ತೆ ಅಧಿಕಾರ ವಿಸ್ತರಿಸುವ ನಿರೀಕ್ಷೆಯಲ್ಲಿದೆ. ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಗೆಲುವಿನ ಭವಿಷ್ಯ ನುಡಿಯಲಾಗಿದೆ.

Wed, 05 Feb 202501:54 PM IST

ದೆಹಲಿಯಲ್ಲಿ ಕಾಂಗ್ರೆಸ್‌ ಪತನ!

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 35-50 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಸರ್ಕಾರ ರಚಿಸಲು ಸಾಧ್ಯವಾಗುವ ಸರಳ ಬಹುಮತ 36ನ್ನು ಸುಲಭವಾಗಿ ತಲುಪಲಿದೆ ಎಂದು ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾ ಸಮೀಕ್ಷಕರ ಪ್ರಕಾರ, ಕಾಂಗ್ರೆಸ್ ದೆಹಲಿಯಲ್ಲಿ 0-3 ಸ್ಥಾನಗಳಿಗೆ ಸೀಮಿತವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

Wed, 05 Feb 202501:39 PM IST

ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತಿವೆ

ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ಅಂದಾಜಿಸಿವೆ. ಇದೇ ವೇಳೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಹ್ಯಾಟ್ರಿಕ್ ಸಾಧನೆಗೆ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ.

Wed, 05 Feb 202501:34 PM IST

ಪೋಲ್‌ ಡೈರಿ ಎಕ್ಸಿಟ್‌ ಪೋಲ್

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಸಿಗಲಿದೆ ಎಂದು ಪೋಲ್‌ ಡೈರಿ ಎಕ್ಸಿಟ್‌ ಪೋಲ್ ಅಂಕಿ-ಅಂಶಗಳು ಹೇಳಿವೆ.

ಬಿಜೆಪಿ: 42-50

ಎಎಪಿ: 18-25

ಕಾಂಗ್ರೆಸ್: 00-02

ಇತರ: 00-00

Wed, 05 Feb 202501:33 PM IST

ಡಿವಿ ರಿಸರ್ಚ್ ಮತಗಟ್ಟೆ ಸಮೀಕ್ಷೆ

ಬಿಜೆಪಿ ಗೆಲ್ಲುವ ಸಾಧ್ಯತೆ ಇದ್ದು, ಆಡಳಿತಾರೂಢ ಎಎಪಿಗಿಂತ 10 ಸ್ಥಾನ ಹೆಚ್ಚು ಗೆಲ್ಲುತ್ತೆ ಎಂದು ಡಿವಿ ರಿಸರ್ಚ್ ಮತಗಟ್ಟೆ ಸಮೀಕ್ಷೆ ಹೇಳಿದೆ.

ಬಿಜೆಪಿ: 36-44

ಎಎಪಿ: 26-34

ಕಾಂಗ್ರೆಸ್: 00

ಇತರೆ:00

Wed, 05 Feb 202501:26 PM IST

ಚಾಣಕ್ಯ ಸ್ಟ್ರಾಟಜೀಸ್ ಮತಗಟ್ಟೆ ಸಮೀಕ್ಷೆಯ ಫಲಿತಾಂಶ

ಚಾಣಕ್ಯ ಸ್ಟ್ರಾಟಜೀಸ್ ಎಕ್ಸಿಟ್‌ ಪೋಲ್ ಸಮೀಕ್ಷೆಯು 70 ಸ್ಥಾನಗಳ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 39-44 ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜಿಸಿದೆ. ಆಮ್ ಆದ್ಮಿ ಪಕ್ಷ 25-28 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಊಹಿಸಲಾಗಿದೆ.

ಬಿಜೆಪಿ: 39-44

ಎಎಪಿ: 25-28

ಕಾಂಗ್ರೆಸ್: 2-3

Wed, 05 Feb 202501:24 PM IST

ಬಿಜೆಪಿ ಗೆಲ್ಲುತ್ತೆ ಎಂದ ಜೆವಿಸಿ ಸಮೀಕ್ಷೆ

70 ಸ್ಥಾನಗಳ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 39-45 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜೆವಿಸಿ ಮತಗಟ್ಟೆ ಸಮೀಕ್ಷೆ ಅಂದಾಜಿಸಿದೆ. ಇದೇ ವೇಳೆ ಆಮ್ ಆದ್ಮಿ ಪಕ್ಷ ಬಹುಮತ ಗಳಿಸುವ ಸಾಧ್ಯತೆ ಕಡಿಮೆ ಎಂದಿದೆ. 22ರಿಂದ 31 ಕ್ಷೇತ್ರಗಳಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದೆ.

