ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು, ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು, ವಿವರ ಇಲ್ಲಿದೆ

ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು, ವಿವರ ಇಲ್ಲಿದೆ

Phalodi Satta Bazar Exit Polls: ದೆಹಲಿ ವಿಧಾನ ಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದೆ. 70 ಅಸೆಂಬ್ಲಿ ಕ್ಷೇತ್ರಗಳ ಮತದಾನ ಪೂರ್ಣಗೊಂಡಿದ್ದು, ಎಲ್ಲರ ಗಮನ ಈಗ ಎಕ್ಸಿಟ್ ಪೋಲ್ ಕಡೆಗೆ ಇದೆ. ಏತನ್ಮಧ್ಯೆ, ರಾಜಸ್ಥಾನದ ಪ್ರಸಿದ್ಧ ಫಲೋಡಿ ಸಟ್ಟಾ ಬಜಾರ್ ಕೂಡ ಎರಡು ಸಲ ಅಂದಾಜು ಬದಲಾಯಿಸಿದ ಬಳಿಕ ತನ್ನ ಅಂದಾಜು ದೆಹಲಿ ಚುನಾವಣಾ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು. (ಸಾಂಕೇತಿಕ ಚಿತ್ರ)
ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌; ಎಎಪಿ ಅಥವಾ ಬಿಜೆಪಿ ಗೆಲ್ಲೋದು ಯಾರು, ಎರಡು ಸಲ ಬದಲಾಯಿತೇಕೆ ಸಟ್ಟಾ ಬಜಾರ್ ಅಂದಾಜು. (ಸಾಂಕೇತಿಕ ಚಿತ್ರ)

Phalodi Satta Bazar Exit Polls: ದೆಹಲಿ ಅಸೆಂಬ್ಲಿ ಚುನಾವಣೆಯ 70 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಇದರೊಂದಿಗೆ, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಆಡಳಿತ ಚುಕ್ಮಾಣಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತಾ ಅಥವಾ ಬಿಜೆಪಿಗೆ ಗೆಲುವಾಗುತ್ತ ಎಂಬ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಈ ಬಾರಿಯಾದರೂ ಕೆಲವು ಸ್ಥಾನಗಳನ್ನು ಗೆಲ್ಲಬಹುದಾ ಎಂಬ ಕುತೂಹಲವೂ ಇದೆ. ಮತದಾನ ಪೂರ್ಣಗೊಂಡ ಕಾರಣ ಈಗ ಎಲ್ಲರ ಗಮನವೂ ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ ಕಡೆಗೆ ಇದೆ. ಈ ನಡುವೆ, ರಾಜಸ್ಥಾನದ ಪ್ರಸಿದ್ದ ಸಟ್ಟಾ ಬಜಾರ್‌ನ ಅಂದಾಜು ದೆಹಲಿ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ವಿಶೇಷ ಎಂದರೆ ದೆಹಲಿಯ ಚುನಾವಣಾ ವಿಚಾರದಲ್ಲಿ ಎರಡು ಬಾರಿ ಸಟ್ಟಾ ಬಜಾರ್‌ನ ಅಂದಾಜು ಬದಲಾಗಿದೆ.

ಫಲೋಡಿ ಸಟ್ಟಾ ಬಜಾರ್ ಪ್ರಕಾರ ದೆಹಲಿಯಲ್ಲಿ ಯಾರ ಸರ್ಕಾರ ಬರಲಿದೆ

ಫಲೋಡಿ ಸಟ್ಟಾ ಬಜಾರ್ ನಿಖರ ಅಂದಾಜಿಗೆ ಹೆಸರುವಾಸಿಯಾಗಿದೆ. ಅದರ ಅಂದಾಜಿನ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 34-36 ಮತ್ತು ಭಾರತೀಯ ಜನತಾ ಪಕ್ಷವು 34-36 ಮತ್ತು ಕಾಂಗ್ರೆಸ್ 0-1 ಸ್ಥಾನಗಳಲ್ಲಿ ಗೆಲುವು ಕಾಣಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ಎರಡೂ ಪಕ್ಷಗಳಿಗೆ ಸರ್ಕಾರ ರಚನೆಯ ಅವಕಾಶ ಕಂಡುಬಂದಿದೆ. ಆದರೆ ಸಮಾನ ಸ್ಥಾನಗಳನ್ನು ನೀಡಲಾಗಿದೆ. ಚುನಾವಣೆಯು ಸಮೀಪವಾಗುತ್ತಿರುವುದರೊಳಗೆ ಫಲೋಡಿ ಸಟ್ಟಾ ಬಜಾರ್ ಎರಡನೇ ಬಾರಿಗೆ ತನ್ನ ಅಂದಾಜು ಬದಲಾಯಿಸಿದೆ.

