ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ

ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಅವರ ಸಮ್ಮುಖದಲ್ಲಿ ದೆಹಲಿ ಪಾಲಿಕೆಯ ಮೂವರು ಎಎಪಿ ಸದಸ್ಯರು ಬಿಜೆಪಿ ಸೇರಿದರು. ಏಪ್ರಿಲ್‌ನಲ್ಲಿ ದೆಹಲಿ ಪಾಲಿಕೆಯ ಮೇಯರ್ ಚುನಾವಣೆಯ ನಡೆಯಲಿರುವ ಕಾರಣ ಈ ಪಕ್ಷ ಸೇರ್ಪಡೆ ಮಹತ್ವ ಪಡೆದುಕೊಂಡಿದೆ.

ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತವಾಗಿದ್ದು, ದೆಹಲಿ ಪಾಲಿಕೆಯ ಮೂವರು ಸದಸ್ಯರು ಇಂದು ಬಿಜೆಪಿ ಸೇರ್ಪಡೆಯಾದರು.
ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತವಾಗಿದ್ದು, ದೆಹಲಿ ಪಾಲಿಕೆಯ ಮೂವರು ಸದಸ್ಯರು ಇಂದು ಬಿಜೆಪಿ ಸೇರ್ಪಡೆಯಾದರು.

ದೆಹಲಿ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಆಮ್ ಆದ್ಮಿ ಪಾರ್ಟಿ (ಎಎಪಿ)ಗೆ ಮತ್ತೊಂದು ಆಘಾತ ಎದುರಾಗಿದೆ. ದೆಹಲಿ ಪಾಲಿಕೆ (ಎಂಸಿಡಿ)ಯ ತನ್ನ ಸದಸ್ಯರ ಪೈಕಿ ಮೂವರನ್ನು ಅದು ಕಳೆದುಕೊಂಡಿದೆ. ಆಮ್ ಆದ್ಮಿ ಪಾರ್ಟಿಯ ಮೂವರು ಪಾಲಿಕೆ ಸದಸ್ಯರು ಇಂದು (ಫೆ 15) ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು. ಏಪ್ರಿಲ್‌ನಲ್ಲಿ ದೆಹಲಿ ಪಾಲಿಕೆಯ ಮೇಯರ್ ಚುನಾವಣೆಯ ನಡೆಯಲಿರುವ ಕಾರಣ ಈ ಪಕ್ಷ ಸೇರ್ಪಡೆ ಮಹತ್ವ ಪಡೆದುಕೊಂಡಿದೆ.

ದೆಹಲಿ ಪಾಲಿಕೆಯ ಮೂವರು ಎಎಪಿ ಸದಸ್ಯರು ಬಿಜೆಪಿ ಸೇರಿದ್ರು

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಆಮ್ ಆದ್ಮಿ ಪಾರ್ಟಿಯ ಸದಸ್ಯರಾಗಿದ್ದ ಅನಿತಾ ಬಸೋಯಾ, ನಿಖಿಲ್ ಚಾಪರಾನ, ಧರಂವೀರ್ ಸಿಂಗ್ ಅವರು ಬಿಜೆಪಿ ದೆಹಲಿ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು. ಸಚ್‌ದೇವಾ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಾಚ್ದೇವಾ ಅವರು, ದೆಹಲಿಯ 145ನೇ ವಾರ್ಡ್‌ ಸದಸ್ಯೆ ಅನಿತಾ ಬಾಸೋಯಾ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷ ಸೇರ್ಪಡೆಯಾಗಿದ್ದಾರೆ. ಇದೇ ರೀತಿ, ಹರಿನಗರ ವಾರ್ಡ್‌ 183ರ ಕೌನ್ಸಿಲರ್‌ ನಿಖಿಲ್ ಚಾಪರಾನಾ ಕೂಡ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ. ಆರ್‌ಕೆಪುರಂ ವಾರ್ಡ್‌ ಕೌನ್ಸಿಲರ್ ಧರ್ಮವೀರ್ ಸಿಂಗ್ ಕೂಡ ಬಿಜೆಪಿ ಸೇರಿದ್ದಾರೆ ಎಂದು ಘೋಷಿಸಿದರು. ಇದೇ ವೇಳೆ, ಆಮ್ ಆದ್ಮಿ ಪಾರ್ಟಿಯ ದೆಹಲಿ ಜಿಲ್ಲಾ ಅದ್ಯಕ್ಷ ಸಂದೀಪ್ ಬಾಸೊಯಾ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಘೋಷಿಸಿದರು.

ದೆಹಲಿ ಪಾಲಿಕೆ: ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ

ದೆಹಲಿ ಪಾಲಿಕೆಯ ಮೇಯರ್ ಹುದ್ದೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಮೇಯರ್‌ ಸ್ಥಾನವನ್ನು ತನ್ನ ವಶಮಾಡಿಕೊಳ್ಳಲು ಬಿಜೆಪಿ ಈಗಾಗಲೆ ಕಸರತ್ತು ಅರಂಭಿಸಿದೆ. 2024ರ ನವೆಂಬರ್‌ನಲ್ಲಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆಗ ಎಎಪಿಯ ಮಹೇಸ್ ಖಿಂಚಿ ಅವರು ಬಿಜೆಪಿಯ ಕಿಶನ್ ಲಾಲ್‌ ಅವರನ್ನು ಮೂರು ಮತಗಳಿಂದ ಸೋಲಿಸಿದ್ದರು. ಆಗ 263 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಖಿಂಚಿಗೆ 133 ಮತ್ತು ಲಾಲ್ ಅವರಿಗೆ 130 ಮತಗಳು ಬಿದ್ದಿದ್ದವು. ಎರಡು ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿತ್ತು.

ದೆಹಲಿ ಪಾಲಿಕೆಯಲ್ಲಿ ಒಟ್ಟು 250 ಕೌನ್ಸಿಲರ್‌ಗಳ ಸ್ಥಾನಗಳಿವೆ. ಇವುಗಳ ಪೈಕಿ, 11 ಕೌನ್ಸಿಲರ್‌ಗಳು ಸಂಸದರು ಮತ್ತು ಶಾಸಕರಾಗಿದ್ದಾರೆ. ಹೀಗಾಗಿ ಸದ್ಯ ಕೌನ್ಸಿಲರ್‌ಗಳ ಸಂಖ್ಯೆ ಈಗ 239. ಅದರಲ್ಲಿ 119 ಎಎಪಿ ಸದಸ್ಯರು. 113 ಬಿಜೆಪಿ ಸದಸ್ಯರು. 7 ಸದಸ್ಯರು ಕಾಂಗ್ರೆಸ್‌ನವರು. ಈಗ ಎಎಪಿಯ ಈ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಹೋದ ಕಾರಣ ಎಎಪಿ ಕೌನ್ಸಿಲರ್‌ಗಳ ಸಂಖ್ಯೆ 116 ಮತ್ತು ಬಿಜೆಪಿ ಮತ್ತು ಎಎಪಿ ಕೌನ್ಸಿಲರ್‌ಗಳ ನಡುವಿನ ವ್ಯತ್ಯಾಸ ಮೂರಕ್ಕೆ ಇಳಿಕೆಯಾಗಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಬಳಿಕ ನಡೆದಿರುವ ರಾಜಕೀಯ ವಿದ್ಯಮಾನಗಳು ಬಿಜೆಪಿ ಪ್ರಾಬಲ್ಯವನ್ನು ಹೆಚ್ಚಿಸಿದೆ. ದೆಹಲಿ ಪಾಲಿಕೆಯ ಮೇಯರ್ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಮತ್ತು ಪಾಲಿಕೆ ಮೂರು ಕಡೆ ಬಿಜೆಪಿ ಸರ್ಕಾರ ಬರಬೇಕು ಎಂಬ ಇಚ್ಛೆಯೊಂದಿಗೆ ಬಿಜೆಪಿ ನಾಯಕರು ಮುಂದಡಿ ಇಟ್ಟಿರುವುದು ಕಂಡುಬಂದಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.