ಬಿಜೆಪಿ: 39-45

ಎಎಪಿ: 22-31

ಕಾಂಗ್ರೆಸ್: 0-2

Wed, 05 Feb 202501:21 PM IST

ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದ ಪಿ-ಮಾರ್ಕ್

ಪಿ-ಮಾರ್ಕ್ ಮತಗಟ್ಟೆ ಸಮೀಕ್ಷೆಯು ಬಿಜೆಪಿ 39-49 ಸ್ಥಾನಗಳೊಂದಿಗೆ ಸುಲಭ ಬಹುಮತ ಸಾಧಿಸುತ್ತದೆ ಎಂದು ಅಂದಾಜಿಸಿದೆ. ಇದೇ ವೇಳೆ ಆಮ್ ಆದ್ಮಿ ಪಕ್ಷ 21ರಿಂದ 31 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ.

ಎಎಪಿ: 21-31

ಬಿಜೆಪಿ: 39-49

ಕಾಂಗ್ರೆಸ್: 0-1

Wed, 05 Feb 202501:18 PM IST

ಮತ್ತೆ ದೆಹಲಿ ಗದ್ದುಗೆ ಏರುತ್ತಾ ಬಿಜೆಪಿ? 3 ಮತಗಟ್ಟೆ ಸಮೀಕ್ಷೆಗಳ ಭವಿಷ್ಯ

ದೆಹಲಿ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶಗಳು ಹೊರಬರುತ್ತಿವೆ. ಇಲ್ಲಿಯವರೆಗೆ ಮೂರು ಎಕ್ಸಿಟ್‌ ಪೋಲ್ ಸಮೀಕ್ಷೆಳು ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ.

Wed, 05 Feb 202501:14 PM IST

ಬಿಜೆಪಿ ಗೆಲುವು ಎಂದ ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸಮೀಕ್ಷೆ

ಪೀಪಲ್ಸ್ ಇನ್‌ಸೈಟ್ ಎಕ್ಸಿಟ್ ಪೋಲ್ ಫಲಿತಾಂಶವು ದೆಹಲಿಯಲ್ಲಿ ಬಿಜೆಪಿಗೆ ಮುನ್ನಡೆ ನೀಡಿದರೆ, ಆಮ್ ಆದ್ಮಿ ಪಕ್ಷ 25ರಿಂದ 29 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

-ಎಎಪಿ: 25-29

-ಬಿಜೆಪಿ: 40-44

-ಕಾಂಗ್ರೆಸ್: 0-2

Wed, 05 Feb 202501:09 PM IST

ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿದೆ

-ಬಿಜೆಪಿ+ : 35-40 (46 ಶೇ)

-ಎಎಪಿ : 32-37 (44 ಶೇ)

-ಕಾಂಗ್ರೆಸ್: 0-1 (8 ಶೇ)

Wed, 05 Feb 202501:08 PM IST

ದೆಹಲಿ ಮತಗಟ್ಟೆ ಸಮೀಕ್ಷೆ

ಪೀಪಲ್ಸ್‌ ಪಲ್ಸ್ ಮತಗಟ್ಟೆ ಸಮೀಕ್ಷೆ

ಬಿಜೆಪಿ - 5ರಿಂದ 60

ಎಎಪಿ - 10-19

ಕಾಂಗ್ರೆಸ್ - 0

ಇತರ - 0

Wed, 05 Feb 202501:05 PM IST

ಮೊದಲ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಬಹಿರಂಗ

ಮೊದಲ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ಪೀಪಲ್ಸ್ ಪಲ್ಸ್ ಆಂಡ್‌ ಕೊಡೆಮೊ ಪ್ರಕಾರ, 27 ವರ್ಷಗಳ ನಂತರ ಬಿಜೆಪಿ 51-60 ಸ್ಥಾನಗಳೊಂದಿಗೆ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದೆ. ಎಎಪಿ 20 ಸ್ಥಾನಗಳಿಗಿಂತ ಕಡಿಮೆ ಸ್ಥಾನ ಗಳಿಸಬಹುದು ಎಂದು ಅಂದಾಜಿಸಿದೆ.