ದೆಹಲಿಯಲ್ಲಿ ಮತ್ತೆ ಖಾತೆ ತೆರೆಯಲಿದೆಯೇ ಕಾಂಗ್ರೆಸ್‌

ದೆಹಲಿಯಲ್ಲಿ 12 ವರ್ಷಗಳಿಂದ ಅಧಿಕಾರದಿಂದ ವಂಚಿತವಾಗಿರುವ ಕಾಂಗ್ರೆಸ್ ಪರವಾಗಿ ಸಟ್ಟಾ ಬಜಾರ್ ನಿಂತಿಲ್ಲ. ಆದಾಗ್ಯೂ ಈ ಬಾರಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತೆ ಖಾತೆ ತೆರೆಯುವ ಲಕ್ಷಣಗಳನ್ನು ಸಟ್ಟಾ ಬಜಾರ್ ಅಂದಾಜಿಸಿದೆ. 2015 ಮತ್ತು 2020ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ 2025ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳ ಮುತುವರ್ಜಿ ತಗೊಂಡು ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪ್ರಯತ್ನಿಸಿತ್ತು. ಶೀಲಾ ದೀಕ್ಷಿತ್ ಅವರ ಮಗ ಸಂದೀಪ್ ದೀಕ್ಷಿತ್ ಅವರನ್ನು ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕೆ ಇಳಿಸಿದೆ. ಅಲ್ಕಾ ಲಾಂಬಾ ಅವರನ್ನು ಸಿಎಂ ಅತಿಶಿ ವಿರುದ್ಧ ಕಣಕ್ಕಿಳಿಸಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಬಹುದು.

ಸಟ್ಟಾ ಬಜಾರ್ ಅಂದಾಜು ಎರಡು ಸಲ ಬದಲಾಯಿತು ನೋಡಿ

ಫಲೋಡಿಯ ಸಟ್ಟಾ ಬಜಾರ್ ತನ್ನ ಮೊದಲ ಅಂದಾಜಿನ ಪ್ರಕಾರ ಎಎಪಿಗೆ 38-40 ಸ್ಥಾನಗಳನ್ನು ಬಿಜೆಪಿಗೆ 31-33 ಸ್ಥಾನಗಳನ್ನು ಅಂದಾಜಿಸಿತ್ತು. ಆದಾಗ್ಯೂ, ಚುನಾವಣೆಗೆ ಸಮೀಪ ಇದ್ದಾಗ, ತನ್ನ ಅಂದಾಜು ಬದಲಾಯಿಸಿದ ಸಟ್ಟಾ ಬಜಾರ್ ಈಗ ಎಎಪಿ ಹಾಗೂ ಬಿಜೆಪಿಗೆ ತಲಾ 34- 36 ಸ್ಥಾನಗಳನ್ನು ಅಂದಾಜಿಸಿದೆ. ಫೆ 8 ರಂದು ದೆಹಲಿ ವಿಧಾನ ಸಭಾ ಚುನಾವಣೆಯ ನೈಜ ಫಲಿತಾಂಶ ಪ್ರಕಟವಾಗಲಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಅದ್ಭುತ ಗೆಲುವು ದಾಖಲಿಸಿದ್ದ ಎಎಪಿಗೆ ಈ ಬಾರಿ ಹಿನ್ನಡೆಯಾಗುವ ಸಾಧ್ಯತೆ ಕಂಡುಬಂದಿದೆ. ಎಎಪಿ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಎದುರಾಗಿರುವ ಕಾರಣ ಜನ ಕಲ್ಯಾಣ ಯೋಜನೆಗಳ ನಡುವೆಯೂ ಆಡಳಿತ ವಿರೋಧಿ ಭಾವನೆ ಸೃಷ್ಟಿಸುವಲ್ಲಿ ಬಿಜೆಪಿ ಯಶಸ್ವಿಯಾದಂತೆ ಗೋಚರಿಸಿದೆ. ಹೀಗಾಗಿ ಬಿಜೆಪಿ ಈ ಬಾರಿ ಅಧಿಕಾರದ ಸನಿಹ ಹೋಗುವ ಲಕ್ಷಣಗಳು ಕಾಣತೊಡಗಿವೆ. ಇನ್ನೊಂದೆಡೆ ಎರಡು ಅವಧಿಗೆ ಶೂನ್ಯ ಸಂಪಾದಿಸಿದ್ದ ಕಾಂಗ್ರೆಸ್ ಈ ಬಾರಿ ಗೆಲುವು ದಾಖಲಿಸುವುದಕ್ಕಾಗಿ ಶತ ಪ್ರಯತ್ನ ಮಾಡಿದೆ. ಆದರೆ, ಖಾತೆ ತೆರೆಯುವ ಲಕ್ಷಣವನ್ನು ಸಟ್ಟಾ ಬಜಾರ್ ಅಂದಾಜಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.