Ram Lalla in Rday: ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಮಿಂಚಲಿದ್ದಾನೆ ಬಾಲರಾಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ram Lalla In Rday: ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಮಿಂಚಲಿದ್ದಾನೆ ಬಾಲರಾಮ

Ram Lalla in Rday: ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಮಿಂಚಲಿದ್ದಾನೆ ಬಾಲರಾಮ

RDay Parade ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ನಲ್ಲಿ ಉತ್ತರ ಪ್ರದೇಶದಿಂದ ಬಾಲರಾಮಮೂರ್ತಿ ಪ್ರತಿನಿಧಿಸಲಿದ್ದಾನೆ. ಆತನ ಸ್ಥಬ್ಧಚಿತ್ರವೇ ಮೊದಲು ಸಂಚರಿಸುವುದು ವಿಶೇಷ.

ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಲರಾಮಮೂರ್ತಿಯೂ ಇರಲಿದ್ದಾನೆ.
ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಲರಾಮಮೂರ್ತಿಯೂ ಇರಲಿದ್ದಾನೆ.

ದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅಯೋಧ್ಯೆ ಬಾಲರಾಮನೂ ಮಿಂಚಲಿದ್ದಾನೆ. ಉತ್ತರ ಪ್ರದೇಶ ರಾಜ್ಯ ಸರ್ಕಾರವು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ಎರಡು ವಿಷಯದ ಸ್ಥಬ್ಧಚಿತ್ರ ಅಣಿಗೊಳಿಸಿದೆ. ಅದರಲ್ಲಿ ಮೊದಲನೆಯದ್ದು ಬಾಲರಾಮ ಮೂರ್ತಿಯ ಸ್ಥಬ್ಧಚಿತ್ರ. ಇದಲ್ಲದೇ ಉತ್ತರ ಪ್ರದೇಶದಲ್ಲಿನ ಮೆಟ್ರೋ ಕಾಮಗಾರಿ ಕುರಿತಾಗಿಯೂ ಅದೇ ಸ್ಥಬ್ಧಚಿತ್ರದ ಮೂಲಕ ಬಿಂಬಿಸಲಾಗುತ್ತಿದೆ.

ಈಗಾಗಲೇ ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಹಲವಾರು ರಾಜ್ಯಗಳು ತಮ್ಮ ರಾಜ್ಯದ ಸಂಸ್ಕೃತಿ, ಹಿರಿಮೆ ಬಿಂಬಿಸುವ ಸ್ಥಬ್ಧಚಿತ್ರವನ್ನು ಪ್ರದರ್ಶಿಸಲಿವೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವೂ ಈಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆ ರಾಮನ ವಿಷಯವನ್ನೆ ಆಯ್ಕೆ ಮಾಡಿಕೊಂಡಿದೆ. ಅದೂ ಬಾಲರಾಮ ಮೂರ್ತಿಯೂ ಸ್ಥಬ್ಧಚಿತ್ರದ ಮುಂಚೂಣಿಯಲ್ಲಿ ಇರಲಿದೆ.

ಈ ಬಾರಿ ಕರ್ನಾಟಕ, ಪಂಜಾಬ್‌ ಸಹಿತ ಕೆಲವು ರಾಜ್ಯಗಳಿಗೆ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ತಮ್ಮ ರಾಜ್ಯದ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ದೊರೆತಿಲ್ಲ. ಇದು ಕೆಲ ದಿನಗಳ ಹಿಂದೆ ವಿವಾದ ಸ್ವರೂಪವನ್ನೂ ಪಡೆದಿತ್ತು. ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿತ್ತು.

ಈ ಬಾರಿ ವಿಕಸಿತ ಭಾರತ ಹಾಗೂ ಭಾರತ ಲೋಕತಂತ್ರದ ಮಾತೃಕ ಎನ್ನುವ ವಿಷಯಾಧರಿತ ಸ್ಥಬ್ಧಚಿತ್ರಗಳನ್ನು ರೂಪಿಸಲು ಅವಕಾಶ ನೀಡಲಾಗಿದೆ. ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಛತ್ತೀಸಗಢ, ಗುಜರಾತ್‌, ಹರಿಯಾಣ, ಜಾರ್ಖಂಡ್‌, ಲಡಾಖ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ. ಮೇಘಾಲು. ಒಡಿಶಾ, ರಾಜಸ್ಥಾನ, ತಮಿಳುನಾಡು,, ತೆಲಂಗಾಣ ಹಾಗೂ ಉತ್ತರ ಪ್ರದೇಶದ ರಾಜ್ಯದ ಸ್ಥಬ್ಧಚಿತ್ರಗಳು ಪರೇಡ್‌ಗೆ ಆಯ್ಕೆಯಾಗಿವೆ. ತಜ್ಞರ ಸಮಿತಿ ವಿಷಯಗಳನ್ನು ಆಧರಿಸಿ ಸ್ಥಬ್ದಚಿತ್ರ ಅಂತಿಮಗೊಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.