Wed, 05 Feb 202512:32 PM IST

ಎಕ್ಸಿಟ್‌ ಪೋಲ್‌ಗೆ ಕ್ಷಣಗಣನೆ

ದೆಹಲಿ ಚುನಾವಣೆಯ ಮತದಾನಕ್ಕೆ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. 6:30ರ ನಂತರ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬೀಳಲಿದೆ.

Wed, 05 Feb 202512:26 PM IST

ಸಂಜೆ 5 ಗಂಟೆಯವರೆಗೆ 57.70 ಶೇ ಮತದಾನ

ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಅಂತಿಮ ಹಂತಕ್ಕೆ ಬರುತ್ತಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಸಂಜೆ 5 ಗಂಟೆಯವರೆಗೆ ಶೇ. 57.70 ರಷ್ಟು ಮತದಾನ ದಾಖಲಾಗಿದೆ.

Wed, 05 Feb 202511:38 AM IST

ಜಿಲ್ಲಾವಾರು ಮತದಾನ ಪ್ರಮಾಣ

ಚುನಾವಣಾ ಆಯೋಗದ ಪ್ರಕಾ ಪ್ರಕಾರ, ನೈಋತ್ಯ ಜಿಲ್ಲೆಯಲ್ಲಿ ಶೇ.48.32, ಪೂರ್ವದಲ್ಲಿ ಶೇ.47.09, ಉತ್ತರದಲ್ಲಿ ಶೇ.46.31, ವಾಯವ್ಯದಲ್ಲಿ ಶೇ.46.81, ಶಹದಾರದಲ್ಲಿ ಶೇ.49.58, ದಕ್ಷಿಣದಲ್ಲಿ ಶೇ.44.89, ಆಗ್ನೇಯದಲ್ಲಿ ಶೇ.43.91 ಮತ್ತು ಪಶ್ಚಿಮದಲ್ಲಿ ಶೇ.45.03ರಷ್ಟು ಮತದಾನವಾಗಿದೆ.

Wed, 05 Feb 202511:08 AM IST

ನಕಲಿ ಮತದಾನ ಆರೋಪ; ಇಬ್ಬರ ಬಂಧನ

ನಕಲಿ ಮತದಾನ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ನಕಲಿ ಮತದಾನದ ಆರೋಪದ ಮೇಲೆ ಕನಿಷ್ಠ ಇಬ್ಬರನ್ನು ಬಂಧಿಸಲಾಗಿದೆ ಎಂದು ವಿಶೇಷ ಸಿಪಿ ಡಿ.ಸಿ. ಶ್ರೀವಾಸ್ತವ ಬುಧವಾರ ಹೇಳಿದ್ದಾರೆ.

Wed, 05 Feb 202510:18 AM IST

ಮಧ್ಯಾಹ್ನ 3 ಗಂಟೆಯವರೆಗೆ 46.55 ಶೇ. ಮತದಾನ

ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, 70 ಸದಸ್ಯರ ವಿಧಾನಸಭೆಗೆ ಮಧ್ಯಾಹ್ನ 3 ಗಂಟೆಯವರೆಗೆ 46.55 ಶೇ. ಮತದಾನ ದಾಖಲಾಗಿದೆ.

Wed, 05 Feb 202509:55 AM IST

ಎಎಪಿ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪಗಳು

ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಬಿಜೆಪಿ ಮತಗಟ್ಟೆಗಳ ಬಳಿ ಹಣ ಹಂಚುತ್ತಿದೆ ಎಂದು ಎಎಪಿ ಹೇಳಿದರೆ, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು ರಾಷ್ಟ್ರ ರಾಜಧಾನಿಯಲ್ಲಿ ನಕಲಿ ಮತದಾನಕ್ಕೆ ಎಎಪಿ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

Wed, 05 Feb 202508:28 AM IST

ಮಧ್ಯಾಹ್ನ 1 ಗಂಟೆಯವರೆಗೆ ಶೇ. 33.31ರಷ್ಟು ಮತದಾನ

ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ದೆಹಲಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 33.31 ರಷ್ಟು ಮತದಾನ ದಾಖಲಾಗಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಇಂದು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.

