ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು

ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು

ದೆಹಲಿ ಚುನಾವಣಾ ಫಲಿತಾಂಶ 2025 ಪೂರ್ತಿ ಪ್ರಕಟವಾಗಿದೆ. ಬಿಜೆಪಿಗೆ 48 ಮತ್ತು ಎಎಪಿಗೆ 22 ಸ್ಥಾನಗಳು ಸಿಕ್ಕಿವೆ. ಎಕ್ಸಿಟ್ ಪೋಲ್‌ಗಳ ಪೈಕಿ ಯಾವುದು ನಿಜವಾಗಿದೆ ಅಥವಾ ನೈಜ ಫಲಿತಾಂಶಕ್ಕೆ ಹತ್ತಿರದಲ್ಲಿದೆ ಎಂಬುದನ್ನು ನೋಡೋಣ.

ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು.
ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್‌ ಪೋಲ್‌ ಯಾವುದು ಎಷ್ಟು ನಿಜವಾಯಿತು.

ನವದೆಹಲಿ: ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪೂರ್ತಿಯಾಗಿ ಪ್ರಕಟವಾಗಿದೆ. ದೆಹಲಿಯ ವಿಧಾನಸಭೆಯ 70 ಸ್ಥಾನಗಳ ಪೈಕಿ ಬಿಜೆಪಿಗೆ 48 ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ)ಗೆ 22 ಸ್ಥಾನಗಳು ಸಿಕ್ಕಿವೆ. ಇದರೊಂದಿಗೆ 27 ವರ್ಷಗಳ ಬಳಿಕ ಬಿಜೆಪಿಗೆ ದೆಹಲಿಯ ಆಡಳಿತ ಚುಕ್ಕಾಣಿ ಲಭಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಭಾರತ ಸರ್ಕಾರ ಹಾಗೂ ದೆಹಲಿ ಸರ್ಕಾರ ಒಟ್ಟಿಗೆ ನಡೆಸುವ ಅವಕಾಶ ಸಿಕ್ಕಿದೆ. ಡಬಲ್ ಎಂಜಿನ್ ಸರ್ಕಾರಕ್ಕೆ ಮತದಾರರು ಅವಕಾಶ ನೀಡಿದ್ದು, ಮತಗಟ್ಟೆ ಸಮೀಕ್ಷೆ ಸಂದರ್ಭದಲ್ಲೇ ಬಿಜೆಪಿ ಗೆಲುವಿನ ಸುಳಿವನ್ನು ನೀಡಿದ್ದರು. ದೆಹಲಿ ಚುನಾವಣೆ 2025ಕ್ಕೆ ಸಂಬಂಧಿಸಿದ ಎಕ್ಸಿಟ್ ಪೋಲ್ ಮತ್ತು ನೈಜ ಫಲಿತಾಂಶವನ್ನು ಹೋಲಿಸಿ ನೋಡುವುದಕ್ಕೆ ಇದು ಸರಿಯಾದ ಸಂದರ್ಭ. ಇಲ್ಲಿದೆ ಆ ತುಲನಾತ್ಮಕ ವಿವರ.

ದೆಹಲಿ ಚುನಾವಣೆ 2025ರ ಎಕ್ಸಿಟ್ ಪೋಲ್ vs ನೈಜ ಫಲಿತಾಂಶ

1) ಮ್ಯಾಟ್ರಿಜ್‌ ಎಕ್ಸಿಟ್ ಪೋಲ್ - 32-37 (ಎಎಪಿ), 35-40 (ಬಿಜೆಪಿ), 0-1 (ಕಾಂಗ್ರೆಸ್)

2) ಪೀಪಲ್ಸ್ ಪಲ್ಸ್ ಸಮೀಕ್ಷೆ - 10- 19 (ಎಎಪಿ), 50-60 (ಬಿಜೆಪಿ)

3) ಜೆವಿಸಿ ಸಮೀಕ್ಷೆ 32-37 (ಎಎಪಿ), 35- 40 (ಬಿಜೆಪಿ), 0-1 (ಕಾಂಗ್ರೆಸ್‌)

4) ಪೀಪಲ್ಸ್ ಇನ್‌ಸೈಟ್ 25-29 (ಎಎಪಿ), 40-44 (ಬಿಜೆಪಿ) 1 (ಕಾಂಗ್ರೆಸ್)

5) ಚಾಣಕ್ಯ'ಸ್ ಸ್ಟ್ರಾಟೆಜಿ 25-28 (ಎಎಪಿ), 39-44 (ಬಿಜೆಪಿ), 2-3 (ಕಾಂಗ್ರೆಸ್)

