Aravind Kejriwal: ಆಪ್‌ ಶಾಸಕರನ್ನು ಸೆಳೆಯಲು ಬಿಜೆಪಿಯಿಂದ ಲಂಚದ ಆರೋಪ, ಎಸಿಬಿ ತನಿಖೆ, ಕೇಜ್ರಿವಾಲ್‌ ನಿವಾಸದಲ್ಲಿ ಹೈಡ್ರಾಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aravind Kejriwal: ಆಪ್‌ ಶಾಸಕರನ್ನು ಸೆಳೆಯಲು ಬಿಜೆಪಿಯಿಂದ ಲಂಚದ ಆರೋಪ, ಎಸಿಬಿ ತನಿಖೆ, ಕೇಜ್ರಿವಾಲ್‌ ನಿವಾಸದಲ್ಲಿ ಹೈಡ್ರಾಮ

Aravind Kejriwal: ಆಪ್‌ ಶಾಸಕರನ್ನು ಸೆಳೆಯಲು ಬಿಜೆಪಿಯಿಂದ ಲಂಚದ ಆರೋಪ, ಎಸಿಬಿ ತನಿಖೆ, ಕೇಜ್ರಿವಾಲ್‌ ನಿವಾಸದಲ್ಲಿ ಹೈಡ್ರಾಮ

Aravind Kejriwal: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನವೇ ರಾಜಧಾನಿಯಲ್ಲಿ ರಾಜಕೀಯ ಹೈಡ್ರಾಮ ಜೋರಾಗಿದೆ. ಅರವಿಂದ ಕೇಜ್ರಿವಾಲ್‌ ಹೇಳಿಕೆ ಆಧರಿಸಿ ಎಸಿಬಿ ತನಿಖೆ ನಡೆಸುತ್ತಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌

Aravind Kejriwal: ದೆಹಲಿ ವಿಧಾನಸಭೆ ಚುನಾವಣೆ ಮುಗಿದು ಶನಿವಾರ ಮತ ಎಣಿಕೆ ನಡೆಯಲಿದ್ದು, ಇದಕ್ಕೂ ಮುನ್ನಾ ದಿನವೇ ದೆಹಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಬಿಜೆಪಿಯು ದೆಹಲಿಯಲ್ಲಿ ಗೆಲ್ಲಬಹುದಾದ 16 ಶಾಸಕರನ್ನು ಸೆಳೆಯಲು ಕೋಟ್ಯಂತರ ರೂ. ಹಣ ವ್ಯಯಸುತ್ತಿದೆ ಎಂದು ಆಪ್‌ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಆರೋಪಿಸಿರುವುದು ತಲ್ಲಣ ಮೂಡಿಸಿದೆ. ಈ ಕುರಿತು ಎಸಿಬಿ ತನಿಖೆಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಆದೇಶಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ಕೇಜ್ರಿವಾಲ್‌ ನಿವಾಸಕ್ಕೆ ತನಿಖೆಗೆಂದು ಆಗಮಿಸಿದ್ದಾರೆ. ಹಣದ ಮೂಲ ಯಾವುದು ಎನ್ನುವ ಮಾಹಿತಿ ನೀಡಿ ಎಂದು ಎಸಿಬಿ ಅಧಿಕಾರಿಗಳು ಕೇಜ್ರಿವಾಲ್‌ ವಿಚಾರಣೆ ನಡೆಸಲು ಮುಂದಾಗಿದ್ದು. ಆಪ್‌ ಕಾರ್ಯಕರ್ತರು ಮನೆ ಪ್ರವೇಶಿಸದಂತೆ ಅಡ್ಡಿಪಡಿಸಿರುವುದು ಹೈಡ್ರಾಮ ಸೃಷ್ಟಿಸಿದೆ.

ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಬರಬೇಕಿದೆ. ಇದರ ನಡುವೆಯೇ ಬಿಜೆಪಿಯು ಆಮ್‌ ಆದ್ಮಿ ಪಕ್ಷದಿಂದ ಗೆಲ್ಲಬಹುದಾದ ಸುಮಾರು ಹದಿನೈದು ಶಾಸಕರನ್ನು ತನ್ನೆಡೆಗೆ ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ಗೆಲ್ಲುವವರಿಗೆ ತಲಾ 15 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ಅರವಿಂದ ಕೇಜ್ರಿವಾಲ್‌ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದಲ್ಲದೇ ಬಿಜೆಪಿ ಸಂಸದ ಸಂಜಯ್‌ ಸಿಂಗ್‌ ಕೂಡ ಇದೇ ವಿಚಾರ ಪ್ರಸ್ತಾಪಿಸಿ ಈಗಾಗಲೇ ಏಳು ಶಾಸಕರಿಗೆ ಹಣ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದಾದ ಬಳಿಕ ಬಿಜೆಪಿ ದೆಹಲಿ ಘಟಕ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ದೂರು ಸಲ್ಲಿಸಿದ್ದರು. ಇದು ಗಂಭೀರ ಸ್ವರೂಪದ ಆರೋಪ. ಯಾರು ಹಣ ಕೊಟ್ಟಿದ್ದಾರೆ. ಎಲ್ಲಿ ನೀಡಿದ್ದಾರೆ. ಯಾರು ಪಡೆದಿದ್ದಾರೆ ಎನ್ನುವ ಕುರಿತು ತನಿಖೆ ನಡೆಸುವುದು ಸೂಕ್ತ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು. ಮನವಿಗೆ ಸ್ಪಂದಿಸಿದ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಈ ಕುರಿತು ಎಸಿಬಿ ತನಿಖೆ ನಡೆಸುವಂತೆ ದೆಹಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಆನಂತರ ಎಸಿಬಿಯಲ್ಲಿ ಪ್ರಕರಣವೂ ದಾಖಲಾಗಿತ್ತು. ತನಿಖೆ ಆರಂಭಿಸಿದ ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೇಳಿಕೆ ಕುರಿತು ಮಾಹಿತಿ ನೀಡುವಂತೆ ದೆಹಲಿಯಲ್ಲಿರುವ ಅರವಿಂದ ಕೇಜ್ರಿವಾಲ್‌ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ತೆರಳಿದ್ದರು. ಈ ವೇಳೆ ಅಪ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಎಸಿಬಿ ಅಧಿಕಾರಿಗಳು ಕೇಜ್ರಿವಾಲ್‌ ಅವರ ಮನೆ ಒಳಗೆ ತೆರಳದಂತೆ ತಡೆದರು. ಆಗ ಹೈಡ್ರಾಮವೇ ಸೃಷ್ಟಿಯಾಗಿ ಗದ್ದಲ ಏರ್ಪಟ್ಟಿತು.

ಕೇಜ್ರಿವಾಲ್‌ಗೆ ಪಂಚ ಪ್ರಶ್ನೆ

ಈ ವೇಳೆ ಸಿಬ್ಬಂದಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ಸಹಾಯಕರ ಮೂಲಕ ಪ್ರಶ್ನೆಗಳನ್ನು ಕಳುಹಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಂದ ಎಸಿಬಿ ಐದು ಪ್ರಶ್ನೆಗಳನ್ನು ಕೇಳಿದೆ

  • ಟ್ವೀಟ್ ಅನ್ನು ನೀವು ಪೋಸ್ಟ್ ಮಾಡಿದ್ದೀರಾ ಅಥವಾ ಬೇರೆಯೇ?
  • ನಿಮ್ಮ ಪಕ್ಷದ 16 ಶಾಸಕ ಅಭ್ಯರ್ಥಿಗಳಿಗೆ ಲಂಚ ನೀಡಲಾಗಿದೆ ಎಂಬ ಟ್ವೀಟ್‌ನಲ್ಲಿನ ವಿಷಯಗಳನ್ನು ನೀವು ಒಪ್ಪುತ್ತೀರಾ?
  • ಲಂಚದ ಆರೋಪದ ಕುರಿತು ದೂರವಾಣಿ ಕರೆಗಳನ್ನು ಸ್ವೀಕರಿಸಿದ ಶಾಸಕರ 16 ಅಭ್ಯರ್ಥಿಗಳ ವಿವರಗಳೇನು.
  • ಆಪಾದಿತ ಲಂಚದ ಪ್ರಸ್ತಾಪದ ಕುರಿತು ಮೇಲೆ ಹೇಳಿದ ಶಾಸಕರನ್ನು ಸಂಪರ್ಕಿಸಿದ ಫೋನ್ ಸಂಖ್ಯೆಗಳು/ವ್ಯಕ್ತಿಗಳ ವಿವರಗಳನ್ನು ಕೊಡಿ
  • ನೀವು ಮತ್ತು ನಿಮ್ಮ ಪಕ್ಷದ ಸದಸ್ಯರು ವಿವಿಧ ಮಾಧ್ಯಮ/ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಂಚದ ಪ್ರಸ್ತಾಪದ ಕ್ಲೈಮ್/ಆಪಾದನೆಗಳನ್ನು ಬೆಂಬಲಿಸುವ ಯಾವುದೇ ಇತರ ವಿವರ/ಸಾಕ್ಷ್ಯ ಇದೆಯಾ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.