Wed, 05 Feb 202507:36 AM IST

ಕಪಿಲ್ ಸಿಬಲ್ ಕಿಡಿ

ನೀರಸ ಮತದಾನದ ಹಿನ್ನೆಲೆಯಲ್ಲಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ. ಮತದಾನವು ಭಾರವಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬ ನಾಗರಿಕನು ಹೊರಬಂದು ಮತ ಚಲಾಯಿಸಬೇಕು. ಏಕೆಂದರೆ ನೀವು ಒಂದು ಸಮುದಾಯದಲ್ಲಿ ವಾಸಿಸುತ್ತಿದ್ದರೆ, ನೀವು ಯಾರಿಗೆ ಮತ ಹಾಕುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಭಾಗವಹಿಸಬೇಕು. ನೀವು ಮತ ​​ಚಲಾಯಿಸಲು ಸಾಧ್ಯವಾಗದಿದ್ದರೆ, ನೀವು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Wed, 05 Feb 202507:25 AM IST

ಮತ ಚಲಾಯಿಸಿದ ಕೇಜ್ರಿವಾಲ್

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬ ಸದಸ್ಯರು ಮತ ಚಲಾಯಿಸಿದರು.

Wed, 05 Feb 202507:04 AM IST

ಮತ ಚಲಾಯಿಸಲು ಹೊರಟ ಅರವಿಂದ್ ಕೇಜ್ರಿವಾಲ್

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಲು ಹೊರಟಿದ್ದಾರೆ.

Wed, 05 Feb 202506:48 AM IST

ಎಲ್ಲೆಲ್ಲಿ ಎಷ್ಟು ಮತದಾನ

ಕೇಂದ್ರ ದೆಹಲಿ-16.46%

ಪೂರ್ವ ದೆಹಲಿ-20.03 %

ನವದೆಹಲಿ 16.80 %

ಉತ್ತರ ದೆಹಲಿ-18.63 %

ಈಶಾನ್ಯ ದೆಹಲಿ- 24.87%

ವಾಯುವ್ಯ ದೆಹಲಿ - 19.75%

ಶಹದಾರ -23.30 %

ದಕ್ಷಿಣ ದೆಹಲಿ -19.75 %

ಆಗ್ನೇಯ ದೆಹಲಿ - 19.66%

ನೈಋತ್ಯ ದೆಹಲಿ - 21.90%

ಪಶ್ಚಿಮ ದೆಹಲಿ-17.67 %

Wed, 05 Feb 202506:45 AM IST

ಈಶಾನ್ಯ ದೆಹಲಿಯಲ್ಲಿ ಅತಿ ಹೆಚ್ಚು ಮತದಾನ

ಬೆಳಿಗ್ಗೆ 11 ಗಂಟೆಯ ಹೊತ್ತಿಗೆ, ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.19.95 ರಷ್ಟು ಮತದಾನವಾಗಿದೆ. ಈಶಾನ್ಯ ದೆಹಲಿಯಲ್ಲಿ ಅತಿ ಹೆಚ್ಚು ಶೇ.24.87 ರಷ್ಟು ಮತ್ತು ಮಧ್ಯ ದೆಹಲಿಯಲ್ಲಿ ಅತಿ ಕಡಿಮೆ ಶೇ.16.46 ರಷ್ಟು ಮತದಾನ ದಾಖಲಾಗಿದೆ.

Wed, 05 Feb 202506:38 AM IST

Delhi Elections 2025: ನೀರಸ ಮತದಾನ

ದೆಹಲಿ ಚುನಾವಣೆಯಲ್ಲಿ ನೀರಸ ಮತದಾನ ನಡೆಯುತ್ತಿದೆ. ಗಂಟೆ 11 ಆದರೂ ಆಗಿರುವ ಮತದಾನದ ಪ್ರಮಾಣ ಶೇ. 19.95 ರಷ್ಟು ಮತದಾನವಾಗಿದೆ. ಇದು 70 ಕ್ಷೇತ್ರಗಳ ಲೆಕ್ಕಾಚಾರವಾಗಿದೆ. ಆದರೆ ಮತದಾನದ ಪ್ರಮಾಣ ಏರಿಕೆಯಾಗುತ್ತಾ ಇಲ್ಲವೇ ಎಂಬುದು ಸದ್ಯದ ಕುತೂಹಲ ಪ್ರಶ್ನೆಯಾಗಿದೆ.

ಹಂಚಿಕೊಳ್ಳಲು ಲೇಖನಗಳು

  • twitter