6) ಪಿ ಮಾರ್ಕ್‌ ಸಮೀಕ್ಷೆ 21-31 (ಎಎಪಿ), 39-49 (ಬಿಜೆಪಿ), 0-1 (ಕಾಂಗ್ರೆಸ್)

7) ಪೋಲ್ ಡೈರಿ ಸಮೀಕ್ಷೆ 18-25 (ಎಎಪಿ), 42- 50 (ಬಿಜೆಪಿ), 0-2 (ಕಾಂಗ್ರೆಸ್)

8) ಡಿವಿ ರಿಸರ್ಜ್‌ ಸಮೀಕ್ಷೆ 26-34 (ಎಎಪಿ), 36-44 (ಬಿಜೆಪಿ)

9) ವೀ ಪ್ರಿಸೈಡ್ ಸಮೀಕ್ಷೆ 46-52 (ಎಎಪಿ), 18-23 (ಬಿಜೆಪಿ) 0-1 (ಕಾಂಗ್ರೆಸ್)

10) ಮೈಂಡ್ ಬ್ರಿಂಕ್ ಸಮೀಕ್ಷೆ 44-49 (ಎಎಪಿ), 21- 25 (ಬಿಜೆಪಿ), 0-1 (ಕಾಂಗ್ರೆಸ್)

ನೈಜ ಫಲಿತಾಂಶ - 48 (ಬಿಜೆಪಿ), ಎಎಪಿ (22)

ದೆಹಲಿ ವಿಧಾನ ಸಭಾ ಚುನಾವಣೆ 2025ರ 10 ಎಕ್ಸಿಟ್ ಪೋಲ್‌ಗಳನ್ನು ಗಮನಿಸಿದರೆ, ಪಿ ಮಾರ್ಕ್‌ ನೀಡಿದ್ದ ಸಮೀಕ್ಷೆ ನೈಜ ಫಲಿತಾಂಶಕ್ಕೆ ಹತ್ತಿರದಲ್ಲಿದೆ. ಇನ್ನುಳಿದಂತೆ ಪೋಲ್ ಡೈರಿ ಎಎಪಿಗೆ 18-25, ಬಿಜೆಪಿಗೆ 42 ರಿಂದ 50 ಸ್ಥಾನಗಳನ್ನು ಅಂದಾಜಿಸಿತ್ತು. ಈ ಪಟ್ಟಿಯಲ್ಲಿ ಇಲ್ಲದೇ ಇರುವ ಸಮೀಕ್ಷೆಗಳ ಪೈಕಿ ಏಕ್ಸಿಸ್ ಮೈ ಇಂಡಿಯಾ ಎಎಪಿಗೆ 15- 25 ಮತ್ತು ಬಿಜೆಪಿ 45 -55 ಸ್ಥಾನಗಳಲ್ಲಿ ಗೆಲುವು ಅಂದಾಜಿಸಿತ್ತು. ಟುಡೇ'ಸ್ ಚಾಣಕ್ಯ ಎಎಪಿಗೆ 13- 25, ಬಿಜೆಪಿಗೆ 45- 57 ಸ್ಥಾನಗಳನ್ನು ಅಂದಾಜಿಸಿತ್ತು.

2020ರ ದೆಹಲಿ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ

ಜನ್‌ ಕೀ ಬಾತ್‌ ಸಮೀಕ್ಷೆ - 55 (ಎಎಪಿ), 15 (ಬಿಜೆಪಿ)

ಇಂಡಿಯಾ ಟುಡೇ - ಏಕ್ಸಿಸ್ ಮೈ ಇಂಡಿಯಾ - 59-68 (ಎಎಪಿ), 2-11 (ಬಿಜೆಪಿ)

ಟೈಮ್ಸ್ ನೌ - 47 (ಎಎಪಿ), 23 (ಬಿಜೆಪಿ)

ನ್ಯೂಸ್ ಎಕ್ಸ್ - ನೇತಾ - 55 (ಎಎಪಿ), 14 (ಬಿಜೆಪಿ)

ಇಂಡಿಯಾ ನ್ಯೂಸ್ - ನೇಷನ್‌ - 55 (ಎಎಪಿ), 14 (ಬಿಜೆಪಿ)

ಎಬಿಪಿ ನ್ಯೂಸ್ - ಸಿ ವೋಟರ್ - 51-65 (ಎಎಪಿ), 3-17( ಬಿಜೆಪಿ)

ನೈಜ ಫಲಿತಾಂಶ - 62 (ಎಎಪಿ), 8 (ಬಿಜೆಪಿ)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.